ನವದೆಹಲಿ [ಜ.17]: ನಿರ್ಭಯಾ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕ ಕ್ಷಮಾದಾನಕ್ಕೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತವಾಗಿದ್ದು, ಇದೀಗ ಗಲ್ಲು ಫಿಕ್ಸ್ ಆಗಿದೆ. 

ಗಲ್ಲು ಶಿಕ್ಷೆ ರದ್ದುಪಡಿಸಬೇಕು ಎಂದು ಕೋರಿ ಮುಕೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿದ್ದಾರೆ. ಆದರೆ ಗಲ್ಲು ಶಿಕ್ಷೆಯ ದಿನಾಂಕದ ಬಗ್ಗೆ ಗೊಂದಲ ಇನ್ನೂ ಮುಂದುವರಿದಿದೆ.

ಈ ಹಿಂದೆ ವಿನಯ್ ಶರ್ಮಾ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯೂ ತಿರಸ್ಕಾರಗೊಂಡಿತ್ತು. ಆದರೆ ಇದೀಗ ಮತ್ತೊಮ್ಮೆ ಆತ ಡೆತ್ ವಾರೆಂಟ್ ಪ್ರಶ್ನಿಸಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಇನ್ನು ಮತ್ತಿಬ್ಬರು ಆರೋಪಿಗಳಾದ ಪವನ್ ಗುಪ್ತಾ ಹಾಗೂ ಅಕ್ಷಯ್ ಕುಮಾರ್ ಸಿಂಗ್ ಕೂಡ ಕ್ಯುರೇಟಿವ್ ಅರ್ಜಿ ಅಸ್ತ್ರ ಪ್ರಯೋಗಿಸುವ ಸಾಧ್ಯತೆ ಇದೆ. 

ಗಲ್ಲು ತಡೆಗೆ ನಿರ್ಭಯಾ ರೇಪಿಸ್ಟ್‌ಗಳ ಶತ ಪ್ರಯತ್ನ!.

ಒಟ್ಟಿನಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಗಳು ತಮ್ಮ ಶಿಕ್ಷೆಯನ್ನು ತಪ್ಪಿಸಿಕೊಳ್ಳಲು ಸತತ ಪ್ರಯತ್ನ ನಡೆಸುತ್ತಿದ್ದು, ಆದರೆ ಇದೀಗ ರಾಷ್ಟ್ರಪತಿ ಮುಕೇಶ್ ಕುಮಾರ್ ಅರ್ಜಿಯನ್ನು ತಿರಸ್ಕರಿಸಿದ್ದಾರೆ. 

ನಿರ್ಭಯಾ ರೇಪಿಸ್ಟ್‌ ನೇಣಿಗೇರಿಸುವ ಮೇರಠ್‌ನ ಪವನ್‌ ಸಂಭಾವನೆ?...

ಆದರೆ ಜನವರಿ 22 ರಂದು ಗಲ್ಲು ಶಿಕ್ಷೆ ನೀಡಲು ನಿರ್ಧರಿಸಲಾಗಿತ್ತು. ಆದರೆ ಆರೋಪಿಗಳು ಸತತ ಯತ್ನ ನಡೆಸುತ್ತಿರುವುದರಿಂದ ಮುಂದೆ ಹೋಗುತ್ತಿದ್ದು, ಆದರೆ ಜನವರಿ 22ರಂದೇ ಗಲ್ಲು ಶಿಕ್ಷೆ ನೀಡಬೇಕು ಎಂದು ನಿರ್ಭಯಾ ತಾಯಿ ಆಗ್ರಹಿಸಿದ್ದಾರೆ.