Asianet Suvarna News Asianet Suvarna News

ದಾಖಲೆ ನೀಡಿ ಭಾರತಕ್ಕೆ ಆಗಮಿಸಲು ವಾಘಾ ಗಡಿಗೆ ಬಂದ 180 ಹಿಂದೂಗಳ ತಡೆದ ಪಾಕಿಸ್ತಾನ!

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಿಂದ ಭಾರತಕ್ಕೆ ಆಗಮಿಸಲು ವಾಘಾ ಗಡಿಗೆ ಬಂದ 180 ಹಿಂದೂಗಳನ್ನು ಪಾಕಿಸ್ತಾನ ಅಧಿಕಾರಿಗಳು ತಡೆದಿದ್ದಾರೆ. ಪಾಸ್‌ಪೋರ್ಟ್, ವೀಸಾ ಸೇರಿದಂತೆ ಎಲ್ಲಾ ದಾಖಲೆ ನೀಡಿದರೂ ಪಾಕಿಸ್ತಾನ ಅಧಿಕಾರಿಗಳು ಭಾರತ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ. 

Pakistan Sindh province 180 hindu want to travel India but Pak Authorities stops at wagah border ckm
Author
First Published Feb 8, 2023, 3:36 PM IST

ನವದೆಹಲಿ(ಫೆ.08):  ಪಾಕಿಸ್ತಾನದಲ್ಲಿರುವ ಒಟ್ಟ ಹಿಂದೂಗಳ ಪೈಕಿ ಸಿಂಧ್ ಪ್ರಾಂತ್ಯದಲ್ಲಿ ಹೆಚ್ಚಿನ ಹಿಂದೂಗಳು ನೆಲೆಸಿದ್ದಾರೆ. ಇದೀಗ ಸಿಂಧ್ ಪ್ರಾಂತ್ಯದಿಂದ ಭಾರತಕ್ಕೆ ಆಗಮಿಸಲು ವಾಘಾ ಗಡಿಗೆ ಬಂದ 180 ಹಿಂದೂಗಳನ್ನು ಪಾಕಿಸ್ತಾನ ಅಧಿಕಾರಿಗಳು ತಡೆದಿದ್ದಾರೆ. ಪಾಸ್‌ಪೋರ್ಟ್ ವೀಸಾ ಸೇರಿದಂತೆ ಎಲ್ಲಾ ದಾಖಲೆ ನೀಡಿದರೂ ಪಾಕಿಸ್ತಾನ ಹಿಂದೂಗಳನ್ನು ಅಧಿಕಾರಿಗಳು ತಡೆದಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ಹಲವು ಹಿಂದೂಗಳು ಕುಟುಂಬಗಳು ಇದೀಗ ಗಡಿಯಲ್ಲೆ ದಿನಕಳೆಯುವಂತಾಗಿದೆ. ಧಾರ್ಮಿಕ ಕಾರಣದ ಅಡಿಯಲ್ಲಿ 180  ಹಿಂದೂಗಳು ವೀಸಾ ಪಡೆದುಕೊಂಡಿದ್ದಾರೆ. ಆದರೆ ವಾಘಾ ಗಡಿಯಲ್ಲಿ ಈ ಹಿಂದೂಗಳು ಭಾರತಕ್ಕೆ ತೆರಳುವ ಕುರಿತು ಸ್ಪಷ್ಟ ಕಾರಣ ನೀಡಿಲ್ಲ. ಹೀಗಾಗಿ ಅಧಿಕಾರಿಗಳು ತಡೆದಿದ್ದಾರೆ.

ಸಾಮಾನ್ಯವಾಗಿ ಪಾಕಿಸ್ತಾನದಲ್ಲಿರುವ ಹಿಂದೂಗಳು ಧಾರ್ಮಿಕ ಕಾರಣ ನೀಡಿ ಭಾರತ ಪ್ರವೇಶಿಸುತ್ತಾರೆ. ಬಳಿಕ ಹಿಂತಿರುಗಿದ ಉದಾಹರಣೆ ತೀರಾ ವಿರಳ. ರಾಜಸ್ಥಾನ ಹಾಗೂ ದೆಹಲಿಯ ನಿರಾಶ್ರಿತ ಶಿಬಿರಗಳಲ್ಲಿ ಅತೀ ಹೆಚ್ಚಿನ ಪಾಕಿಸ್ತಾನ ಹಿಂದೂ ಕುಟುಂಬಗಳಿವೆ. ಪಾಕಿಸ್ತಾನದಿಂದ ಹಿಂದೂಗಳು ಭಾರತದತ್ತ ಪಲಾಯನ ಮಾಡಲು ಹಲವು ಕಾರಣಗಳಿವೆ. ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಹೀಗಾಗಿ ಪಾಕಿಸ್ತಾನದಲ್ಲಿನ ಹಿಂದೂಗಳ ಸಂಖ್ಯೆ ಕ್ಷೀಣಿಸಿದೆ. ಇಷ್ಟೇ ಅಲ್ಲ ಸಿಂದ್ ಪ್ರಾಂತ್ಯದಲ್ಲಿರುವ ಹಿಂದೂಗಳ ಮನೆಗಳ ಮೇಲೆ ದಾಳಿ ಹೆಣ್ಣಮಕ್ಕಳನ್ನು ಅಪರಿಸಲಾಗುತ್ತದೆ. ಬಳಿಕ ಮತಾಂತರ ಮಾಡಿ ಮದುವೆಯಾಗುವ ಪರಿಪಾಠ ಪ್ರತಿ ದಿನ ನಡೆಯುತ್ತಿದೆ. ವಿರೋಧಿಸಿದ ಹಿಂದೂ ಕುಟುಂಬಗಳನ್ನು ಹತ್ಯೆ ಮಾಡಲಾಗುತ್ತದೆ. ಹೀಗಾಗಿ ಪಾಕಿಸ್ತಾನದಿಂದ ಭಾರತ ಪ್ರವೇಶಿಸುವ ಹಿಂದೂಗಳು ಸಂಖ್ಯೆ ಹೆಚ್ಚಾಗುತ್ತಿದೆ.

Pak Hindu ಹದಿಹರೆಯ ಹಿಂದೂ ಹುಡುಗಿಯರ ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರ!

ಇದೀಗ ವಾಘಾ ಗಡಿಯಲ್ಲಿ ಬಂದಿರುವ 180 ಹಿಂದೂಗಳು ಧಾರ್ಮಿಕ ಕಾರಣ ನೀಡಿ ವೀಸಾ ಪಡೆದುಕೊಂಡಿದ್ದಾರೆ. ಆದರೆ ಯಾವ ಧಾರ್ಮಿಕ ಕಾರಣಕ್ಕೆ ತೆರಳುತ್ತಿದ್ದಾರೆ. ಯಾವ ದೇವಸ್ಥಾನ ಅಥವಾ ಇತರ ಧಾರ್ಮಿಕ ಕಾರಣಗಳಿಂದಾಗಿ ಪ್ರಯಾಣ ಮಾಡುತ್ತಿದ್ದಾರೆ ಅನ್ನೋದನ್ನು ಹೇಳಿಲ್ಲ. ಹೀಗಾಗಿ ಅಧಿಕಾರಿಗಳು ಭಾರತ ಪ್ರವೇಶಕ್ಕೆ ನಿರಾಕರಿಸಿದ್ದಾರೆ. 

ಪಾಕಿಸ್ತಾನದಲ್ಲಿರುವ ಹಿಂದೂಗಳ ಸಂಖ್ಯೆ ಶೇಕಡಾ 1.18 ಮಾತ್ರ. ಶೇಕಡಾ 30ಕ್ಕಿಂತಲೂ ಹೆಚ್ಚಿದ್ದ ಸಂಖ್ಯೆ ಇದೀಗ ಶೇಕಡಾ 1ಕ್ಕೆ ಇಳಿದಿದೆ. ಪಾಕಿಸ್ತಾನದಲ್ಲಿ ಸದ್ಯ  22,10,566 ಹಿಂದೂಗಳು ನೆಲೆಸಿದ್ದಾರೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. 

 

Hindu Temple ಕಿಡಿಗೇಡಿಗಳ ದಾಳಿಗೆ ಪಾಕಿಸ್ತಾನದ ಹಿಂದೂ ದೇವಾಲಯ ಸಂಪೂರ್ಣ ಧ್ವಂಸ!

ಮತಾಂತ​ರಕ್ಕೆ ನಕಾರ: ಪಾಕ್‌​ನ​ಲ್ಲಿ ಹಿಂದು ಮಹಿಳೆ ಮೇಲೆ ಅತ್ಯಾ​ಚಾ​ರ
ಹಿಂದು ಮಹಿ​ಳೆ​ಯೊ​ಬ್ಬಳು ಇಸ್ಲಾಂಗೆ ಮತಾಂತ​ರ​ವಾ​ಗಲು ನಿರಾ​ಕ​ರಿ​ಸಿ​ದ್ದಕ್ಕೆ ಆಕೆಯ ಮೇಲೆ ಅತ್ಯಾಚಾರ ಎಸ​ಗಿದ ಪ್ರಕ​ರಣ ಪಾಕಿ​ಸ್ತಾ​ನದ ದಕ್ಷಿಣ ಸಿಂಧ್‌ ಪ್ರಾಂತ್ಯ​ದಲ್ಲಿ ಇತ್ತೀಚೆಗೆ ನಡೆದಿತ್ತು. ಆದರೆ ಪೊಲೀ​ಸರು ಈವ​ರೆಗೂ ಪ್ರಕ​ರಣ ದಾಖ​ಲಿ​ಸಿಲ್ಲ ಎಂದು ಮಹಿಳೆ ಆರೋ​ಪಿ​ಸಿ​ದ್ದಾಳೆ. ಮದು​ವೆ​ಯಾ​ಗಿ​ರುವ ಹಿಂದೂ ಮಹಿ​ಳೆ​ಯೊ​ಬ್ಬ​ಳನ್ನು ಅಪ​ರಿ​ಸಿದ ಅಪ​ಹ​ರ​ಣ​ಕಾರ ಆಕೆಗೆ ಇಸ್ಲಾಂಗೆ ಮತಾಂತ​ರ​ವಾ​ಗು​ವಂತೆ ಒತ್ತಾಯ ಮಾಡಿ​ದ್ದಾನೆ. ಆದರೆ ಮಹಿಳೆ ಇದಕ್ಕೆ ನಿರಾ​ಕ​ರಿ​ಸಿದ ಕಾರ​ಣ ಆಕೆಯ ಮೇಲೆ ಅತ್ಯಾ​ಚಾರ ಎಸ​ಗಿ​ದ್ದಾನೆ. ಇಬ್ರಾಹಿಂ ಮಂಗಾ​ರಿಯೋ ತನ್ನನ್ನು ಅಪ​ಹ​ರಿ​ಸಿ​ದ್ದಾನೆ ಎಂದು ಮಹಿಳೆ ಹೇಳಿ​ದ್ದಾ​ಳೆ. ಈ ಕುರಿ​ತಾಗಿ ಪೊಲೀ​ಸರು ಪ್ರಕ​ರಣ ದಾಖ​ಲಿ​ಸಲು ನಿರಾ​ಕ​ರಿ​ಸಿದ್ದಾರೆ ಎಂದು ಮಹಿಳೆ ತಾನು ಬಿಡು​ಗಡೆ ಮಾಡಿ​ರುವ ವಿಡಿ​ಯೋ​ದಲ್ಲಿ ಆರೋ​ಪಿ​ಸಿ​ದ್ದಾಳೆ. ಮಹಿಳೆ ಹಾಗೂ ಆಕೆಯ ಕುಟುಂಬ​ದ​ವರು ಪೊಲೀಸ್‌ ಠಾಣೆಯ ಎದುರು ಕುಳಿ​ತು ಪ್ರಕ​ರಣ ದಾಖ​ಲಿ​ಸು​ವಂತೆ ಆಗ್ರ​ಹಿಸಿದ್ದಾರೆ.
 

Follow Us:
Download App:
  • android
  • ios