ಹೃದಯದಿಂದ ತಿರಂಗ ಹಾರಿಸಿದ್ದೇನೆ, ಬದಲಾದ ಕಾಶ್ಮೀರ ಕುರಿತು ಮುಸ್ಲಿಂ ವ್ಯಾಪಾರಿ ಮಾತು!
ಕಾಶ್ಮೀರದಲ್ಲಿ ಅಭಿವೃದ್ಧಿ ವೇಗವಾಗಿ ಸಾಗುತ್ತಿದೆ. ಹಿಂದೆ ಸ್ವಾತಂತ್ರ್ಯ ಸಮೀಪಿಸುತ್ತಿದ್ದಂತೆ ಅಂಗಡಿ ಮುಂಗಟ್ಟು ಬಂದ್ ಆಗುತ್ತಿತ್ತು. ಈಗ ನಾನು ವ್ಯಾಪಾರ ಮಾಡುತ್ತಿದ್ದೇನೆ. ಹೃದಯದಿಂದ ತಿರಂಗ ಹಾರಿಸಿದ್ದೇನೆ, ಯಾರ ಒತ್ತಡವೂ ಇಲ್ಲ. ಇದು ಕಾಶ್ಮೀರದ ಮುಸ್ಲಿಂ ವ್ಯಾಪಾರಿಯ ಮಾತುಗಳು. ಈ ವ್ಯಾಪಾರಿ ಸಹೋದರ ಭಯೋತ್ಪಾದಕನಾಗಿ ನಾಪತ್ತೆಯಾಗಿದ್ದಾನೆ.

ಕಾಶ್ಮೀರ(ಆ.14) ದೇಶದ ಸ್ವಾತಂತ್ರ್ಯ ಸಂಭ್ರಮದಲ್ಲಿ ಹರ್ ಘರ್ ತಿರಂಗ ಅಭಿಯಾನಕ್ಕೆ ಭಾರಿ ಸ್ಪಂದನೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿಯ ಆಂದೋಲನದಿಂದ ದೇಶದ ಮೂಲೆ ಮೂಲೆಯಲ್ಲಿ ತಿರಂಗ ಹಾರಾಡುತ್ತಿದೆ. ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ತಿರಂಗ ಯಾತ್ರೆಗಳು ನಡೆಯುತ್ತಿದೆ. ಮನೆ, ಅಂಗಡಿಗಳು, ಕಟ್ಟಡದ ಮೇಲೆ ತ್ರಿವರ್ಣ ಧ್ವಜ ಹಾರಾಡುತ್ತಿದೆ. ತಿರಂಗ ಯಾತ್ರೆಗಳು ನಡೆಯತ್ತಿದೆ. ಇದೇ ವೇಳೆ ಕಾಶ್ಮೀರ ಮುಸ್ಲಿಂ ವ್ಯಾಪಾರಿ ಹೃದಯಾಳದ ಮಾತುಗಳನ್ನು ತೆರೆದಿಟ್ಟಿದ್ದಾರೆ. ನಾನು ಯಾವುದೇ ಒತ್ತಡಕ್ಕೆ ಮಣಿದು ತಿರಂಗ ಹಾರಿಸಿಲ್ಲ, ನನ್ನ ಹೃದಯದಿಂದ ತ್ರಿವರ್ಣ ಧ್ವಜ ಹಾರಿದ್ದೇನೆ. ಸಾರೇ ಜಹಾಂಸೇ ಅಚ್ಚಾ ಹಿಂದುಸ್ಥಾನ್ ಹಮಾರಾ ಎಂದು ಮುಸ್ಲಿಂ ವ್ಯಾಪಾರಿ ಕಾಶ್ಮೀರದಲ್ಲಿನ ಬದಲಾವಣೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಕಾಶ್ಮೀರದಲ್ಲಿ ಎಲ್ಲವೂ ಬದಲಾಗಿದೆ. ಕಾನೂನು ಪ್ರಕಾರ ನಡೆಯುವರಿಗೆ ಯಾವುದೇ ಭೀತಿ ಇಲ್ಲ. ಯಾರು ತಪ್ಪು ಮಾಡತ್ತಾರೋ ಅವರಿಗೆ ಶಿಕ್ಷಯಾಗುತ್ತಿದೆ. ಕಾಶ್ಮೀರದಲ್ಲಿ ಆಗಿರುವ ಅಭಿವೃದ್ಧಿ ಹಿಂದೆಂದೂ ಆಗಿಲ್ಲ ಎಂದು ರಾಯಿಸ್ ಮಟ್ಟು ಮುಸ್ಲಿಂ ವ್ಯಾಪಾರಿ ಹೇಳಿದ್ದಾರೆ. ತನ್ನ ಎಲೆಕ್ಟ್ರಾನಿಕ್ ಶಾಪ್ ಮೇಲೆ ತಿರಂಗ ಹಾರಿಸಿರುವ ವ್ಯಾಪಾರಿ ಈ ಕುರಿತು ಸಂತಸವನ್ನು ಹಂಚಿಕೊಂಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯ ತಿಳಿದಿರಬೇಕು ಈ 12 ನಿಯಮ!
ಕಾಶ್ಮೀರದಲ್ಲಿ ಅಭಿವೃದ್ಧಿಯಾಗುತ್ತಿದೆ. ಕಾಶ್ಮೀರ ಬದಲಾಗಿದೆ. ಹೀಗಾಗಿ ನಾನು ಇಂದು ಅಂಗಡಿಯಲ್ಲಿ ಕುಳಿತಿದ್ದೇನೆ. ಈ ಹಿಂದೆ ಸ್ವಾತಂತ್ರ್ಯ ದಿನಾಚರಣೆಯ 2 ಅಥವೂ 3 ದಿನ ಮೊದಲೇ ಕಾಶ್ಮೀರ ಬಂದ್ ಆಗುತ್ತಿತ್ತು. ಕಲ್ಲು ತೂರಾಟ, ಭಾರತ ವಿರೋಧಿ ಘೋಷಣೆಗಳು, ಪ್ರತ್ಯೇಕ ಕಾಶ್ಮರಿದ ಕೂಗು, ಬಾಂಬ್ ದಾಳಿ, ಭಯೋತ್ಪಾದಕ ಕೃತ್ಯಗಳೇ ಹೆಚ್ಚಾಗಿರುತ್ತಿತ್ತು. ಹೀಗಾಗಿ ಸ್ವಾತಂತ್ರ್ಯ ಕಳೆದು ಕೆಲ ದಿನಗಳ ಬಳಿಕ ಪರಿಸ್ಥಿತಿ ಸುಧಾರಿಸುತ್ತಿತ್ತು. ಬಳಿಕ ಅಂಗಡಿ ತೆರೆಯಲಾಗುತ್ತಿತ್ತು. ಇದೀಗ ನಾನು ಶಾಪ್‌ನಲ್ಲದ್ದೇನೆ. ಎಲ್ಲೆಡೆ ತಿರಂಗ ಹಾರಾಡುತ್ತಿದೆ ಎಂದು ಮುಸ್ಲಿಂ ವ್ಯಾಪಾರಿ ಹೇಳಿದ್ದಾರೆ.
ಕಾಶ್ಮೀರದ ಪರಿಸ್ಥಿತಿಯಿಂದ 2009ರಲ್ಲಿ ನನ್ನ ಸಹೋದರ ಭಯೋತ್ಪಾದಕನಾಗಿದ್ದಾನೆ. ಆತ ಎಲ್ಲಿದ್ದಾನೆ ಅನ್ನೋದೇ ಗೊತ್ತಿಲ್ಲ. ಬದುಕಿದ್ದಾನೋ ಅನ್ನೋದು ತಿಳಿದಿಲ್ಲ. ಸಹೋದರನಿಗೆ ನನ್ನ ಸಂದೇಶ ಸ್ಪಷ್ಟ. ಇಂದು ಕಾಶ್ಮೀರ ಬದಲಾಗಿದೆ. ಸಹೋದರ ಬದುಕಿದ್ದರೆ ಮರಳಿ ಬಾ. ಈಗ ಪಾಕಿಸ್ತಾನ ಏನೂ ಮಾಡಲು ಸಾಧ್ಯವಿಲ್ಲ. ಭಾರತ ವಿರುದ್ಧ ಷಡ್ಯಂತ್ರ ಮಾಡಿ ಪಾಕಿಸ್ತಾನ ಬಿಕಾರಿಯಾಗಿದೆ. ನಾವು ಹಿಂದಸ್ಥಾನದಲ್ಲಿ ಹುಟ್ಟಿದ್ದೇವೆ. ಹಿಂದುಸ್ಥಾನಿಗಳಾಗಿದ್ದೇವೆ. ಮುಂದೆಯೂ ಹಿಂದುಸ್ಥಾನಿಗಳಾಗಿರುತ್ತೇವೆ ಎಂದು ಮುಸ್ಲಿಂ ವ್ಯಾಪಾರಿ ಹೇಳಿದ್ದಾರೆ.
ಉಗ್ರನ ಕುಟುಂಬದಿಂದ ‘ಹರ್ ಘರ್ ತಿರಂಗಾ’: ಜಮ್ಮು: ಹಿಜ್ಬುಲ್ ಮುಜಾಹಿದೀನ್ ಉಗ್ರ ಮುದಾಸಿರ್ ಕುಟುಂಬ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಓಗೊಟ್ಟು ಭಾನುವಾರ ಮನೆ ಮೇಲೆ ತ್ರಿವರ್ಣಧ್ವಜ ಹಾರಿಸಿದೆ. ಇದೇ ವೇಳೆ, ದಾರಿ ತಪ್ಪಿರುವ ತಮ್ಮ ಮಗನನ್ನು ಹುಡುಕಿಕೊಡಿ ಎಂದು ಸರ್ಕಾರಕ್ಕೆ ಕೋರಿದೆ.
76ನೇ ಸ್ವಾತಂತ್ರ್ಯೋತ್ಸವಕ್ಕೆ ಸಜ್ಜಾಗುತ್ತಿದೆ ಭಾರತ..! ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಮೋದಿ ಕರೆ
ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಭಾನುವಾರ 76ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಉಪರಾಜ್ಯಪಾಲ ಮನೋಜ್ ಸಿನ್ಹಾ ನೇತೃತ್ವದಲ್ಲಿ ನಡೆದ ತಿರಂಗಾ ರಾರಯಲಿ ಬಗ್ಗೆ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ವ್ಯಂಗ್ಯವಾಡಿದ್ದು, ವಿವಾದಿತ ಹೇಳಿಕೆ ನೀಡಿದ್ದಾರೆ. ಟ್ವೀಟ್ ಮಾಡಿರುವ ಮೆಹಬೂಬಾ, ‘ಅಂದು ಜನರ ಮಧ್ಯೆ ನೆಹರು ತಿರಂಗಾ ಹಾರಿಸಿದ್ದರು. ಇಂದು ಭದ್ರತಾ ಪಡೆಗಳ ಮಧ್ಯೆ ರಾಜ್ಯಪಾಲ ಸಿನ್ಹಾರಿಂದ ತ್ರಿವರ್ಣ ಧ್ವಜ ರಾರಯಲಿ ನಡೆಸುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ. ಈ ಹಿಂದೆ ತ್ರಿವರ್ಣ ಧ್ವಜಾರೋಹಣಕ್ಕೆ ಮೆಹಬೂಬಾ ಒಮ್ಮೆ ವಿರೋಧ ವ್ಯಕ್ತಪಡಿಸಿದ್ದರು. ಇದರ ವಿರುದ್ಧ ಸಿನ್ಹಾ ವಾಗ್ದಾಳಿ ನಡೆಸಿದ್ದರು. ಅದನ್ನು ಉಲ್ಲೇಖಿಸಿ ಮುಫ್ತಿ ಚಾಟಿ ಬೀಸಿದ್ದಾರೆ.