ಕೊನೆಯೂ ನಿರ್ಭಯಾಗೆ ಸಿಕ್ತು ನ್ಯಾಯ: ಕಾಮುಕರಿಗೆ ಗಲ್ಲು
ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ| ನಾಲ್ಕು ಕಾಮುಕರಿಗೆ ಗಲ್ಲು| ನಿರ್ಭಯಾಗೆ ಸಿಕ್ತು ನ್ಯಾಯ| ತಿಹಾರ್ ಜೈಲಿನಲ್ಲಿ ಬೆಳಿಗ್ಗೆ 5.30ಕ್ಕೆ ಗಲ್ಲು| ದೇಶಾದ್ಯಂತ ಸಂಭ್ರಮಾಚರಣೆ|
ನವದೆಹಲಿ[ಮಾ.20]: ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ವಿಕೃತಿ ಮೆರದಿದ್ದ ನಾಲ್ಕು ಕಾಮುಕರಿಗೆ ಇಂದು[ಶುಕ್ರವಾರ] ಬೆಳಗ್ಗೆ 5.30ಕ್ಕೆ ಗಲ್ಲಿಗೇರಿಸಲಾಗಿದೆ. ಈ ಮೂಲಕ ಬರೋಬ್ಬರಿ ಏಳು ವರ್ಷಗಳ ಬಳಿಕ ನಿರ್ಭಯಾಗೆ ನ್ಯಾಯ ಸಿಕ್ಕಿದೆ.
ಗಲ್ಲು ಜಾರಿಗೆ ತಡೆ ಕೋರಿದ ನಿರ್ಭಯಾ ಹಂತಕರು, ಪೊಲೀಸರಿಗೆ ಕೋರ್ಟ್ ನೋಟಿಸ್
ತಿಹಾರ್ ಜೈಲಿನಲ್ಲಿ ಇಂದು ಬೆಳಿಗ್ಗೆ ಸರಿಯಾಗಿ 5.30ಕ್ಕೆ ನಾಲ್ವರು ರಕ್ಕಸರನ್ನು ಪವನ್ ಜಲ್ಲಾದ್ ಗಲ್ಲಿಗೇರಿಸಿದ್ದಾರೆ. ಗಲ್ಲಿಗೇರಿಸದ ಬಳಿಕ ಅರ್ಧ ಗಂಟೆ ಕುಣಿಕೆಯಲ್ಲೇ ಕಾಮುಕರ ದೇಹ ನೇತಾಡುತ್ತಿದ್ದವು. ಬಳಿಕ ಕಾಮುಕರ ಸಾವನ್ನ ವೈದ್ಯಾಧಿಕಾರಿಗಳು ದೃಢಪಡಿಸಿದ್ದಾರೆ.
2012 ರ ಡಿಸೆಂಬರ್ ನಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಹಿಳೆಯ ಮೇಲೆ ಸಾಮೂಹಿಕ ರೇಪ್ ಮಾಡಲಾಗಿತ್ತು. ಮೇ 5, 2014ರಂದು ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡಿತ್ತು. ಸುಮಾರು ವರ್ಷಗಳವರೆಗೆ ನ್ಯಾಯಾಲಯದ ವಿಚಾರಣೆಗೆ ಒಳಪಟ್ಟಿದ್ದ ಈ ಪ್ರಕರಣದ ತೀರ್ಪು ನೀಡಿದ ಸುಪ್ರೀಂಕೋರ್ಟ್ ಮರಣದಂಡನೆ ಕಾಯಂಗೊಳಿಸಿತ್ತು. ಸೆಷನ್ಸ್ ಕೋರ್ಟ್ ಡೆತ್ ವಾರೆಂಟ್ ಜಾರಿಗೊಳಿಸಿತ್ತು.
ನಿರ್ಭಯಾ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್: ಗಂಡನ ರಕ್ಷಿಸಲು ಹೆಂಡತಿ ಆಟ!
ಕಾಮುಕರನ್ನ ಗಲ್ಲಿಗೇರಿಸಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ನಿರ್ಭಯಾ ತಾಯಿ, ಮಗಳನ್ನು ಉಳಿಸಿಕೊಳ್ಳಲಿಲ್ಲ, ಆದರೆ ನ್ಯಾಯ ಸಿಕ್ಕಿದೆ. ಮಗಳಿಗಾಗಿ ಹೋರಾಡಿದ ತೃಪ್ತಿ ನನಗಿದೆ ಎಂದು ಹೇಳಿದ್ದಾರೆ.
ನಿರ್ಭಯಾ ಪ್ರಕರಣ ನಡೆದು ಬಂದ ಹಾದಿ
ಡಿ. 16, 2012 - ಸ್ನೇಹಿತನೊಂದಿಗೆ ಸಿನಿಮಾ ನೋಡಲು ತೆರೆಳಿದ್ದ ನಿರ್ಭಯಾ
ಡಿ. 16, 2012 - 17ರ ಬಾಲಕ ಸೇರಿ 6 ಜನರಿಂದ ಬಸ್ನಲ್ಲೇ ನಿರ್ಭಯಾ ಅತ್ಯಾಚಾರ
ಡಿ. 17, 2012 - ರಾಷ್ಟ್ರಾದ್ಯಂತ ಕೋಲಾಹಲ ಸೃಷ್ಟಿ.. ಎಚ್ಚೆತ್ತ ದೆಹಲಿ ಪೊಲೀಸರು
ಡಿ. 17, 2012 - 17ರ ಬಾಲಕ ಸೇರಿ ಆರು ಆರೋಪಿಗಳ ಮೇಲೆ ಗುಮಾನಿ
ಡಿ. 18, 2012 - 17 ವರ್ಷದ ಹುಡುಗ ಸೇರಿದಂತೆ ಆರು ಆರೋಪಿಗಳ ಬಂಧನ
ಡಿ. 18, 2012 - ಅಕ್ಷಯ್, ರಾಮ್ ಸಿಂಗ್, ಮುಖೇಶ್, ವಿನಯ್, ಪವನ್ ಅರೆಸ್ಟ್
ಡಿ. 29, 2012 - ಸಿಂಗಾಪುರಕ್ಕೆ ರವಾನಿಸಲಾಗಿದ್ದ ನಿರ್ಭಯಾ ಆಸ್ಪತ್ರೆಯಲ್ಲಿ ಸಾವು
ಮಾ. 11, 2013 - ಪ್ರಮುಖ ಆರೋಪಿ ರಾಮ್ ಸಿಂಗ್, ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ
ಆ. 31, 2013 - ಪ್ರಕರಣದ ಬಾಲಾಪರಾಧಿಗೆ 3 ವರ್ಷ ಶಿಕ್ಷೆ, ಬಾಲಮಂದಿರಕ್ಕೆ ಶಿಫ್ಟ್
ಸೆ. 13, 2013 - ದೆಹಲಿಯ ಸಾಕೇತ್ ನ್ಯಾಯಾಲಯ ನಾಲ್ವರಿಗೆ ಮರಣ ದಂಡನೆ ಶಿಕ್ಷೆ
ಮಾ. 15, 2014 - ಕೆಳ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಿದ ಸುಪ್ರೀಂ
ಮಾ. 15, 2014 - ಪ್ರಕರಣದ ಸಾಕ್ಷಿಗಳ ಮರು ವಿಚಾರಣೆಗೆ ಸುಪ್ರೀಂಕೋರ್ಟ್ ಇಂಗಿತ
ಡಿ. 18, 2015 - ಬಾಲಾಪರಾಧಿ ಬಿಡುಗಡೆ ಮಾಡದಂತೆ ಸಲ್ಲಿಸಲಾಗಿದ್ದ ಅರ್ಜಿ ವಜಾ
ಡಿ. 18, 2015 - ದೆಹಲಿ ಹೈಕೋರ್ಟ್ ತೀರ್ಪಿನ ಹಿನ್ನಲೆ, ಬಾಲಾಪರಾಧಿ ಬಿಡುಗಡೆ
ಏ. 3, 2016 - ಸುಪ್ರೀಂ ಕೋರ್ಟ್ನಲ್ಲಿ ನಿರ್ಭಯಾ ಪ್ರಕರಣದ ವಿಚಾರಣೆ ಆರಂಭ
ಏ. 3, 2016 - ನ್ಯಾ.ದೀಪಕ್ ಮಿಶ್ರಾ, ವಿ.ಗೋಪಾಲ ಗೌಡ, ಜೋಸೆಫ್ ಪೀಠ ವಿಚಾರಣೆ
ಮಾ.27, 2017 - ವಿಚಾರಣೆ ಮುಕ್ತಾಯ, ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ಏ. 5, 2017 - ಅಪರಾಧಿಗಳಿಗೆ ಮರಣ ದಂಡನೆ ಕಾಯಂಗೊಳಿಸಿದ ಸುಪ್ರೀಂ ಕೋರ್ಟ್
ಏ. 5, 2017 - ಮೂವರು ಅಪರಾಧಿಗಳಿಗೆ ಗಲ್ಲು ಖಾಯಂ, ಸುಪ್ರೀಂ ಆದೇಶ
ಜು.09, 2018: ಮೂವರು ಅಪರಾಧಿಗಳ ಅರ್ಜಿ ವಜಾ.. ನಾಲ್ವರಿಗೂ ಗಲ್ಲು ಶಿಕ್ಷೆ ಕಾಯಂ
2020 : ಗಲ್ಲು ಶಿಕ್ಷೆಯಿಂದ ಮೂರು ಬಾರಿ ಪಾರಾದ ನಾಲ್ವರು ಅಪರಾಧಿಗಳು
ಮಾರ್ಚ್ 20, 2020 : ಅಪರಾಧಿಗಳಿಗೆ ಗಲ್ಲು ಶಿಕ್ಷೆ ಕಾಯಂ ಮಾಡಿದ ದೆಹಲಿ ಹೈಕೋರ್ಟ್
ಅಂತಾರಾಷ್ಟ್ರೀಯ ಕೋರ್ಟ್‌ಗೆ ನಿರ್ಭಯಾ ಹಂತಕರು!
ಡಿಸೆಂಬರ್ 16, 2012 ನಡೆದದ್ದೇನು?
ರಾತ್ರಿ 9.00 - ಸ್ನೇಹಿತನೊಂದಿಗೆ ಬಸ್ ಸ್ಟಾಪ್ ನಲ್ಲಿ ನಿಂತಿದ್ದ ನಿರ್ಭಯಾ
ರಾತ್ರಿ 9.30 - ಇಬ್ಬರು 6 ಜನರುಳ್ಳ ಖಾಸಗಿ ಬಸ್ ಹತ್ತುತ್ತಾರೆ
ರಾತ್ರಿ 9.40 - ನಿರ್ಭಯಾಳನ್ನು ಪ್ರಶ್ನೆ ಮಾಡಿದ ಸಹ ಪ್ರಯಾಣಿಕ
ರಾತ್ರಿ 9.45 - ಮಾತಿನ ಮಧ್ಯೆ ನಿರ್ಭಯಾಳ ಜೊತೆ ಅಸಭ್ಯ ವರ್ತನೆ
ರಾತ್ರಿ 9.50 - ನಿರ್ಭಯಾಳನ್ನ ಪಾರು ಮಾಡಲು ಮುಂದಾದ ಸ್ನೇಹಿತ
ರಾತ್ರಿ 9.55 - ಕಬ್ಬಿಣದ ರಾಡಿನಿಂದ ನಿರ್ಭಯ ಸ್ನೇಹಿತನಿಗೆ ಥಳಿತ
ರಾತ್ರಿ 10.00- ನಿರ್ಭಯಾಳ ಮೇಲೆ ಐವರಿಂದ ಅತ್ಯಾಚಾರಕ್ಕೆ ಯತ್ನ
ಅತ್ಯಾಚಾರಕ್ಕೆ ವಿರೋಧಿಸಿದ್ದಕ್ಕೆ ನಿರ್ಭಯಾಳಿಗೆ ಸರಳುಗಳಿಂದ ಥಳಿತ
1 ಗಂಟೆ ಕಾಲ ಚಲಿಸುವ ಬಸ್ನಲ್ಲಿ ಸಾಮೂಹಿಕ ಅತ್ಯಾಚಾರ
ಬಸ್ ಚಾಲಕ ಸೇರಿ ಆರು ಮಂದಿಯಿಂದ ಸಾಮೂಹಿಕ ಅತ್ಯಾಚಾರ
ನಿರ್ಭಯಾಳ ಮರ್ಮಾಂಗಕ್ಕೆ ಕಬ್ಬಿಣದ ಸರಳುಗಳಿಂದ ಚುಚ್ಚಿ ಹಲ್ಲೆ
ರಾತ್ರಿ 11.05 - ಇಬ್ಬರನ್ನು ವಿವಸ್ತ್ರಗೊಳಿಸಿ ಬಯಲು ಪ್ರದೇಶಕ್ಕೆ ಎಸೆತ
ಡಿಸೆಂಬರ್ 17, 2012, 24 ಗಂಟೆಗಳಲ್ಲೇ ಆರೋಪಿಗಳು ಅರೆಸ್ಟ್..!
- ರಾತ್ರಿ 1 ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು
- ನಿರ್ಭಯಾ & ಸ್ನೇಹಿತ ದೆಹಲಿ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲು
- ಸಿಸಿಟಿವಿ ದಾಖಲೆ ಆಧಾರಿಸಿ 24 ಗಂಟೆಗಳೊಳಗೆ ದುಷ್ಕರ್ಮಿಗಳ ಸೆರೆ
- ರಾಜಸ್ಥಾನದಲ್ಲಿ ಡ್ರೈವರ್ ರಾಮ್ಸಿಂಗ್ ಮತ್ತು ಮುಕೇಶ್ ಬಂಧನ
- ವಿನಯ್ ಶರ್ಮಾ, ಪವನ್ ಗುಪ್ತಾ, ಅಪ್ರಾಪ್ತ ರಾಜು ದೆಹಲಿಯಲ್ಲಿ ಸೆರೆ
- ಔರಂಗಾಬಾದ್ನಲ್ಲಿ ಆರನೇ ದುಷ್ಕರ್ಮಿ ಅಕ್ಷಯ್ ಠಾಕೂರ್ ಬಂಧನ
14 ದಿನ ನಿರ್ಭಯಾ ಸಾವು ಬದುಕಿನ ಹೋರಾಟ
ಡಿ.16 2012 : ಮಧ್ಯರಾತ್ರಿ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲು
ಡಿ.16 2012 : ತೀವ್ರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಿರ್ಭಯಾ
ಡಿ.16 2012 : ಮರ್ಮಾಂಗದ ಮೂಲಕ ಹೊಟ್ಟೆಗೆ ಚುಚ್ಚಿತ್ತು ಕಬ್ಬಿಣದ ಸರಳು
ಡಿ.17-2012 - ಉದರ ಸಂಬಂಧಿ ಚಿಕಿತ್ಸೆ ನಂತರ ವೆಂಟಿಲೇಟರ್ಗೆ ಶಿಫ್ಟ್
ಡಿ.19-2012 - ಕರುಳಿನಲ್ಲಿ ಗ್ಯಾಂಗ್ರಿನ್ ತೊಂದರೆಯಿಂದ ಚಿಕಿತ್ಸೆ ವಿಫಲ
ಡಿ.19-2012 - ನಿರ್ಭಯಾಳ ಶೇ.95ರಷ್ಟು ಕರುಳಿನ ಭಾಗ ಊನ
ಡಿ. 25-2012 - ತೀವ್ರ ರಕ್ತಸ್ರಾವದಿಂದ ನಿರ್ಭಯಾ ಸ್ಥಿತಿ ಗಂಭೀರ
ಡಿ. 26-2012 - ಸಿಂಗಪೂರ್ನ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ಶಿಫ್ಟ್
ಡಿ. 29-2012 - ಮುಂಜಾನೆ 4.45ರ ವೇಳೆಗೆ ನಿರ್ಭಯಾ ಕೊನೆಯುಸಿರು
ಕೋರ್ಟ್ ನಲ್ಲಿ ಆರೋಪಿಗಳು
ಆರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ ಪೊಲೀಸರು
ಡಿ. 21-2012 ಆದಷ್ಟು ಬೇಗ ಚಾರ್ಜ್ ಶೀಟ್ ಸಲ್ಲಿಸುವುದಾಗಿ ಸರ್ಕಾರದ ಭರವಸೆ
ಡಿ. 24-2012 ವಾರದೊಳಗೆ ಚಾರ್ಜ್ ಶೀಟ್ ಸಲ್ಲಿಸುತ್ತೇವೆಂದ ಪೊಲೀಸ್
ಡಿ. 27-2012 ದೆಹಲಿ ಹೈ ಕೋರ್ಟ್ ಕಮಿಟಿ ಜೊತೆ ಕೇಂದ್ರದ ಮಾತುಕತೆ
ಜನವರಿ.2.2013 - ನಿರ್ಭಯಾ ಕೇಸ್ ಕೈಗೆತ್ತಿಕೊಂಡ ದೆಹಲಿ ಸಾಕೇತ್ ಕೋರ್ಟ್
ಅಪ್ರಾಪ್ತ ರಾಜುವಿಗೆ ಬಾಲಾಪರಾಧಿ ಕಾಯ್ದೆ ಅಡಿ ವಿಚಾರಣೆ
ತಿಹಾರ್ ಜೈಲಿನಲ್ಲಿ ಅತ್ಯಾಚಾರ ಆರೋಪಿಗಳ ನ್ಯಾಯಾಂಗ ಬಂಧನ
ಮಾರ್ಚ್ 11, 2013 - ಜೈಲಿನಲ್ಲೇ ರಾಮ್ ಸಿಂಗ್ ಆತ್ಮಹತ್ಯೆ
ಆಗಸ್ಟ್ 31-2013 - ಬಾಲಾಪರಾಧಿ ರಾಜುಗೆ 3 ವರ್ಷ ಶಿಕ್ಷೆ ಪ್ರಕಟ
ಆರೋಪಿಗಳ ಅಪರಾಧ ಸಾಬೀತು ಹಿನ್ನೆಲೆ ಶಿಕ್ಷೆ ಪ್ರಕಟ
ನಾಲ್ವರು ಆಪರಾಧಿಗಳಿಗೆ ಮರಣ ದಂಡನೆ ವಿಧಿಸಿದ್ದ ಸಾಕೇತ್ ಕೋರ್ಟ್
ಮರಣದಂಡನೆ ಪ್ರಶ್ನಿಸಿ ಹೈ ಕೋರ್ಟ್ ಮೆಟ್ಟಿಲೇರಿದ್ದ ಅಪರಾಧಿಗಳು
ದೆಹಲಿ ಹೈ ಕೋರ್ಟ್ ಅಂಗಳದಲ್ಲಿ ಮರಣದಂಡನೆ ಕುರಿತು ವಿಚಾರಣೆ
ಮಾರ್ಚ್ 13-2014 - ಗಲ್ಲು ಶಿಕ್ಷೆ ಎತ್ತಿ ಹಿಡಿದ ದೆಹಲಿ ಹೈ ಕೋರ್ಟ್
ಡಿ. 18 -2015- ಬಾಲಾಪರಾಧಿ ಸಜೆ ನಂತರ ಪರಿವರ್ತನಾ ಕೇಂದ್ರಕ್ಕೆ ರವಾನೆ
ಹೈ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಆಪರಾಧಿಗಳು
ಮಾರ್ಚ್ 27-2017 - ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ
ಮೇ 5 -2017- ಇಂದು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಗಲ್ಲು ಶಿಕ್ಷೆ ಕಾಯಂ
ಜನವರಿ 22,2020: ಗಲ್ಲು ಶಿಕ್ಷೆಯಿಂದ ಪಾರಾದ ನಾಲ್ವರು ಅಪರಾಧಿಗಳು
ಫೆಬ್ರವರಿ 1, 2020: ಗಲ್ಲು ಶಿಕ್ಷೆಯಿಂದ ಪಾರಾದ ನಾಲ್ವರು ಅಪರಾಧಿಗಳು
ಮಾರ್ಚ್ 3,2020: ಗಲ್ಲು ಶಿಕ್ಷೆಯಿಂದ ಪಾರಾದ ನಾಲ್ವರು ಅಪರಾಧಿಗಳು
ಮಾರ್ಚ್ 20, 2020: ನಾಲ್ವರಿಗೆ ಗಲ್ಲು ಶಿಕ್ಷೆ ಕಾಯಂ ಮಾಡಿದ ದೆಹಲಿ ಹೈಕೋರ್ಟ್