Asianet Suvarna News Asianet Suvarna News

ಒಡಿಶಾ ತ್ರಿವಳಿ ರೈಲು ದುರಂತ: 101 ಶವ​ಗಳ ಗುರುತು ಪತ್ತೆ ಬಾಕಿ: ಶವ ಸಂರ​ಕ್ಷಣೆ ಕಷ್ಟ​ವೆಂದ ವೈದ್ಯ​ರು

ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ತ್ರಿವಳಿ ರೈಲು ಅಪಘಾತದಲ್ಲಿ ಮೃತ​ಪ​ಟ್ಟ​ 101 ಮಂದಿಯ ಗುರುತು ಇನ್ನೂ ಪತ್ತೆ ಆಗಿಲ್ಲ. ಈ 101 ಶವ​ಗ​ಳನ್ನು ವಿವಿಧ ಆಸ್ಪ​ತ್ರೆ​ಗಳ ಶವಾ​ಗಾ​ರದಲ್ಲಿ ಇಡ​ಲಾ​ಗಿದೆ.

Odisha Triple Train Tragedy 101 bodies still to be identified Doctors say body preservation is difficult akb
Author
First Published Jun 7, 2023, 8:30 AM IST

ಭುವನೇಶ್ವರ: ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ತ್ರಿವಳಿ ರೈಲು ಅಪಘಾತದಲ್ಲಿ ಮೃತ​ಪ​ಟ್ಟ​ 101 ಮಂದಿಯ ಗುರುತು ಇನ್ನೂ ಪತ್ತೆ ಆಗಿಲ್ಲ. ಈ 101 ಶವ​ಗ​ಳನ್ನು ವಿವಿಧ ಆಸ್ಪ​ತ್ರೆ​ಗಳ ಶವಾ​ಗಾ​ರದಲ್ಲಿ ಇಡ​ಲಾ​ಗಿದೆ. ಆದರೆ ಈ ಬಗ್ಗೆ ಮಂಗ​ಳ​ವಾರ ಮಾತ​ನಾ​ಡಿ​ರುವ ವೈದ್ಯರು, ಅ​ಪ​ಘಾ​ತ​ದಲ್ಲಿ ಮೃತ​ಪ​ಟ್ಟ​ವರ ಶವ​ಗಳು ಸಾಕಷ್ಟು ಛಿದ್ರ ಛಿದ್ರ​ವಾ​ಗಿವೆ. ಇಂಥ ದೇಹ​ಗ​ಳನ್ನು ರಾಸಾ​ಯ​ನಿಕ ಸಿಂಪ​ಡಿಸಿ ಇಡು​ವುದು ತುಂಬಾ ಕಷ್ಟ​ಕರ. ಈಗಾ​ಗಲೇ ಶವ​ಗ​ಳನ್ನು ಹೀಗೆ ಇರಿಸಿ 80 ಗಂಟೆ​ಗ​ಳಾ​ಗಿವೆ. ಇನ್ನು ದೇಹ​ಗಳು ದೀರ್ಘಾ​ವ​ಧಿಗೆ ಕೊಳೆ​ಯ​ದಂತೆ ಎಂಬಾ​ಮಿಂಗ್‌ ಕೂಡ ಮಾಡ​ಬ​ಹುದು. ಆದರೆ ಮೃತ​ಪಟ್ಟ 12 ತಾಸಿ​ನೊ​ಳಗೆ ಮಾತ್ರ ಎಂಬಾ​ಮಿಂಗ್‌ ಮಾಡ​ಬೇಕು. ಆಗ ಮಾತ್ರ ಮೃತ​ದೇಹ ಸುಸ್ಥಿ​ತಿ​ಯ​ಲ್ಲಿ​ರು​ತ್ತದೆ. ಹೀಗಾಗಿ ಎಂಬಾ​ಮಿಂಗ್‌ ಕೂಡ ಫಲ ನೀಡು​ವು​ದಿ​ಲ್ಲ ಎಂದು ಹೇಳಿ​ದ್ದಾ​ರೆ.

ಇನ್ನು ಮೃತ​ದೇ​ಹ​ಗಳ ಡಿಎ​ನ್‌ಎ ಕೂಡ ಸಂಗ್ರ​ಹಿಸಿ ಇಡಲಾ​ಗು​ತ್ತಿದೆ. ಇದ​ರಿಂದ ಅವರ ಬಂಧು​ಗ​ಳನ್ನು ಪತ್ತೆ ಮಾಡ​ಬ​ಹು​ದಾ​ಗಿ​ದೆ. ರೈಲ್ವೆ ಇಲಾ​ಖೆಯು, ಸಹಾಯ​ವಾಣಿ ಸಂಖ್ಯೆ 139ಗೆ ಕರೆ ಮಾಡಿ ಮೃತರ ಗುರುತು ಪತ್ತೆ ಮಾಡುವ ಬಗ್ಗೆ ಬಂಧು​ಗಳು ಮಾತ​ನಾ​ಡ​ಬ​ಹುದು ಎಂದು ಮನವಿ ಮಾಡಿದೆ.

ಕೈಕಾಲುಗಳಿಲ್ಲದ ದೇಹಗಳು, ರಕ್ತದ ಹೊಳೆ: ಪ್ರತ್ಯಕ್ಷದರ್ಶಿಗಳು ಹಂಚಿಕೊಂಡ ರೈಲು ಅಪಘಾತ ಸ್ಥಳದ ಭಯಾನಕ ಕಥೆ ಹೀಗಿದೆ..

30 ಕಿ.ಮೀ. ವೇಗ​ದಲ್ಲಿ ಚಲಿ​ಸಿದ ಕೋರ​ಮಂಡಲ್‌ ಎಕ್ಸ್‌​ಪ್ರೆ​ಸ್‌!

ಭುವ​ನೇ​ಶ್ವ​ರ: ತ್ರಿವಳಿ ರೈಲು ದುರಂತಕ್ಕೆ ಕಾರ​ಣ​ವಾ​ಗಿದ್ದ ಕೋರ​ಮಂಡಲ್‌ ಎಕ್ಸ್‌​ಪ್ರೆಸ್‌ ರೈಲು (Coromandel Express Train), ಅಪ​ಘಾತ ಸಂಭ​ವಿ​ಸಿದ ನಂತರ ಇದೇ ಮೊದಲ ಬಾರಿ ಮಂಗ​ಳ​ವಾರ ಬಾಹಾ​ನಗಾ ನಿಲ್ದಾ​ಣದ ಮೂಲಕ ಸಂಚ​ರಿ​ಸಿತು. ಈ ವೇಳೆ ಕೇವಲ 30 ಕಿ.ಮೀ. ವೇಗ​ದಲ್ಲಿ ರೈಲು ಸಾಗಿತು. ಅಪ​ಘಾ​ತದ ದಿನ ಗಂಟೆಗೆ 128 ಕಿ.ಮೀ. ವೇಗ​ದಲ್ಲಿ ರೈಲು ಸಂಚ​ರಿ​ಸು​ತ್ತಿ​ತ್ತು. ರೈಲು ಸಂಚಾರ ಪುನಾ​ರಂಭದ ನಂತರ ಬಾಹಾ​ನಗಾ ಮೂಲಕ 70 ರೈಲು​ಗಳು ಸಾಗಿ​ವೆ.

ಕಟ​ಕ್‌ನಲ್ಲಿ ರೈಲು ದುರಂತದ ಗಾಯಾ​ಳು​ಗ​ಳ ಭೇಟಿ ಮಾಡಿದ ಮಮ​ತಾ

ಕಟಕ್‌: ಶುಕ್ರವಾರದ ಭೀಕರ ತ್ರಿವಳಿ ರೈಲು ಅಪಘಾತದಲ್ಲಿ ಗಾಯ​ಗೊಂಡು ಕಟ​ಕ್‌ ಆಸ್ಪ​ತ್ರೆ​ಯಲ್ಲಿ (Cuttack hospital) ದಾಖ​ಲಾ​ಗಿ​ರುವ ಗಾಯಾ​ಳು​ಗಳ ಆರೋ​ಗ್ಯ​ವನ್ನು ಮಂಗಳವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal Chief Minister Mamata Banerjee) ವಿಚಾ​ರಿ​ಸಿ​ದರು. ಕೋಲ್ಕ​ತಾ​ದಿಂದ ಬಂದ​ವರೇ ಇಲ್ಲಿನ ಎಸ್‌ಸಿಬಿ ಆಸ್ಪತ್ರೆಗೆ ದಾಖ​ಲಾ​ದ​ವ​ರನ್ನು ಮಮತಾ ಭೇಟಿ ಮಡಿ​ದ​ರು. ಮತ್ತೊಂದೆಡೆ ಬಂಗಾಳದ ಸಚಿ​ವ​ರಾದ ಶಶಿ ಪಂಜಾ ಹಾಗೂ ಚಂದ್ರಿಮಾ ಭಟ್ಟಾಚಾರ್ಯ (Chandrima Bhattacharya) ಅವರು ಭುವನೇಶ್ವರದ ಏಮ್ಸ್‌ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಮಾತನಾಡಿಸಿದರು. ಇನ್ನು ಬಂಗಾಳದ 24 ಪರಗಣದಲ್ಲಿ ರಾಜ್ಯಪಾಲ ಸಿ ವಿ ಆನಂದ ಬೋಸ್‌ ಅವರು ಮೃತರ ಕುಟುಂಬದ ಜೊತೆ ಮಾತುಕತೆ ನಡೆಸಿದರು. ಬಂಗಾ​ಳದ 103 ಮಂದಿ ದುರಂತ​ದಲ್ಲಿ ಮೃತ​ಪ​ಟ್ಟಿದ್ದು 30 ಮಂದಿ ಕಾಣೆ​ಯಾ​ಗಿ​ದ್ದಾ​ರೆ.

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿ ದೊಡ್ಡ ರೈಲು ಅಪಘಾತಗಳ ವಿವರ ಹೀಗಿದೆ..

Follow Us:
Download App:
  • android
  • ios