ಯುಟ್ಯೂಬರ್‌ನ ಕಂಬಿ ಹಿಂದೆ ಕಳುಹಿಸಿದ ಹಳೇ ವಿಡಿಯೋ

ಇಲ್ಲೊಬ್ಬ ಯೂಟ್ಯೂಬರ್ ಎಂದೋ ಮಾಡಿದ ವಿಡಿಯೋದಿಂದ ಈಗ ಜೈಲು ಸೇರುವಂತಾಗಿದೆ. ಪ್ರಿನ್ಸ್ ದೀಕ್ಷಿತ್ (Prince Dixit) ಎಂಬ ಯುಟ್ಯೂಬರ್‌ನನ್ನು ರಾಷ್ಟ್ರ ರಾಜಧಾನಿಯ ಪೊಲೀಸರು ಬಂಧಿಸಿದ್ದಾರೆ.

Old Video Now Viral, Youtuber prince dixit arrested for violating traffic rules akb

ನವದೆಹಲಿ: ಇದು ಸಾಮಾಜಿಕ ಜಾಲತಾಣದ ಯುಗ ಯಾವುದು ಯಾವಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದು ಎಂದು ಹೇಳಲಾಗುವುದಿಲ್ಲ. ಒಳ್ಳೆ ವಿಚಾರಗಳು ವೈರಲ್ ಆದರೆ ಹೇಗೆ ಘನತೆ ಗೌರವ ಹೆಚ್ಚುವುದೋ ಹಾಗೆಯೇ ನಮ್ಮ ಕೆಟ್ಟ ನಡತೆಗಳು ವೈರಲ್ ಆದರೆ ಅದೇ ರೀತಿಯ  ಕುಖ್ಯಾತಿ ನಮ್ಮನ್ನು ಕಾಡುವುದು. ಈ ಕಾರಣದಿಂದ ಯಾವುದೇ ಕೆಲಸವನ್ನು ಮಾಡುವಾಗ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಒಳಿತು. ಇಲ್ಲದಿದ್ದರೆ ಅದು ಇನ್ಯಾವತ್ತೋ ನಿಮ್ಮನ್ನು ಕಾಡದಿರದು. ಏಕೆಂದರೆ ಇಂದು ಸಾಮಾಜಿಕ ಜಾಲತಾಣ ಯುಗ ಸಾಮಾಜಿಕ ಜಾಲತಾಣಗಳು ಸಾಕಷ್ಟು ಪ್ರಭಾವಶಾಲಿಯಾಗಿದ್ದು, ಒಂದೇ ಕ್ಷಣದಲ್ಲಿ ಅದು ನಿಮ್ಮ ಬದುಕನ್ನು ಬದಲಿಸಬಹುದು. ಹೇಗೆ ಇದು ಘನತೆ ನೀಡುವುದೋ ಅದೇ ರೀತಿ ನಿಮ್ಮನ್ನು ಅವಮಾನದಿಂದ ತಲೆ ಎತ್ತಲಾಗದಂತೆ ಮಾಡುವುದು. ಅದೇ ರೀತಿ ಇಲ್ಲೊಬ್ಬ ಯೂಟ್ಯೂಬರ್ ಎಂದೋ ಮಾಡಿದ ವಿಡಿಯೋದಿಂದ ಈಗ ಜೈಲು ಸೇರುವಂತಾಗಿದೆ. 


ಪ್ರಿನ್ಸ್ ದೀಕ್ಷಿತ್ (Prince Dixit) ಎಂಬ ಯುಟ್ಯೂಬರ್‌ನನ್ನು ರಾಷ್ಟ್ರ ರಾಜಧಾನಿಯ ಪೊಲೀಸರು ಬಂಧಿಸಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘನೆ (violating traffic rules) ಮಾಡಿದ್ದಕ್ಕಾಗಿ ಈ ಬಂಧನವಾಗಿದೆ.  ಪೊಲೀಸರ ಪ್ರಕಾರ,  ಈ  ಪ್ರಿನ್ಸ್ ದೀಕ್ಷಿತ್, ಕಳೆದ ವರ್ಷ ಡಿಸೆಂಬರ್ 16 ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ. ಸ್ನೇಹಿತರೊಂದಿಗೆ ಸೇರಿ ಚಲಿಸುವ ಕಾರೊಂದರ ಮೇಲೆ ಕುಳಿತುಕೊಂಡು ಕೇಕ್‌ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಇದು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣವಾಗಿದೆ. 

Viral Video : ಮೊದಲ ಬಾರಿ ವಿಮಾನವೇರಿದ ಯೂಟ್ಯೂಬರ್ ಗಂಗವ್ವ ವಿಡಿಯೋ ವೈರಲ್

ಅಕ್ಷರಧಾಮದಿಂದ (Akshardham) ಗಾಜಿಯಾಬಾದ್‌ಗೆ (Ghaziabad) ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಈ ಘಟನೆ ನಡೆದಿತ್ತು. ಈ ಸ್ಟಂಟ್  ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.  ಈ ಬಗ್ಗೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವ ಪೊಲೀಸರು, ನಾವು ಈ ತಪ್ಪು ಎಸಗಿದವರ ವಿರುದ್ಧ ತನಿಖೆ ನಡೆಸಿ ತಪ್ಪು ಕಂಡ ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ. 

ವೈರಲ್ ಆಗಿರುವ ವಿಡಿಯೋದಲ್ಲಿ ಯೂಟ್ಯೂಬರ್‌ (YouTuber) ಹಾಗೂ ಆತನ ಸ್ನೇಹಿತರು ಚಲಿಸುವ ಕಾರಿನ ಟಾಪ್‌ ಮೇಲೆ ಕುಳಿತಿದ್ದರೆ ಕಾರು ವೇಗವಾಗಿ ಚಲಿಸುತ್ತಿದೆ. ಹಿನ್ನೆಲೆಯಲ್ಲಿ ದೊಡ್ಡ ಸ್ವರದಲ್ಲಿ ಸಂಗೀತಾ ಕೇಳಿ ಬರುತ್ತಿದೆ.  ಮತ್ತೆ ಕೆಲವು ಅವರ ಸ್ನೇಹಿತರು ಕಾರಿನ ಕಿಟಕಿಯನ್ನು ತೆರೆದು ಸಾಹಸ ಮಾಡಲು ಮುಂದಾಗಿದ್ದು ಕಂಡು ಬಂದಿದೆ. ಅಲ್ಲದೇ ಮತ್ತೆ ಕೆಲವರು ಬೊನೇಟ್ ಮೇಲೆ ಡಾನ್ಸ್ ಮಾಡಿದ್ದಾರೆ. ಈಗ ದೀಕ್ಷಿತ್‌ನನ್ನು ಬಂಧಿಸಿರುವ ಪೊಲೀಸರು ಇತರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. 

ರಸ್ತೆ ಅಪಘಾತದಲ್ಲಿ ಪ್ರಸಿದ್ಧ ಯುಟ್ಯೂಬರ್ 'ಸ್ಕೈಲಾರ್ಡ್' ಖ್ಯಾತಿಯ ಅಭ್ಯುದಯ್ ಸಾವು

 

Latest Videos
Follow Us:
Download App:
  • android
  • ios