ಯೋಗ್ಯರಲ್ಲ ನೀವು ಬದುಕಲು: ಫೆ.1ರಂದು ಹತ್ಯಾಚಾರಿಗಳಿಗೆ ಗಲ್ಲು!
ಫೆ.1ರ ಬೆಳಗ್ಗೆ 6 ಗಂಟೆಗೆ ಪವಿತ್ರ ಭೂಮಿ ಬಿಟ್ಟು ಹೊರಡಲಿರುವ ಪಾಪಿಗಳು| ನಿರ್ಭಯಾ ಹತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಖಾಯಂ| ನಿರ್ಭಯಾ ಹತ್ಯಾಚಾರಿಗಳಿಗೆ ಹೊಸ ಡೆತ್ ವಾರೆಂಟ್ ಜಾರಿಗೊಳಿಸಿದ ದೆಹಲಿ ಕೋರ್ಟ್| ಫೆ.1ರ ಬೆಳಗ್ಗೆ 6 ಗಂಟೆಗೆ ಗಲ್ಲುಶಿಕ್ಷೆ ಜಾರಿಗೊಳಿಸುವಂತೆ ಕೋರ್ಟ್ ಆದೇಶ | ಹತ್ಯಚಾರಿಗಳ ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್|
ನವದೆಹಲಿ(ಜ.17): ನಿರ್ಭಯಾ ಹತ್ಯಾಚಾರಿಗಳ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ ಬೆನ್ನಲ್ಲೇ, ದೆಹಲಿ ಕೋರ್ಟ್ ಹೊಸ ಡೆತ್ ವಾರೆಂಟ್ ಜಾರಿ ಮಾಡಿದೆ.
ಇದೇ ಫೆ.1ರ ಬೆಳಗ್ಗೆ 6 ಗಂಟೆಗೆ ನಾಲ್ವರೂ ಆರೋಪಿಗಳನ್ನು ಗಲ್ಲಿಗೇರಿಸುವಂತೆ ದೆಹಲಿ ಕೋರ್ಟ್ ನೂತನ ಡೆತ್ ವಾರೆಂಟ್ ಜಾರಿ ಮಾಡಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮುಕೇಶ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ ಬೆನ್ನಲ್ಲೇ, ದೆಹಲಿ ಕೋರ್ಟ್ ಫೆ.1ರಂದು ಗಲ್ಲುಶಿಕ್ಷೆ ಜಾರಿಗೊಳಿಸುವಂತೆ ಆದೇಶಿಸಿ ಹೊಸ ಡೆತ್ ವಾರೆಂಟ್ ಜಾರಿ ಮಾಡಿದೆ.
ನಿರ್ಭಯಾ ಅಪರಾಧಿಗಳಿಗೆ ಗಲ್ಲು ಫಿಕ್ಸ್ : ಕ್ಷಮಾದಾನ ಅರ್ಜಿ ತಿರಸ್ಕೃತ
ಹೊಸ ಡೆತ್ ವಾರೆಂಟ್ ಅನ್ವಯ ಫೆ.1ರ ಬೆಳಗ್ಗೆ 6 ಗಂಟೆಗೆ ತಿಹಾರ್ ಜೈಲಿನಲ್ಲಿ ನಾಲ್ವರೂ ಅಪರಾಧಿಗಳನ್ನು ಒಟ್ಟಿಗೆ ಗಲ್ಲಿಗೆ ಏರಿಸಲಾಗುವುದು.
ನಿರ್ಭಯಾ ತಾಯಿ ಅಸಮಾಧಾನ:
ಇನ್ನು ಗಲ್ಲುಶಿಕ್ಷೆ ಜಾರಿಯ ಹೊಸ ದಿನಾಂಕದ ಕುರಿತು ಅಪಸ್ವರ ಎತ್ತಿರುವ ನಿರ್ಭಯಾ ತಾಯಿ, ಗಲ್ಲುಶಿಕ್ಷೆ ಜಾರಿ ವಿಳಂಬಬಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗಲ್ಲು ತಡೆಗೆ ನಿರ್ಭಯಾ ರೇಪಿಸ್ಟ್‌ಗಳ ಶತ ಪ್ರಯತ್ನ!
ಗಲ್ಲುಶಿಕ್ಷೆಯನ್ನು ಮುಂದೂಡುವ ಮೂಲಕ ಸರ್ಕಾರ ತಮಗೆ ಮೋಸ ಮಾಡುತ್ತಿದ್ದು, ನ್ಯಾಯಕ್ಕಾಗಿ ಕಾದು ಕಾದು ನಮಗೆ ಸುಸ್ತಾಗಿದೆ ಎಂದು ನಿರ್ಭಯಾ ತಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನವರಿ 17ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ