Asianet Suvarna News Asianet Suvarna News

ಸ್ವಾತಂತ್ರ್ಯ ದಿನಾಚರಣೆಗೆ ಪಾಕ್ ಉಗ್ರರಿಂದ ದಾಳಿ ಸಂಚು, ಗುಪ್ತಚರ ಮಾಹಿತಿ ಬೆನ್ನಲ್ಲೇ ಹೈ ಅಲರ್ಟ್!

ಭಾರತದ ಸ್ವಾತಂತ್ರ್ಯ ಸಂಭ್ರಮಕ್ಕೆ ಬ್ರೇಕ್ ಹಾಕಲು ಪಾಕಿಸ್ತಾನದ ಉಗ್ರಸಂಘಟನೆ ಮುಂದಾಗಿದೆ. ಸ್ಲೀಪರ್‌ಸೆಲ್ ಹಾಗೂ ಇತರ ಉಗ್ರರಿಂದ ದೆಹಲಿ, ಕಾಶ್ಮೀರ ಸೇರಿದಂತೆ ಹಲವು ಭಾಗದ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಸಂಚು ನಡೆದಿದೆ. ಈ ಕುರಿತು ಗುಪ್ತಚರ ಇಲಾಖೆ ಮಾಹಿತಿ ನೀಡಿದ ಬೆನ್ನಲ್ಲೇ ಹೈ ಅಲರ್ಟ್ ಘೋಷಿಸಲಾಗಿದೆ.
 

Pakistan terror outfit LeT Jaish e Mohammed plan to attack on Independence day ckm
Author
First Published Aug 14, 2023, 1:55 PM IST

ನವದೆಹಲಿ(ಆ.14) ಭಾರತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿದೆ. ತ್ಯಾಗ ಬಲಿದಾನದ ಮೂಲಕ ಪಡೆದ ಸ್ವಾತಂತ್ರ್ಯ ಇದೀಗ ಅಮೃತಕಾಲ ತಲುಪಿದೆ. ದೇಶದ ಮೂಲೆ ಮೂಲೆಯಲ್ಲಿ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಲಿದ್ದಾರೆ. ಆದರೆ ಭಾರತದ ಸಂಭ್ರಮಕ್ಕೆ ಕೊಳ್ಳಿ ಇಡಲು ಶತ್ರು ರಾಷ್ಟ್ರ ಪಾಕಿಸ್ತಾನ ಸಜ್ಜಾಗಿದೆ. ಪಾಕ್ ಕೃಪಾ ಪೋಷಿತ ಭಯೋತ್ಪಾದಕ ಸಂಟನೆಗಳು ಸ್ವಾತಂತ್ರ್ಯ ದಿನಾಚರಣೆಗೆ ದಾಳಿ ಮಾಡಲು ಸಂಚು ರೂಪಿಸಿದೆ. ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್ ಇ ತೊಬ್ಯಾ, ಜೈಶ್ ಇ ಮೊಹಮ್ಮದ್ ಸಂಘಟನೆಗಳು ದಾಳಿಗೆ ಸಜ್ಜಾಗಿದೆ. ಈ ಮಾಹಿತಿಯನ್ನು ಭಾರತದ ಗುಪ್ತಚರ ಇಲಾಖೆ ಭದ್ರತಾ ಪಡೆಗಳಿಗೆ ರವಾನಿಸಿದೆ. ಇದರ ಬೆನ್ನಲ್ಲೇ ದೇಶದ ಹಲವೆಡೆ ಹೈಅಲರ್ಟ್ ಘೋಷಿಸಲಾಗಿದೆ.

ದೆಹಲಿಯನ್ನು ಪ್ರಮುಖ ಟಾರ್ಗೆಟ್ ಮಾಡಿರುವ ಉಗ್ರರು ಸ್ವಾತಂತ್ರ್ಯ ದಿನಾಚರಣೆಯಂದೇ ದಾಳಿಗೆ ಸಜ್ಜಾಗಿದ್ದಾರೆ. ಪಾಕಿಸ್ತಾನ ಉಗ್ರ ಸಂಘಟನೆ ದಾಳಿ ಜೊತೆಗೆ ಭಾರತದೊಳಗೆ ಸಂಘರ್ಷ ಸೃಷ್ಟಿಸಿ ಹಿಂಸಾಚಾರ ನಡೆಸುವ ಸಾಧ್ಯತೆಯನ್ನು ಗುಪ್ತಚರ ಇಲಾಖೆ ಹೇಳಿದೆ. ಫೆಬ್ರವರಿ ತಿಂಗಳಲ್ಲೇ ಭಾರತದ ಸ್ವಾತಂತ್ರ್ಯ ದಿನಾಚರಣೆ ಮೇಲಿನ ದಾಳಿಗೆ ಪಾಕಿಸ್ತಾನ ಉಗ್ರ ಸಂಘಟನೆಗಳು ಸಜ್ಜಾಗಿರುವ ಮಾಹಿತಿಯನ್ನು ಗುಪ್ತಚರ ಇಲಾಖೆ ಸಂಗ್ರಹಿಸಿದೆ. ಕೆಂಪುಕೋಟೆ ಸುತ್ತಮುತ್ತ ಭಾರಿ ಭದ್ರತೆ ಇರುವ ಕಾರಣ ದೆಹಲಿಯ ಸಾರ್ವಜನಿಕ ಪ್ರದೇಶದ ಮೇಲೆ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ.

ಹೃದಯದಿಂದ ತಿರಂಗ ಹಾರಿಸಿದ್ದೇನೆ, ಬದಲಾದ ಕಾಶ್ಮೀರ ಕುರಿತು ಮುಸ್ಲಿಂ ವ್ಯಾಪಾರಿ ಮಾತು!

ಭಾರತದೊಳಗಿನ ಭಯೋತ್ವಾದ ಹಾಗೂ ವಿದ್ವಂಸಕ ಕೃತ್ಯದ ಕುರಿತು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಕೂಡ ದಾಳಿ ಸೂಚನೆ ನೀಡಿದೆ. ಭಾರತದಲ್ಲಿ ಹಲವು ಉಗ್ರ ಸಂಘಟೆಗಳು ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಉಗ್ರರು ರೈಲು ನಿಲ್ದಾಣ ಸೇರಿದಂತೆ ಹಲುವ ಸಾರ್ವಜನಿಕ ಪ್ರದೇಶದ ಮೇಲೆ ದಾಳಿ ನಡೆಸಿ ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಲು ಸಂಚು ರೂಪಿಸಿದೆ ಎಂದು NIA ಹೇಳಿದೆ.

ಗುಪ್ತಚರ ಮಾಹಿತಿಯಿಂದ ಆಗಸ್ಟ್ ತಿಂಗಳ ಆರಂಭದಿಂದಲೇ ಭದ್ರತೆ ಹೆಚ್ಚಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಗಡಿ ಬಾಗದಲ್ಲಿ ಉಗ್ರರ ನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಲಾಗಿದೆ. ಗಡಿಯುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿದೆ. ಇನ್ನು ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳು, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. 

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯ ತಿಳಿದಿರಬೇಕು ಈ 12 ನಿಯಮ!

ಆಗಸ್ಟ್ 15 ರಂದು ಪ್ರಧಾನಿ ಮೋದಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಕೆಂಪುಕೋಟೆಗೆ ಆಗಮಿಸಿರುವ ಮೋದಿಗೆ ಇಂಟರ್-ಸರ್ವೀಸ್ ಮತ್ತು ದೆಹಲಿ ಪೊಲೀಸ್ ಗಾರ್ಡ್ ಪ್ರಧಾನ ಮಂತ್ರಿಯವರಿಗೆ ಸಾಮಾನ್ಯ ಸೆಲ್ಯೂಟ್ ಸಲ್ಲಿಸಲಿದ್ದಾರೆ. ಬಳಿಕ ಮೋದಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಮೋದಿಗೆ ಗೌರವ ವಂದನೆ ಸಲ್ಲಿಸುವ ತಂಡವು ಸೇನೆ, ವಾಯುಪಡೆ ಮತ್ತು ದೆಹಲಿ ಪೊಲೀಸರ ತಲಾ 25 ಸಿಬ್ಬಂದಿ ಮತ್ತು ನೌಕಾಪಡೆಯ ಒಬ್ಬ ಅಧಿಕಾರಿ ಮತ್ತು 24 ಸಿಬ್ಬಂದಿಯನ್ನು ಒಳಗೊಂಡಿರುತ್ತದೆ. ಭಾರತೀಯ ಸೇನೆಯು ಈ ವರ್ಷ ಸಮನ್ವಯ ಸೇವೆಯಾಗಿದೆ. ಗಾರ್ಡ್ ಆಫ್ ಹಾನರ್‌ ಗೆ ಮೇಜರ್ ವಿಕಾಸ್ ಸಾಂಗ್ವಾನ್ ಅವರು ಕಮಾಂಡರ್ ಆಗಿರುತ್ತಾರೆ. ಪ್ರಧಾನ ಮಂತ್ರಿಗಳ ಗಾರ್ಡ್‌ ನಲ್ಲಿರುವ ಸೇನಾ ತುಕಡಿಗೆ ಮೇಜರ್ ಇಂದ್ರಜೀತ್ ಸಚಿನ್, ನೌಕಾದಳಕ್ಕೆ ಲೆಫ್ಟಿನೆಂಟ್ ಕಮಾಂಡರ್ ಎಂವಿ ರಾಹುಲ್ ರಾಮನ್ ಮತ್ತು ವಾಯುಪಡೆಯ ತುಕಡಿಗೆ ಸ್ಕ್ವಾಡ್ರನ್ ಲೀಡರ್ ಆಕಾಶ್ ಗಂಘಾಸ್ ಅವರು ಕಮಾಂಡರ್ ಆಗಿರುತ್ತಾರೆ. ದೆಹಲಿ ಪೊಲೀಸ್ ತುಕಡಿಗೆ ಹೆಚ್ಚುವರಿ ಡಿಸಿಪಿ ಸಂಧ್ಯಾ ಸ್ವಾಮಿ ಅವರು ಕಮಾಂಡರ್ ಆಗಿರುತ್ತಾರೆ.

Follow Us:
Download App:
  • android
  • ios