Asianet Suvarna News Asianet Suvarna News

ಅಭಿನಂದನ್, ಭಾರತ ಗೇಲಿ ಮಾಡಿದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ, ಚಹಾ ತಂದಿಟ್ಟ ತಲೆನೋವು!

  • ಪ್ರತಿ ದಿನ ಚಹಾ ಕುಡಿಯುವ ಅಭ್ಯಾಸ ಬಿಟ್ಟು ಬಿಡಿ
  • ಸಂಕಷ್ಟದಿಂದ ಪಾರಾಗಲು ಪಾಕ್ ಸಚಿವನ ಸೂಚನೆ
  • ಪಾಕಿಸ್ತಾನಕ್ಕೆ ತಲೆನೋವಾದ ಚಹಾ ಸೇವನೆ
     
Economic Crisis Pakistan Minister urge people to cut down tea intake due to import cost ckm
Author
Bengaluru, First Published Jun 15, 2022, 7:54 PM IST

ಕರಾಚಿ(ಜೂ.15) ಚಹಾ ಕುಡಿಯದೇ ಹಲವರ ದಿನ ಆರಂಭವಾಗುವುದೇ ಇಲ್ಲ. ಹಲವರಿಗೆ ಚಹಾ ಕುಡಿಯದಿದ್ದರೆ ತಲೆನೋವು ಶುರುವಾಗುತ್ತೆ. ಆದರೆ ಪಾಕಿಸ್ತಾನದಲ್ಲಿ ಇದೀಗ ಚಹಾ ಸೇವನೆ ಮಾಡುತ್ತಿರುವುದೇ ಸರ್ಕಾರದ ತಲೆನೋವಿಗೆ ಕಾರಣವಾಗಿದೆ. ಇದಕ್ಕಾಗಿ ಯಾರೂ ಚಹಾ ಕುಡಿಯಬೇಡಿ ಎಂದು ಪಾಕಿಸ್ತಾನಿಯರಿಗೆ ಸಚಿವ ಎಹ್ಸಾನ್ ಇಕ್ಬಾಲ್ ಸೂಚನೆ ನೀಡಿದ್ದಾರೆ. ಅಷ್ಟಕ್ಕೂ ಇಕ್ಬಾಲ್ ಸೂಚನೆ ನೀಡಲು ಮುಖ್ಯ ಕಾರಣ ಪಾಕಿಸ್ತಾನದ ಆರ್ಥಿಕ ಹಿಂಜರಿತ. 

ಪಾಕಿಸ್ತಾನ ತೀವ್ರವಾದ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ. ವಿದೇಶಿ ವಿನಿಮಯ ಕೊರತೆ, ಹಣದುಬ್ಬರಗಳಿಂದ ದೇಶದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ವಿದೇಶಿ ವಸ್ತುಗಳ ಆಮದುಗಳಿಗೆ ಕಡಿಣವಾಣ ಹಾಕಲಾಗುತ್ತಿದೆ. ಇದೀಗ ಚಹಾ ಕೂಡ ನಿರ್ಬಂಧಿಸಲು ಚಿಂತನೆ ನಡೆಸಿದೆ. ಕಾರಣ ಪಾಕಿಸ್ತಾನ ಚಹಾ ಉತ್ಪಾದಿಸುವ ದೇಶವಲ್ಲ. ವಿದೇಶಗಳಿಂದ ಚಹಾ ಆಮದು ಮಾಡಿಕೊಳ್ಳುತ್ತದೆ. ಇದರಿಂದ ಆರ್ಥಿಕತೆ ಹಳಿ ತಪ್ಪುತ್ತಿದೆ. ಇದೇ ಕಾರಣಕ್ಕೆ ಜನರು ಚಹಾ ಕುಡಿಯುವುದನ್ನು ಬಿಡಿ ಎಂದು ಇಕ್ಬಾಲ್ ಸೂಚಿಸಿದ್ದಾರೆ.

ಪಾಕಿಸ್ತಾನದಲ್ಲಿ ಕತ್ತೆಯ ಸಂಖ್ಯೆಯಲ್ಲಿ ಸತತ ಮೂರನೇ ವರ್ಷವೂ ದಾಖಲೆಯ ಏರಿಕೆ!

ಎಲ್ಲಿಯವರಿಗೆ ಚಹಾ ಕುಡಿಯುವದನ್ನು ಬಿಡಬೇಕು ಅನ್ನೋ ಪ್ರಶ್ನೆಯನ್ನು ಸಚಿವ ಇಕ್ಬಾಲ್‌ಗೆ ಕೇಳಲಾಗಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲು ವರ್ಷಗಳೇ ಹಿಡಿಯಲಿದೆ. ಸದ್ಯಕ್ಕೆ ಇಷ್ಟು ದಿನ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಪಾಕಿಸ್ತಾನ ಚಹಾ ಉತ್ಪಾದಿಸುವವರೆಗೆ ಚಹಾ ಸೇವನೆ ಮಾಡಬೇಡಿ ಎಂದು ಇಕ್ಬಾಲ್ ನೈಸಾಗಿ ಜಾರಿಕೊಂಡಿದ್ದಾರೆ.

2021-22ರ ಸಾಲಿನಲ್ಲಿ ಪಾಕಿಸ್ತಾನ 400 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಚಹಾವನ್ನು ವಿದೇಶದಿಂದ ಆಮದು ಮಾಡಿಕೊಂಡಿದೆ. ಪ್ರತಿ ವರ್ಷ ಚಹಾ ಸೇವನೆ ಹೆಚ್ಚಾಗುತ್ತಿದೆ. ಇದರಿಂದ ಆಮದು ಕೂಡ ಹೆಚ್ಚಾಗುತ್ತಿದೆ. ಸದ್ಯ ಆರ್ಥಿಕ ಸಮಸ್ಯೆಯನ್ನು ಸುಧಾರಿಸಲು, ವಿದೇಶಿ ಸಾಲಗಳಿಂದ ಹೊರಬರಲು ಆಮದು ತಗ್ಗಿಸಿದರೆ ಮಾತ್ರ ಸಾಧ್ಯ ಎಂದು ಇಕ್ಬಾಲ್ ಹೇಳಿದ್ದಾರೆ.

ಇಕ್ಬಾಲ್ ಹೇಳಿಕೆ ಭಾರತದಲ್ಲಿ ಬಾರಿ ವೈರಲ್ ಆಗಿದೆ. ಕಾರಣ IAF ಅಭಿನಂದನ್ ವರ್ಧಮಾನ್ ಹಾಗೂ ಭಾರತವನ್ನು ಟ್ರೋಲ್ ಮಾಡಲು ಟಿ ತುಂಬಾ ಚೆನ್ನಾಗಿದೆ( ಟಿ ಈಸ್ ಫೆಂಟಾಸ್ಟಿಕ್) ಎಂದಿತ್ತು. ಪಾಕಿಸ್ತಾನ ಸೈನ್ಯ ಪ್ರಶ್ನೆಗೆ ಉತ್ತರಿಸುವ ವೇಳೆ  ಅಭಿನಂದನ್ ಈ ಮಾತನ್ನು ಹೇಳಿದ್ದರು. ಇದೇ ಮಾತನ್ನು ಮುಂದಿಟ್ಟುಕೊಂಡು ಭಾರಿ ಟ್ರೋಲ್ ಮಾಡಿತ್ತು. ಇದೀಗ ಭಾರತೀಯರು ಪಾಕಿಸ್ತಾನ ಮಾತು ಹೇಳಿರುವುದರಲ್ಲಿ ಆಶ್ಚರ್ಯವಿಲ್ಲ. ಕಾರಣ ಸಾಲ ಪಡೆದು ಪಾಕಿಸ್ತಾನ ಟೀ ಕುಡಿಯುತ್ತಿದೆ. ಅದೂ ಕೂಡ ಪಾಕಿಸ್ತಾನದ ಟೀ ಅಲ್ಲ,  ವಿದೇಶಗಳಿಂದ ಆಮದು ಮಾಡಿಕೊಂಡ ಟೀ. ಹೀಗಾಗಿ ಟಿ ಚೆನ್ನಾಗಿರುತ್ತದೆ ಎಂದು ನಿವೃತ್ತ ಮೇಜರ್ ಗೌರವ್ ಆರ್ಯ ತಿರುಗೇಟು ನೀಡಿದ್ದಾರೆ.

 

 

ಆರ್ಥಿಕ ದಿವಾಳಿತನ ತಪ್ಪಿಸಲು ತೆರಿಗೆ ದ್ವಿಗುಣಗೊಳಿಸಿದ ಪಾಕಿಸ್ತಾನದ ಹೊಸ ಬಜೆಟ್‌

ಹೊಟ್ಟೆಗೆ ಹಿಟ್ಟಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎನ್ನುವ ಹಾಗಿದೆ ಪಾಕಿಸ್ತಾನದ ಪರಿಸ್ಥಿತಿ. ಭಾರತದೊಂದಿಗೆ ಯುದ್ಧೋತ್ಸಾಹದೊಂದಿಗೆ ಇರುವ ಪಾಕಿಸ್ತಾನ ಆರ್ಥಿಕ ಹೊಡೆತಕ್ಕೆ ತತ್ತರಿಸಿ ಪಾತಾಳಕ್ಕೆ ಕುಸಿದು ಬಿಟ್ಟಿದೆ. ಎಷ್ಟರ ಮಟ್ಟಿಗೆ ಅಂದರೆ ಸರ್ಕಾರಿ ಕಚೇರಿಗಳಲ್ಲಿ ಒಂದಕ್ಕಿಂತ ಹೆಚ್ಚು ದಿನ ಪತ್ರಿಕೆ ತರಿಸಬಾರದು ಎಂದು ಇಲಾಖೆಗಳಿಗೆ ಆದೇಶ ನೀಡಿದೆ. ಸರ್ಕಾರಿ ಇಲಾಖೆಯಲ್ಲಿ ವೆಚ್ಚ ಕಡಿಮೆ ಮಾಡಲು ಮುಂದಾಗಿರುವ ರ್ಕಾರ, ಇಲಾಖೆಗಳಲ್ಲಿ ಹೊಸ ಉದ್ಯೋಗ ಸೃಷ್ಟಿ, ವಾಹನ ಖರೀದಿ, ಕಚೇರಿ ನವೀಕರಣ ಹಾಗೂ ಒಂದಕ್ಕಿಂತ ಹೆಚ್ಚು ದಿನಪತ್ರಿಕೆ ತರಿಸಬಾರದು ಎಂದು ಕಟ್ಟಪ್ಪಣೆ ಹೊರಡಿಸಿದ್ದು, ಇದು ತಕ್ಷಣದಿಂದ ಜಾರಿಗೆ ಬರಲಿದೆ ಎಂದು ವಿತ್ತ ಸಚಿವಾಲಯ ಹೇಳಿದೆ. ಅಲ್ಲದೇ ಗ್ಯಾಸ್‌, ವಿದ್ಯುತ್‌, ದೂರವಾಣಿ ಬಿಲ್‌ ಆದಷ್ಟೂಕಡಿಮೆ ಮಾಡುವಂತೆ ಸೂಚನೆ ನೀಡಲಾಗಿದ್ದು, ಅಧೀಕೃತ ಸಂವಹನಕ್ಕೆ ಬಳಸುವ ಪೇಪರ್‌ಗಳ ಎರಡೂ ಬದಿಯಲ್ಲೂ ಪ್ರಿಂಟ್‌ ಮಾಡಬೇಕು ಎಂದು ಆದೇಶ ನೀಡಲಾಗಿದೆ.
 

Follow Us:
Download App:
  • android
  • ios