ಅನಾರೋಗ್ಯದ ಕಾರಣಕ್ಕೆ ಬೇಲ್.. ಟೀಕೆಗೆ ಸಿಕ್ಕ ಸಾಧ್ವಿ ಕಬಡ್ಡಿ ವಿಡಿಯೋ ವೈರಲ್!
* ಕಾಳಿ ದೇವಾಲಯದ ಆವರಣದಲ್ಲಿ ಕಬಡ್ಡಿ ಆಡಿದ ಸಂಸದೆ
* ಕಾಂಗ್ರೆಸ್ ನಾಯಕರಿಂದ ಟೀಕೆ ಜತೆ ವ್ಯಂಗ್ಯ
* ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಕಬಡ್ಡಿ ಆಟ
* ಅನಾರೋಗ್ಯದ ಕಾರಣವೇ ಜಾಮೀನು ಪಡೆದುಕೊಂಡಿದ್ದರು
ಭೋಪಾಲ್(ಅ. 15) ಬಿಜೆಪಿ ನಾಯಕಿ ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಕಾಳಿ ದೇವಾಲಯದ ಆವರಣದಲ್ಲಿ ಕಬಡ್ಡಿ ಆಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.
ಭೋಪಾಲ್ ಸಂಸದೆ ಅನೇಕ ವರ್ಷಗಳನ್ನು ಗಾಲಿ ಕುರ್ಚಿಯ ಮೇಲೆ ಕಳೆದಿದ್ದರು. ಮಲೇಂಗಾವ್ ಸ್ಫೋಟ ಪ್ರಕರಣದಲ್ಲಿ ಠಾಕೂರ್ ಜೈಲಿನಲ್ಲಿರಬೇಕಾದ ಪರಿಸ್ಥಿತಿ ಬಂದಿತ್ತು. ನಂತರ ಬದಲಾದ ವ್ಯವಸ್ಥೆಯಲ್ಲಿ ರಾಜಕಾರಣ ಪ್ರವೇಶ ಮಾಡಿ ಸಂಸತ್ ಸದಸ್ಯೆಯಾದರು.
ನವರಾತ್ರಿ ಸಂದರ್ಭ ಠಾಕೂರ್ ಗರ್ಭಾ ನೃತ್ಯ ಮಾಡಿದ್ದು ವೈರಲ್ ಆಗಿತ್ತು. ಆದರೆ ಠಾಕೂರ್ ಬೆನ್ನು ಮೂಳೆ ಸಮಸ್ಯೆ ಅನುಭವಿಸುತ್ತಿದ್ದು ಯಾವಾಗ ಬೇಕಾದರೂ ತೊಂದರೆ ಕೊಡಬಹುದು ಎಂದು ಸಂಸದೆಯ ಸಹೋದರಿ ಹೇಳಿದ್ದಾರೆ.
'ಕಾಂಗ್ರೆಸ್ ಕಿರುಕುಳದಿಂದ ನನಗೆ ಈಗ ಕಣ್ಣುಗಳೆ ಕಾಣುತ್ತಿಲ್ಲ'
ಆದರೆ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮಧ್ಯಪ್ರದೇಶ ಕಾಂಗ್ರೆಸ್ ವಕ್ತಾರ ನರೇಂದ್ರ ಸಿಂಗ್ ಟಾಂಗ್ ನೀಡುವ ಕೆಲಸ ಮಾಡಿದ್ದಾರೆ. ನಿಮ್ಮನ್ನು ಆರೋಗ್ಯವಂತ ಸ್ಥಿತಿಯಲ್ಲಿ ನೋಡಲು ಬಹಳ ಸಂತಸವಾಗುತ್ತಿದೆ. ಜನ ಸಮಸ್ಯೆಯಲ್ಲಿದ್ದಾಗ, ಅವರಿಗೆ ನಿಮ್ಮ ಅಗತ್ಯ ಇದ್ದಾಗ ನಿಮಗೆ ಮಾತ್ರ ಅನಾರೋಗ್ಯ ಕಾಡುತ್ತದೆ. ದೇವರು ನಿಮ್ಮನ್ನು ಸದಾ ಆರೋಗ್ಯದಿಂದ ಇರುವಂತೆ ನೋಡಿಕೊಳ್ಳಲಿ ಎಂದಿದ್ದಾರೆ.
51 ವರ್ಷದ ಠಾಕೂರ್ ಅವರನ್ನು ಮಲೇಗಾಂವ್ ಸ್ಫಟ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಸುಮಾರು ಒಂಭತ್ತು ವರ್ಷ ಜೈಲಿನಲ್ಲಿದ್ದು 2017 ರಲ್ಲಿ ಬಿಡುಗಡೆಯಾಗಿದ್ದರು. ಮಲೇಗಾಂವ್ ಸ್ಫೋಟ ಸೆ. 29, 2008ರಲ್ಲಿ ನಡೆದಾಗ ಆರು ಜನ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದರು. ರಾಷ್ಟ್ರೀಯ ತನಿಖಾ ದಳದ ವ್ಯಾಪ್ತಿಗೆ ತನಿಖೆ ಬಂದಿತ್ತು. ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದುಕೊಂಡಿರುವ ಸಿಂಗ್ ಈಗ ಆರೋಗ್ಯವಾಗಿದ್ದಾರೆಯೇ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.