ಬಿಹಾರದಲ್ಲಿ ಬುರ್ಖಾ, ಹಿಜಾಬ್‌ ಧರಿಸಿ ಬಂದವರಿಗೆ ಚಿನ್ನದಂಗಡಿಯಲ್ಲಿ ವ್ಯಾಪಾರದ ಅವಕಾಶ ನಿರಾಕರಿಸಿದ ಬೆನ್ನಲ್ಲೇ, ಉತ್ತರಪ್ರದೇಶದ ದೇಗುಲ ನಗರಿ ವಾರಾಣಸಿ ಮತ್ತು ಝಾನ್ಸಿಯ ವರ್ತಕರೂ ಇದೇ ನಿರ್ಧಾರ ಕೈಗೊಂಡಿದ್ದಾರೆ.

ವಾರಾಣಸಿ: ಬಿಹಾರದಲ್ಲಿ ಬುರ್ಖಾ, ಹಿಜಾಬ್‌ ಧರಿಸಿ ಬಂದವರಿಗೆ ಚಿನ್ನದಂಗಡಿಯಲ್ಲಿ ವ್ಯಾಪಾರದ ಅವಕಾಶ ನಿರಾಕರಿಸಿದ ಬೆನ್ನಲ್ಲೇ, ಉತ್ತರಪ್ರದೇಶದ ದೇಗುಲ ನಗರಿ ವಾರಾಣಸಿ ಮತ್ತು ಝಾನ್ಸಿಯ ವರ್ತಕರೂ ಇದೇ ನಿರ್ಧಾರ ಕೈಗೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಬುರ್ಖಾ, ಮಾಸ್ಕ್‌, ಹೆಲ್ಮೆಟ್‌ ಧರಿಸಿ ಬರುವವರಿಂದ ನಡೆಯುತ್ತಿರುವ ಅಪರಾಧ

ಇತ್ತೀಚಿನ ದಿನಗಳಲ್ಲಿ ಬುರ್ಖಾ, ಮಾಸ್ಕ್‌, ಹೆಲ್ಮೆಟ್‌ ಧರಿಸಿ ಅಂಗಡಿಗೆ ಬರುವವರಿಂದ ನಡೆಯುತ್ತಿರುವ ಅಪರಾಧ ಕೃತ್ಯಗಳು ಹೆಚ್ಚಿವೆ. ಇವುಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜೊತೆಗೆ ಸಿಬ್ಬಂದಿ ಮತ್ತು ಮಾಲೀಕರ ಹಿತರಕ್ಷಣೆಯಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಮಾಸ್ಕ್‌, ಬುರ್ಖಾ, ಹೆಲ್ಮೆಟ್‌ ಧರಿಸಿದರೆ ಚಿನ್ನ ಮಾರಾಟ ಮಾಡದಿರಲು ನಿರ್ಧರಿಸಲಾಗಿದೆ ಎಂದು ವ್ಯಾಪಾರಿಗಳ ಒಕ್ಕೂಟ ತಿಳಿಸಿದೆ.

ಆಭರಣ ಮಳಿಗೆಗಳ ಹೊರಗೆ ಬೋರ್ಡ್

ಜೊತೆಗೆ ಇಂಥ ನಿರ್ಧಾರ ಏಕೆ ಎಂಬ ಕಾರಣವನ್ನು ಪ್ರಸ್ತಾಪಿಸಿ ಈ ಕುರಿತು ಆಭರಣ ಮಳಿಗೆಗಳ ಹೊರಗೆ ಬೋರ್ಡ್ ಸಹ ಅಳವಡಿಸಲಾಗಿದೆ.

ಬುರ್ಖಾ, ಹೆಲ್ಮೆಟ್‌, ಮಾಸ್ಕ್‌ ಧರಿಸಿ ಬರುವ ವ್ಯಕ್ತಿಗಳಿಂದ ಕಳ್ಳತನ, ದರೋಡೆ, ವಂಚನೆ ಪ್ರಕರಣ ಹೆಚ್ಚಾದ ಕಾರಣಕ್ಕೆ ವಿವಿಧ ರಾಜ್ಯಗಳಲ್ಲಿ ವರ್ತಕರು ಇಂಥ ನಿರ್ಧಾರ ಕೈಗೊಂಡಿದ್ದಾರೆ.

- ಇತ್ತೀಚೆಗೆ ಬುರ್ಖಾ, ಹಿಜಾಬ್‌, ಮುಖಗವಸು ಧರಿಸಿ ಬಂದವರಿಂದ ಚಿನ್ನ ಕಳ್ಳತನ ಹೆಚ್ಚಳ

- ಹೀಗಾಗಿ ಬಿಹಾರದಲ್ಲಿ ಈ ರೀತಿ ಉಡುಪು ಧರಿಸಿದವರಿಗೆ ಚಿನ್ನ ಮಾರಾಟ ನಿರ್ಬಂಧವಾಗಿತ್ತು

- ಇದೀಗ ವಾರಾಣಸಿ, ಝಾನ್ಸೀಲೂ ಚಿನ್ನ ವರ್ತಕರಿಂದ ಬಿಹಾರ ರೀತಿಯ ಮಹತ್ವದ ನಿರ್ಧಾರ

- ಬುರ್ಖಾ, ಮಾಸ್ಕ್‌, ಹೆಲ್ಮೆಟ್‌ ಧರಿಸಿ ಬಂದರೆ ಚಿನ್ನ

- ಬೆಳ್ಳಿ ಮಾರಾಟ ಮಾರದಿರಲು ನಿರ್ಣಯ

- ಅಂಗಡಿಯ ಹೊರಗೆ ಬೋರ್ಡ್‌ ಅಳವಡಿಕೆ. ಇಂಥವರ ಬಗ್ಗೆ ಎಚ್ಚರದಿಂದ ಇರಲು ಸಂದೇಶ