ಪಾಕ್ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳಲು ರಾಜಕೀಯ ಶುರು ಪ್ರಧಾನಿ ಪಟ್ಟಕ್ಕೇರುವ ಮೊದಲೆ ಕಾಶ್ಮೀರ ವಿವಾದ  ಪಾಕ್ ಪ್ರಧಾನಿ ಅಭ್ಯರ್ಥಿ ಶೆಹಬಾಜ್ ಷರೀಫ್ ಹೇಳಿಕೆ

ನವದೆಹಲಿ(ಏ.10): ಪಾಕಿಸ್ತಾನ ರಾಜಕೀಯ ಬಿಕ್ಕಟ್ಟು ಇದೀಗ ಕ್ಲೈಮಾಕ್ಸ್ ಹಂತಕ್ಕೆ ತಲುಪುತ್ತಿದೆ. ಇಮ್ರಾನ್ ಖಾನ್ ವಿಶ್ವಾಸ ಮತಯಾಚನೆಯಲ್ಲಿ ಸೋಲು ಕಂಡಿದ್ದಾರೆ. ಇದರ ಬೆನ್ನಲ್ಲೇ ಪಾಕ್ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲೇ ಶೆಹಬಾಜ್ ಷರೀಫ್ ವಿವಾದ ಸೃಷ್ಟಿಸಿದ್ದಾರೆ. ಪಾಕಿಸ್ತಾನ ಜನತೆಯ ಚಪ್ಪಾಳೆ ಗಿಟ್ಟಿಸಿಕೊಳ್ಳಲು ಕಾಶ್ಮೀರ ವಿಚಾರ ಕೆದಕಿದ್ದಾರೆ. 

ಭಾರತದ ಜೊತೆ ಉತ್ತಮ ಸಂಬಂಧ ಬೆಳೆಸಲು ಮೊದಲು ಕಾಶ್ಮೀರ ವಿವಾದ ಇತ್ಯರ್ಥ ಮಾಡಬೇಕು. ಕಾಶ್ಮೀರದ ಹಿತ ಕಾಪಾಡಲು ಪಾಕಿಸ್ತಾನ ಸದಾ ಬದ್ಧವಾಗಿದೆ ಎಂದು ಶೆಹಬಾಜ್ ಷರೀಫ್ ಹೇಳಿದ್ದಾರೆ. ಪಾಕಿಸ್ತಾನ ಪ್ರಧಾನಿ ಪಟ್ಟಕ್ಕೇರುವ ಮೊದಲೇ ಕಾಶ್ಮೀರ ವಿವಾದ ಎಳೆದು ತಂದಿರುವ ಶೆಹಜಾದ್ ಭಾರತ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ನವಾಜ್‌ ಸೋದರ ಶೆಹಬಾಜ್‌ ಷರೀಫ್‌ ನೂತನ ಪ್ರಧಾನಿ?

ಪಾಕಿಸ್ತಾನದ ಇದುವರೆಗಿನ ಎಲ್ಲಾ ಪ್ರಧಾನಿಗಳು ತಮ್ಮ ಚುನಾವಣೆಯಲ್ಲಿ, ಪ್ರಧಾನಿಯಾಗುವ ಮೊದಲು ಕಾಶ್ಮೀರ ವಿಚಾರ ಕೆದೆಕದ ಉದಾಹರಣೆಗಳಿಲ್ಲ. ಇದೇ ಹಾದಿಯನ್ನು ಶೆಹಬಾಜ್ ಕೂಡ ತುಳಿದಿದ್ದಾರೆ. ಇನ್ನು ಶೆಹಬಾಜ್ ಕಾಶ್ಮೀರ ಹಾಗೂ ಭಾರತ ವಿರುದ್ಧ ಹೇಳಿಕೆ ನೀಡುವುದು ಹೊಸದೇನಲ್ಲ. ಇನ್ನು ಪಾಕಿಸ್ತಾನದ ರಾಷ್ಟ್ರೀಯ ರಾಜಕೀಯ ನಾಯಕರಿಗೆ ಇದು ಅನಿವಾರ್ಯ ಕೂಡ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನ ಮುಸ್ಲಿಂ ಲೀಗ್‌-ನವಾಜ್‌ ಅಧ್ಯಕ್ಷ ಮತ್ತು ನ್ಯಾಷನಲ್‌ ಅಸೆಂಬ್ಲಿ ವಿಪಕ್ಷ ನಾಯಕ ಶೆಹಬಾಜ್‌ ಷರೀಫ್‌ ಪ್ರಧಾನಿ ಹುದ್ದೆ ಅಲಂಕರಿಸಲಿದ್ದಾರೆ. ಏ.11ಕ್ಕೆ ಪ್ರಮಾಣವಚನ ಸ್ವೀಕರಿಸಬಹುದು ಎಂದು ಮೂಲಗಳು ತಿಳಿಸಿವೆ.

Breaking News : ವಿಶ್ವಾಸ ಮತ ಯಾಚನೆಯಲ್ಲಿ ಸೋಲು, ಮುಗಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಧ್ಯಾಯ

ಶೆಹಬಾಜ್‌ ಷರೀಫ್‌ ಅವರು ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರ ಸೋದರ. ಇನ್ನು ಪಿಪಿಪಿ ನೇತಾರ ಬಿಲಾವಲ್‌ ಭುಟ್ಟೊವಿದೇಶಾಂಗ ಸಚಿವ ಆಗುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳು ಹೇಳಿವೆ.ಇದೇ ವೇಳೆ ಅಧ್ಯಕ್ಷ ಆರಿಫ್‌ ಆಲ್ವಿ ಅವರನ್ನು ಹುದ್ದೆಯಿಂದ ಕೆಳಗಿಳಿಸುವ ಮತ್ತು ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರನ್ನು ಬ್ರಿಟನ್ನಿನಿಂದ ವಾಪಸ್‌ ಕರೆಸುವ ಬಗ್ಗೆ ಸಹ ಮಾತುಕತೆ ನಡೆಯುತ್ತಿವೆ ಎನ್ನಲಾಗಿದೆ. 2017ರಲ್ಲಿ ಪನಾಮಾ ಪೇಪರ್‌ ಹಗರಣದಲ್ಲಿ ಬಂಧಿತರಾಗಿರುವ ನವಾಜ್‌ ಷರೀಫ್‌ ವೈದ್ಯಕೀಯ ಚಿಕಿತ್ಸೆ ಉದ್ದೇಶದಿಂದ ಜಾಮೀನಿನ ಮೇಲೆ ಲಂಡನ್ನಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅವರ ಜಾಮೀನಿನ ಅವಧಿ ಸದ್ಯ ಮುಕ್ತಾಯವಾಗಿದೆ.

ಹೊಸ ಸಂಭಾವ್ಯ ಸರ್ಕಾರದಲ್ಲಿ ಎಲ್ಲಾ ವಿರೋಧ ಪಕ್ಷಗಳಿಗೆ ಪ್ರಮಾಣಕ್ಕೆ ಅನುಸಾರ ಪ್ರಾತಿನಿಧ್ಯ ನೀಡುವ ನಿರೀಕ್ಷೆ ಇದ್ದು, ಇಮ್ರಾನ್‌ ಖಾನ್‌ ಸರ್ಕಾರದ ಎಲ್ಲಾ ನಿರ್ಧಾರಗಳನ್ನು ಪರಿಶೀಲಿಸಿ ಬದಲಾವಣೆ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಈ ಬಗ್ಗೆ ಈಗಾಗಲೇ ವಿಪಕ್ಷಗಳು ಆರಂಭಿಕ ಮಾತುಕತೆಯನ್ನು ಪೂರ್ಣಗೊಳಿಸಿವೆ.

ಇದರ ನಡುವೆ ಇಮ್ರಾನ್ ಖಾನ್ ಪರ ಹಾಗೂ ಇಮ್ರಾನ್‌ ಅಸಂವಿಧಾನಿಕ ನಡೆಗೆ ಬೆಂಬಲ ನೀಡಿದ ಅಧ್ಯಕ್ಷ ಆರಿಫ್‌ ಆಲ್ವಿ ಅವರನ್ನು ಹುದ್ದೆಯಿಂದ ಕೆಳಗಿಳಿಸುವ ಯತ್ನಗಳು ನಡೆದಿದೆ. ಈ ಸ್ಥಾನಕ್ಕೆ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರನ್ನು ಬ್ರಿಟನ್ನಿನಿಂದ ವಾಪಸ್‌ ಕರೆಸುವ ಬಗ್ಗೆ ಸಹ ಮಾತುಕತೆ ನಡೆಯುತ್ತಿವೆ ಎನ್ನಲಾಗಿದೆ. 2017ರಲ್ಲಿ ಪನಾಮಾ ಪೇಪರ್‌ ಹಗರಣದಲ್ಲಿ ಬಂಧಿತರಾಗಿರುವ ನವಾಜ್‌ ಷರೀಫ್‌ ವೈದ್ಯಕೀಯ ಚಿಕಿತ್ಸೆ ಉದ್ದೇಶದಿಂದ ಜಾಮೀನಿನ ಮೇಲೆ ಲಂಡನ್ನಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅವರ ಜಾಮೀನಿನ ಅವಧಿ ಸದ್ಯ ಮುಕ್ತಾಯವಾಗಿದೆ.