ದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ತ್ರಿವರ್ಣ ಧ್ವಜ ಹಾರಾಡುತ್ತಿದೆ.ಈ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯ ಭಾರತೀಯ ದಂಡ ಸಂಹಿತೆಯ ಕೆಲ ನಿಯಮಗಳನ್ನು ತಿಳಿದಿರಲೇಬೇಕು. ಇದು ಬೇಸಿಕ್ ನಿಯಮಗಳಾಗಿದ್ದು, ಅರಿವು ಹಾಗೂ ಜಾಗೃತಿ ಅತೀ ಅಗತ್ಯ. ಎಫ್ಐಆರ್‌ನಿಂದ ಹಿಡಿದು ಉಚಿತ ಕಾನೂನು ಸೇವೆ, ಬಂಧನ ನಿಯಮಗಳು ಸೇರಿದಂತೆ 12 ಪ್ರಮುಖ ಹಾಗೂ ಬೇಸಿಕ್ ನಿಯಮದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಬೆಂಗಳೂರು(ಆ.14) ಭಾರತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿದೆ. 2021ರಲ್ಲಿ ಆರಂಭಗೊಂಡ ಅಜಾದಿ ಕಾ ಅಮೃತ ಮಹೋತ್ಸವ ಈ ಸ್ವಾತಂತ್ರ್ಯ ದಿನಾಚರಣೆಯೊಂದಿಗೆ ಅಂತ್ಯವಾಗಲಿದೆ. ಹರ್ ಘರ್ ತಿರಂಗಾ ಅಭಿಯಾನದಿಂದ ಎಲ್ಲೆಡೆ ತಿರಂಗ ಹಾರಾಡುತ್ತಿದೆ. ಈ ಸಂದರ್ಭದಲ್ಲಿ ಪ್ರತಿ ನಿತ್ಯ ಬದುಕಿನಲ್ಲಿ ಎದುರಾಗುವ ಸವಾಲು ಹಾಗೂ ಹಕ್ಕು ಸಂರಕ್ಷಣೆ ಕುರಿತ ಕಾನೂನುಗಳ ಅರಿವು ಅಗತ್ಯ. ಭಾರತದ ಕಾನೂನುಗಳ ಪೈಕಿ ಕನಿಷ್ಠ 12 ಕಾನೂಗಳ ಅರಿವು ಪ್ರತಿಯೊಬ್ಬ ಭಾರತೀಯನಿಗೆ ಇರಬೇಕು. ಈ ನಿಟ್ಟಿನಲ್ಲಿ ಒಂದೇ ವಾಕ್ಯದಲ್ಲಿ 12 ಕಾನೂನುಗ ವಿವರ ಇಲ್ಲಿದೆ.
ಎಫ್ಐಆರ್ ದಾಖಲು: ಇಂಡಿಯನ್ ಪೀನಲ್ ಕೋಡ್(ಐಪಿಸಿ ಸೆಕ್ಷನ್) 166ಎ ಅಡಿಯಲ್ಲಿ ಪೊಲೀಸ್ ಅಧಿಕಾರಿ ಯಾವುದೇ ಎಫ್ಐಆರ್ ( ಪ್ರಥಮ ಮಾಹಿತಿ ವರದಿ)ಯನ್ನು ದಾಖಲಿಸಿಕೊಳ್ಳಲು ನಿರಾಕರಿಸುವಂತಿಲ್ಲ. ನಾಗರೀಕ ನೀಡುವ ಯಾವುದೇ ಎಫ್ಐಆರ್ ವರದಿಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ನಿರಾಕರಿಸಿದ ಪೊಲೀಸ್ ಅಧಿಕಾರಿ ವಿರುದ್ಧ ಕಾನೂನು ಕ್ರಮಕ್ಕೆ ಅವಕಾಶವಿದೆ.
ಬ್ರಿಟಿಷರ ಕಾಲದ 3 ಕಾಯ್ದೆಗೆ ಮುಕ್ತಿ: ಹೇಗಿರಲಿದೆ ಗೊತ್ತಾ ದೇಶದ ಹೊಸ ಕಾನೂನು ವ್ಯವಸ್ಥೆ? ಮೋದಿ ಮಹಾಕ್ರಾಂತಿ ರಹಸ್ಯ..
ಮರುಪವಾತಿ ಹಕ್ಕು: ಗ್ರಾಹಕರು ಖರೀದಿಸಿದ ಉತ್ಪನ್ನಗಳಿಂದ ಸಂತೃಪ್ತವಾಗಿಲ್ಲದಿದ್ದರೆ ಅಥವಾ ಹಣ ನೀಡಿದ ಬಳಸಿದ ಸೇವೆ ಸರಿ ಇಲ್ಲದಿದ್ದರೆ, ಅದರ ಸಂಪೂರ್ಣ ಮರುಪಾವತಿ ಗ್ರಾಹಕರ ಹಕ್ಕಾಗಿದೆ. ಕನ್ಸೂಮರ್ ಪ್ರೊಟೆಕ್ಷನ್ ಬಿಲ್ 2019 ನಿಯಮದ ಮೂಲಕ ಹಣ ಮರುಪಾವತಿ ಮಾಡಿಕೊಳ್ಳಬಹುದು. ಉತ್ಪನ ಡಿಲಿವರಿ ವಿಳಂಬ, ಕೆಟ್ಟಿರುವ ಅಥವ ಹಾಳಾಗಿರುವ ಉತ್ಪನ್ನವನ್ನು ಮರಳಿ ಪಡೆಯಲು ಮಾರಾಟಗಾರ ಅಥವಾ ಡೀಲರ್ ಒಪ್ಪಿಕೊಳ್ಳದಿದ್ದರೂ ನಿಯಮದ ಪ್ರಕಾರ ದೂರು ದಾಖಲಿಸಲು ಸಾಧ್ಯವಿದೆ. ಇಷ್ಟೇ ಅಲ್ಲ ಸಂಪೂರ್ಣ ಹಣ ಮರುಪಾವತಿ ಮಾಡಲು ಸಾಧ್ಯವಿದೆ.
ಪೋಷಕರಿಗೆ ಮಕ್ಕಳ ಪಾಲನೆ ಹಕ್ಕು: ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 125 ಪತ್ನಿ, ಮಕ್ಕಳು ಹಾಗೂ ಪೋಷಕರ ಪಾಲನೆ ಹೇಳುತ್ತದೆ. ಮಕ್ಕಳ ಪಾಲನೆ ಹಕ್ಕು ಸಂಪೂರ್ಣವಾಗಿ ಪೋಷರಿಗೆ ಸೇರಿದ್ದು.
ಸಮಾನ ವೇತನ ಹಕ್ಕು: ಈಕ್ವಲ್ ರೆಮ್ಯೂನರೇಶನ್ ಆ್ಯಕ್ಟ್ 1973ರ ನಿಯಮದ ಪ್ರಕಾರ ಪುರುಷ ಅಥವಾ ಮಹಿಳೆಗೆ ಸಮಾನವಾಗಿ ವೇತನ ನೀಡಬೇಕು. ಒಂದೇ ಕೆಲಸಕ್ಕೆ ಪುರುಷರಿಗೆ ಹೆಚ್ಚು, ಮಹಿಳೆಯರಿಗೆ ಕಡಿಮೆ ವೇತನ ನೀಡುವಂತಿಲ್ಲ. ಕೆಲಸದಲ್ಲಿ ಯಾವುದೇ ಲಿಂಗ ತಾರತಮ್ಯ ಮಾಡುವಂತಿಲ್ಲ
ಮಹಿಳೆ ಬಂಧನ ಕಾನೂನು: ಕ್ರಿಮಿನಲ್ ಪ್ರೊಸಿಜರ್ ಕೋಡ್ ಸೆಕ್ಷನ್ 46ರ ಅಡಿಯಲ್ಲಿ ಮಹಿಳೆಯ ಬಂಧನಕ್ಕೆ ಕೆಲ ನಿಯಮಗಳಿವೆ. ಬೆಳಗ್ಗೆ 6ಗಂಟೆಗೂ ಮೊದಲು ಮಹಿಳೆಯನ್ನು ಬಂಧಿಸುವಂತಿಲ್ಲ. ಇನ್ನು ಸಂಜೆ 6 ಗಂಟೆ ನಂತರ ಮಹಿಳೆಯನ್ನು ಬಂಧಿಸುವಂತಿಲ್ಲ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯೊಳಗೆ ಮಹಿಳೆಯನ್ನು ಯಾವುದೇ ಪ್ರಕರಣ ಸಂಬಂಧ ಬಂಧಿಸುವಾಗ ಪುರುಷ ಪೊಲೀಸರು ಅರೆಸ್ಟ್ ಮಾಡುವಂತಿಲ್ಲ. ಮಹಿಳಾ ಪೊಲೀಸರೇ ಮಹಿಳೆಯನ್ನು ಬಂಧಿಸಬೇಕು. ಬಂಧನದ ವೇಳೆ ಮಹಿಳೆಯ ಗೌರವ ಹಾಗೂ ಸುರಕ್ಷತೆಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು.
ಅಪ್ರಾಪ್ತೆ ಮೇಲಿನ ಅತ್ಯಾಚಾರಕ್ಕೆ ಗಲ್ಲು ಶಿಕ್ಷೆ, ಕಠಿಣ ಕಾನೂನು ಮಸೂದೆ ಮಂಡಿಸಿದ ಅಮಿತ್ ಶಾ!
ಟ್ರಾಫಿಕ್ ಪೊಲೀಸರು ವಾಹನ ಕಿ ಎಳೆದು ತೆಗೆದಾಗ: ಮೋಟಾರು ವಾಹನಿ ನಿಯಮ 1988ರ ಪ್ರಕಾರ ಟ್ರಾಫಿಕ್ ಪೊಲೀಸರು ವಾಹನ ನಿಲ್ಲಿಸಿ ನಿಯಮಬಾಹಿರವಾಗಿ ನಿಮ್ಮ ವಾಹನದ ಕೀ ಎಳೆದು ತೆಗೆಯುವಂತಿಲ್ಲ. ಈ ರೀತಿ ಘಟನೆ ವಿರುದ್ದ ಪೊಲೀಸ್ ವಿರುದ್ಧ ಕಾನೂನು ಕ್ರಮಕ್ಕೆ ಅವಕಾಶವಿದೆ.
ಪೋಲೀಸ್ ಆ್ಯಕ್ಟ್: ಪೊಲೀಸ್ ಆ್ಯಕ್ಟ್ 1861ರ ಪ್ರಕಾರ ಪೊಲೀಸ್ ಅಧಿಕಾರಿ ಅಥವಾ ಪೊಲೀಸ್ ಪೇದೆ ಯಾವುದೇ ಸಂದರ್ಭದಲ್ಲಿ ಕರ್ತವ್ಯ ನಿಭಾಯಿಸಬೇಕು. ಪೊಲೀಸ್ ರಜೆಯಲ್ಲಿದ್ದಾಗ ಅಥವಾ ಡ್ಯೂಟಿಯಲ್ಲಿ ಇಲ್ಲದೆ ಇದ್ದಾಗ ಅಥವಾ ಯೂನಿಫಾರ್ಮ್‌ನಲ್ಲಿ ಇಲ್ಲದೇ ಇದ್ದರೂ ನೆರವು ಕೇಳಿದ ವ್ಯಕ್ತಿಗೆ ಪೊಲೀಸ್ ಸಹಾಯ ಮಾಡಲೇಬೇಕು. ಪೊಲೀಸ್ ರಜೆಯಲ್ಲಿದ್ದರೂ ಸಾರ್ವಜನಿಕ ಹಿತದೃಷ್ಟಿಯಿಂದ ನೆರವಾಗಲೇಬೇಕು.
ಮೆಟರ್ನಿಟಿ ಆ್ಯಕ್ಟ್: ಮೆಟರ್ನಿಟಿ ಬೆನಿಫಿಟ್ ಆ್ಯಕ್ಟ್ 1961ರ ನಿಯಮದ ಪ್ರಕಾರ ಗರ್ಭಿಣಿ ಕಾರಣಕ್ಕೆ ಉದ್ಯೋಗದಿಂದ ಮಹಿಳೆಯನ್ನು ತೆಗೆದುಹಾಕುವಂತಿಲ್ಲ. ಇನ್ನು ಮಗುವಿನ ಜನನದ ಬಳಿಕ ಬಾಣಂತಿಗೆ ಕನಿಷ್ಠ ರಜೆ ನೀಡಬೇಕು.
ಚೆಕ್ ಬೌನ್ಸ್ ಪ್ರಕರಣ: ನಿಮಗೆ ಪಾವತಿಯಾಗಬೇಕಿದ್ದ ಹಣವನ್ನು ಚೆಕ್ ಮೂಲಕ ನೀಡಿದರೆ,ಆ ಚೆಕ್ ಬೌನ್ಸ್ ಆದರೆ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬುಹುದು.
ಉಚಿತ ಕಾನೂನು ಸೇವೆ: ವಕೀಲರನ್ನು ನೇಮಸಿ ತನ್ನ ಪರ ವಾದ ಮಂಡಿಸಲು ಆರ್ಥಿಕವಾಗಿ ಶಕ್ತವಾಗಿಲ್ಲದಿದ್ದರೆ, ಸರ್ಕಾರವೇ ಉಚಿತ ಕಾನೂನು ಸೇವೆ ನೀಡಬೇಕು.
ಆರ್‌ಟಿಐ ಹಕ್ಕು: ಮಾಹಿ ಹಕ್ಕು ಕಾಯ್ದೆ ಅಡಿಯಲ್ಲಿ ದೇಶದ ಯಾವುದೇ ನಾಗರೀಕ ಸರ್ಕಾರದ ಯಾವುದೇ ದಾಖಲೆಗಳನ್ನು ಪಡೆಯಬಹುದು. ಪಾರದರ್ಶಕ ಆಡಳಿತದ ಭಾಗವಾಗಿ ಈ ಕಾಯ್ದೆ ಜಾರಿಗೆ ತರಲಾಗಿದೆ. ಸೇನೇ ಸೇರಿದಂತೆ ಕೆಲ ಗೌಪ್ಯ ಮಾಹಿತಿ ಹೊರತುಪಡಿಸಿ ಇನ್ನುಳಿದ ಮಾಹಿತಿಗಳನ್ನು ಅರ್ಜಿ ಹಾಕಿ ಪಡೆಯಬಹುದು. ಅಧಿಕಾರಿಗಳು ಮಾಹಿತಿ ನೀಡಲು ವಿಳಂಬ ಮಾಡಿದರೆ ದಂಡ ಪಾವತಿಸಬೇಕಾಗುತ್ತದೆ.
ಗರಿಷ್ಠ ಮಾರಾಟ ಬೆಲೆ ಕಾಯ್ದೆ: ಗ್ರಾಹಕರಿಗೆ ಯಾವುದೇ ಉತ್ಪನ್ನಗಳು ಮಾರಾಟ ಮಾಡುವಾಗ ಉತ್ಪನ್ನದಲ್ಲಿ ನಮೂದಿಸಿರುವ MRP ಬೆಲೆಗಿಂತ ಹೆಚ್ಚು ಪಡೆಯುವಂತಿಲ್ಲ. ಈ MRP ಎಲ್ಲಾ ತೆರಿಗೆ, ಸಾರಿಗೆ ವೆಚ್ಚ ಒಳಗೊಂಡಿರುತ್ತದೆ.
