ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಮುಸ್ಲಿಂ ಯುವತಿಯ ಬುರ್ಖಾ ಎಳೆದ ವಿವಾದದ ಬಗ್ಗೆ ಜಮ್ಮು ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ತೀವ್ರವಾಗಿ ಖಂಡಿಸಿದ್ದಾರೆ. ಇದೇ ವೇಳೆ, ತಮ್ಮ ರಾಜಕೀಯ ಪ್ರತಿಸ್ಪರ್ಧಿ ಮೆಹಬೂಬಾ ಮುಫ್ತಿ ಕೂಡ 2004ರಲ್ಲಿ ಇದೇ ರೀತಿಯ ಕೃತ್ಯ ಎಸಗಿದ್ದರು ಎಂದು ಆರೋಪಿಸಿದ್ದಾರೆ.
ಇತ್ತೀಚೆಗೆ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಮುಸ್ಲಿಂ ಯುವತಿಯೊಬ್ಬರ ಬುರ್ಖಾ ಎಳೆದ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದು ಗೊತ್ತೆ ಇದೆ. ನಿತೀಶ್ ಕುಮಾರ್ ವರ್ತನೆ ಖಂಡಿಸಿ ಹಲವು ಕಡೆಗಳಲ್ಲಿ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿದ್ದಾರೆ. ಹೀಗಿರುವಾಗ ಜಮ್ಮು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ ಕೂಡ ನಿತೀಶ್‌ಕುಮಾರ್ ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಟೀಕೆಯ ಭರದಲ್ಲಿ ಅವರು ತಮ್ಮ ವಿರೋಧಿ ಬಣದ ನಾಯಕಿ, ರಾಜಕೀಯ ಪ್ರತಿಸ್ಪರ್ಧಿ ಮೆಹಬೂಬಾ ಮುಫ್ತಿಗೆ ಟಾಂಗ್ ನೀಡಿದ್ದು, ಒಮರ್ ಅಬ್ದುಲ್ಲಾ ಹೇಳಿಕೆ ಈಗ ಹಳೆಯ ಘಟನೆಯೊಂದನ್ನು ನೆನಪು ಮಾಡಿದೆ. ಹಾಗಿದ್ದರೆ ಒಮರ್ ಅಬ್ದುಲ್ಲಾ ಹೇಳಿದ್ದೇನು?
ಮುಸ್ಲಿಂ ಮಹಿಳೆಯ ಹಿಜಾಬ್ ಎಳೆದ ವಿವಾದದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಟೀಕಿಸಿದ ಮೊದಲಿಗರಲ್ಲಿ ಒಬ್ಬರಾದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ತಮ್ಮ ರಾಜಕೀಯ ಪ್ರತಿಸ್ಪರ್ಧಿ ಮೆಹಬೂಬಾ ಮುಫ್ತಿ ಅವರನ್ನು ಇದೇ ವಿಚಾರದಲ್ಲಿ ಟೀಕಿಸಿದ್ದಾರೆ. ಮಹಿಳಾ ವೈದ್ಯೆಯ ಮುಸುಕನ್ನು ತೆಗೆಯುವ ಮೂಲಕ ನಿತೀಶ್ ಕುಮಾರ್ ಕೋಮುವಾದಿ ಪಕ್ಷದ ಮಿತ್ರನಾಗಿ ತನ್ನ ನಿಜವಾದ ಬಣ್ಣ ತೋರಿಸುತ್ತಿದ್ದಾರೆ ಎಂದು ಟೀಕಿಸಿದ ಒಮರ್ ಅಬ್ದುಲ್ಲಾ, ಇದನ್ನು ಮೊದಲು ಆರಂಭಿಸಿದ್ದು ಮೆಹಬೂಬಾ ಮುಫ್ತಿ ಎಂದು ಆರೋಪಿಸಿದ್ದಾರೆ.
ನಾವು ಈ ಹಿಂದೆಯೂ ಇಂತಹ ಘಟನೆಗಳನ್ನು ಇಲ್ಲಿ ನೋಡಿದ್ದೇವೆ. ಇಲ್ಲಿ ಚುನಾವಣೆಯ ಸಮಯದಲ್ಲಿ, ಮೆಹಬೂಬಾ ಮುಫ್ತಿ ಅವರು ಮತಗಟ್ಟೆಯೊಳಗೆ ಕಾನೂನುಬದ್ಧ ಮತದಾರರೊಬ್ಬರ ಬುರ್ಖಾವನ್ನು ತೆಗೆದು ಹಾಕಿದರು ಎಂಬುದನ್ನು ಜನರು ಮರೆತಿರಬಹುದು. ಈಗ ಬಿಹಾರದಲ್ಲಿ ನಡೆದಿರುವುದು ಇದೇ ಮನಸ್ಥಿತಿಯ ಮುಂದುವರಿಕೆಯಾಗಿದೆ. ಅದು ದುರದೃಷ್ಟಕರ ಮತ್ತು ಅಷ್ಟೇ ನಾಚಿಕೆಗೇಡಿನ ಸಂಗತಿ ಈ ಘಟನೆಯೂ ಹಾಗೆಯೇ ಎಂದು ಒಮರ್ ಅಬ್ದುಲ್ಲಾ ಅವರು ಶ್ರೀನಗರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
2004ರ ಏಪ್ರಿಲ್‌ನಲ್ಲಿ ಜಮ್ಮುಕಾಶ್ಮೀರದಲ್ಲಿ ನಡೆದ ಚುನಾವಣೆಯ ಸಮಯದಲ್ಲಿ ಮೆಹಬೂಬಾ ಮುಫ್ತಿ ಅವರು ಮಹಿಳೆಯೊಬ್ಬರ ಬುರ್ಖಾವನ್ನು ಎತ್ತಿದ್ದರು. ಇದು ತೀವ್ರ ಟೀಕೆಗೆ ಗುರಿಯಾಗಿತ್ತು. ಇದಕ್ಕೆ ಆಗ ಪ್ರತಿಕ್ರಿಯಿಸಿದ ಮೆಹಬೂಬಾ ಮುಫ್ತಿ, ನಕಲಿ ಮತಗಳನ್ನು ಚಲಾಯಿಸಲು ಮುಸುಕನ್ನು ಹೆಚ್ಚಾಗಿ ಬಳಸಲಾಗುತ್ತಿರುವುದರಿಂದ, ಮತದಾರರ ಗುರುತು ಸ್ಥಾಪಿಸಲು ತಾನು ಪ್ರಯತ್ನಿಸಿದ್ದೆ ಎಂದು ಅವರು ಹೇಳಿದ್ದರು.
ಈ ವಾರದ ಆರಂಭದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನೇಮಕಾತಿ ಪತ್ರ ಸ್ವೀಕರಿಸಲು ಬಂದಿದ್ದ ಮಹಿಳಾ ವೈದ್ಯರೊಬ್ಬರ ಮುಸುಕನ್ನು ನಿತೀಶ್ ಕುಮಾರ್ ಎಳೆದ ನಂತರ ಭಾರಿ ವಿವಾದ ಸೃಷ್ಟಿಯಾಗಿತ್ತು. ಬಿಹಾರ ಮುಖ್ಯಮಂತ್ರಿಗಳು ಆದೇಶವನ್ನು ಹಸ್ತಾಂತರಿಸಲು ಬಯಸದೇ ಇದ್ದಿದ್ದರೆ ಅವರು ಅದನ್ನು ಪಕ್ಕಕ್ಕೆ ಇಡಬಹುದಿತ್ತು. ಆದರೆ ಅವರು ಹೀಗೆ ಮಾಡಿದ್ದು ತಪ್ಪು ಎಂದು ಒಮರ್ ಅಬ್ದುಲ್ಲಾ ಆರೋಪಿಸಿದ್ದರು.
ಇದನ್ನೂ ಓದಿ: ಕೌಟುಂಬಿಕ ವಿಚಾರಕ್ಕೆ ವ್ಯಕ್ತಿಯ ಗುಂಡಿಕ್ಕಿ ಹತ್ಯೆ: ದೇಹದಲ್ಲಿತ್ತು 69 ಬುಲೆಟ್
ಆದರೆ ಒಮರ್ ಅಬ್ದುಲ್ಲಾ ಅವರು ಈ ವಿಚಾರಕ್ಕೆ ಮೆಹಬೂಬಾ ಮುಫ್ತಿ ಅವರನ್ನು ಟೀಕಿಸಿದ್ದಕ್ಕೆ ಮೆಹಬೂಬಾ ಅವರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ವ್ಯಂಗ್ಯವಾಡಿದೆ. ಅಬ್ದುಲ್ಲಾ ಅವರು ಮೋದಿ ಸಾಹೇಬ್ ಅವರನ್ನು ಉದ್ದೇಶಿಸಿ ಮಾತನಾಡಬೇಕಿತ್ತು, ಏಕೆಂದರೆ ಅವರು ಮಿತ್ರ ಪಾಲುದಾರರಾಗಿದ್ದಾರೆ ಮತ್ತು ಈ ಸರ್ಕಾರದಿಂದ ಬೆಂಬಲವನ್ನು ಹಿಂತೆಗೆದುಕೊಳ್ಳುವಂತೆ ಕೇಳಬೇಕಿತ್ತು. ಬದಲಾಗಿ, ಆದರೆ ಅವರು ಮೆಹಬೂಬಾ ಮುಫ್ತಿ ಮತ್ತು ಇತರರನ್ನು ಟೀಕಿಸುತ್ತಿದ್ದಾರೆ. ಮೆಹಬೂಬಾ ಮುಫ್ತಿ ಯಾರೊಬ್ಬ ಮತದಾರರ ಗುರುತಿನ ಚೀಟಿಯನ್ನು ಪರಿಶೀಲಿಸಲು ಪ್ರಯತ್ನಿಸಿದರೆ, ಅದನ್ನು ನಿತೀಶ್ ಕುಮಾರ್ ಅವರ ಕಾರ್ಯಗಳೊಂದಿಗೆ ಹೋಲಿಸುವುದು ಅವರ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ ಎಂದು ಪಿಡಿಪಿ ವಕ್ತಾರ ಮೋಹಿತ್ ಭನ್ ಹೇಳಿದ್ದಾರೆ.
ಇದನ್ನೂ ಓದಿ: 2ನೇ ಪತ್ನಿಯ ಸಾಕುವ ತಾಕತ್ತಿರುವವ ಮೊದಲ ಪತ್ನಿಗೆ ಜೀವನಾಂಶ ನಿರಾಕರಿಸುವಂತಿಲ್ಲ:ಹೈಕೋರ್ಟ್ ತೀರ್ಪು
ಹಿಜಾಬ್ ಘಟನೆಗೆ ಸಂಬಂಧಿಸಿದಂತೆ ನಿತೀಶ್ ಕುಮಾರ್ ಅವರನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಕೂಡ ತೀವ್ರವಾಗಿ ಟೀಕಿಸಿದ್ದಾರೆ. ನಿತೀಶ್ ಜಿ ಅವರನ್ನು ವೈಯಕ್ತಿಕವಾಗಿ ತಿಳಿದಿದ್ದ ಮತ್ತು ಮೆಚ್ಚಿಕೊಂಡಿದ್ದ ನನಗೆ, ಅವರು ಯುವ ಮುಸ್ಲಿಂ ಮಹಿಳೆಯ ನಖಾಬ್ ಅನ್ನು ಕೆಡವಿದ್ದನ್ನು ನೋಡಿ ಆಘಾತವಾಯಿತು. ಇದಕ್ಕೆ ವೃದ್ಧಾಪ್ಯವೇ ಅಥವಾ ಮುಸ್ಲಿಮರನ್ನು ಸಾರ್ವಜನಿಕವಾಗಿ ಅವಮಾನಿಸುವ ವಿಚಾರ ಎಂದು ಯಾರಾದರೂ ಹೇಳುತ್ತಾರೆಯೇ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.


