ಕರ್ನಾಟಕದ 13 ಸೇರಿ ದೇಶದ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ಮಾಡಿದ ಮೋದಿ: ನಿಮ್ಮ ಊರು ಇದ್ಯಾ ನೋಡಿ..

ಸುಮಾರು ₹25,000 ಕೋಟಿ ವೆಚ್ಚದಲ್ಲಿ ಅಮೃತ್ ಭಾರತ್ ಸ್ಟೇಷನ್ ಯೋಜನೆಯ ಭಾಗವಾಗಿ ಭಾರತದಾದ್ಯಂತ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಯನ್ನು ಕೇಂದ್ರ ಸರ್ಕಾರ ಮಾಡಲಿದೆ. ಈ ಪೈಕಿ ಕರ್ನಾಟಕದ 13 ರೈಲು ನಿಲ್ದಾಣಗಳೂ ಅಭಿವೃದ್ಧಿಯಾಗಲಿದೆ. 

pm modi lays foundation stone for redevelopment of 508 railway stations across country virtually today ash

ನವದೆಹಲಿ (ಆಗಸ್ಟ್‌ 6, 2023): ದೇಶಾದ್ಯಂತ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ವಿಡಿಯೋ ಕಾನ್ಫರೆನ್ಸ್ ಮೂಲಕ 508 ರೈಲು ನಿಲ್ದಾಣಗಳನ್ನು ನವೀಕರಿಸುವ ಯೋಜನೆಯನ್ನು ಪ್ರಧಾನಿ ಮೋದಿ ಪ್ರಾರಂಭಿಸಿದರು. ಈ ಪೈಕಿ ಕರ್ನಾಟಕದ 13 ರೈಲು ನಿಲ್ದಾಣಗಳಿಗೆ ಸಹ ಕೇಂದ್ರ ಸರ್ಕಾರ ಪುನರಾಭಿವೃದ್ಧಿ ಮಾಡಲಿದೆ.  

ಸುಮಾರು ₹25,000 ಕೋಟಿ ವೆಚ್ಚದಲ್ಲಿ ಅಮೃತ್ ಭಾರತ್ ಸ್ಟೇಷನ್ ಯೋಜನೆಯ ಭಾಗವಾಗಿ ಭಾರತದಾದ್ಯಂತ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಯನ್ನು ಕೇಂದ್ರ ಸರ್ಕಾರ ಮಾಡಲಿದೆ. ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ವಾಸ್ತವಿಕವಾಗಿ ಅಡಿಪಾಯ ಹಾಕಿದರು. ಈ ವೇಳೆ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಹ ಹಾಜರಿದ್ದರು.

ಇದನ್ನು ಓದಿ: Vande Bharat Express: ಕೇಸರಿ ಬಣ್ಣದ ಐಷಾರಾಮಿ ರೈಲಿನಲ್ಲಿ ಕಾಣಲಿದೆ ಈ 10 ಬದಲಾವಣೆಗಳು

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಭಾರತ ತನ್ನ ಸುವರ್ಣಯುಗದ ಆರಂಭದಲ್ಲಿದೆ ಎಂದು ಹೇಳಿದರು. “ಅಭಿವೃದ್ಧಿಯ ಗುರಿಯತ್ತ ಸಾಗುತ್ತಿರುವ ಭಾರತವು ತನ್ನ ಸುವರ್ಣಯುಗದ ಪ್ರಾರಂಭದಲ್ಲಿದೆ. ಹೊಸ ಶಕ್ತಿ ಇದೆ, ಹೊಸ ಸ್ಫೂರ್ತಿ ಇದೆ, ಹೊಸ ಸಂಕಲ್ಪಗಳಿವೆ. ಈ ಬೆಳಕಿನಲ್ಲಿ, ಇಂದು ಭಾರತೀಯ ರೈಲ್ವೇ ಇತಿಹಾಸದಲ್ಲಿ ಹೊಸ ಅಧ್ಯಾಯವೂ ಪ್ರಾರಂಭವಾಗಿದೆ’’ ಎಂದು ಪ್ರಧಾನಿ ಮೋದಿ ಹೇಳಿದರು.

ರೈಲು ನಿಲ್ದಾಣಗಳ ಮರು ಅಭಿವೃದ್ಧಿ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಈ ನಿಲ್ದಾಣಗಳ ಅಭಿವೃದ್ಧಿಯು ಸರ್ಕಾರದ ಪ್ರಮುಖ ಗಮನವಾಗಿದೆ. “ನಮ್ಮ ಪ್ರಧಾನ ಮಂತ್ರಿಗಳು ಈ ರೈಲು ನಿಲ್ದಾಣಗಳ ಪ್ರಗತಿಯನ್ನು ವೈಯಕ್ತಿಕವಾಗಿ ಗಮನಿಸುತ್ತಿದ್ದಾರೆ. ಅವರು ಈ ನಿಲ್ದಾಣಗಳ ವಿನ್ಯಾಸಗಳ ಬಗ್ಗೆ ಸಲಹೆ ನೀಡಿದ್ದಾರೆ ಮತ್ತು ಈ 508 ನಿಲ್ದಾಣಗಳ ಅಡಿಪಾಯವನ್ನು ಹಾಕಲಿದ್ದಾರೆ’’ ಎಂದು ಮೊದಿ ಶಂಕುಸ್ಥಾಪನೆ ಮಾಡುವ ಮುನ್ನ ಅವರು ಹೇಳಿದರು.

ಇದನ್ನೂ ಓದಿ: ಬರಲಿದೆ ಪ್ರಯಾಣಿಕರು, ಸರಕು ಒಟ್ಟಿಗೆ ಹೊತ್ತೊಯ್ಯುವ ಟ್ರೈನ್‌: ಡಬ್ಬಲ್‌ ಡೆಕ್ಕರ್‌ ರೈಲು ಸೇವೆ ಶೀಘ್ರದಲ್ಲೇ ಆರಂಭ

ಮರು-ಅಭಿವೃದ್ಧಿ ಮಾಡಬೇಕಾದ ನಿಲ್ದಾಣಗಳ ಪಟ್ಟಿ
ಈ 508 ನಿಲ್ದಾಣಗಳ ಪೈಕಿ ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 55, ಬಿಹಾರದಲ್ಲಿ 49, ಮಹಾರಾಷ್ಟ್ರದಲ್ಲಿ 44, ಪಶ್ಚಿಮ ಬಂಗಾಳದಲ್ಲಿ 37, ಮಧ್ಯಪ್ರದೇಶದಲ್ಲಿ 34, ಅಸ್ಸಾಂನಲ್ಲಿ 32, ಒಡಿಶಾದ 25, ಪಂಜಾಬ್‌ನಲ್ಲಿ 22, ಗುಜರಾತ್ ಮತ್ತು ತೆಲಂಗಾಣದಲ್ಲಿ ತಲಾ 21, ಜಾರ್ಖಂಡ್‌ನಲ್ಲಿ 20, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ 18, ಹರಿಯಾಣದಲ್ಲಿ 15, ಕರ್ನಾಟಕದಲ್ಲಿ 13 ಸೇರಿದಂತೆ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿವೆ. 

ರಾಜ್ಯದ ಯಾವ್ಯಾವ ರೈಲು ನಿಲ್ದಾಣಗಳ ಅಭಿವೃದ್ಧಿ?
ಕರ್ನಾಟಕದ ಬಳ್ಳಾರಿ, ಬೆಳಗಾವಿ ಜಿಲ್ಲೆಯ ಘಟಪ್ರಭ, ಗೋಕಾಕ್‌ ರಸ್ತೆ, ಬೀದರ್‌ ರೈಲು ನಿಲ್ದಾಣ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಜಂಕ್ಷನ್‌, ದಾವಣಗೆರೆ ಜಿಲ್ಲೆಯ ಹರಿಹರ, ಧಾರವಾಡ ಜಿಲ್ಲೆಯ ಅಳ್ನಾವರ, ಗದಗ, ಹಾಸನ ಜಿಲ್ಲೆಯ ಅರಸೀಕೆರೆ, ಕಲಬುರಗಿ ಜಿಲ್ಲೆಯ ಕಲಬುರಗಿ ಜಂಕ್ಷನ್, ಶಹಾಬಾದ್‌, ವಾಡಿ, ಕೊಪ್ಪಳ ಸೇರಿ 13 ರೈಲು ನಿಲ್ದಾಣಗಳು ಪುನರಾಭಿವೃದ್ಧಿಯಾಗುತ್ತಿದೆ. 

ಇದನ್ನೂ ಓದಿ: IRCTC ವೆಬ್‌ಸೈಟ್‌ ಡೌನ್‌: ರೈಲ್ವೆ ಟಿಕೆಟ್ ಬುಕ್‌ ಮಾಡಲು ಜನಸಾಮಾನ್ಯರ ಪರದಾಟ; ನೆಟ್ಟಿಗರ ಆಕ್ರೋಶ

ಅಮೃತ್ ಭಾರತ್ ಸ್ಟೇಷನ್ ಯೋಜನೆ ಎಂದರೇನು?
ಫೆಬ್ರವರಿಯಲ್ಲಿ ಪ್ರಾರಂಭವಾದ ಅಮೃತ್ ಭಾರತ್ ಸ್ಟೇಷನ್ ಯೋಜನೆಯು ದೀರ್ಘಾವಧಿಯ ವಿಧಾನದೊಂದಿಗೆ ನಿರಂತರ ಆಧಾರದ ಮೇಲೆ ನಿಲ್ದಾಣಗಳ ಅಭಿವೃದ್ಧಿಯನ್ನು ಕಲ್ಪಿಸುತ್ತದೆ. ಇದು ನಿಲ್ದಾಣಗಳಲ್ಲಿನ ಸೌಕರ್ಯಗಳನ್ನು ಸುಧಾರಿಸಲು 'ಮಾಸ್ಟರ್ ಪ್ಲಾನ್'ಗಳ ತಯಾರಿಕೆ ಮತ್ತು ಹಂತಗಳಲ್ಲಿ ಅವುಗಳ ಅನುಷ್ಠಾನವನ್ನು ಒಳಗೊಂಡಿರುತ್ತದೆ. ದೇಶಾದ್ಯಂತ 1,309 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಸುಮಾರು ₹25,000 ಕೋಟಿ ವೆಚ್ಚದಲ್ಲಿ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ದೇಶಾದ್ಯಂತ ರೈಲು ನಿಲ್ದಾಣಗಳ ಶಂಕುಸ್ಥಾಪನೆ ನಡೆಯಲಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಸಾವನ್‌ ಮಾಸದಲ್ಲಿ ಹಲಾಲ್‌ ಚಹಾ ಕೊಡ್ತೀರಾ: ರೈಲ್ವೆ ಸಿಬ್ಬಂದಿ ಮೇಲೆ ಪ್ರಯಾಣಿಕರ ಆಕ್ರೋಶ! ಏನಿದು ‘ಹಲಾಲ್‌ ಟೀ’’ ವಿವಾದ?

Latest Videos
Follow Us:
Download App:
  • android
  • ios