ನವದೆಹಲಿ/ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಕಾಂಗ್ರೆಸ್ಗೆ ಕೈಕೊಟ್ಟು ಬಿಜೆಪಿಯತ್ತ ವಾಲಿ ಸರ್ಕಾರ ರಚಿಸಲಿದ್ದಾರೆಯೇ ಎಂಬ ಗುಲ್ಲು ಹರಡಿದೆ.ಹೇಮಂತ್ ಮತ್ತು ಅವರ ಪತ್ನಿ ಕಲ್ಪನಾ ದಿಲ್ಲಿಯಲ್ಲಿದ್ದು, ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಅಧಿಕಾರ ಬದಲಾವಣೆಯಾಗಬಹುದು ಎಂಬ ಊಹಾಪೋಹಗಳು ಹರಡಿವೆ. ಜಾರ್ಖಂಡ್ನ ಒಟ್ಟು 81 ವಿಧಾನಸಭಾ ಸ್ಥಾನಗಳಲ್ಲಿ ಬಹುಮತಕ್ಕೆ 41 ಸ್ಥಾನಗಳು ಬೇಕು. ಜೆಎಂಎಂ 34 ಸ್ಥಾನ ಹೊಂದಿದ್ದು, ಕಾಂಗ್ರೆಸ್ ಹಾಗೂ ಇತರರ ಜತೆ ಸೇರಿ 56 ಶಾಸಕರ ಬಲದೊಂದಿಗೆ ಅಧಿಕಾರ ನಡೆಸುತ್ತಿದೆ.ಬಿಜೆಪಿ 21 ಸ್ಥಾನಗಳನ್ನು ಹೊಂದಿದೆ. ಜೆಎಎಂ ಬಿಜೆಪಿ ಮೈತ್ರಿಯಾದರೆ ಬಲ 55ಕ್ಕೇರಲಿದೆ. ಎನ್ಡಿಎ ಭಾಗವಾದ ಎಲ್ಜೆಪಿ. ಎಜೆಎಸ್ಯು ಮತ್ತು ಜೆಡಿಯುನ ತಲಾ ಇಬ್ಬ ಶಾಸಕರ ಬೆಂಬಲ ದೊರೆತರೆ ಮೈತ್ರಿಬಲ 58ಕ್ಕೇರಲಿದೆ. ಇನ್ನು ಕಾಂಗ್ರೆಸ್ನ 16 ಶಾಸಕರಲ್ಲಿ 8 ಜನ ಪಕ್ಷ ಬಿಡಲಿದ್ದಾರೆ. ಆದರೆ ಅನರ್ಹತೆ ಭೀತಿ ಇರುವ ಕಾರಣ ಬೇರಾವ ಪಕ್ಷವನ್ನೂ ಸೇರದೇ ಪ್ರತ್ಯೇಕ ಘಟಕ ಘೋಷಿಸಿಕೊಳ್ಳುವ ಸಾಧ್ಯತೆ ಇದೆ ಎಂದೂ ಗುಲ್ಲು ಹರಡಿದೆ.