ಐಸಿಸ್ ನಂಟು, ಭಯೋತ್ಪದನಾ ಚಟುವಟಿಕೆ ಆರೋಪದಡಿ ಕರ್ನಾಟಕ ಮೂರು ಕಡೆ ಕಾರ್ಯಾಚರಣೆನಡೆಸಿ ರಾಷ್ಟ್ರೀಯ ತನಿಖಾ ಸಂಸ್ಥೆ ಮೂವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿತ್ತು. ಇದರಲ್ಲಿ ಇಬ್ಬರನ್ನು ಅಧಿಕಾರಿಗಳು ಬಿಡುಗಡೆ ಮಾಡಿದೆ. ಇದರ ಜೊತೆ ಎಚ್ಚರಿಕೆ ನೋಟಿಸ್ ಕೂಡ ನೀಡಿದೆ. 

ಬೆಂಗಳೂರು(ಜು.31):  ಐಸಿಸ್ ನಂಟು ಆರೋಪದಡಿ ರಾಷ್ಟ್ರೀಯ ತನಿಖಾ ಸಂಸ್ಥೆ ವಶಕ್ಕೆ ವಶಕ್ಕೆ ಪಡೆದಿದ್ದ ಮೂವರ ಪೈಕಿ ಇಬ್ಬರನ್ನು ಬಿಡುಗಡೆ ಮಾಡಿದೆ. ಭಟ್ಕಳ , ತುಮಕೂರು ಹಾಗೂ ಬೆಳಗಾವಿಯಲ್ಲಿ ಕಾರ್ಯಾಚರಣೆ ನಡೆಸಿ ಮೂವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಸತತ ವಿಚಾರಣೆ ಬಳಿಕ ಇದೀಗ ಇಬ್ಬರನ್ನು ಬಿಡುಗಡೆ ಮಾಡಲಾಗಿದೆ. ತುಮಕೂರಿನ ಹೆಚ್ ಎಂಎಸ್ ಯುನಾನಿ ಮೆಡಿಕಲ್ ಕಾಲೇಜ್ ವಿದ್ಯಾರ್ಥಿ ಸಾಜಿದ್ ಹಾಗೂ ಭಟ್ಕಳದ ಮುಖ್ಯರಸ್ತೆ ನಿವಾಸಿ ಅಬ್ದುಲ್ ಮುಖ್ತದೀರ್‌ನನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಆದರೆ ಇವರ ಲ್ಯಾಪ್‌ಟ್ಯಾಪ್, ಮೊಬೈಲ್ ಸೇರಿದಂತೆ ಇತರ ಕೆಲ ವಸ್ತುಗಳನ್ನು ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ತಮ್ಮಲ್ಲಿ ಇರಿಸಿಕೊಂಡಿದ್ದಾರೆ. ಇಂದು(ಜು.31) ಇಡೀ ದಿನ ವಿಚಾರಣೆ ನಡೆಸಿದ್ದ ತನಿಖಾ ಸಂಸ್ಥೆ ಅಧಿಕಾರಿಗಳು ರಾತ್ರಿ ಹೊತ್ತಿಗೆ ಶಂಕಿತ ಆರೋಪಿಗಳನ್ನು ಬಿಡುಗಡೆ ಮಾಡಿದ್ದಾರೆ.

ಐಸಿಸ್ ಉಗ್ರ ಸಂಘಟನೆಯ ಜೊತೆ ನಂಟು, ಭಯೋತ್ಪಾದನಾ ಚಟುವಟಿಕೆ ಸೇರಿದಂತೆ ಹಲವು ಅನುಮಾನಸ್ಪದ ಚಟುವಟಿಕೆ ಕಾರಣದಿಂದ ರಾಷ್ಟ್ರೀಯ ತನಿಖಾ ಸಂಸ್ಥೆ 6 ರಾಜ್ಯಗಳ 13 ಕಡೆ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಕರ್ನಾಟಕ ಮೂರು ಕಡೆ ಮೂವರನ್ನು ವಶಕ್ಕೆ ಪಡೆದಿತ್ತು. ಮಹಾರಾಷ್ಟ್ರ ಮೂಲದ ಸಾಜಿದ್, ತುಮಕೂರಿನ ಹೆಚ್ ಎಂಎಸ್ ಯುನಾನಿ ಮೆಡಿಕಲ್ ಕಾಲೇಜು ವಿದ್ಯಾರ್ಥಿ. ತುಮಕೂರಿನ ಸದಾಶಿವನಗರದ 7 ಮುಖ್ಯ ರಸ್ತೆಯಲ್ಲಿ ವಾಸವಿದ್ದ ಸಾಜೀದ್‌ನನ್ನು ತನಿಖಾ ಸಂಸ್ಥೆ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಸಾಜೀದ್ ಜೊತೆ ಮೊಬೈಲ್ , ಲ್ಯಾಪ್‌ಟಾಪ್ ವಶಕ್ಕೆ ಪಡೆಯಲಾಗಿತ್ತು. ದೆಹಲಿ ಹಾಗೂ ಬೆಂಗಳೂರು ಮೂಲದ ಎನ್ಐಎ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿತ್ತು. ಘಟನೆ ಸಂಬಂಧ ತನಿಖೆ ಮುಂದುವರಿಸಿರುವ ಅಧಿಕಾರಿಗಳು ಮಹತ್ವದ ಮಾಹಿತಿ ಕಲೆಹಾಕಿದ್ದಾರೆ.

ಆರು ರಾಜ್ಯಗಳ 13 ಕಡೆ ಎನ್‌ಐಎ ದಾಳಿ: ಕರ್ನಾಟಕದಲ್ಲಿ ಮೂವರು ಶಂಕಿತ ಉಗ್ರರು ವಶಕ್ಕೆ

ಭಟ್ಕಳದಲ್ಲಿ ತನಿಖಾ ಅಧಿಕಾರಿಗಳು ವಶಕ್ಕೆ ಪಡೆದ ಶಂಕಿತ ಆರೋಪಿ ಭಟ್ಕಳ ಮುಖ್ಯರಸ್ತೆ ನಿವಾಸಿ ಅಬ್ದುಲ್ ಮುಖ್ತದೀರ್ (30)ನನ್ನು ಬಿಡುಗಡೆ ಮಾಡಲಾಗಿದೆ. ಆದರೆ ಹೆಚ್ಚಿನ ವಿಚಾರಣೆಗೆ ದೆಹಲಿಗೆ ಬರುವಂತೆ ನೋಟಿಸ್ ನೀಡಿದೆ. ಆರೋಪಿಯ ಬಳಿಯಿಂದ ಹೆಚ್ಚಿನ ಮಾಹಿತಿ ಸಂಗ್ರಹ ಸಾಧ್ಯವಾಗದ ಕಾರಣ ಅಧಿಕಾರಿಗಳು ಶಂಕಿತ ಆರೋಪಿಯನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಮುಖ್ತದೀರ್‌ನ ಮೊಬೈಲ್ ಡೇಟಾ ಹಾಗೂ ಇತರ ದಾಖಲೆಗಳನ್ನು ಅಧಇಕಾರಿಗಳು ವಶಪಡಿಸಿಕೊಂಡಿದ್ದಾರೆ. 

ಇಂದು ಬೆಳಗ್ಗೆ 3 ಗಂಟೆ ಸುಮಾರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಲು ಅಬ್ದುಲ್ ಮುಖ್ತದೀರ್ ಪತ್ನಿ ಮನೆ ಮೇಲೆ ದಾಳಿ ನಡೆಸಿ ಅಬ್ದುಲ್ ವಶಕ್ಕೆ ಪಡೆದಿದ್ದರು. ಬಳಿಕ ಗೌಪ್ಯ ಸ್ಥಳದಲ್ಲಿ ಶಂಕಿತ ಆರೋಪಿಯನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ಆರೋಪಿ ಸಹೋದರನನ್ನು ವಿಚಾರಣೆಗೆ ಒಳಪಡಿಸಿದ್ದರು. ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದ ಉಗ್ರರ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ಅಬ್ದುಲ್ ಮುಖ್ತದೀರ್ ವಶಕ್ಕೆ ಪಡೆಯಲಾಗಿತ್ತು. 

ಬೆಂಗಳೂರು: ಅಲ್‌ ಖೈದಾ ಶಂಕಿತರ ಸೆರೆ ತನಿಖೆ ಎನ್‌ಐಎಗೆ?