Asianet Suvarna News Asianet Suvarna News

ಸ್ವಾತಂತ್ರ್ಯ ದಿನಾಚರಣೆಗೆ ಭಾರಿ ವಿದ್ವಂಸಕ ಕೃತ್ಯಕ್ಕೆ ಪ್ಲಾನ್, ISIS ಉಗ್ರನ ಬಂಧಿಸಿದ NIA!

ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಭಾರತ ಸಕಲ ರೀತಿಯಲ್ಲೂ ಸಜ್ಜಾಗಿದೆ. ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಇದರ ನಡುವೆ ಭಾರಿ ವಿದ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದ ಐಸಿಸ್ ಉಗ್ರನ NIA ಬಂಧಿಸಿದೆ.

NIA arrest terrorist outfit Isis active member from delhi ahead of India Independence Day ckm
Author
Bengaluru, First Published Aug 7, 2022, 3:57 PM IST

ನವದೆಹಲಿ(ಆ.07): ಅಜಾದಿಕಾ ಅಮೃತಮಹೋತ್ಸವ ಸಂಭ್ರಮದಲ್ಲಿ ಕೇಂದ್ರ ಸರ್ಕಾರ ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಾಷ್ಟ್ರ ರಾಜರಾಜಧಾನಿ ದೆಹಲಿಯಲ್ಲಿ ತಿರಂಗ ಯಾತ್ರಾ ಸೇರಿದಂತೆ ಹಲವು ಯಾತ್ರೆಗಳು ನಡೆಯುತ್ತದೆ. 75ನೇ ಸ್ವಾತಂತ್ರ್ಯ ದಿನಾಚರಣೆಗಾಗಿ ಈಗಾಗಲೇ ಭಾರಿ ಭದ್ರತೆ ಒದಗಿಸಲಾಗಿದೆ. ಇದರ ನಡುವೆ ಉಗ್ರರು ಭಾರಿ ವಿದ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿರುವುದು ಬಹಿರಂಗಗೊಂಡಿದೆ. ಈ ಕುರಿತು ಕೆಲ ರಹಸ್ಯ ಮಾಹಿತಿ ಪಡೆದ ರಾಷ್ಟ್ರೀಯ ತನಿಖಾ ದಳ(NIA) ಇಂದು ಐಸಿಸ್ ಉಗ್ರನ ಬಂಧಿಸಿದೆ. ಈ ಮೂಲಕ ಬಹುದೊಡ್ಡ ದುರಂತವನ್ನು NIA ತಪ್ಪಿಸಿದೆ. ಐಸಿಸ್ ಸಂಘಟನೆಯ ಸಕ್ರೀಯ ಸದಸ್ಯನಾಗಿರುವ ಈತ ಬಾಟ್ಲಾ ಹೌಸ್ ನಿವಾಸಿ ಮೊಹ್ಸಿನ್ ಅಹಮ್ಮದ್ ಎಂದು ಗುರುತಿಸಲಾಗಿದೆ.  ಬಾಟ್ಲಾ ಹೌಸ್ ಆವರಣದಲ್ಲಿ ಶೋಧ ಕಾರ್ಯ ನಡೆಸಿದ  NIA ಮಹತ್ವದ ಮಾಹಿತಿಯನ್ನು ಕಲೆ ಹಾಕಿ ಮೊಹ್ಸಿನ್ ಅಹಮ್ಮದ್ ಬಂಧಿಸಿದೆ. ಬಿಹಾರದ ಪಾಟ್ನಾ ನಿವಾಸಿಯಾಗಿರುವ ಮೊಹ್ಸಿನ್ ಕಳೆದ ಕೆಲ ವರ್ಷಗಳಿಂದ ಐಸಿಸ್ ಸಂಘಟನೆ ಜೊತೆ ನೇರ ಸಂಪರ್ಕ ಹೊಂದಿರುವ ಮಾಹಿತಿಯನ್ನು  NIA ಕಲೆಹಾಕಿದೆ.

ಮೊಹ್ಸಿನ್ ಅಹಮ್ಮದ್ ಭಾರತ ಹಾಗೂ ವಿದೇಶಗಳಲ್ಲಿ ಐಸಿಸ್ ನಿಧಿಗೆ ಹಣ ಸಂಗ್ರಹ ಮಾಡುತ್ತಿದ್ದ. ಈ ಹಣಗಳನ್ನು ವಿದ್ವಂಸಕ ಕೃತ್ಯಗಳಿಗೆ ಬಳಕೆ ಮಾಡಲಾಗುತ್ತಿತ್ತು. ಈ ಬಾರಿ ಹಣ ಸಂಗ್ರಹದ ಜೊತೆಗೆ ಮೊಹ್ಸಿನ್‌ಗೆ ಮತ್ತೊಂದು ಜವಾಬ್ದಾರಿಯೂ ಹೊರಿಸಲಾಗಿತ್ತು. ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ವಿದ್ವಂಸಕ ಕೃತ್ಯ ನಡೆಸಲು ಭಾರಿ ಪ್ಲಾನ್ ರೆಡಿ ಮಾಡುವ ಜವಾಬ್ದಾರಿಯನ್ನೂ ನೀಡಲಾಗಿತ್ತು. ರಾಷ್ಟ್ರೀಯ ತನಿಖಾ ದಳದ ಕಾರ್ಯಾಚರಣೆಯಿಂದ ಸ್ವಾತಂತ್ರ್ಯ ದಿನಾಚರಣೆಗೆ ಎದುರಾಗಿದ್ದ ಆತಂಕವೊಂದು ನಿವಾರಣೆಯಾಗಿದೆ 

ಐಸಿಸ್ ಜೊತೆ ನಂಟು ಆರೋಪ, ಎನ್ಐಎ ವಶಕ್ಕೆ ಪಡೆದ ರಾಜ್ಯದ ಇಬ್ಬರು ಶಂಕಿತ ಆರೋಪಿಗಳ ಬಿಡುಗಡೆ!

ಭಾರತ ಹಾಗೂ ಇತರ ದೇಶಗಳಿಂದ ಐಸಿಸ್‌ಗೆ ನಿಧಿ ಸಂಗ್ರಹಿಸುತ್ತಿದ್ದ ಮೊಹ್ಸಿನ್ ಈ ಹಣವನ್ನೂ ಕ್ರಿಪ್ರೋಕರೆನ್ಸಿ ಮೂಲಕ ರವಾನಿಸುತ್ತಿದ್ದ. ಇದರಿಂದ ಭಾರತದ ಯಾವುದೇ ತನಿಖಾ ಸಂಸ್ಥೆಗಳ ಕಣ್ಣಿಗೆ ಬೀಳದಂತೆ ಕಾರ್ಯಾಚರಣೆ ನಡೆಸುತ್ತಿದ್ದ. 

ಅಜಾದಿಕಾ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಭಾರತ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಜೊತೆ ಈ ಕುರಿತು ಮಹತ್ವದ ಸಭೆ ನಡೆಸಿ ಹಲವು ಸೂಚನೆಗಳನ್ನು ನೀಡಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ದೇಶವು ಯಾವ ರೀತಿ ದೇಶಪ್ರೇಮದ ಉತ್ಸಾಹ ಕಂಡಿತೋ, ಅದೇ ಉತ್ಸಾಹವನ್ನು ಇಂದು ದೇಶದ ಯುವಕರಲ್ಲಿ ಮೂಡಿಸಬೇಕು. ಈ ಮೂಲಕ ಈ ಉತ್ಸಾಹವು ದೇಶ ನಿರ್ಮಾಣದಲ್ಲಿ ಪರಿವರ್ತನೆ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಮತಾಂಧ ಹಂತಕರಿಗೆ ಪಾಕ್‌ ಸಂಪರ್ಕ, ಐಸಿಸ್ ಪ್ರೇರಣೆ: ಕರಾಚಿಗೂ ಹೋಗಿದ್ದ ಗೌಸ್‌!

ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಹಾಗೂ ಇತರರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸ್ವಾತಂತ್ರ್ಯದ ಅಮೃತೋತ್ಸವದ ಭಾವನಾತ್ಮಕ ಕಂಪು, ಈ ಆಂದೋಲನದ ತಿರುಳಾಗಿದೆ. ಇದರಿಂದ ದೇಶಪ್ರೇಮದ ಅಲೆ ದೇಶದಲ್ಲಿ ಏಳುತ್ತದೆ. ಈ ಮೂಲಕ ದೇಶ ನಿರ್ಮಾಣದಲ್ಲಿ ಇದು ಪರಿವರ್ತನೆಗೊಳ್ಳಬೇಕು. ಹೀಗೆ ದೇಶ ಪರಿವರ್ತನೆ ಮಾಡುವಲ್ಲಿ ಈ ಆಂದೋಲನವೊಂದು ಸುವರ್ಣಾವಕಾಶ’ ಎಂದು ಬಣ್ಣಿಸಿದರು.

Follow Us:
Download App:
  • android
  • ios