ಪಾಕ್ ಗಡಿ ದಾಟಿ ಬಂದ ಕಂದನನ್ನು ಮರಳಿಸಿದ ಭಾರತೀಯ ಯೋಧರು
ಆಕಸ್ಮಿಕವಾಗಿ ಭಾರತದ ಗಡಿ ದಾಟಿ ಭಾರತೀಯ ಭೂ ಪ್ರದೇಶದತ್ತ ಬಂದ ಪಾಕಿಸ್ತಾನದ ಮಗುವೊಂದನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ಮಗುವಿನ ಪೋಷಕರಿಗೆ ಹಸ್ತಾಂತರಿಸಿದ್ದಾರೆ.
ಕಾಶ್ಮೀರ: ಆಕಸ್ಮಿಕವಾಗಿ ಭಾರತದ ಗಡಿ ದಾಟಿ ಭಾರತೀಯ ಭೂ ಪ್ರದೇಶದತ್ತ ಬಂದ ಪಾಕಿಸ್ತಾನದ ಮಗುವೊಂದನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ಮಗುವಿನ ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಮೂರು ವರ್ಷದ ಮಗುವೊಂದು ಅಚಾನಕ್ ಆಗಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಬಂದಿತ್ತು. ಈ ಮಗುವನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ಪೋಷಕರಿಗೆ ಮರಳಿಸಿದ್ದಾರೆ.
ಗಡಿ ಭದ್ರತಾ ಪಡೆ ಪ್ರಕಾರ ಜುಲೈ 1 ರಂದು ಸಂಜೆ 7:15 ರ ಸುಮಾರಿಗೆ, BSF ನ 182ನೇ ಬೆಟಾಲಿಯನ್‌ನ ಫಿರೋಜ್‌ಪುರ್ ಸೆಕ್ಟರ್‌ನ ಸೈನಿಕರು ಭಾರತದ ಭೂಪ್ರದೇಶವನ್ನು ದಾಟಿದ 3 ವರ್ಷದ ಪಾಕಿಸ್ತಾನಿ ಮಗುವನ್ನು ವಶಕ್ಕೆ ಪಡೆದಿದ್ದರು. ನಂತರ ಮಗುವನ್ನು ಬಿಎಸ್‌ಎಫ್‌ನ ಸುರಕ್ಷಿತ ವಶದಲ್ಲಿ ಇರಿಸಲಾಗಿತ್ತು.
ನಂತರ ರಾತ್ರಿ 9:45 ರ ಸುಮಾರಿಗೆ ಪಾಕಿಸ್ತಾನದ ಈ ಅಂಬೆಗಾಲಿಡುವ ಮಗುವನ್ನು ಪಾಕ್ ರೇಂಜರ್‌ಗಳಿಗೆ ಹಿಂತಿರುಗಿಸಲಾಗಿದೆ.
ಮಾನವೀಯ ನೆಲೆಯಲ್ಲಿ ಈ ಮಗುವನ್ನು ಹಿಂದಿರುಗಿಸಲಾಗಿದೆ. ಇದು ಉದ್ದೇಶಪೂರ್ವಕವಲ್ಲದ ಆಕಸ್ಮಿಕ ಗಡಿ ದಾಟುವಿಕೆಯಾಗಿದೆ. ಬಿಎಸ್ಎಫ್ ಯಾವಾಗಲೂ ಅಜಾಗರೂಕವಾಗಿ ಗಡಿ ದಾಟುವವರ ವಿರುದ್ಧ ವ್ಯವಹರಿಸುವಾಗ ಮಾನವೀಯ ವಿಧಾನವನ್ನು ತೆಗೆದುಕೊಳ್ಳುತ್ತದೆ ಎಂದು ಬಿಎಸ್‌ಎಫ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಮತಾಂಧ ಹಂತಕರಿಗೆ ಪಾಕ್ ಸಂಪರ್ಕ, ಐಸಿಸ್ ಪ್ರೇರಣೆ: ಕರಾಚಿಗೂ ಹೋಗಿದ್ದ ಗೌಸ್!
ಜೂನ್ 29 ರಂದು, ರಾಜಸ್ಥಾನದಲ್ಲಿ ಭಾರತ ಮತ್ತು ಪಾಕಿಸ್ತಾನದ ಗಡಿ ಪಡೆಗಳ ನಡುವೆ ಗ್ರೌಂಡ್ ಕಮಾಂಡರ್ ಮಟ್ಟದ ಸಭೆ ನಡೆಸಲಾಗಿತ್ತು ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದರು. ರಾಜ್ಯದ ಬಾರ್ಮರ್ ಜಿಲ್ಲೆಯ ಮುನಾಬಾವೊದಲ್ಲಿ ಸಭೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಭಾರತ ತಂಡದ ನೇತೃತ್ವವನ್ನು ಬಿಎಸ್‌ಎಫ್ ಕಮಾಂಡೆಂಟ್ ಜಿ ಎಲ್ ಮೀನಾ ವಹಿಸಿದ್ದರು. ಮತ್ತು ಪಾಕ್ ತಂಡದ ನೇತೃತ್ವವನ್ನು ಪಾಕಿಸ್ತಾನ ರೇಂಜರ್ಸ್‌ನ ವಿಂಗ್ ಕಮಾಂಡರ್ ಲೆಫ್ಟಿನೆಂಟ್ ಕರ್ನಲ್ ಮುರಾದ್ ಅಲಿ ಖಾನ್ ವಹಿಸಿದ್ದರು.
ಸ್ಥಳೀಯ ಕಮಾಂಡರ್ (ಬೆಟಾಲಿಯನ್) ಮಟ್ಟದಲ್ಲಿ ಗಡಿ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಇಂತಹ ಸಭೆಗಳನ್ನು ನಡೆಸಲಾಗುತ್ತದೆ ಎಂದು ವಕ್ತಾರರು ಹೇಳಿದರು. ಗಡಿ ಭದ್ರತಾ ಪಡೆಯೂ ಜಮ್ಮು (ಜಮ್ಮು ಮತ್ತು ಕಾಶ್ಮೀರ), ಪಂಜಾಬ್ (Punjab), ರಾಜಸ್ಥಾನ (Rajasthan) ಮತ್ತು ಗುಜರಾತ್‌ಗಳ (Gujarat) ಉದ್ದಕ್ಕೂ ದೇಶದ ಪಶ್ಚಿಮ ಪಾರ್ಶ್ವದ ಉದ್ದಕ್ಕೂ ಚಲಿಸುವ 3,300 ಕಿ.ಮೀ ಉದ್ದದ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯನ್ನು ರಕ್ಷಿಸುತ್ತದೆ.
61 ವರ್ಷದ ಶಂಶದ್‌ನನ್ನು ಪ್ರೀತಿಸಿ ಮದುವೆಯಾದ 18 ವರ್ಷದ ಆಲಿಯಾ, ವೈರಲ್ ಅದ ಲವ್ ಸ್ಟೋರಿ!
ಇದಕ್ಕೂ ಮುನ್ನ, ಸೋಮವಾರ (ಜೂನ್ 27) ಮುಂಜಾನೆ ಜಮ್ಮು ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ (ಐಬಿ) ಉದ್ದಕ್ಕೂ ಪಾಕಿಸ್ತಾನಿ ಒಳನುಸುಳುಕೋರನನ್ನು ಬಿಎಸ್ಎಫ್ ಪಡೆಗಳು ಸದೆ ಬಡಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.