Asianet Suvarna News Asianet Suvarna News

ಕೈಕಾಲುಗಳಿಲ್ಲದ ದೇಹಗಳು, ರಕ್ತದ ಹೊಳೆ: ಪ್ರತ್ಯಕ್ಷದರ್ಶಿಗಳು ಹಂಚಿಕೊಂಡ ರೈಲು ಅಪಘಾತ ಸ್ಥಳದ ಭಯಾನಕ ಕಥೆ ಹೀಗಿದೆ..

ನಾನು 200-250 ಕ್ಕೂ ಹೆಚ್ಚು ಮೃತದೇಹಗಳನ್ನು ಕಣ್ಣಾರೆ ಕಂಡಿದ್ದೇನೆ.. ಕುಟುಂಬಗಳು ನಾಶವಾಗಿದೆ, ಕೈಕಾಲುಗಳಿಲ್ಲದ ದೇಹಗಳು ಮತ್ತು ರೈಲು ಹಳಿಗಳ ಮೇಲೆ ರಕ್ತಪಾತ ಕಂಡಿದ್ದೇನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಟ್ವೀಟ್‌ಗಳ ಮೂಲಕ ಮಾಹಿತಿ ನೀಡಿದ್ದಾರೆ. 

everything was shaking limbless bodies blood bath  survivors recount odisha train crash ash
Author
First Published Jun 3, 2023, 1:09 PM IST

ನವದೆಹಲಿ (ಜೂನ್ 3, 2023):  ನಿನ್ನೆ ಸಂಜೆ ಒಡಿಶಾದಲ್ಲಿ ಸಂಭವಿಸಿದ ಮೂರು ರೈಲು ಅಪಘಾತದಲ್ಲಿ ಸುಮಾರು 280 ಜನರು ಮೃತಪಟ್ಟಿದ್ದು, ಸುಮಾರು 900 ಜನರು ಗಾಯಗೊಂಡಿದ್ದಾರೆ. ಈ ರೈಲು ಅಪಘಾತ ಇತ್ತೀಚಿನ ಕೆಲ ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ಅಪಘಾತವಾಗಿದೆ. ಇನ್ನು, ಈ ರೈಲುಗಳಲ್ಲಿ ಪ್ರಯಾಣಿಸಿ ಬದುಕುಳಿದವರು ಹಾಗೂ ಪ್ರತ್ಯಕ್ಷದರ್ಶಿಗಳು ರೈಲುಗಳು ಡಿಕ್ಕಿ ಹೊಡೆದ ಕ್ಷಣದ ಭಯಾನಕ ಕಥೆಗಳನ್ನು ಹಂಚಿಕೊಂಡಿದ್ದಾರೆ.

ಕೋರಮಂಡಲ್-ಶಾಲಿಮಾರ್ ಎಕ್ಸ್‌ಪ್ರೆಸ್‌ನಲ್ಲಿ ಚೆನ್ನೈಗೆ ಪ್ರಯಾಣಿಸುತ್ತಿದ್ದ ದಿನಗೂಲಿ ಕಾರ್ಮಿಕ ಸಂಜಯ್ ಮುಖಿಯಾ ಅವರು ಶೌಚಾಲಯಕ್ಕೆ ಹೋಗಿದ್ದಾಗ ಭೂಕಂಪನದಂತಹ ಅನುಭವವಾಯಿತು ಎಂದು ಹಂಚಿಕೊಂಡಿದ್ದಾರೆ. ಬಿಹಾರ ಮೂಲದ ಸಂಜಯ್ ಮುಖಿಯಾ, "ಎಲ್ಲವೂ ಅಲುಗಾಡುತ್ತಿದೆ ಮತ್ತು ರೈಲು ಬೋಗಿ ಉರುಳುತ್ತಿರುವ ಅನುಭವ ನಮಗೆ ಉಂಟಾಯಿತು’’ ಎಂದೂ ಹೇಳಿದ್ದಾರೆ.

ಇದನ್ನು ಓದಿ: ಒಡಿಶಾ ರೈಲು ಅಪಘಾತ ಎಫೆಕ್ಟ್‌: 48 ರೈಲುಗಳು ರದ್ದು, 39 ರೈಲುಗಳ ಮಾರ್ಗ ಬದಲಾವಣೆ; ವಿವರ ಇಲ್ಲಿದೆ..

ಸ್ವಲ್ಪ ಸಮಯದ ನಂತರ ಅವರನ್ನು ಅವಶೇಷಗಳಿಂದ ರಕ್ಷಿಸಲಾಯಿತು ಎಂದೂ ತಿಳಿದುಬಂದಿದೆ. ಇನ್ನು, ಅಪಘಾತ ಸ್ಥಳದ ದೃಶ್ಯಗಳನ್ನು ನೋಡ್ತಿದ್ರೆ ಕೋಚ್‌ಗಳು ಒಂದರ ಮೇಲೊಂದರಂತೆ ಉರುಳಿರುವುದುನ್ನು ಮತ್ತು ಪ್ರಯಾಣಿಕರ ಲಗೇಜ್‌ಗಳು ಅಲ್ಲಲ್ಲಿ ಹರಡಿಕೊಂಡಿರುವುದನ್ನು ನೋಡಬಹುದು. ರಕ್ಷಣಾ ಕಾರ್ಯಕರ್ತರು ದೇಹಗಳ ಸಾಲು ಸಾಲುಗಳನ್ನು ಸಂಗ್ರಹಿಸಿದ್ದು,  ಅವಶೇಷಗಳಿಂದ ಹೆಚ್ಚಿನದನ್ನು ಹೊರತೆಗೆಯಲಾಗುತ್ತಿದೆ ಎಂದೂ ತಿಳಿದುಬಂದಿದೆ. 

ಅಲ್ಲದೆ, ಅಪಘಾತ ಸಂಭವಿಸಿದ ರೈಲುಗಳಲ್ಲಿ ಇದ್ದ ಮತ್ತೊಬ್ಬರು ಘಟನೆಯ ದೃಶ್ಯಾವಳಿಗಳನ್ನು ಹಂಚಿಕೊಂಡಿರುವುದು ಹೀಗೆ.. ಸ್ಥಳದಲ್ಲಿ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕೈ ಕಾಲುಗಳು ಚದುರಿಹೋಗಿವೆ ಎಂದು ಹೇಳಿದ್ದಾರೆ. "ರೈಲು ಹಳಿತಪ್ಪಿದಾಗ ನಾನು ಮಲಗಿದ್ದೆ. ಸುಮಾರು 10-15 ಜನರು ನನ್ನ ಮೇಲೆ ಬಿದ್ದರು. ನಾನು ಬೋಗಿಯಿಂದ ಹೊರಬಂದಾಗ, ಸುತ್ತಲೂ ಕೈಕಾಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ನಾನು ನೋಡಿದೆ. ಇಲ್ಲಿ ಒಂದು ಕಾಲು, ಅಲ್ಲಿ ಒಂದು ಕೈ ... ಯಾರದೋ ಒಬ್ಬರ ಮುಖವು ವಿರೂಪಗೊಂಡಿತ್ತು’’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿ ದೊಡ್ಡ ರೈಲು ಅಪಘಾತಗಳ ವಿವರ ಹೀಗಿದೆ..

ಅದೇ ರೀತಿ, ಮೊಹಮ್ಮದ್‌ ಅಕ್ವೀಬ್ ಎಂಬಾತ ಗುಂಪೊಂದರಲ್ಲಿ ಪ್ರಯಾಣಿಸುತ್ತಿದ್ದ ಬದುಕುಳಿದ ಪ್ರಯಾಣೀಕರಲ್ಲಿ ಒಬ್ಬ. ಮೂರು ಬೋಗಿಗಳಲ್ಲಿ 26 ಜನರ ದೊಡ್ಡ ಗುಂಪಿನಲ್ಲಿ ಇವರೂ ಒಬ್ಬರು. ಈ ಗುಂಪಿನಲ್ಲಿ ಹೆಚ್ಚಾಗಿ ಕೇರಳಕ್ಕೆ ಹೋಗುವ ವಿದ್ಯಾರ್ಥಿಗಳು ಸೇರಿದ್ದರು. ಇವರು ಹೇಳಿರುವುದು ಹೀಗೆ.. "ನಾವು S-4, S-3, S-2 ಕೋಚ್‌ಗಳ ಒಳಗೆ ಇದ್ದೆವು. ಇದ್ದಕ್ಕಿದ್ದಂತೆ ನಾವು ದೊಡ್ಡ ಸದ್ದನ್ನು ಕೇಳಿದ್ದೇವೆ ಮತ್ತು ಕೋಚ್‌ಗಳು ಪಲ್ಟಿ ಹೊಡೆದವು. ನಾವೆಲ್ಲರೂ ಸುರಕ್ಷಿತವಾಗಿದ್ದೆವು" ಎಂದು ಮಾಹಿತಿ ನೀಡಿದ್ದಾರೆ.

ಒಡೆದ ಕೋಚ್‌ಗಳ ಕಿಟಕಿಗಳ ಮೂಲಕ ಗುಂಪನ್ನು ಹೊರಗೆ ತರಲಾಯಿತು. "ನಾವು ಜೀವಂತವಾಗಿರಲು ಅದೃಷ್ಟವಂತರಾಗಿದ್ದೇವೆ.. ನಾವು ಈಗ ಎಲ್ಲಿಗೂ ಹೋಗಲು ಬಯಸುವುದಿಲ್ಲ. ಬದಲಾಗಿ ಬಿಹಾರಕ್ಕೆ ಹಿಂತಿರುಗುತ್ತೇವೆ" ಎಂದೂ ಅವರು ಹೇಳಿದರು. ಅಪಘಾತ ಹೇಗೆ ಸಂಭವಿಸಿತು ಎಂಬುದರ ಕುರಿತು ತನಿಖೆಗೆ ರೈಲ್ವೆ ಸಚಿವಾಲಯ ಆದೇಶಿಸಿದೆ.  

ಇದನ್ನೂ ಓದಿ: ಒಡಿಶಾದಲ್ಲಿ ಕೋರಮಂಡಲ್ ರೈಲು ದುರಂತ: ಮೃತರ ಸಂಖ್ಯೆ 233ಕ್ಕೆ ಏರಿಕೆ

ಹಾಗೆ, ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅನುಭವ್ ದಾಸ್ ಅವರು ಅಪಘಾತವನ್ನು ವಿವರಿಸುವ ಸರಣಿ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. "ಮೂರು ರೈಲುಗಳು ಅಪಘಾತದಲ್ಲಿ ಭಾಗಿಯಾಗಿವೆ - ಕೋರಮಂಡಲ್ ಎಕ್ಸ್‌ಪ್ರೆಸ್ 12841, ಯಶವಂತಪುರ-ಹೌರಾ ಎಸ್‌ಎಫ್ ಮತ್ತು ಗೂಡ್ಸ್ ರೈಲು. ಕೋರಮಂಡಲ್ ಎಕ್ಸ್‌ಪ್ರೆಸ್ ಹಳಿತಪ್ಪಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ" ಎಂದು ಅವರು ಹೇಳಿದರು. 

‘’ಜತೆಗೆ, ಉತ್ಪ್ರೇಕ್ಷೆ ಮಾಡಬಾರದು. ಆದರೆ ನಾನು 200-250 ಕ್ಕೂ ಹೆಚ್ಚು ಮೃತದೇಹಗಳನ್ನು ಕಣ್ಣಾರೆ ಕಂಡಿದ್ದೇನೆ.. ಕುಟುಂಬಗಳು ನಾಶವಾಗಿದೆ, ಕೈಕಾಲುಗಳಿಲ್ಲದ ದೇಹಗಳು ಮತ್ತು ರೈಲು ಹಳಿಗಳ ಮೇಲೆ ರಕ್ತಪಾತ ಕಂಡಿದ್ದೇನೆ. ಇದು ನಾನು ಎಂದಿಗೂ ಮರೆಯಲಾಗದ ದೃಶ್ಯವಾಗಿದೆ. ಕುಟುಂಬಗಳಿಗೆ ದೇವರು ಸಹಾಯ ಮಾಡಲಿ. ನನ್ನ ಸಂತಾಪ" ಎಂದು ಅನುಭವ್‌ ದಾಸ್‌ ಬರೆದಿದ್ದಾರೆ.

ಇದನ್ನೂ ಓದಿ: ಒಡಿಶಾ ತ್ರಿವಳಿ ರೈಲು ದುರಂತ ಹಿನ್ನೆಲೆ : ವಂದೇ ಭಾರತ್ ಉದ್ಘಾಟನೆ ರದ್ದು

Follow Us:
Download App:
  • android
  • ios