ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿ ದೊಡ್ಡ ರೈಲು ಅಪಘಾತಗಳ ವಿವರ ಹೀಗಿದೆ..
ಭೀಕರ ರೈಲು ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮಾತನಾಡಿದ್ದು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಪರಧಾನ ಮಂತ್ರಿ ಪರಿಹಾರ ನಿಧಿಯ ವತಿಯಿಂದ ಪರಿಹಾರವನ್ನೂ ಘೋಷಿಸಿದ್ದಾರೆ.
ನವದೆಹಲಿ (ಜೂನ್ 3, 2023): ಶುಕ್ರವಾರ ರಾತ್ರಿ ಒಡಿಶಾದಲ್ಲಿ ಮೂರು ರೈಲುಗಳು - ಎರಡು ಪ್ರಯಾಣಿಕ ರೈಲುಗಳು ಮತ್ತು ಒಂದು ಸರಕು ಸಾಗಣೆಯನ್ನು ಒಳಗೊಂಡ ಭೀಕರ ಅಪಘಾತ ಸಂಭವಿಸಿದೆ. ಒಂದು ರೈಲು ಹಳಿತಪ್ಪಿದ ಇನ್ನೊಂದು ರೈಲಿನ ಬೋಗಿಗಳಿಗೆ ಡಿಕ್ಕಿ ಹೊಡೆದು ಆ ರೈಲಿನ ಹಲವು ಬೋಗಿಗಳು ಜಖಂಗೊಂಡಿವೆ. ಈ ಅಪಘಾತದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈವರೆಗೆ 280 ಜನ ಮೃತಪಟ್ಟಿದ್ದು, ಮತ್ತು 900 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು, ಈ ಭೀಕರ ರೈಲು ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮಾತನಾಡಿದ್ದು ಈ ಸಂಬಂಧ ಟ್ವೀಟ್ ಮಾಡಿದ್ದಾರೆ. "ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದಿಂದ ಸಂಕಷ್ಟಕ್ಕೀಡಾಗಿದೆ. ಈ ದುಃಖದ ಘಳಿಗೆಯಲ್ಲಿ, ನನ್ನ ಆಲೋಚನೆಗಳು ದುಃಖತಪ್ತ ಕುಟುಂಬಗಳೊಂದಿಗೆ ಇವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ. ರೈಲ್ವೆ ಸಚಿವರೊಂದಿಗೆ ಮಾತನಾಡಿದ್ದು, ಅವರು ಪರಿಸ್ಥಿತಿಯನ್ನು ಅವಲೋಕಿಸಿದರು. ಅಪಘಾತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಮತ್ತು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲಾಗುತ್ತಿದೆ’’ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: ಒಡಿಶಾದಲ್ಲಿ ಕೋರಮಂಡಲ್ ರೈಲು ದುರಂತ: ಮೃತರ ಸಂಖ್ಯೆ 233ಕ್ಕೆ ಏರಿಕೆ
ಭಾರತದಲ್ಲಿನ ಅತಿದೊಡ್ಡ ರೈಲು ಅಪಘಾತಗಳು ಇಲ್ಲಿವೆ ನೋಡಿ..
- ಜುಲೈ 7, 2011 ರಂದು, ಛಪ್ರಾ-ಮಥುರಾ ಎಕ್ಸ್‌ಪ್ರೆಸ್ ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯ ಬಳಿ ಬಸ್‌ಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ 69 ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದರು. ಮಾನವ ರಹಿತ ರೈಲ್ವೆ ಕ್ರಾಸಿಂಗ್‌ನಲ್ಲಿ ರಾತ್ರಿ 1:55 ರ ಸುಮಾರಿಗೆ ಅಪಘಾತ ಸಂಭವಿಸಿತ್ತು ರೈಲು ಅತಿ ವೇಗದಲ್ಲಿ ಓಡುತ್ತಿದ್ದು, ಈ ಹಿನ್ನೆಲೆ ಬಸ್ ಅನ್ನು ಸುಮಾರು ಅರ್ಧ ಕಿಲೋಮೀಟರ್‌ವರೆಗೆ ಎಳೆಯುತ್ತಲೇ ಇತ್ತು.
- 2012 ರ ವರ್ಷವನ್ನು ಭಾರತೀಯ ರೈಲ್ವೇ ಇತಿಹಾಸದಲ್ಲಿ ರೈಲು ಅಪಘಾತಗಳ ವಿಷಯದಲ್ಲಿ ಅತ್ಯಂತ ಕೆಟ್ಟದಾಗಿದೆ ಎಂದು ಪರಿಗಣಿಸಲಾಗಿದೆ. ಈ ವರ್ಷ ಸುಮಾರು 14 ಅಪಘಾತಗಳು ವರದಿಯಾಗಿದ್ದು, ಇದರಲ್ಲಿ ಹಳಿತಪ್ಪುವಿಕೆ ಮತ್ತು ಮುಖಾಮುಖಿ ಡಿಕ್ಕಿಗಳು ಸೇರಿವೆ.
- ಜುಲೈ 30, 2012 ರಂದು, ನೆಲ್ಲೂರು ಬಳಿ ದೆಹಲಿ-ಚೆನ್ನೈ ತಮಿಳುನಾಡು ಎಕ್ಸ್‌ಪ್ರೆಸ್‌ನ ಕೋಚ್‌ಗೆ ಬೆಂಕಿ ಕಾಣಿಸಿಕೊಂಡು 30ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.
- ಮೇ 26, 2014 ರಂದು, ಉತ್ತರ ಪ್ರದೇಶದ ಸಂತ ಕಬೀರ್ ನಗರ ಪ್ರದೇಶದಲ್ಲಿ, ಗೋರಖ್‌ಪುರ ಕಡೆಗೆ ಹೋಗುತ್ತಿದ್ದ ಗೋರಖ್‌ಧಾಮ್ ಎಕ್ಸ್‌ಪ್ರೆಸ್ ಖಲೀಲಾಬಾದ್ ನಿಲ್ದಾಣದ ಸಮೀಪದಲ್ಲಿ ಸ್ಥಗಿತಗೊಂಡಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು 25 ಜನರು ಮೃತಪಟ್ಟಿದ್ದರು ಮತ್ತು 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.
- ಮಾರ್ಚ್ 20, 2015 ರಂದು ಡೆಹ್ರಾಡೂನ್‌ನಿಂದ ವಾರಾಣಸಿಗೆ ಪ್ರಯಾಣಿಸುತ್ತಿದ್ದ ಜನತಾ ಎಕ್ಸ್‌ಪ್ರೆಸ್‌ನಲ್ಲಿ ಒಂದು ದೊಡ್ಡ ಅಪಘಾತ ಸಂಭವಿಸಿತ್ತು. ಉತ್ತರದ ರಾಯ್ ಬರೇಲಿಯ ಬಚ್ರವಾನ್ ರೈಲು ನಿಲ್ದಾಣದ ಬಳಿ ರೈಲಿನ ಎಂಜಿನ್ ಮತ್ತು ಎರಡು ಪಕ್ಕದ ಕೋಚ್‌ಗಳು ಹಳಿತಪ್ಪಿ 30ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು ಮತ್ತು ಸುಮಾರು 150 ಜನರು ಗಾಯಗೊಂಡರು.
- ನವೆಂಬರ್ 20, 2016 ರಂದು ಇಂದೋರ್-ಪಾಟ್ನಾ ಎಕ್ಸ್‌ಪ್ರೆಸ್ 19321 ಕಾನ್ಪುರದ ಪುಖ್ರಾಯನ್ ಬಳಿ ಹಳಿತಪ್ಪಿ ಕನಿಷ್ಠ 150 ಪ್ರಯಾಣಿಕರು ಮೃತಪಟ್ಟಿದ್ದರು ಮತ್ತು 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
- ಆಗಸ್ಟ್ 19, 2017 ರಂದು, ಹರಿದ್ವಾರ ಮತ್ತು ಪುರಿ ನಡುವೆ ಚಲಿಸುವ ಕಳಿಂಗ ಉತ್ಕಲ್ ಎಕ್ಸ್‌ಪ್ರೆಸ್ ಉತ್ತರ ಪ್ರದೇಶದ ಮುಜಾಫರ್‌ನಗರದ ಖತೌಲಿ ಬಳಿ ಅಪಘಾತಕ್ಕೀಡಾಗಿದೆ. ರೈಲಿನ 14 ಬೋಗಿಗಳು ಹಳಿತಪ್ಪಿ 21 ಪ್ರಯಾಣಿಕರು ಮೃತಪಟ್ಟರೆ, 97 ಮಂದಿ ಗಾಯಗೊಂಡಿದ್ದರು.
- ಆಗಸ್ಟ್ 23, 2017 ರಂದು ದೆಹಲಿಗೆ ಹೋಗುವ ಕೈಫಿಯತ್ ಎಕ್ಸ್‌ಪ್ರೆಸ್‌ನ 9 ರೈಲು ಬೋಗಿಗಳು ಉತ್ತರ ಪ್ರದೇಶದ ಔರೈಯಾ ಬಳಿ ಹಳಿತಪ್ಪಿ ಕನಿಷ್ಠ 70 ಮಂದಿ ಗಾಯಗೊಂಡರು.
- ಜನವರಿ 13, 2022 ರಂದು, ಪಶ್ಚಿಮ ಬಂಗಾಳದ ಅಲಿಪುರ್ದೂರ್‌ನಲ್ಲಿ ಬಿಕಾನೇರ್ - ಗುವಾಹಟಿ ಎಕ್ಸ್‌ಪ್ರೆಸ್‌ನ ಕನಿಷ್ಠ 12 ಬೋಗಿಗಳು ಹಳಿತಪ್ಪಿ 9 ಮಂದಿ ಮೃತಪಟ್ಟಿದ್ದರು ಮತ್ತು 36 ಮಂದಿ ಗಾಯಗೊಂಡಿದ್ದರು.
ಇದನ್ನೂ ಓದಿ: ಒಡಿಶಾ ತ್ರಿವಳಿ ರೈಲು ದುರಂತ ಹಿನ್ನೆಲೆ : ವಂದೇ ಭಾರತ್ ಉದ್ಘಾಟನೆ ರದ್ದು
SCR ಸ್ಥಾಪಿಸಿದ ಸಹಾಯವಾಣಿ ಸಂಖ್ಯೆಗಳು:
- SCR Hqrs, ರೈಲು ನಿಲಯಂ, ಸಿಕಂದರಾಬಾದ್: 040 - 27788516
- ವಿಜಯವಾಡ ರೈಲ್ವೆ ನಿಲ್ದಾಣ - 0866 - 2576924
- ರಾಜಮಂಡ್ರಿ Rly Stn: 0883 - 2420541
- ರೇಣಿಗುಂಟಾ ರೈಲ್ವೆ ನಿಲ್ದಾಣ: 9949198414.
- ತಿರುಪತಿ ರೈಲ್ವೆ ನಿಲ್ದಾಣ: 7815915571