ಭಾರತದ ವಿಂಗ್ ಕಮಾಂಡರ್‌ ಅಭಿನಂದನ್ ವರ್ತಮಾನ್‌ 2019ರಲ್ಲಿ ಪಾಕಿಸ್ತಾನದಲ್ಲಿ ಸೆರೆಯಾಗಿದ್ದ ಸಮಯದಲ್ಲಿ, ಪಾಕ್‌ ಮೇಲೆ ಹಾರಿಸಲು ಭಾರತ 9 ಕ್ಷಿಪಣಿಗಳನ್ನು ಸಿದ್ಧವಾಗಿಟ್ಟುಕೊಂಡಿತ್ತು. ಈ ವಿಷಯ ಕೇಳಿ ಬೆಚ್ಚಿದ ಪಾಕಿಸ್ತಾನ ಅಭಿನಂದನ್‌ರನ್ನು ಬಂಧಮುಕ್ತಗೊಳಿಸಿತು ಎಂಬ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ.

ನವದೆಹಲಿ: ಭಾರತದ ವಿಂಗ್ ಕಮಾಂಡರ್‌ ಅಭಿನಂದನ್ ವರ್ತಮಾನ್‌ 2019ರಲ್ಲಿ ಪಾಕಿಸ್ತಾನದಲ್ಲಿ ಸೆರೆಯಾಗಿದ್ದ ಸಮಯದಲ್ಲಿ, ಪಾಕ್‌ ಮೇಲೆ ಹಾರಿಸಲು ಭಾರತ 9 ಕ್ಷಿಪಣಿಗಳನ್ನು ಸಿದ್ಧವಾಗಿಟ್ಟುಕೊಂಡಿತ್ತು. ಈ ವಿಷಯ ಕೇಳಿ ಬೆಚ್ಚಿದ ಪಾಕಿಸ್ತಾನ ಅಭಿನಂದನ್‌ರನ್ನು ಬಂಧಮುಕ್ತಗೊಳಿಸಿತು ಎಂಬ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ.
ಪಾಕಿಸ್ತಾನದ ಮಾಜಿ ಭಾರತೀಯ ರಾಯಭಾರಿ ಅಜಯ್‌ ಬಿಸಾರಿಯಾ, ‘ಆ್ಯಂಗರ್‌ ಮ್ಯಾನೇಜ್‌ಮೆಂಟ್‌: ದ ಟ್ರಬಲ್ಡ್‌ ಡಿಪ್ಲೋಮ್ಯಾಟಿಕ್‌ ರಿಲೇಶನ್‌ಶಿಪ್‌ ಬಿಟ್‌ವೀನ್ ಇಂಡಿಯಾ ಅಂಡ್‌ ಪಾಕಿಸ್ತಾನ್‌’ ಎಂಬ ಪುಸ್ತಕ ಬರೆದಿದ್ದು, ಅದರಲ್ಲಿ ಈ ಮಾಹಿತಿ ಇದೆ.

MIG 21 Fighter Jet: ಅಭಿನಂದನ್‌ ವರ್ಧಮಾನ್‌ ಸಾಹಸಕ್ಕೆ ಕಾರಣವಾಗಿದ್ದ ಯುದ್ಧವಿಮಾನದ ಬಗ್ಗೆ IAF ದೊಡ್ಡ ನಿರ್ಧಾರ!

ಬಾಲಾಕೋಟ್‌ ಏರ್‌ಸ್ಟ್ರೈಕ್ ಬಳಿಕ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರನ್ನು ಪಾಕಿಸ್ತಾನ ಸೇನೆ ಬಂಧಿಸಿತ್ತು. ಈ ವೇಳೆ ಉಭಯ ದೇಶಗಳ ನಡುವೆ ಹಲವು ರಾಜತಾಂತ್ರಿಕ ಮಾತುಕತೆಗಳು ನಡೆದರೂ, ಪಾಕಿಸ್ತಾನದ ಮೇಲೆ ಹಾರಿಸಲು ಭಾರತ 9 ಕ್ಷಿಪಣಿಗಳನ್ನು ಸಿದ್ಧವಾಗಿಟ್ಟುಕೊಂಡಿತ್ತು. ಇದಕ್ಕೆ ಹೆದರಿಕೊಂಡ ಪಾಕಿಸ್ತಾನ, ರಾಯಭಾರಿಯಾದ ನನ್ನ ಜೊತೆ ಮಾತನಾಡಿ ಅಭಿನಂದನ್‌ ಬಿಡುಗಡೆಗೆ ತೀರ್ಮಾನಿಸಿರುವ ವಿಷಯವನ್ನು ತಿಳಿಸಿತು’ ಎಂದು ಅವರು ಹೇಳಿದ್ದಾರೆ.

ಖತಲ್‌ ಕೀ ರಾತ್ ಎಂದಿದ್ದ ಮೋದಿ:

ಇದೇ ವೇಳೆ ಅಭಿನಂದನ್‌ರನ್ನು ಪಾಕ್‌ ಸೆರೆ ಹಿಡಿದ 2019ರ ಫೇ.27ರ ರಾತ್ರಿಯನ್ನು ಪ್ರಧಾನಿ ನರೇಂದ್ರ ಮೋದಿ ‘ಖತಲ್‌ ಕೀ ರಾತ್‌’ (ರಕ್ತದೋಕುಳಿಯ ರಾತ್ರಿ) ಎಂದು ಸಂಬೋಧಿಸಿದ್ದರೂ ಎಂದು ಪುಸ್ತಕ ಹೇಳಿದೆ.

ಅಭಿನಂದನ್, ಭಾರತ ಗೇಲಿ ಮಾಡಿದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ, ಚಹಾ ತಂದಿಟ್ಟ ತಲೆನೋವು!