Asianet Suvarna News Asianet Suvarna News

Pak Hindu ಹದಿಹರೆಯ ಹಿಂದೂ ಹುಡುಗಿಯರ ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರ!

ಹದಿಹರೆಯದ ಇಬ್ಬರು ಹುಡುಗಿಯರು ಹಾಗೂ ಓರ್ವ ಮಹಿಳೆಯನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿದ ಘಟನೆ ನಡೆದಿದೆ.

Two Hindu teenage girls women kidnapped and  forcibly converted to Islam in Pakistan sindh ckm
Author
First Published Sep 24, 2022, 9:39 PM IST

ಇಸ್ಲಾಮಾಬಾದ್(ಸೆ.24):  ಪಾಕಿಸ್ತಾನದಲ್ಲಿ ಅಲ್ಪ ಸಂಖ್ಯಾತ ಹಿಂದೂಗಳು ಸುರಕ್ಷಿತವಲ್ಲ ಅನ್ನೋದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇದೀಗ ಪಾಕಿಸ್ತಾನದಲ್ಲಿ ಮಹಿಳೆ, ಹದಿಹರೆಯದ ಹೆಣ್ಣುಮಕ್ಕಳನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿದ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ. ಹೀಗೆ ಬಲವಂತವಾಗಿ ಮತಾಂತರ ಮಾಡಿದ ಬಳಿಕ ಮುಸ್ಲಿಂ ವ್ಯಕ್ತಿಗೆ ಮದುವೆ ಮಾಡಿಸಲಾಗಿದೆ. ಪಾಕಿಸ್ತಾನದಲ್ಲಿ ಈ ರೀತಿಯ ಘಟನೆ ಸಾಮಾನ್ಯವಾಗಿದೆ. ಈ ಕುರಿತು ಅಪಹರಣಕ್ಕೊಳಗಾದ ಮಹಿಳೆ ಪತಿ ನೀಡಿರುವ ದೂರವನ್ನು ಪಾಕಿಸ್ತಾನ ಪೊಲೀಸ್ ಸ್ವೀಕರಿಸಿಲ್ಲ. ಆದರೆ ಘಟನೆ ಕುರಿತು ಪಾಕ್ ಪೊಲೀಸ್ ತನಿಖೆ ನಡೆಸುವುದಾಗಿ ಹೇಳಿದೆ. ಇದುವರೆಗೂ ಎಫ್ಐಆರ್ ದಾಖಲಾಗಿಲ್ಲ. ಇದರ ವಿರುದ್ದವೂ ಸಿಂಧ್ ಪ್ರಾಂತ್ಯದ ಹಿಂದೂಗಳು ಆಕ್ರೋಶ ಹೊರಹಾಕಿದ್ದಾರೆ. 

ಸಿಂಧ್ ಪ್ರಾಂತ್ಯದ ನರ್ಸಾಪುರ ವಲಯದಿಂದ 14 ವರ್ಷದ ಮೀನಾ ಮೆಘ್ವಾರ್‌ನನ್ನು ಅಪಹರಿಸಲಾಗಿದ್ದರೆ, ನರ್ಸಾಪುರ ಮಾರುಕಟ್ಟೆಯಿಂದ ಮನೆಗೆ ಹಿಂತುರುಗುತ್ತಿದ್ದ ಬಾಲಕಿಯನ್ನು ಅಪಹರಿಸಲಾಗಿದೆ. ಮತ್ತೊಂದು ಘಟನೆಯಲ್ಲಿ ಮೂವರು ಮಕ್ಕಳ ತಾಯಿಯಾಗಿರುವ ಮಹಿಳೆಯನ್ನು ಅಪಹರಿಸಿ ಬಸವಂತವಾಗಿ ಇಸ್ಲಾಂಗೆ ಮತಾಂತರಿಸಲಾಗಿದೆ. ಬಳಿಕ ಬಲವಂತವಾಗಿ ಮದುವೆ ಮಾಡಿಸಲಾಗಿದೆ.

ಪಾಕ್‌ನಲ್ಲಿ ಪ್ರವಾಹ ಸಂತ್ರಸ್ತರಿಗೆ ಆಹಾರ, ವಸತಿ ಒದಗಿಸಿದ ದೇವಸ್ಥಾನ!

ಪಾಕಿಸ್ತಾನದಲ್ಲಿ ಹಿಂದೂಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇದರ ಪೈಕಿ ಸಿಂದ್ ಪ್ರಾಂತ್ಯದಲ್ಲಿ ಹೆಚ್ಚಿನ ಹಿಂದೂಗಳು ನೆಲೆಸಿದ್ದಾರೆ. ಇಲ್ಲಿ ಹಿಂದೂ ಹುಡುಗಿಯರ ಅಪಹರಣ ಹಾಗೂ ಬಲವಂತವ ಇಸ್ಲಾಂ ಮತಾಂತರ ನಡೆಯುತ್ತಲೇ ಇದೆ. ಈ ಸಮಸ್ಯೆಯನ್ನು ಪೊಲೀಸ್, ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಜೂನ್ ತಿಂಗಳಲ್ಲಿ ಕರೀನಾ ಕುಮಾರಿ ಅನ್ನೋ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಬಲವಂತವಾಗಿ ಮತಾಂತರ ಮಾಡಲಾಗಿತ್ತು. ಬಳಿಕ ಮುಸ್ಲಿಂ ವ್ಯಕ್ತಿಗೆ ಮದುವೆ ಮಾಡಿಸಲಾಗಿತ್ತು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಈ ವೇಳೆ ಬಾಲಕಿ ತನ್ನನ್ನು ಬಲವಂತವಾಗಿ ಮತಾಂತರ ಮಾಡಿ ಮದುವೆ ಮಾಡಿಸಲಾಗಿತ್ತು ಎಂದಿದ್ದಳು.

ಪಾಕಿಸ್ತಾನದಲ್ಲಿ ಹಿಂದೂ ಹೆಣ್ಣು ಮಕ್ಕಳು, ಹಿಂದೂ ದೇವಸ್ಥಾನ, ಹಿಂದೂ ಸಮುದಾಯ ಅಪಾಯದಲ್ಲಿದೆ. ಇದಕ್ಕೆ ಪೂರಕವಾಗಿ ಹಲವು ಘಟನೆಗಳು ನಡೆಯುತ್ತಲೇ ಇದೆ.

ಪಾಕ್‌ನಲ್ಲಿನ 1000 ವರ್ಷ ಹಳೆಯ ಹಿಂದೂ ದೇಗುಲ ಶೌಚಾಲಯಕ್ಕೆ ಬಳಕೆ!
ಭಾರತದಲ್ಲಿ ಪುರಾತನ ಮಂದಿರ- ಮಸೀದಿಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳಲಾಗಿದೆ. ಆದರೆ, ಪಾಕಿಸ್ತಾನದ ಕರಾಚಿಯ ಮನೋರಾ ಐಲೆಂಡ್‌ ಬೀಚ್‌ನಲ್ಲಿರುವ 100 ವರ್ಷ ಹಳೆಯ ವರುಣ್‌ ದೇವ್‌ ಮಂದಿರ ಸಾರ್ವಜನಿಕ ಶೌಚಾಲಯವಾಗಿ ಮಾರ್ಪಟ್ಟಿದೆ. ಸುಮಾರು 16ನೇ ಶತಮಾನದಲ್ಲಿ ಭೋಜೋಮಲ್‌ ನ್ಯಾನ್ಸಿ ಭಟ್ಟಿಯಾ ಎಂಬ ಶ್ರೀಮಂತ ವ್ಯಾಪಾರಿ ಮನೋರಾ ದ್ವೀಪವನ್ನು ಖರೀದಿ ಮಾಡಿದ್ದರು. ಬಳಿಕ ಭೋಜೋಮಲ್‌ ಅವರ ಕುಟುಂಬ ದೇವಾಲಯದ ನಿರ್ವಹಣೆ ಮಾಡುತ್ತಿತ್ತು. ಪ್ರಸ್ತುತ ಈ ದೇವಾಲಯವನ್ನು ಪಾಕಿಸ್ತಾನ ಹಿಂದು ಕೌನ್ಸಿಲ್‌ ನಿರ್ವಹಣೆ ಮಾಡುತ್ತಿದೆ. ಆದರೆ, ಈ ದೇವಾಲಯದ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. 1950ರಲ್ಲಿ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮ ನಡೆದಿದ್ದೇ ಕೊನೆ. ಆ ಬಳಿಕ ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿಲ್ಲ.

 

8 ವರ್ಷದ ಪಾಕ್ ಹಿಂದೂ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕಣ್ಣು ಕಿತ್ತ ದುರುಳರು!
 

Follow Us:
Download App:
  • android
  • ios