Muslims & Islam: ಪಾಕಿಸ್ತಾನದ ಮೌಲಾನಾ ಕಳೆದ ವರ್ಷ ಯಾವುದೋ ವೇದಿಕೆಯಲ್ಲಿ ಆಡಿರುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್ ಆಗುತ್ತಿದೆ. ಜಿಹಾದಿಗಳಿಗೆ ಸ್ವರ್ಗದಲ್ಲಿ ಸಿಗುವ 72 ಕನ್ಯೆಯರು ಸ್ವರ್ಗದ ನದಿಯಿಂದ ಹುಟ್ಟುತ್ತಾರೆ ಹಾಗೂ 130 ಅಡಿ ಎತ್ತರವಿರುತ್ತಾರೆ ಎಂದು ಹೇಳಿದ್ದಾರೆ.
ನವದೆಹಲಿ (ಜೂ.9): ಪ್ರತಿಬಾರಿಯೂ ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗುವ ಜಿಹಾದಿಯನ್ನು ಬಂಧಿಸಿದಾಗ ಒಂದಲ್ಲಾ ಒಂದು ಸಮಯದಲ್ಲಿ ಅವರು '72 ಹೂರ್' ಮಾತನ್ನು ಆಡುತ್ತಾರೆ. ಇತ್ತೀಚೆಗೆ ಬಾಲಿವುಡ್‌ನಲ್ಲಿ '72 ಹೂರೇನ್' ಚಿತ್ರದ ಟ್ರೇಲರ್ ರಿಲೀಸ್ ಆದಗಾಲೂ ಇದರ ಬಗ್ಗೆ ಮತ್ತಷ್ಟು ಚರ್ಚೆಯಾಗಿತ್ತು. ಜನ್ನತ್‌ನಲ್ಲಿ 72 ಹೂರ್ ಸಿಗ್ತಾರೆ ಅನ್ನೋ ಕಾರಣಕ್ಕೆ ದೇಶ ವಿರೋಧಿ ಕೃತ್ಯದಲ್ಲಿ ಭಾಗಿಯಾಗಿದ್ದಾಗಿ ಹಿಂದೆಯೂ ಹಲವು ಜಿಹಾದಿಗಳು ಹೇಳಿಕೊಂಡಿದ್ದಾರೆ. 72 ಹೂರ್ ಎಂದರೆ 72 ಸ್ವರ್ಗದ ಕನ್ಯೆಯರು ಎಂದರ್ಥ. ಆದರೆ, ಕೆಲವು ಸಮಯದ ಹಿಂದೆ ಮೌಲಾನಾ ಒಬ್ಬರು ಹೂರ್‌ಗಳ ವಿಚಾರವಾಗಿ ಆಡಿರುವ ಮಾತು ವೈರಲ್ ಆಗಿದ್ದವು. ಈಗ ಅದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ವೈರಲ್ ಆಗಿದೆ. ಇದು ಹಳೆಯ ವಿಡಿಯೋ ಆಗಿದ್ದು, ಕಳೆದ ವರ್ಷ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಶೇರ್ ಆಗಿತ್ತು. ಪಾಕಿಸ್ತಾನ ಮೂಲದ ಮೌಲಾನಾ ತಾರೀಕ್ ಜಮೀಲ್ ಎನ್ನುವ ವ್ಯಕ್ತಿ ಈ ವಿಡಿಯೋದಲ್ಲಿ ಮಾತನಾಡಿದ್ದು, ಸ್ವರ್ಗದಲ್ಲಿರುವ ನದಿಯಲ್ಲಿ ಈ ಕನ್ಯೆಯರು ಜನಿಸುತ್ತಾರಂತೆ ಅವರು 130 ಫೀಟ್ ಎತ್ತರವಾಗಿರುತ್ತಾರೆ ಎಂದಿದ್ದಾರೆ. ಇದಕ್ಕೆ ಕಾಮೆಂಟ್ ಮಾಡಿರುವ ವ್ಯಕ್ತಿಯೊಬ್ಬರು, ಇಂಥ ಆಧಾರರಹಿತ ವಿಚಾರಗಳು ಹಾಗೂ ಕಥೆಗಳ ಬಂಢಾರವೇ ಈ ಮೌಲಾನಾ ಬಳಿ ಇದೆ ಎಂದು ಬರೆದಿದ್ದಾರೆ.
ವಿಡಿಯೋದಲ್ಲಿ ಮಾತನಾಡಿರುವ ತಾರೀಕ್ ಜಮೀಲ್, 'ಸ್ವರ್ಗದಲ್ಲಿ ಒಂದು ನದಿಯಿದೆ. ಇದು ಮುತ್ತುಗಳೇ ತುಂಬಿರುವ ನದಿ. ಕೇಸರಿ, ಕಸ್ತೂರಿ ಈ ನದಿಯಲ್ಲಿ ತೇಲುತ್ತಿರುತ್ತದೆ. ಅಲ್ಲಾನು ಸ್ವರ್ಗದಲ್ಲಿ ಒಂದು ಹುಡುಗಿಯನ್ನು ಸೃಷ್ಟಿ ಮಾಡಿದಾಗ, ಆಕೆಯ ಮೇಲೆ ಬೆಳಕನ್ನು ಚೆಲ್ಲುತ್ತಾರೆ. ಅದಾದ ಬಳಿಕ, ಅದೇ ನದಿಯಿಂದ 130 ಅಡಿ ಎತ್ತರದ ಕನ್ಯೆ ಹೊರಬರುತ್ತಾಳೆ' ಎಂದು ಹೇಳಿದ್ದಾರೆ. ಮೌಲಾನಾ ಹೇಳುವ ಪ್ರಕಾರ ಈ ಕನ್ಯೆಯರು ತಾಯಿಯ ಗರ್ಭದಿಂದ ಜನಿಸೋದಿಲ್ಲ. ಸ್ವರ್ಗದತ್ತ ಹಾಗೇನಾದರೂ ಸೂರ್ಯ ಕೂಡ ಕೈಬೆರಳು ತೋರಿಸಿದರೆ, ಆತ ಕೂಡ ಮಾಯವಾಗುತ್ತಾನೆ. ಜನ್ನತ್‌ನ ಹೂರ್ 130 ಫೀಟ್ ಇರುತ್ತಾರೆ. ನಮ್ಮಂಥ 5 ಫೀಟ್ ಜನರು ಇಂಥ ಕನ್ಯೆಯರ ಎದುರು ಹೋದರೆ, ಅವರು ನಮ್ಮನ್ನು ಪಾಕೆಟ್‌ಗಳಲ್ಲಿ ಇರಿಸಿಕೊಳ್ಳುತ್ತಾರೆ' ಎಂದಿದ್ದಾರೆ.
ಈ ವಿಡಿಯೋದಲ್ಲಿ ಮತ್ತಷ್ಟು ವಿವರಣೆ ನೀಡಿರುವ ಮೌಲಾನಾ, 'ಈ ಕನ್ಯೆಯರನ್ನು 130 ಫೀಟ್ ಎತ್ತರ ಮಾಡುವುದು ಅಲ್ಲಾ. ಆಡಮ್ ಹಾಗೂ ಈವ್ ಅವರನ್ನೂ 130 ಫೀಟ್ ಎತ್ತರ ಮಾಡಿದ್ದೂ ಕೂಡ ಅಲ್ಲಾನೇ. ಅಲ್ಲಾನ ಆದೇಶದ ಮೇರೆಗೆ ಇದೇ ಕನ್ಯೆಯರು ಸ್ವರ್ಗದಲ್ಲಿ ಹಾಡು ಹೇಳುತ್ತಾರೆ. ಈ ಕನ್ಯೆಯರು ಕೂದಲು ಎಷ್ಟು ವಿಶಾಲವೆಂದರೆ, ಅದರೂ ಕೂಡ 130 ಫೀಟ್ ಇರುತ್ತದೆ. ಇವರು ಒಮ್ಮೆ ಕೂದಲನ್ನು ಅತ್ತಿಂದಿತ್ತ ಹಾರಿಸಿದರೆ, ಬೆಳಕಿನ ಸಂಚಾರವಾಗುತ್ತದೆ. ಇದು ಇಡೀ ಸ್ವರ್ಗವನ್ನೇ ಬೆಳಕು ಮಾಡುತ್ತದೆ' ಆದರೆ, ಈ ಮೌಲಾನಾನ ವಿಡಿಯೋಗೆ ಕಾಮೆಂಟ್ ಮಾಡಿರುವ ಹೆಚ್ಚಿನವರು ಇದರಲ್ಲಿರೋದೆಲ್ಲಾ ಸುಳ್ಳು ಮಾಹಿತಿ ಎಂದಿದ್ದಾರೆ.

ಲಿವ್ ಇನ್ ಸಂಗಾತಿ ತುಂಡು ತುಂಡಾಗಿ ಕತ್ತರಿಸಿದ ಪಾಪಿಗೆ ಏಡ್ಸ್: ಆಕೆ ಮಗಳಿದ್ದಂತೆ, ಸೂಸೈಡ್ ಮಾಡ್ಕೊಂಡ್ಳು ಎಂದ!
ಭಾರತದ ಮೌಲಾನಾಗಳು ಹೇಳೋದೇನು: ಕೆಲ ವರ್ಷಗಳ ಹಿಂದೆ ಪಾಕಿಸ್ತಾನದ ಪತ್ರಕರ್ತ ಅರ್ಜು ಕಝ್ಮಿ ಭಾರತದ ಮೌಲಾನಾ ಒಬ್ಬರಿಗೆ 72 ಸ್ವರ್ಗದ ಕನ್ಯೆಯರ ಬಗ್ಗೆ ಪ್ರಶ್ನೆ ಮಾಡಿದ್ದರು. ಇದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಅವರ ಈ ಹೇಳಿಕೆಗೆ ಟ್ರೋಲ್ ಕೂಡ ಮಾಡಲಾಗಿತ್ತು. ಮೌಲಾನಾ ಹೇಳಿದ ಪ್ರಕಾರ, ಜಿಹಾದಿಗಳು ಅಂದರೆ ಧರ್ಮಯೋಧರು ಸಾವು ಕಂಡ ಬಳಿಕ ಸ್ವರ್ಗದಲ್ಲಿ ಅವರು ಈ ಕನ್ಯೆಯರನ್ನು ಪಡೆಯುತ್ತಾರೆ. ಇದೇ ವೇಳೆ, ಇಸ್ಲಾಂ ಅನ್ನು ಪಾಲನೆ ಮಾಡಿವ ಮಹಿಳೆಗೆ ಸ್ವರ್ಗದಲ್ಲಿ ಏನು ಸಿಗಲಿದೆ ಎಂದು ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಅವರು, ಇಸ್ಲಾಮಿನ ಎಲ್ಲಾ ನಿಯಮಗಳನ್ನು ಅನುಸರಿಸುವ ಮಹಿಳೆಯರನ್ನು ಈ ಕನ್ಯೆಯರ ಮುಖ್ಯಸ್ಥರನ್ನಾಗಿ ಮಾಡಲಾಗುತ್ತದೆ ಎಂದಿದ್ದರು. ಇದೇ ವೇಳೆ ಪುರುಷರಿಗೆ ಯಾಕೆ ಇಂಥ ನಿಯಮಗಳಿಲ್ಲ ಎನ್ನುವ ಪ್ರಶ್ನೆಗೆ, ಮೌಲಾನಾ ಯಾವುದೇ ಉತ್ತರ ನೀಡಿರಲಿಲ್ಲ.
ಕೋರಮಂಡಲ್ ಎಕ್ಸ್‌ಪ್ರೆಸ್ ದುರಂತದ ಶವಗಳನ್ನು ಇಟ್ಟ ಶಾಲೆಯನ್ನು ಧ್ವಂಸ ಮಾಡಿದ ಸರ್ಕಾರ!
