ಕೇರಳದ ಇಡುಕ್ಕಿ ಜಿಲ್ಲೆಯ ಪಂಚಾಯಿತಿ ಚುನಾವಣೆಯಲ್ಲಿ 'ಸೋನಿಯಾ ಗಾಂಧಿ' ಎಂಬ ಹೆಸರಿನ ಮಹಿಳೆಯೊಬ್ಬರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ನಿಷ್ಠಾವಂತ ತಂದೆಯಿಂದ ಈ ಹೆಸರು ಪಡೆದ ಅವರು,  ಬಿಜೆಪಿಯಿಂದ ಕಣಕ್ಕೆ ಈ ವಿಶಿಷ್ಟ ಹೆಸರು ಚುನಾವಣಾ ಕ್ಷೇತ್ರದಲ್ಲಿ ಭಾರೀ ಕುತೂಹಲ ಮೂಡಿಸಿದೆ.

​ಇಡುಕ್ಕಿ (ಕೇರಳ)(ಡಿ.3): ರಾಜ್ಯದಲ್ಲಿ ನಡೆಯುತ್ತಿರುವ ಪಂಚಾಯಿತಿ ಚುನಾವಣೆಯಲ್ಲಿ, ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್‌ನಲ್ಲಿ ಒಂದು ಅಚ್ಚರಿಯ ಹೆಸರು ಸ್ಪರ್ಧೆಯಲ್ಲಿದೆ - ಅದುವೇ ಸೋನಿಯಾ ಗಾಂಧಿ!

​ಆದರೆ, ಗಾಬರಿ ಬೇಡ. ಇವರು ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅಲ್ಲ. ಬದಲಾಗಿ, ಇವರು ಬಿಜೆಪಿಯ ಸ್ಥಳೀಯ ಅಭ್ಯರ್ಥಿ.

ಕಾಂಗ್ರೆಸ್‌ ಮೇಲಿನ ನಿಷ್ಠೆಗೆ ಸೋನಿಯಾ ಹೆಸರು ಇಟ್ಟಿದ್ದ ತಂದೆ

​ಈ ಅಭ್ಯರ್ಥಿಯ ತಂದೆ, ಕಾಂಗ್ರೆಸ್ ನಾಯಕರಾಗಿದ್ದ ದುರೈ ರಾಜ್, ತಮ್ಮ ಮಗಳಿಗೆ ಕಾಂಗ್ರೆಸ್ ಪಕ್ಷದ ಮೇಲಿನ ನಿಷ್ಠೆಯನ್ನು ಪ್ರದರ್ಶಿಸಲು ಆಕೆಗೆ 'ಸೋನಿಯಾ ಗಾಂಧಿ' ಎಂದು ನಾಮಕರಣ ಮಾಡಿದ್ದರು. ಆದರೆ, ವಿಪರ್ಯಾಸವೆಂದರೆ, ಈ ಸೋನಿಯಾ ಗಾಂಧಿ ನಂತರ ಪಂಚಾಯತ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಿಜೆಪಿಯ ಸುಭಾಷ್ ಅವರನ್ನು ವಿವಾಹವಾದರು. ಬಳಿಕ, ಇವರೂ ಕೂಡ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

​ಹೆಸರೇ ಕುತೂಹಲ ಮೂಡಿಸಿದೆ:

ಈ ಕ್ಷೇತ್ರದ ಅಭ್ಯರ್ಥಿಗಳ ರಾಜಕೀಯ ಬಲಾಬಲಕ್ಕಿಂತ, ಅಭ್ಯರ್ಥಿಯ ಹೆಸರೇ ಭಾರೀ ಕುತೂಹಲ ಮೂಡಿಸಿದೆ. ಈ ಸೋನಿಯಾ ಗಾಂಧಿ (ಬಿಜೆಪಿ) ಅವರ ವಿರುದ್ಧ ಕಾಂಗ್ರೆಸ್‌ನಿಂದ ಮಂಜುಳಾ ರಮೇಶ್‌ ಎಂಬುವವರು ಕಣದಲ್ಲಿದ್ದಾರೆ.