HAL ಮುಳುಗುತ್ತಿದೆ ಎಂದು ವಿಕ್ಷಗಳು ಟೀಕಿಸಿದ್ದವು; ಇಂದು ರಾಷ್ಟ್ರದ ಹೆಮ್ಮೆಯಾಗಿದೆ: ಮೋದಿ
ಪ್ರತಿಪಕ್ಷಗಳು ಸರ್ಕಾರದ ಹೆಲಿಕಾಪ್ಟರ್ ತಯಾರಿಕಾ ಕಂಪನಿ ಎಚ್‌ಎಎಲ್ ಅನ್ನು ಗುರಿಯಾಗಿಸಿಕೊಂಡಿವೆ. ಇಂದು, ಎಚ್‌ಎಎಲ್ ತನ್ನ ಅತ್ಯಧಿಕ ಆದಾಯವನ್ನು ದಾಖಲಿಸಿದೆ. ಇದು ಇಂದು ರಾಷ್ಟ್ರದ ಹೆಮ್ಮೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನವದೆಹಲಿ (ಆಗಸ್ಟ್ 10, 2023): ಅವಿಶ್ವಾಸ ನಿರ್ಣಯಕ್ಕೆ ಉತ್ತರಿಸಿದ ಪ್ರಧಾನಿ ಮೋದಿ, ಈ ವೇಳೆ ವಿಪಕ್ಷಗಳ ವಿರುದ್ಧ, ವಿಶೇಷವಾಗಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ವೇಳೆ ಬೆಂಗಳೂರಿನ ಎಚ್‌ಎಎಎಲ್, ಸಾರ್ವಜನಿಕ ಬ್ಯಾಂಕ್ ಹಾಗೂ ಎಲ್‌ಐಸಿಯ ಬೆಳವಣಿಗೆ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ್ದು, ಪ್ರತಿಪಕ್ಷಗಳನ್ನು ಟೀಕಿಸಿವೆ.
ಪ್ರತಿಪಕ್ಷಗಳು ಸಾರ್ವಜನಿಕ ಬ್ಯಾಂಕ್‌ಗಳು, ಏರೋಸ್ಪೇಸ್ ಸಂಸ್ಥೆ ಎಚ್‌ಎಎಲ್ ಮತ್ತು ವಿಮಾ ಕಂಪನಿ ಎಲ್‌ಐಸಿಯನ್ನು ತರಾಟೆಗೆ ತೆಗೆದುಕೊಂಡವು ಮತ್ತು ಅವು ಮುಳುಗುತ್ತಿವೆ ಎಂದು ಹೇಳಿದ್ದರು. ಎಲ್ಲವೂ ಈಗ ಹಿಂದೆಂದಿಗಿಂತಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಹೊಸ ಎತ್ತರವನ್ನು ತಲುಪುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ವೇಳೆ ವಿಶೇಷವಾಗಿ ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಎಚ್‌ಎಎಲ್ ಅನ್ನು ಪ್ರಧಾನಿ ಶ್ಲಾಘಿಸಿದ್ದು, ವಿಪಕ್ಷಗಳ ವಿರುದ್ಧ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನು ಓದಿ: ವಿಪಕ್ಷ ನಾಯಕರನ್ನೇ ಯಾಕೆ ಸೈಡ್‌ಲೈನ್ ಮಾಡಿದ್ದೀರಿ, ಅಧೀರ್ ಬಾಬು ಪರ ನಮ್ಮ ಅನುಕಂಪವಿದೆ: ನರೇಂದ್ರ ಮೋದಿ
ಪ್ರತಿಪಕ್ಷಗಳು ಸರ್ಕಾರದ ಹೆಲಿಕಾಪ್ಟರ್ ತಯಾರಿಕಾ ಕಂಪನಿ ಎಚ್‌ಎಎಲ್ ಅನ್ನು ಗುರಿಯಾಗಿಸಿಕೊಂಡಿವೆ. ಅವರು ಎಚ್‌ಎಎಲ್‌ನ ಕಾರ್ಮಿಕರೊಂದಿಗೆ ಅಧಿವೇಶನಗಳನ್ನು ನಡೆಸಿದರು ಮತ್ತು ಅವರನ್ನು ದಾರಿ ತಪ್ಪಿಸಿದರು. ಇಂದು HAL ಯಶಸ್ಸಿನ ಹೊಸ ಎತ್ತರವನ್ನು ಮುಟ್ಟುತ್ತಿದೆ. ಇದು ಈ ವರ್ಷ ತನ್ನ ಅತ್ಯಧಿಕ ಆದಾಯವನ್ನು ದಾಖಲಿಸಿದೆ. ಇದು ರಾಷ್ಟ್ರದ ಹೆಮ್ಮೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಲ್ಲದೆ, ಎಚ್‌ಎಎಲ್ ಎಲ್ಲ ಸುಳ್ಳು ಆರೋಪಗಳನ್ನು ಮೆಟ್ಟಿ ನಿಂತಿದೆ ಎಂದೂ ವಿಪಕ್ಷಗಳ ವಿರುದ್ಧ ಟೀಕೆ ಮಾಡಿದರು.
ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಬೆಳವಣಿಗೆ ಮತ್ತು ಪ್ರಗತಿಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ್ದಾರೆ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದರು. ಹಾಗೂ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಬಗ್ಗೆಯೂ ಮಾತನಾಡಿದ್ದಾರೆ, ಎಚ್‌ಎಎಲ್ ನಾಶವಾಗಿದೆ ಎಂದು ಪ್ರತಿಪಕ್ಷಗಳು ಸುಳ್ಳು ಹೇಳಿಕೆ ನೀಡಿವೆ ಎಂದೂ ಟೀಕಿಸಿದರು.
ಇದನ್ನೂ ಓದಿ: ವಿಪಕ್ಷಗಳ ಅವಿಶ್ವಾಸ ಬಿಜೆಪಿಗೆ ಶುಭ ಸಂಕೇತ, 2019ರ ಘಟನೆ ನೆನೆಪಿಸಿದ ಪ್ರಧಾನಿ ಮೋದಿ!
"ಎಚ್‌ಎಎಲ್‌ನ ಕಾರ್ಮಿಕರು ತಮ್ಮ ಕೆಲಸ ಕಳೆದುಕೊಳ್ಳುತ್ತಾರೆ ಎಂದು ಪ್ರೇರೇಪಿಸುತ್ತಿದ್ದರು. ಇಂದು ಎಚ್‌ಎಎಲ್ ಯಶಸ್ಸಿನ ಹೊಸ ಉತ್ತುಂಗವನ್ನು ಮುಟ್ಟುತ್ತಿದೆ. ಇದು ಈ ವರ್ಷ ತನ್ನ ಅತ್ಯಧಿಕ ಆದಾಯವನ್ನು ದಾಖಲಿಸಿದೆ" ಎಂದು ಪ್ರಧಾನಿ ಮೋದಿ ಲೋಕಸಭೆಯ ಅವಿಶ್ವಾಸ ಗೊತ್ತುವಳಿ ಭಾಷಣದಲ್ಲಿ ಹೇಳಿದರು.
ಹಾಗೂ, ಎಲ್‌ಐಸಿಯ ಮೆಗಾ ಐಪಿಒ ಮತ್ತು ಲಿಸ್ಟಿಂಗ್ ಬಗ್ಗೆ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, “ಎಲ್‌ಐಸಿ ಬಗ್ಗೆ ಅವರು ಬಡವರ ಹಣ ಮುಳುಗುತ್ತದೆ ಎಂದು ಅನೇಕ ವಿಷಯಗಳನ್ನು ಹೇಳಿದರು, ಆದರೆ ಇಂದು ಎಲ್ಐಸಿ ಬಲಗೊಳ್ಳುತ್ತಿದೆ ಎಂದೂ ಮೋದಿ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದ 13 ಸೇರಿ ದೇಶದ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ಮಾಡಿದ ಮೋದಿ: ನಿಮ್ಮ ಊರು ಇದ್ಯಾ ನೋಡಿ..
ಈ ಮಧ್ಯೆ, ಕಾಂಗ್ರೆಸ್ ಟೀಕಿಸಿದವರೆಲ್ಲರಿಗೂ ಒಳ್ಳೆಯದಾಗಿದೆ. ಇದಕ್ಕೆ 3 ಉದಾಹರಣೆ ಹೇಳುವೆ. ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ಅಪ ಪ್ರಚಾರ ಮಾಡಿದರು, ಎಲ್‌ಐಸಿ ಬಗ್ಗೆಯೂ ದೊಡ್ಡ ಅಪ ಪ್ರಚಾರ ಮಾಡಿದರು. ಬಡವರ ಹಣ ನಷ್ಟವಾಯಿತು ಎಂದರು. ಆದರೆ, ಇಂದು ಎಲ್‌ಐಸಿ ಅತ್ಯಂತ ಬಲಿಷ್ಠವಾಗಿದೆ. ಎಚ್‌ಎಎಲ್ ಬಗ್ಗೆಯೂ ಅನೇಕ ಸುಳ್ಳುಗಳನ್ನು ಹೇಳಿದರು. ವಿಪಕ್ಷಗಳು ಟೀಕಿಸಿದ ಎಲ್ಲ ಕಂಪನಿಗಳ ಷೇರನ್ನು ಜನ ಖರೀದಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಪ್ರತಿಪಕ್ಷಗಳಿಗೆ ಟಾಂಗ್ ನೀಡಿದ್ದಾರೆ. ಅಲ್ಲದೆ, ಷೇರುಪೇಟೆಯಲ್ಲಿ ಆಸಕ್ತಿ ಇರುವವರಿಗೆ ನನ್ನ ಸಲಹೆ ಸರ್ಕಾರಿ ಕಂಪನಿಗಳಲ್ಲಿ ಹೂಡಿಕೆ ಮಾಡಿ ಮತ್ತು ನಿಮ್ಮ ಹಣ ಬೆಳೆಯುತ್ತದೆ ಎಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಹೂಡಿಕೆದಾರರಿಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ‘I.N.D.I.A.’ ಮೈತ್ರಿಕೂಟದ ಮರು ನಾಮಕರಣ ಮಾಡಿದ ಪ್ರಧಾನಿ: ಮೋದಿ ಇಟ್ಟ ಹೊಸ ಹೆಸರು ಹೀಗಿದೆ ನೋಡಿ..