Asianet Suvarna News

ಬಾಸ್ಕೆಟ್ ಬಾಲ್ ಆಡಿ ಸರ್ಪ್ರೈಸ್ ನೀಡಿದ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್!

  • ಆನಾರೋಗ್ಯದಿಂದ ಚೇತರಿಸಿಕೊಂಡ ಬೆನ್ನಲ್ಲೇ ಬಾಸ್ಕೆಟ್ ಬಾಲ್ ಕೋರ್ಟ್‌ಗಳಿದ ಪ್ರಗ್ಯಾ
  • ಬಾಲ್ ನೇರವಾಗಿ ನೆಟ್‌ಗೆ ಹಾಕಿ ಎಲ್ಲರಿಗೂ ಸರ್ಪ್ರೈಸ್ ನೀಡಿದ ಸಂಸದೆ
  • ಪ್ರಗ್ಯಾ ಠಾಕೂರ್ ಬಾಸ್ಕೆಟ್ ಬಾಲ್ ವಿಡಿಯೋ ವೈರಲ್
BJP MP Pragya Singh Thakur playing basketball in Bhopal video goes viral ckm
Author
Bengaluru, First Published Jul 3, 2021, 6:42 PM IST
  • Facebook
  • Twitter
  • Whatsapp

ಭೋಪಾಲ್ (ಜು.03): ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿ ಸಂಸದ ಪ್ರಗ್ಯಾ ಠಾಕೂರ್ ಇದೀಗ ಬಾಸ್ಕೆಟ್ ಬಾಲ್ ಆಡೋ ಮೂಲಕ ಅಚ್ಚರಿ ನೀಡಿದ್ದಾರೆ.  ಭೋಪಾಲದ ಶಕ್ತಿನಗರದ ಬಾಸ್ಕೆಟ್ ಬಾಲ್ ಕೋರ್ಟ್‌ಗೆ ಭೇಟಿ ನೀಡಿದ ಪ್ರಗ್ಯಾ ಠಾಕೂರ್,  ತಮ್ಮ ಸ್ಕಿಲ್ ಪ್ರದರ್ಶಿಸಿ ಎಲ್ಲರ ಗಮನಸೆಳೆದಿದ್ದಾರೆ.

'ಕೊರೋನಾ ಓಡಿಸಲು ಪ್ರತಿದಿನ ಹನುಮಾನ್ ಚಾಲೀಸಾ ಪಠಿಸಿ

ಕಾರ್ಯಕ್ರಮ ನಿಮಿತ್ತ ಶಕ್ತಿನಗರಕ್ಕೆ ಆಗಮಿಸಿದ ಪ್ರಗ್ಯಾ ಠಾಕೂರ್, ಪಕ್ಕದಲ್ಲೇ ಬಾಸ್ಕೆಟ್ ಬಾಲ್ ಆಡುತ್ತಿರುವುದನ್ನು ಗಮನಿಸಿದ್ದಾರೆ. ಬಿಜೆಪಿ ಸಂಸದೆ ಕೋರ್ಟ್‌ಗೆ ಇಳಿದು ಬಾಲ್ ಹಿಡಿದು ಬಾಸ್ಕೆಟ್ ಬಾಲ್ ಆಡಲು ಶುರುಮಾಡಿದ್ದಾರೆ. ಬಾಲ್ ಪಿಚ್ ಸಾಮಾನ್ಯವಾಗಿ ಬಹುತೇಕರು ಮಾಡುತ್ತಾರೆ. ಆದರೆ ಪ್ರಗ್ಯಾ, ಬಾಲ್ ಪಿಚ್ ಮಾಡಿ ನೇರವಾಗಿ ನೆಟ್‌ಗೆ ಹಾಕಿದ್ದಾರೆ.

ಕಾಂಗ್ರೆಸ್‌ ಕಿರುಕುಳದಿಂದ ನನಗೆ ಈಗ ಕಣ್ಣುಗಳೇ ಕಾಣ್ತಿಲ್ಲ: ಸಾಧ್ವಿ ಪ್ರಜ್ಞಾ

ಪ್ರಗ್ಯಾ ಠಾಕೂರ್ ತಮ್ಮ ಬಾಸ್ಕೆಟ್ ಬಾಲ್ ಕೌಶಲ್ಯದ ವಿಡಿಯೋ ವೈರಲ್ ಆಗಿದೆ. ಇಷ್ಟೇ ಅಲ್ಲ ಆರೋಗ್ಯದಿಂದ ಚೇತರಿಸಿಕೊಂಡು ಬಾಸ್ಕೆಟ್ ಬಾಲ್ ಆಡಿದ ಪ್ರಗ್ಯಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಕಾಂಗ್ರೆಸ್ ಪ್ರಗ್ಯಾ ನಡೆಯನ್ನು ಟೀಕಿಸಿದೆ. ಕೋರ್ಟ್, ಕೇಸ್ ಬಂದಾಗ ತಲೆ ತಿರುಗಿ ಬೀಳುವ ಪ್ರಗ್ಯಾ ಇದೀಗ ಬಾಸ್ಕೆಟ್ ಬಾಲ್ ಆಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.

 

ಅನಾರೋಗ್ಯ ಕಾರಣ ಪ್ರಗ್ಯಾ ಠಾಕೂರ್ ಫೆಬ್ರವರಿ ತಿಂಗಳಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆ ದಾಖಲಾಗಿದ್ದರು. ಮಾರ್ಚ್ ತಿಂಗಳಲ್ಲಿ ಉಸಿರಾಟ ಸಮಸ್ಯೆ ಸೇರಿದಂತೆ ಆರೋಗ್ಯ ಸಮಸ್ಯ ಗಂಭೀರವಾದಾಗ, ದೆಹಲಿಯಿಂದ ಮುಂಬೈಗೆ ಏರ್‌ಲಿಫ್ಟ್ ಮಾಡಲಾಗಿತ್ತು. ಮಾರ್ಚ್‌ನಿಂದ ಸತತ ಚಿಕಿತ್ಸೆ ಪಡೆದ ಪ್ರಗ್ಯಾ ಇದೀಗ ಚೇತರಿಸಿಕೊಂಡು ಮತ್ತೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
 

Follow Us:
Download App:
  • android
  • ios