Pragya Thakur: 2014ರ ನಂತರ ಭಾರತಕ್ಕಷ್ಟೇ ಅಲ್ಲ, ಮಹಿಳೆಯರಿಗೂ ನಿಜವಾದ ಸ್ವಾತಂತ್ರ್ಯ!

*ಸ್ವಾತಂತ್ರ್ಯ ಹೋರಾಟದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕಂಗನಾ
*ಹಲವು ರಾಜಕೀಯ ನಾಯಕರಿಂದ ಕ್ಷಮೆ ಕೇಳುವಂತೆ ಆಗ್ರಹ
*ಮಹಿಳೆಯರಿಗೂ 2014ರಲ್ಲೇ ಸ್ವಾತಂತ್ರ್ಯ ಎಂದ ಪ್ರಗ್ಯಾ ಸಿಂಗ್!‌
*ಮೋದಿ ಪ್ರಧಾನಿಯಾದ ನಂತರವೇ ಸ್ವಾತಂತ್ರ್ಯದ ಅರಿವು : ಪ್ರಗ್ಯಾ!

Not Just India Women Also Got Freedom After 2014 BJP Pragya Thakur  Kangana statement mnj

ಭೋಪಾಲ್(ನ.20): ಪದ್ಮಶ್ರೀ ಪುರಸ್ಕೃತ  ನಟಿ ಕಂಗನಾ ರಾಣಾವತ್‌ (Kangana Ranaut) ಅವರ ‘ಭಾರತಕ್ಕೆ ನೈಜ ಸ್ವಾತಂತ್ರ್ಯ (freedom) ದೊರಕಿದ್ದು 2014ರಲ್ಲಿ, 1947ರಲ್ಲಿ ನಮಗೆ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಭಿಕ್ಷೆ’ ಎಂಬ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಪಕ್ಷ ಭೇದವಿಲ್ಲದೆ ಹಲವಾರು ರಾಜಕೀಯ ನಾಯಕರು ಕಂಗನಾ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ವಿಷಯ ರಾಷ್ಟ್ರ ಮಟ್ಟದಲ್ಲಿ ಕೂಡ ಚರ್ಚೆಯಾಗಿತ್ತು. ಒಂದು ಕಡೆ ರಾಜಕೀಯ ನೇತಾರರು ಕಂಗನಾ ಕ್ಷಮೆಯಾಚಿಸಿವಂತೆ ಆಗ್ರಹಿಸುತ್ತಿದ್ದರೆ ಇತ್ತ ನಟಿ ತಮ್ಮ ಹೇಳಿಕೆಗಳನ್ನು ಸಮರ್ಥಿಸಲು ಹೋಗಿ ಇನ್ನಷ್ಟು ವಿವಾದಗಳನ್ನು ಸೃಷ್ಟಿಸಿದ್ದರು. ಅಲ್ಲದೇ 1947ರಲ್ಲಿ ಯಾವ ಯುದ್ಧ ನಡೆಯಿತು ಎಂದು ಯಾರಾದರೂ ಹೇಳಿದರೆ ಪದ್ಮಶ್ರೀ (Padmashri) ಹಿಂದಿರುಗಿಸುದಾಗಿ ಕಂಗನಾ ಹೇಳಿದ್ದರು.

ಬಾಸ್ಕೆಟ್ ಬಾಲ್ ಆಡಿ ಸರ್ಪ್ರೈಸ್ ನೀಡಿದ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್!

ಈ ಎಲ್ಲದರ ನಡುವೆ ಬಿಜೆಪಿ ನಾಯಕಿ (BJP Leader) ಸಾಧ್ವಿ ಪ್ರಗ್ಯಾಸಿಂಗ್‌ ಠಾಕೂರ್‌ (Sadhvi Pragya Singh Thakur) ವಿಡಿಯೋವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. 2014ರಲ್ಲಿ ಸ್ವಾತಂತ್ರ್ಯ ದೊರಕಿದ್ದು ಎಂಬ ಕಂಗನಾರ ಹೇಳಿಕೆ ಪೂರಕವಾಗಿ 2014ರಲ್ಲಿ ಭಾರತಕ್ಕೆ ಅಷ್ಟೇ ಅಲ್ಲ ಮಹಿಳೆಯರಿಗೂ (Women) ನಿಜವಾದ ಸ್ವಾತಂತ್ರ್ಯ ದೊರಕಿದ್ದು ಎಂದು ಸಾಧ್ವಿ ಹೇಳಿದ್ದಾರೆ. ನರೇಂದ್ರ ಮೋದಿ ಪ್ರಧಾನಮಂತ್ರಿಯಾದ (Narendar Modi) ನಂತರವೇ ಮಹಿಳೆಯರಿಗೆ ಸ್ವಾತಂತ್ರ್ಯದ ಬಗ್ಗೆ ಅರಿವಾಗಿದೆ ಎಂದು ಅವರು ಹೇಳಿದ್ದಾರೆ.‌

ಸರ್ಕಾರದ ಯೋಜನೆಗಳು ಹಳ್ಳಿಗಳನ್ನು ತಲುಪುತ್ತಿವೆ!

ವೈರಲ್ ವೀಡಿಯೊವೊಂದರಲ್ಲಿ (Viral Video) ಬಿಜೆಪಿ ಸಂಸದೆ 2014 ರ ಮೊದಲು, ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಯಾರೂ ಅರ್ಥಮಾಡಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ. “ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ, ಹುಡುಗಿಯರು ಮತ್ತು ಮಹಿಳೆಯರು ಮುಕ್ತವಾಗಿ ಅಧ್ಯಯನ (Studies) ಮಾಡಬಹುದು, ಉದ್ಯೋಗಗಳಿಗೆ ಸೇರಬಹುದು ಅಥವಾ ತಮ್ಮ ವ್ಯವಹಾರಗಳನ್ನು (Business) ಮಾಡಬಹುದು; ಹಳ್ಳಿಗಳನ್ನು ನಗರಗಳೊಂದಿಗೆ ಜೋಡಿಸಲಾಗಿದೆ, ಪ್ರತಿಯೊಂದು ಸರ್ಕಾರದ ಯೋಜನೆಗಳು (Government Schemes) ಹಳ್ಳಿಗಳನ್ನು ತಲುಪುತ್ತಿವೆ, ಪ್ರಗತಿಗೆ ಕಾರಣವಾಗುತ್ತಿವೆ. ಮಹಿಳೆಯರೂ ಸಹ ಸರ್ವಾಂಗೀಣ ಪ್ರಗತಿ ಸಾಧಿಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಮಹಿಳೆಯರು ಎಷ್ಟು ಮೌನವಾಗಿ ಸಬಲೀಕರಣಗೊಂಡಿದ್ದಾರೆ ಮತ್ತು ಎಲ್ಲರೂ ಘನತೆಯಿಂದ ಹೆಮ್ಮೆಯಿಂದ ನಿಂತಿದ್ದಾರೆ ಎಂದು ಯಾರೂ ಅರಿತುಕೊಂಡಿಲ್ಲ, ”ಎಂದು  ಸಾಧ್ವಿ ಹೇಳಿದ್ದಾರೆ. 

ಅನಾರೋಗ್ಯದ ಕಾರಣಕ್ಕೆ ಬೇಲ್.. ಟೀಕೆಗೆ ಸಿಕ್ಕ ಸಾಧ್ವಿ ಕಬಡ್ಡಿ ವಿಡಿಯೋ ವೈರಲ್!

ಸ್ವ-ಸಹಾಯ (Self Help) ಸಂಘಗಳೊಂದಿಗೆ ಜೋಡಿಸಿಕೊಂಡಿರುವ ಮಹಿಳೆಯರು ಈಗ ಹೆಮ್ಮೆಯಿಂದ ಸಾರ್ವಜನಿಕ ವೇದಿಕೆಗಳಲ್ಲಿ (Public) ಎದ್ದುನಿಂತು ತಮ್ಮ ಕೆಲಸದ ಮೂಲಕ ಉತ್ತಮ ಆದಾಯವನ್ನು ಗಳಿಸುತ್ತಾರೆ ಎಂದು ಅವರು ಹೇಳಿದ್ದಾರೆ. ನಿಜವಾದ ಸ್ವಾತಂತ್ರ್ಯವು 2014 ರ ನಂತರ ಸಿಕ್ಕಿತು ಎಂದು ಪ್ರಗ್ಯಾ ಹೇಳಿದ್ದಾರೆ. 

ಮಲೇಂಗಾವ್ ಸ್ಫೋಟ (Malegaon Bombings) ಪ್ರಕರಣದಲ್ಲಿ ಠಾಕೂರ್ ಜೈಲಿನಲ್ಲಿರಬೇಕಾದ ಪರಿಸ್ಥಿತಿ ಬಂದಿತ್ತು. ನಂತರ ಬದಲಾದ ವ್ಯವಸ್ಥೆಯಲ್ಲಿ ರಾಜಕಾರಣ ಪ್ರವೇಶ ಮಾಡಿ ಸಂಸತ್ (Parliamnet) ಸದಸ್ಯೆಯಾದರು. ನವರಾತ್ರಿ ಸಂದರ್ಭದಲ್ಲಿ ಪ್ರಗ್ಯಾಸಿಂಗ್‌ ಗರ್ಭಾ ನೃತ್ಯ ಮಾಡಿದ್ದ ವಿಡಿಯೋ ಕೂಡ ವೈರಲ್‌ ಆಗಿತ್ತು. ಇತ್ತಿಚೆಗೆ ಕಾರ್ಯಕ್ರಮವೊಂದರಲ್ಲಿ ಸಾಧ್ವಿ ಕಬ್ಬಡಿ ಆಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು ಸಾಧ್ವಿ ಪ್ರಗ್ಯಾ ಸಿಂಗ್. 51  ವರ್ಷದ ಠಾಕೂರ್ ಅವರನ್ನು ಮಲೇಗಾಂವ್ ಸ್ಫೋಟ  ಪ್ರಕರಣದಲ್ಲಿ ಬಂಧಿಸಲಾಗಿತ್ತು. ಸುಮಾರು ಒಂಭತ್ತು ವರ್ಷ ಜೈಲಿನಲ್ಲಿದ್ದು 2017 ರಲ್ಲಿ ಬಿಡುಗಡೆಯಾಗಿದ್ದರು.  ಮಲೇಗಾಂವ್ ಸ್ಫೋಟ ಸೆ.  29, 2008ರಲ್ಲಿ ನಡೆದಾಗ ಆರು ಜನ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದರು.  ರಾಷ್ಟ್ರೀಯ ತನಿಖಾ ದಳದ ವ್ಯಾಪ್ತಿಗೆ ತನಿಖೆ ಬಂದಿತ್ತು.

Latest Videos
Follow Us:
Download App:
  • android
  • ios