ಡಿಜಿಟಲ್ ತಂತ್ರಜ್ಞಾನದ ಬಳಕೆಯಿಂದ ಸಂಸತ್‌ನಲ್ಲಿ 668 ಕೋಟಿ ರೂಪಾಯಿ ಉಳಿತಾಯ

ನವದೆಹಲಿ: ಡಿಜಿಟಲ್ ತಂತ್ರಜ್ಞಾನದ ಆಳವಡಿಕೆಯಿಂದ ಲೋಕಸಭಾ ಕಾರ್ಯಾಲಯ ತೆರಿಗೆದಾರರ 668 ಕೋಟಿ ರೂಪಾಯಿ ಹಣ ಉಳಿತಾಯ ಮಾಡಿದೆ ಅಂಥ ಲೋಕಸಭಾ ಸ್ಪೀಕರ್ ಓಂಬಿರ್ಲಾ (Om Birla)ತಿಳಿಸಿದ್ದಾರೆ.

Parliament saved Rs 668 crore through Digital Technology akb

ಡೆಲ್ಲಿ ಮಂಜು
ನವದೆಹಲಿ: ಡಿಜಿಟಲ್ ತಂತ್ರಜ್ಞಾನದ ಆಳವಡಿಕೆಯಿಂದ ಲೋಕಸಭಾ ಕಾರ್ಯಾಲಯ ತೆರಿಗೆದಾರರ 668 ಕೋಟಿ ರೂಪಾಯಿ ಹಣ ಉಳಿತಾಯ ಮಾಡಿದೆ ಅಂಥ ಲೋಕಸಭಾ ಸ್ಪೀಕರ್ ಓಂಬಿರ್ಲಾ (Om Birla)ತಿಳಿಸಿದ್ದಾರೆ.

ಲೋಕಸಭಾ ಸ್ಪೀಕರ್ ಆಗಿ ಮೂರು ವರ್ಷಗಳು ಅವಧಿ ಪೂರೈಸಿದ ಹಿನ್ನೆಲೆಯಲ್ಲಿ ಪ್ರಾದೇಶಿಕ ಭಾಷೆಗಳ ಮಾಧ್ಯಮಗಳ ಜೊತೆ ಅಭಿಪ್ರಾಯ ಹಂಚಿಕೊಂಡ ಸ್ಪೀಕರ್ ಓಂಬಿರ್ಲಾ, ಕಳೆದ ಮೂರು ವರ್ಷಗಳಲ್ಲಿ ಲೋಕಸಭಾ ಚಟುವಟಿಕೆಗಳಿಗಾಗಿ ಕೇಂದ್ರ ಸರ್ಕಾರ 2475 ಕೋಟಿ ರೂಪಾಯಿ ಹಣ ಒದಗಿಸಿದೆ. ಇದರಲ್ಲಿ ಲೋಕಸಭಾ ಕಾರ್ಯಾಲಯ 668 ಕೋಟಿ ರೂಪಾಯಿ ಹಣವನ್ನು ಉಳಿತಾಯ ಮಾಡಿದೆ. ಅಂದರೆ ಶೇ.27 ರಷ್ಟು ಹಣವನ್ನು ಉಳಿತಾಯ ಮಾಡಿದ್ದೇವೆ. ಇದಕ್ಕೆ ಕಾರಣ ಡಿಜಿಟಲೀಕರಣಕ್ಕೆ (digitalisation)ಒತ್ತು ನೀಡಿದ್ದು ಎಂದರು.

ಡಿಜಿಟಲೀಕರಣದ ಪ್ರಮುಖ ಅಂಶ ಎಂದರೆ ಸಂಸತ್ ಗ್ರಂಥಾಲಯವನ್ನು (Parliament library) ಎಲ್ಲರಿಗೂ ಆನ್‌ಲೈನ್ ವ್ಯವಸ್ಥೆ ಮೂಲಕ ಒದಗಿಸುತ್ತಿರುವುದು ಇದೇ ಮೊದಲ ಬಾರಿಯಾಗಿದ್ದು, ಆನ್‌ಲೈನ್ ಮೂಲಕ ಗ್ರಂಥಾಲಯ ಭೇಟಿಗೆ ಕಾಯ್ದರಿಸಬಹುದಾಗಿದೆ. ಇದಲ್ಲದೆ ಸಂಸತ್ ಗ್ರಂಥಾಲಯದ ಜೊತೆ ರಾಜ್ಯಗಳ 12 ಶಾಸನಸಭೆಗಳ ಗ್ರಂಥಾಲಯಗಳನ್ನು ಸಂಯೋಜಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೆನಡಾ ಸಂಸತ್ತಲ್ಲಿ ಸಂಸದ ಚಂದ್ರ ಕನ್ನಡ ಭಾಷಣ: ವಿದೇಶದ ಸಂಸತ್ತಿನಲ್ಲಿ ಕನ್ನಡ ಭಾಷಣ ಇದೇ ಮೊದಲು

995 ಗಂಟೆಗಳ ಕಾಲ ಸಭೆ : ಲೋಕಸಭಾ ಚಟುವಟಿಕೆಗಳ ಕುರಿತಾಗಿ ಮಾಹಿತಿ ಹಂಚಿಕೊಂಡ ಸ್ಪೀಕರ್, ಈ 17ನೇ ಲೋಕಸಭಾದ ಎಂಟು ಅಧಿವೇಶನಗಳಲ್ಲಿ ಶೇ.106 ಉತ್ಪಾದಕತೆ (ಪ್ರೊಡೆಕ್ಟೀವ್ ಆಫ್ ಹೌಸ್) ಆಗಿದೆ. 16 ನೇ ಲೋಕಸಭಾ ಎಂಟು ಅಧಿವೇಶನಗಳಲ್ಲಿ ಶೇ.95 ರಷ್ಟು ಉತ್ಪಾದಕತೆ ಆಗಿತ್ತು ಎಂದರು. ಅದಲ್ಲದೇ ಕಳೆದ ಮೂರು ಅಧಿವೇಶನಗಳಿಗೆ ಹೋಲಿಕೆ ಮಾಡಿದರೆ 17 ನೇ ಲೋಕಸಭೆ 995 ಗಂಟೆಗಳ ಕಾಲ ಅಧಿವೇಶನ ನಡೆಸಿ ರೆಕಾರ್ಡ್ ಮಾಡಿದೆ. ಇನ್ನು ಕಳೆದ 8 ಅಧಿವೇಶನಗಳಲ್ಲಿ ಸರ್ಕಾರ 139 ಮಸೂದೆಗಳನ್ನು ಆಡಳಿತ ಪಕ್ಷ ಮಂಡಿಸಿದೆ. ಬಾಕಿ ಇದ್ದ 10 ಮಸೂದೆಗಳು ಸೇರಿ ಒಟ್ಟು 149 ಮಸೂದೆಗಳು ಪಾಸ್ ಆಗಿವೆ. ಪ್ರತಿ ಮಸೂದೆ ಸರಾಸರಿ 132 ನಿಮಿಷಗಳು ಚರ್ಚೆಯಾಗಿವೆ. 2151 ಮಂದಿ ಸದಸ್ಯರು ಚರ್ಚೆಯಲ್ಲಿ ಭಾಗಿಯಾಗಿದ್ದಾರೆ ಎಂದರು.

ಮರಗಳಿಗೂ QR ಕೋಡ್! ಕಾಲೇಜಿನ ಐಡಿಯಾಗೆ ವಿದ್ಯಾರ್ಥಿಗಳು ಬೌಲ್ಡ್
 

ಶೂನ್ಯಾವಧಿ : ಕಳೆದ ಎಂಟು ಅಧಿವೇಶನಗಳಲ್ಲಿ 4648 ವಿಷಯಗಳನ್ನು ಸದಸ್ಯರು ಶೂನ್ಯಾವಧಿಯಲ್ಲಿ ಪ್ರಸ್ತಾಪಿಸಿದ್ದಾರೆ. ಹೆಚ್ಚು ಕಡಿಮೆ ಪ್ರತಿದಿನ 31.4 ವಿಷಯಗಳನ್ನು ಸದಸ್ಯರು ಶೂನ್ಯ ಅವಧಿಯಲ್ಲಿ ಪ್ರಸ್ತಾಪಿಸಿದಂತಾಗಿದೆ. ಮೊದಲ ಬಾರಿ ಸದಸ್ಯರಾದವರಿಗೆ ಹೆಚ್ಚು ಆದ್ಯತೆ ನೀಡಿದ್ದು 208 ಸದಸ್ಯರು ಶೂನ್ಯಾವಧಿಯಲ್ಲಿ ವಿಷಯ ಪ್ರಸ್ತಾಪ ಮಾಡಲು ಅವಕಾಶ ಮಾಡಿಕೊಡಲಾಯಿತು.

ಹೊಸ ಸಂಸತ್ ಭವನದಲ್ಲಿ ಚಳಿಗಾಲದ ಅಧಿವೇಶನ : ಇದೇ ವರ್ಷ ಅಕ್ಟೋಬರ್ ನಲ್ಲಿ ಹೊಸ ಸಂಸತ್ ಭವನ (New Parliament House) ನಮಗೆ ಹಸ್ತಾಂತರವಾಗಲಿದ್ದು, ಮುಂದಿನ ಚಳಿಗಾಲದ ಅಧಿವೇಶನ ಹೊಸ ಸಂಸತ್ ಭವನದಲ್ಲಿ ನಡೆಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು, ಇದೊಂದು ಹಸಿರು ಕಟ್ಟಡವಾಗಿದ್ದು, ಎಲ್ಲಾ ಸೌಲಭ್ಯಗಳು ಪರಿಸರ ಸ್ನೇಹಿಯಾಗಿರುತ್ತವೆ ಎಂದರು.

ಈತನಕ 11 ರಾಜ್ಯಗಳ ವಿಧಾನಸಭೆಗಳನ್ನು ಉದ್ದೇಶಿಸಿ ಮಾತನಾಡಿರುವುದಾಗಿ ತಿಳಿಸಿದ ಅವರು, ರಾಜ್ಯಗಳ ವಿಧಾನಸಭೆಗಳಿಗೂ ಆರ್ಥಿಕ ಸ್ವಾಯತ್ತತೆ ನೀಡುವುದು ಅಗತ್ಯವಾಗಿದೆ. ಈಗಾಗಲೇ ಹಿಮಾಚಲ ಪ್ರದೇಶ ರಾಜ್ಯದಲ್ಲಿ ವಿಧಾನಸಭೆಗೆ ಆರ್ಥಿಕ ಸ್ವಾಯತ್ತತೆ ನೀಡಲಾಗಿದೆ ಎಂದರು.

Latest Videos
Follow Us:
Download App:
  • android
  • ios