ಈಗ ಎಲ್ಲೆಡೆ ಡಿಜಿಟಲೀಕರಣದ ಟ್ರೆಂಡ್. ಕೈಗಾಡಿ ಇಟ್ಟು ವ್ಯಾಪಾರ ಮಾಡುವವರೂ ಕೂಡಾ ಡಿಜಿಟಲ್ ಆಗಿದ್ದಾರೆ. ಈಗ ಕಾಲೇಜೊಂದು ಪಾಠ ಹೇಳಿಕೊಡಲು ಡಿಜಿಟಲ್ ಐಡಿಯಾ ಮಾಡುವ ಮೂಲಕ ಅಧ್ಯಯನಕ್ಕೆ ಹೊಸ ವ್ಯಾಖ್ಯೆ ಕೊಟ್ಟಿದೆ.    

ವಿಜಯವಾಡ (ನ.13): ಇಡಿಯ ಜಗತ್ತೇ ಡಿಜಿಟಲೀಕರಣಗೊಳ್ಳುತ್ತಿದೆ. ಪುಸ್ತಗಳನ್ನು ಓದಿ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಜನರ ಬಳಿ ಸಮಯವೂ ಇಲ್ಲ, ತಾಳ್ಮೆಯೂ ಇಲ್ಲವಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ವಿಜಯವಾಡದ ಕಾಲೇಜೊಂದು, ಸಸ್ಯಶಾಸ್ತ್ರವನ್ನು ಹೇಳಿಕೊಡಲು ಡಿಜಿಟಲ್ ತಂತ್ರಜ್ಞಾನದ ಮೊರೆಹೋಗಿದೆ. ಇಲ್ಲಿನ ಪಿ.ಬಿ. ಸಿದ್ಧಾರ್ಥ ಕಾಲೇಜ್ ಆಫ್ ಆರ್ಟ್ಸ್ & ಸೈನ್ಸ್‌ನ ಬಾಟನಿ ವಿಭಾಗವು ಕ್ಯಾಂಪಸ್‌ನಲ್ಲಿರುವ ಮರಗಳಿಗೆ QR ಕೋಡ್ ಅಳವಡಿಸಿದೆ. ವಿದ್ಯಾರ್ಥಿಗಳ ಮೊಬೈಲ್ ಫೋನ್‌ಗಳು ಈಗ ಬರೇ ಚ್ಯಾಟಿಂಗ್, ಬ್ರೌಸಿಂಗ್‌ಗೆ ಸೀಮಿತವಾಗಿರದೇ, ಅಧ್ಯಯನಕ್ಕೂ ಬಳಕೆಯಾಗುತ್ತಿದೆ.

ಬ್ಯಾಂಕ್‌ಗೆ ಆಧಾರ್, ಏನಿದು?


ತಮ್ಮ ಫೋನ್ ಬಳಸಿ QR ಕೋಡ್ ಸ್ಕ್ಯಾನ್ ಮಾಡಿದ್ರೆ ಸಾಕು, ಆ ಮರದ ಬಗ್ಗೆ ಎಲ್ಲಾ ಮಾಹಿತಿ ಫೋನ್‌ನಲಲ್ಇ ಸಿಗುತ್ತೆ. ಸಸ್ಯದ ವೈಜ್ಞಾನಿಕ ಹೆಸರಿನಿಂದ ಹಿಡಿದು ಅದರ ವೈದ್ಯಕೀಯ ಉಪಯೋಗದ ಬಗ್ಗೆಯೂ ಮಾಹಿತಿ ಲಭ್ಯ. ಪುಸ್ತಕ ತೆರೆದು ಹುಡುಕಾಟ ನಡೆಸುವ ಜಂಜಾಟ ಇಲ್ಲವಾಗಿದೆ!

ಪ್ಲೇಸ್ಟೋರ್‌ನಲ್ಲಿ ಲಭ್ಯವಿರುವ ಯಾವುದೇ QR ಕೋಡ್ ಸ್ಕ್ಯಾನ್ ಮಾಡುವ ಅಪ್ಲಿಕೇಶನ್ ಬಳಸಿ ಮಾಹಿತಿಯನ್ನು ಪಡೆಯಬಹುದಾಗಿದೆ.ವಿದ್ಯಾರ್ಥಿಗಳಿಗೆ ಸಮಯ ಸಿಕ್ಕಿದ್ದಷ್ಟು ಕಡಿಮೆ. ಹೀಗಾಗಿ ಡಿಜಿಟಲ್ ಟ್ರೆಂಡ್‌ ಯೋಚನೆ ಬಂತು. ಕಾಲೇಜು ಕ್ಯಾಂಪಸ್‌ನಲ್ಲಿರುವ ಎಲ್ಲಾ ಸಸ್ಯ ಪ್ರಬೇಧಗಳ ಮಾಹಿತಿ ಕಲೆ ಹಾಕಿ ಅದಕ್ಕೆ QR ಕೋಡ್ ಅಳವಡಿಸಿದೆವು.

6ರಿಂದ 10 ಕ್ಲಾಸಿನ ತರಗತಿ ಪಠ್ಯಕ್ಕೆ ಕ್ಯೂಆರ್ ಕೋಡ್

ವಿದ್ಯಾರ್ಥಿಗಳು ಈಗ ಬೆರಳತುದಿಯಲ್ಲೇ, ಕ್ಷಣಾರ್ಧದಲ್ಲಿ ಸಸ್ಯಸಂಕುಲದ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ, ಎಂದು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀನಿವಾಸ್ ರೆಡ್ಡಿ ಅಭಿಪ್ರಾಯ. ಕಾಲೇಜು ಕ್ಯಾಂಪಸ್‌ನಲ್ಲಿ ಇಪ್ಪತ್ತಕ್ಕಿಂತ ಹೆಚ್ಚು ಸಸ್ಯ ಪ್ರಬೇಧಗಳಿದ್ದು, QR ಕೋಡ್ ಅಳವಡಿಕೆಗೆ ಸುಮಾರು ಒಂದು ತಿಂಗಳು ಸಮಯ ತಗುಲಿದೆಯಂತೆ.

ತಮ್ಮ ಸಮಯ ಮತ್ತು ಶ್ರಮ ಉಳಿಸುವ ಐಡಿಯಾಗೆ ಈ ಕಾಲೇಜಿನ ವಿದ್ಯಾರ್ಥಿಗಳು ಕೂಡಾ ಫುಲ್ ಫಿದಾ ಆಗಿದ್ದಾರೆ.