ರಾಮ ಮಂದಿರ ಸೇರಿ ದೇಶದ 264 ವೆಬ್‌ಸೈಟ್ ಹ್ಯಾಕ್‌ಗೆ ಯತ್ನ, ಪಾಕ್-ಚೀನಾ ಹ್ಯಾಕರ್ಸ್ ಕುತಂತ್ರ!
ರಾಮ ಮಂದಿರ ಸೇರಿದಂತೆ ಭಾರತ 264 ವೆಬ್‌ಸೈಟ್ ಹ್ಯಾಕ್ ಮಾಡಲು ಪಾಕಿಸ್ತಾನ ಹಾಗೂ ಚೀನಾ ಹ್ಯಾಕರ್ಸ್ ಪ್ರಯತ್ನಿಸಿದ್ದರು ಅನ್ನೋ ಸ್ಫೋಟಕ ಮಾಹಿತಿಯನ್ನು ಸೈಬರ್ ಸೆಕ್ಯೂರಿಟಿ ಬಹಿರಂಗಪಡಿಸಿದೆ.
ನವದೆಹಲಿ(ಮಾ.06) ಭಾರತದ ಮೇಲೆ ನೇರಾ ನೇರಾ ಯುದ್ಧ ಸುಲಭವಲ್ಲ ಅನ್ನೋದು ಅರಿತಿರುವ ಶತ್ರುಗಳು ಹಲವು ರೀತಿಯಲ್ಲಿ ದೇಶದೊಳಗೆ ಅಸ್ಥಿರತೆ, ಶಾಂತಿ ಭಂಗ ಮಾಡುವ ಪ್ರಯತ್ನಗಳನ್ನು ನಡೆಸುತ್ತಲೇ ಇದ್ದಾರೆ. ಇದೀಗ ರಾಮ ಮಂದಿರ ಸೇರಿದಂತೆ ಭಾರತದ 264 ವೆಬ್‌ಸೈಟ್ ಹ್ಯಾಕ್ ಮಾಡಲು ಪಾಕಿಸ್ತಾನ ಹಾಗೂ ಚೀನಾದ ಹ್ಯಾಕರ್ಸ್ ಪ್ರಯತ್ನಿಸಿದ್ದರು ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಭಾತದ ಸೈಬರ್ ಸೆಕ್ಯೂರಿಟಿ ದಳ ಈ ಮಾಹಿತಿ ಬಹಿರಂಗಪಡಿಸಿದೆ. ರಾಮ ಮಂದಿರ ಉದ್ಘಾಟನೆ ದಿನ ಈ ಪ್ರಯತ್ನ ಉತ್ತುಂಗಕ್ಕೆ ತಲುಪಿತ್ತು ಎಂದು ಸೈಬರ್ ಸೆಕ್ಯೂರಿಟಿ ಅಧಿಕಾರಿಗಳು ಹೇಳಿದ್ದಾರೆ.
ಅಯೋಧ್ಯೆಯ ರಾಮಮಂದಿರದ ಉದ್ಘಾಟನೆ ವೇಳೆ ಮಂದಿರದ ವೆಬ್‌ಸೈಟ್ ಹಾಗೂ ಕೇಂದ್ರ ಸರ್ಕಾರದ ಪ್ರಸಾರ ಭಾರತಿ ಸೇರಿದಂತೆ ಹಲವು ಸರ್ಕಾರಿ ವೆಬ್‌ಗಳನ್ನು ಚೀನಾ ಹಾಗೂ ಪಾಕಿಸ್ತಾನಿ ಹ್ಯಾಕರ್‌ಗಳು ಹ್ಯಾಕ್ ಮಾಡಲು ಇನ್ನಿಲ್ಲದಂತೆ ಯತ್ನ ನಡೆಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಇಂಥದ್ದೊಂದು ದಾಳಿಯನ್ನು ಮೊದಲೇ ಊಹಿಸಿದ್ದ ಭಾರತ ಸರ್ಕಾರವು ಹ್ಯಾಕರ್‌ಗಳ 1244 ಐಪಿ ವಿಳಾಸಗಳನ್ನು ನಿರ್ಬಂಧಿಸಿ ದಾಳಿಗಳನ್ನು ತಡೆಗಟ್ಟಿದೆ.
ಪ್ರಧಾನಿ ಕಚೇರಿಗೆ ಚೀನಾದಿಂದ ಕನ್ನ: ರಿಲಯನ್ಸ್, ಏರಿಂಡಿಯಾ ಮಾಹಿತಿಯೂ ಹ್ಯಾಕ್
‘ರಾಮಮಂದಿರ ಉದ್ಘಾಟನೆಗೂ ಮುನ್ನ ರಾಮಮಂದಿರ ವೆಬ್, ಪ್ರಸಾರ ಭಾರತಿ, ಯುಪಿ ಪೊಲೀಸ್, ಅಯೋಧ್ಯೆ ವಿಮಾನ ನಿಲ್ದಾಣ, ಯುಪಿ ಪ್ರವಾಸೋದ್ಯಮ ಮತ್ತು ಪವರ್ ಗ್ರಿಡ್ ಸೇರಿದಂತೆ 264 ವೆಬ್‌ಸೈಟ್‌ಗಳ ಮೇಲೆ ಚೀನಾ-ಪಾಕ್ ಹ್ಯಾಕರ್‌ಗಳು ಕಣ್ಣಿಟ್ಟಿದ್ದರು. ಇದನ್ನು ಅರಿತ ಭಾರತ ಸರ್ಕಾರ ಮೊದಲು ಹ್ಯಾಕಿಂಗ್‌ಗೆ ಯತ್ನಿಸುತ್ತಿದ್ದ140 ಐಪಿ ಅಡ್ರೆಸ್‌ಗಳಿಗೆ ಇಂಟರ್ನೆಟ್ ಸೌಲಭ್ಯ ನಿಲ್ಲಿಸುವಂತೆ ಟೆಲಿಕಾಂ ಕಂಪನಿಗಳಿಗೆ ಸೂಚಿಸಿತು. ಆದರೂ ಹ್ಯಾಕಿಂಗ್ ಯತ್ನ ಹೆಚ್ಚಾದಾಗ 1244 ಐಪಿ ವಿಳಾಸಗಳನ್ನು ನಿರ್ಬಂಧಿಸಲಾಯಿತು. ಆಗ ದಾಳಿಗಳು ಕಡಿಮೆಯಾದವು’ ಎಂದು ಅಧಿಕಾರಿಯೊಬ್ಬರು ಹೇಳಿದರು.
ಟೆಲಿಕಾಂ ಸೆಕ್ಯೂರಿಟಿ ಆಪರೇಶನ್ ಸೆಂಟರ್, ಸೈಬರ್ ಸೆಕ್ಯೂರಿಟಿ ದಳ ಜಂಟಿಯಾಗಿ ಹ್ಯಾಕರ್ಸ್ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ಇತ್ತ ರಾಮ ಮಂದಿರ ಪ್ರಾಣಪ್ರತಿಷ್ಠಿಗೆ ಗುಪ್ತಚರ ಇಲಾಖೆ ಕೆಲ ಮಹತ್ವ ಎಚ್ಚರಿಕೆ ನೀಡಿತ್ತು. ದೇಶದ ಭದ್ರತಾ ಎಜೆನ್ಸಿ ಸೇರಿದಂತೆ ಎಲ್ಲಾ ಸೆಕ್ಯೂರಿಟಿ ದಳಗಳಿಗೆ ಕೇಂದ್ರ ಸರ್ಕಾರ ಖಡಕ್ ಸೂಚನೆಯನ್ನು ರವಾನಿಸಿತ್ತು. ರಾಮ ಮಂದಿರ ಉದ್ಘಾಟನೆ ವೇಳೆ ಊಹಿಸಲಾಗದ ದಾಳಿಯಾಗುವ ಸಾಧ್ಯತೆಗಳಿವೆ. ಹೀಗಾಗಿ ದಿನದ 24 ಗಂಟೆಯೂ ಎಚ್ಚರ ವಹಿಸುವಂತೆ ಸೂಚನೆ ನೀಡಲಾಗಿತ್ತು.
ನಿಮ್ಮ ಫೋನ್‌ಗೆ ನಿರಂತರವಾಗಿ ಅಪರಿಚಿತ ಕರೆಗಳು ಬರುತ್ತಾ: ಹಾಗಿದ್ರೆ ನೀವ್ ಈ ವೀಡಿಯೋ ನೋಡ್ಲೇಬೇಕು
ಇದರಿಂತ ಸತತ ಮಾನಿಟರ್ ಮಾಡಲಾಗಿತ್ತು. 140ಕ್ಕೂ ಹೆಚ್ಚು ಐಪಿ ಅಡ್ರೆಸ್‌ನಿಂದ ಹ್ಯಾಕ್ ಪ್ರಯತ್ನ ನಡೆದಿದೆ. ಈ ಎಲ್ಲಾ ಐಪಿ ಅಡ್ರೆಸ್ ಪಾಕಿಸ್ತಾನ ಹಾಗೂ ಚೀನಾ ಮೂಲವಾಗಿತ್ತು ಎಂದು ಅಧಿಕಾರಿ ಹೇಳಿದ್ದಾರೆ.