ಕೆಲ ಅಪರಿಚಿತರು ಕರೆ ಮಾಡಿ ಹಾವಳಿ ನೀಡುತ್ತಾರೆ. ಇದು ರಾಂಗ್ ನಂಬರ್ ಅಂತ ಹೇಳಿದ್ರು ಕೇಳದೇ ಮತ್ತೆ ಮತ್ತೆ ಕಾಲ್ ಮಾಡಿ ಕಾಟ ಕೊಡ್ತಾರೆ. ಇಂತವರಿಗೆ ಏನ್ ಮಾಡಬೇಕು ಎಂಬುದು ಅನೇಕರ ಪ್ರಶ್ನೆ, ಅದಕ್ಕೆ ಇಲ್ಲೊಂದು ವೈರಲ್ ವೀಡಿಯೋ ಉತ್ತರ ನೀಡಿದೆ ನೋಡಿ...
ನೀವು ತಿಂಗಳಾಂತ್ಯಕ್ಕೆ 5 ಅಂಕಿ ಅಥವಾ ಅದಕ್ಕಿಂತ ಹೆಚ್ಚಿನ ಸಂಬಳ ಗಳಿಸುವುವವರಾದರೆ ಆನ್‌ಲೈನ್ ಮಾರ್ಕೆಟಿಂಗ್ ಕರೆಗಳು ನಿಮ್ಮ ಫೋನ್‌ಗೆ ಸಾಕಷ್ಟು ಬರುತ್ತಿರುತ್ತವೆ. ಇನ್ಶೂರೆನ್ಸ್ ಮಾಡ್ತಿರಾ, ಕ್ರೆಡಿಟ್ ಕಾರ್ಡ್ ತಗೋತೀರಾ ಅಂತ ಕರೆಗಳು ಬರುತ್ತಲೇ ಇರುತ್ತವೆ. ಆದರೆ ಇದರ ಹೊರತಾಗಿಯೂ ಕೆಲ ಅಪರಿಚಿತರು ಕರೆ ಮಾಡಿ ಹಾವಳಿ ನೀಡುತ್ತಾರೆ. ಇದು ರಾಂಗ್ ನಂಬರ್ ಅಂತ ಹೇಳಿದ್ರು ಕೇಳದೇ ಮತ್ತೆ ಮತ್ತೆ ಕಾಲ್ ಮಾಡಿ ಕಾಟ ಕೊಡ್ತಾರೆ. ಇಂತವರಿಗೆ ಏನ್ ಮಾಡಬೇಕು ಎಂಬುದು ಅನೇಕರ ಪ್ರಶ್ನೆ, ಅದಕ್ಕೆ ಇಲ್ಲೊಂದು ವೈರಲ್ ವೀಡಿಯೋ ಉತ್ತರ ನೀಡಿದೆ ನೋಡಿ...
ಅಪರಿಚಿತರ ಫೋನ್ ಕರೆಗಳಿಂದ ಆಗುವ ಹಾನಿ ಅಷ್ಟಿಷ್ಟಲ್ಲ, ಕೆಲವರಿಗೆ ಇದರಿಂದ ಲಾಭವಾಗಿರಲೂಬಹುದು. ಹೊಸ ಗೆಳತಿ/ಗೆಳೆಯ ಸಿಕ್ಕಿರಬಹುದು, ಸ್ನೇಹಿತ/ಸ್ನೇಹಿತೆ ಸಿಕ್ಕಿ ಆಮೇಲೆ ಪತಿ ಪತ್ನಿಯೂ ಆಗಿರಬಹುದು. ಆದರೆ ಎಲ್ಲರಿಗೂ ಹಾಗೇ ಆಗಲು ಸಾಧ್ಯವಿಲ್ಲ ಬಿಡಿ. ಬಹುತೇಕರಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಇದರಿಂದ ಉಪಯೋಗಕ್ಕಿಂತ ಹಾನಿಯೇ ಹೆಚ್ಚಾಗಿದೆ. ಅದೂ ಈ ಕಡೆ ಇರುವುದು ಹೆಣ್ಣು ಮಕ್ಕಳು ಎಂದೂ ತಿಳಿದರೆ ಮುಗಿದೇ ಹೋಯ್ತು, ಒಂದು ನಂಬರ್ ಬ್ಲಾಕ್ ಮಾಡಿದಂತೆ ಇನ್ನೊಂದು ನಂಬರ್‌ನಿಂದ, ಅದನ್ನು ಬ್ಲಾಕ್ ಮಾಡಿದ್ರೆ ಮತ್ತೊಂದು ನಂಬರ್‌ನಿಂದ ಕರೆಗಳು ಬರುತ್ತಲೇ ಇರುತ್ತವೆ. ಈ ಅಪರಿಚಿತ ಕರೆಗಳಿಂದ ಎಷ್ಟು ಕುಟುಂಬಗಳಲ್ಲಿ ಸಂಬಂಧವೇ ಹಳಸಿ ಹೋಗಿವೆ. ಹೊಸದಾಗಿ ಮದುವೆಯಾದ ಗಂಡ ಹೆಂಡತಿಯ ಮಧ್ಯೆ ದೊಡ್ಡ ಕಂದಕವೇ ಮೂಡಿವೆ, ಗಂಡ ಹೆಂಡತಿ ಜುಟ್ಟು ಜುಟ್ಟು ಹಿಡಿದು ಕಿತ್ತಾಡಿದ್ದು ಆಗಿದೆ. ಕಿತ್ತಾಡಿ ಕಿತ್ತಾಡಿ ಗಂಡ ಹೆಂಡತಿ ದೂರಾದರೂ ಈ ಅಪರಿಚಿತ ಕಿಡಿಗೇಡಿಗಳ ಹಾವಳಿ ನಿಲ್ಲುವುದೇ ಇಲ್ಲ, ಎಷ್ಟು ಸಲ ರಾಂಗ್ ನಂಬರ್ ಎಂದರೂ ಮತ್ತೆ ಕರೆ ಮಾಡಲು ಶುರು ಮಾಡುತ್ತಾರೆ. ಹೀಗಿರುವಾಗ ಇಂತಹ ಕರೆಗಳನ್ನು ತಡೆಯಲು ಏನೂ ಮಾಡಬೇಕು ಎಂಬುದು ಅನೇಕರ ಪ್ರಶ್ನೆ. ಅದಕ್ಕೆ ಒಬ್ಬರು ಉಪಾಯ ಕಂಡು ಹಿಡಿದಿದ್ದು, ಈ ವೀಡಿಯೋ ಈಗ ಸಖತ್ ವೈರಲ್ ಆಗಿದೆ ನೋಡಿ.
ಬೆಂಗಳೂರು: ಐಫೋನ್ ಎಂದು ನಕಲಿ ಫೋನ್ ಕೊಟ್ಟು ₹60,000 ವಂಚನೆ!
ನೀವು ಮಾಡಬೇಕಾದೇನು?
ಹೆಚ್ಚೇನಿಲ್ಲ, ಮೊದಲಿಗೆ ನಿಮಗೆ ಬಂದ ಅಪರಿಚಿತ ಕರೆಯನ್ನು ರಿಸೀವ್ ಮಾಡಿ ಬಳಿಕ ಫೋನ್ ಮೇಲೆ ದೊಡ್ಡದಾದ ಸ್ಟೀಲ್ ಪಾತ್ರೆಯನ್ನು ಮಗುಚಿ ಹಾಕಿ ನಂತರ ಜೋರಾಗಿ ಪಾತ್ರದ ಮೇಲೆ ಬಡಿಯಲು ಶುರು ಮಾಡಿ. ಹೀಗೆ ಮಾಡಿದರೆ ನಿಮಗೆ ಕರೆ ಮಾಡಿದ ವ್ಯಕ್ತಿ ಹಿಂದೆಂದೂ ನಿಮಗೆ ಮರಳಿ ಕರೆ ಮಾಡಲಾರ, @Logical_Girll ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ವೀಡಿಯೋ ನೋಡಿದ ಅನೇಕರು ಈ ತಂತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ತಂತ್ರಕ್ಕೆ ಧನ್ಯವಾದಗಳು ಮಾರ್ಕೆಟಿಂಗ್ ಕರೆಗಳು ಬಂದ ವೇಳೆ ಹೀಗೆ ಮಾಡುವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದಂತೂ ಗುಡ್ ಐಡಿಯಾ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನಗುವ ಇಮೋಜಿ ಹಾಕಿದ್ದರೆ, ಅನೇಕರು ಈ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಹಾಗಿದ್ದರೆ ನಿಮಗೂ ಅಪರಿಚಿತ ಕರೆಗಳಿಂದ ಹಾವಳಿ ಇದ್ದರೆ, ಅಪರಿಚಿತ ಕರೆಗಳ ಕಾಟದಿಂದ ಬೇಸತ್ತಿದ್ದರೆ ಈ ನಗು ಉಕ್ಕಿಸುವ ಈ ವೀಡಿಯೋವನ್ನು ನೀವು ಒಮ್ಮೆ ನೋಡಿ, ಇದನ್ನು ಕರೆ ಬಂದಾಗ ಟ್ರೈ ಮಾಡಿ ಇಲ್ಲಿದೆ ನೋಡಿ ಈ ವೀಡಿಯೋ.
ತಿಂಗಳುಫೋನ್ ಬಿಡಿ, ನಿಮಗೆ 8 ಲಕ್ಷ ಬಹುಮಾನ ಗೆಲ್ಲಿ!