ಇಂದು ತೆಲುಗು ನಾಡು ಆಂಧ್ರ ಪ್ರದೇಶದಲ್ಲಿ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟದ ಸರ್ಕಾರ ರಚನೆಯಾಯ್ತು,ಈ ಸಮಾರಂಭದ ಕೆಲ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಹೈಲೈಟ್ ಆಗುತ್ತಿದ್ದು, ಆ ದೃಶ್ಯಗಳು ನಿಮಗಾಗಿ... 

ವಿಜಯವಾಡ: ಇಂದು ತೆಲುಗು ನಾಡು ಆಂಧ್ರ ಪ್ರದೇಶದಲ್ಲಿ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟದ ಸರ್ಕಾರ ರಚನೆಯಾಯ್ತು, ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ತೆಲುಗು ತಮಿಳು ಚಿತ್ರರಂಗದ ತಾರೆಯರು ಈ ಸಮಾರಂಭಕ್ಕೆ ಸಾಕ್ಷಿಯಾದರು. ಈ ಸಮಾರಂಭದ ಕೆಲ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಹೈಲೈಟ್ ಆಗುತ್ತಿದ್ದು, ಆ ದೃಶ್ಯಗಳು ನಿಮಗಾಗಿ... 

ಪ್ರಧಾನಿಯನ್ನು ವೇದಿಕೆಯ ಮಧ್ಯೆ ಕರೆತಂದು ಚಿರಂಜೀವಿ ಸಂಭ್ರಮ
ಆಂಧ್ರಪ್ರದೇಶ ಸಿಎಂ ಡಿಸಿಎಂ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರನ್ನು ವೇದಿಕೆಯ ಮಧ್ಯಕ್ಕೆ ಕರೆತಂದ ತೆಲುಗು ಸೂಪರ್‌ಸ್ಟಾರ್‌ ಚಿರಂಜೀವಿ ಹಾಗೂ ಅವರ ಸೋದರ ಆಂಧ್ರಪ್ರದೇಶ ಡಿಸಿಎಂ ಪವನ್‌ ಕಲ್ಯಾಣ್ ಅವರು ಎಲ್ಲರಿರುವಾಗಲೇ ವೇದಿಕೆಯ ಮಧ್ಯೆಯೇ ಪ್ರಧಾನಿ ಮೋದಿಯನ್ನು ಮಧ್ಯೆ ನಿಲ್ಲಿಸಿ ಅಕ್ಕ ಪಕ್ಕ ತಾವಿಬ್ಬರೂ ನಿಂತು ಪ್ರಧಾನಿ ಕೈಯನ್ನು ಇಬ್ಬರೂ ಸೇರಿ ಮೇಲೆತ್ತಿ ಸಂಭ್ರಮಾಚರಿಸಿದರು. ಚಿರಂಜೀವಿಯಂತೂ ತಮ್ಮ ಪವನ್ ಕಲ್ಯಾಣ್ ಡಿಸಿಎಂ ಆಗಿರುವುದನ್ನು ತಾವೇ ಸಿಎಂ ಆದಂತೆ ಸಂಭ್ರಮಿಸುತ್ತಿದ್ದಿದ್ದು ವೇದಿಕೆ ಮೇಲೆ ಕಂಡು ಬಂತು ಇತ್ತ ಚಿರಂಜೀವಿ ಪುತ್ರ ರಾಮ್‌ಚರಣ್ ವೇದಿಕೆ ಕೆಳಭಾಗದಿಂದಲೇ ಇವರ ಸಂಭ್ರಮ ನೋಡಿ ಖುಷಿಪಟ್ಟರು. ಜೊತೆಗೆ ತಮ್ಮ ಪವನ್ ಕಲ್ಯಾಣ್ ಕೆನ್ನೆ ಹಿಂಡಿ ಖುಷಿಪಟ್ಟರು.

Scroll to load tweet…

ಈ ವೇಳೆ ಇಲ್ಲಿಗೆ ಬಂದ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪ್ರಧಾನಿ ಮೋದಿಯವರನ್ನು ಅಲ್ಲಿಂದ ಕರೆದುಕೊಂಡು ಹೋಗಿ ವೇದಿಕೆಯಲ್ಲಿದ್ದ ಇತರ ಸಿನಿಮಾ ರಂಗದ ಗಣ್ಯರಾದ ತಮಿಳು ಸೂಪರ್‌ ಸ್ಟಾರ್ ರಜನಿಕಾಂತ್, ಅವರ ಪತ್ನಿ ಲತಾ ರಜನಿಕಾಂತ್, ಮತ್ತೊಬ್ಬ ತೆಲುಗು ನಟ ನಂದಮೂರಿ ಬಾಲಕೃಷ್ಣ ಮುಂತಾದವರ ಬಳಿ ಮಾತನಾಡಿಸಿದರು. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದೆ. 

ಇನ್ನು ಇದೇ ಸಮಾರಂಭದಲ್ಲಿ ನಂದಮೂರಿ ಬಾಲಕೃಷ್ಣ ಅವರು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರನ್ನು ಭೇಟಿ ಮಾಡಿದರು. ಟಿಡಿಪಿ ಸಚಿವ ಹಾಗೂ ಯುವ ನಾಯಕ ಕಿಂಜರಪು ರಾಮ್ ಮೋಹನ್ ಅವರು ಪ್ರಮಾಣವಚನ ಸಮಾರಂಭದಲ್ಲಿ ಉಪಸ್ಥಿತರಿದ್ದ ನಂದಮೂರಿ ಅವರಿಗೆ ಚಿರಾಗ್ ಪಸ್ವಾನ್ ಅವರನ್ನು ಪರಿಚಯಿಸಿದರು. 

Scroll to load tweet…

ಪ್ರಧಾನಿ ಕಾಲಿಗೆ ಬೀಳಲು ಹೋದ ಚಂದ್ರಬಾಬು ನಾಯ್ಡು ಅವರನ್ನು ತಡೆದು ತಬ್ಬಿಕೊಂಡ ಪ್ರಧಾನಿ ಮೋದಿ

Scroll to load tweet…

ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಜನಸೇನಾ ಪಕ್ಷದ ನಾಯಕ ಟಾಲಿವುಡ್ ನಟ ಪವನ್ ಕಲ್ಯಾಣ್

Scroll to load tweet…

ಆಂಧ್ರದ ಸಿಎಂ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿರುವ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್