Asianet Suvarna News Asianet Suvarna News

New Parliament Building Inauguration: ಪ್ರಧಾನಿ ಮೋದಿಯಿಂದ ರಾಜದಂಡ ಪ್ರತಿಷ್ಠಾಪನೆ; ಸಂಸತ್‌ ಭವನದಲ್ಲಿ ಸರ್ವಧರ್ಮ ಪ್ರಾರ್ಥನೆ

ಆಧುನೀಕರಣದತ್ತ ದಾಪುಗಾಲು ಹಾಕುತ್ತಿರುವ ನವ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ತುಂಬಿದ ಬೆನ್ನಲ್ಲೇ ಆಧುನಿಕ ಸ್ಪರ್ಶದೊಂದಿಗೆ ಹೊಸ ಸಂಸತ್‌ ಭವನ ಲೋಕಾರ್ಪಣೆಯಾಗಿದೆ.

new parliament building inauguration narendra modi installs sengol all religious mantras done ash
Author
First Published May 28, 2023, 8:31 AM IST

ನವದೆಹಲಿ (ಮೇ 28, 2023): ಪ್ರಧಾನಿ ಮೋದಿ ನೂತನ ಸಂಸತ್‌ ಭವನದ ಲೋಕಾರ್ಪಣೆ ನಡೆಸಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ತುಂಬಿದ ಬೆನ್ನಲ್ಲೇ ಆಧುನಿಕ ಸ್ಪರ್ಶದೊಂದಿಗೆ ಹೊಸ ಸಂಸತ್‌ ಭವನ ಲೋಕಾರ್ಪಣೆಯಾಗಿದೆ. ಇನ್ನು, ಐತಿಹಾಸಿಕ ರಾಜದಂಡ ಅಥವಾ ಚಿನ್ನದ ಸೆಂಗೋಲ್‌ ಅನ್ನೂ ಸಹ ಮೋದಿ ಪ್ರತಿಷ್ಠಾಪನೆ ಮಾಡಿದ್ದಾರೆ.
ಪ್ರಧಾನಿ ಮೋದಿ ನೂತನ ಸಂಸತ್‌ ಭವನವನ್ನು ಬೆಳಗ್ಗೆಯೇ ಲೋಕಾರ್ಪಣೆಗೊಳಿಸಿದ್ದು, ನಂತರ ಚಿನ್ನದ ಸೆಂಗೋಲ್‌ ಅನ್ನು ಪ್ರತಿಷ್ಠಾಪನೆ ಮಾಡಲಾಯ್ತು. ಬಳಿಕ ಸರ್ವಧರ್ಮ ಪ್ರಾರ್ಥನೆಯನ್ನೂ ನಡೆಸಲಾಯ್ತು. ಸರ್ವಧರ್ಮಗಳ ದರ್ಮಗುರುಗಳು ಈ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ರು.

ಆಧುನೀಕರಣದತ್ತ ದಾಪುಗಾಲು ಹಾಕುತ್ತಿರುವ ನವ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ತುಂಬಿದ ಬೆನ್ನಲ್ಲೇ ಆಧುನಿಕ ಸ್ಪರ್ಶದೊಂದಿಗೆ ಹೊಸ ಸಂಸತ್‌ ಭವನ ಲೋಕಾರ್ಪಣೆಯಾಗಿದೆ. ಬೆಳಗ್ಗೆ 7.25ರ ಸುಮಾರಿಗೆ ಪ್ರಧಾನಿ ಮೋದಿ ನೂತನ ಸಂಸತ್‌ ಭವನಕ್ಕೆ ಆಗಮಿಸಿದ್ದು ,ಪೂಜಾ ಕೈಂಕರ್ಯ ನಡೆಸಿದ್ದಾರೆ.

ಇದನ್ನು ಓದಿ: ನೂತನ ಸಂಸತ್‌ ಭವನ ಲೋಕಾರ್ಪಣೆ: ಶೃಂಗೇರಿ ಶಾರದಾ ಪೀಠದ ಪುರೋಹಿತರಿಂದ ಪೂಜಾ ಕೈಂಕರ್ಯ

ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಬಳಿಕ ಪ್ರಧಾನಿ ಮೋದಿ ಹೋಮ ಹವನ ನಡೆಸಿದ್ದು,, ಮೋದಿಗೆ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಸಾಥ್‌ ನೀಡಿದ್ದಾರೆ. ಗಣಪತಿ ಹೋಮವನ್ನೂ ಸಹ ಪ್ರಧಾನಿ ಮೋದಿ ಮಾಡಿದ್ದಾರೆ. ಶೃಂಗೇರಿ ಶಾರದಾ ಪೀಠದ ಪುರೋಹಿತರು ಈ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದು ವಿಶೇಷವಾಗಿದೆ.

ಮಧ್ಯಾಹ್ನದವರೆಗೂ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, ನೂತನ ಸಂಸತ್‌ ಭವನದ ಉದ್ಘಾಟನಾ ಕಾರ್ಯಕ್ರಮ ಅದ್ಧೂರಿಯಾಗಿ ಹಾಗೂ ಪೂಜಾ ಕೈಂಕರ್ಯಗಳೊಂದಿಗೆ ಸಾಂಸ್ಕೃತಿಕವಾಗಿ ನಡೆಯಲಿದೆ. ಅಲ್ಲದೆ, ಪ್ರಧಾನಿ ಮೋದಿ ಸೆಂಗೋಲ್‌ ಅನ್ನು ಪಡೆದು, ಬಳಿಕ ಅದಕ್ಕೆ ವಿಶೇಷ ಪೂಜೆ ನಡೆಸಿ, ನಂತರ ಸೆಂಗೋಲ್‌ ಅಥವಾ ಚಿನ್ನದ ರಾಜದಂಡವನ್ನು ಸಂಸತ್‌ ಭವನದಲ್ಲಿ ಪ್ರತಿಷ್ಠಾಪನೆ ಮಾಡಲಾಯ್ತು.

ಇದನ್ನೂ ಓದಿ: ಸೆಂಗೋಲ್‌ ತಯಾರಿಸಿದ ತಮಿಳುನಾಡಿನ ಕುಟುಂಬಕ್ಕೆ ಸಂಸತ್‌ ಭವನ ಉದ್ಘಾಟನೆಗೆ ಆಹ್ವಾನ:ರಾಜದಂಡ ನಿರ್ಮಾತೃರ ಹರ್ಷ!

ಪ್ರಧಾನಿ ನರೇಂದ್ರ ಮೋದಿ ಅವರು ಈ ಹೊಸ ಕಟ್ಟಡವನ್ನು ಉದ್ಘಾಟನೆ ಮಾಡಿದ್ದು, ಮುಂದಿನ ಮುಂಗಾರು ಅಧಿವೇಶನ ಇದೇ ಕಟ್ಟಡದಲ್ಲಿ ನಡೆಯಲಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರವಾದ ಭಾರತ, ಜಗತ್ತಿನ ಅತಿ ಉತ್ತಮ ವಾಸ್ತುಶಿಲ್ಪ ರಚನೆಯನ್ನು ಹೊಂದಿರುವ ಸಂಸತ್‌ ಭವನವನ್ನು ಹೊಂದಿದ್ದರೂ ಸಹ ಆ ಕಟ್ಟಡ ಬರೋಬ್ಬರಿ 96 ವರ್ಷಗಳ ಹಳೆಯದ್ದಾದ ಕಾರಣ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ. 

ಹೊಸ ಕಟ್ಟಡದ ವಿಶೇಷತೆ ಏನು?

ಒಟ್ಟಾರೆ 64500 ಚದರ ಮೀ. ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಹೊಸ ಸಂಸತ್‌ ಕಟ್ಟಡ ತ್ರಿಕೋನಾಕಾರದಲ್ಲಿದ್ದು, ಭೂಕಂಪದಿಂದಲೂ ರಕ್ಷಣೆ ಹೊಂದಿದೆ. ಈ ಭವನದ ನಿರ್ಮಾಣಕ್ಕೆ 2020ರ ಡಿ.10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಕೇವಲ ಎರಡೂವರೆ ವರ್ಷಗಳಲ್ಲಿ ಬೃಹತ್‌ ಕಟ್ಟಡ ನಿರ್ಮಾಣದ ಮೂಲಕ ಹೊಸ ದಾಖಲೆ ಬರೆಯಲಾಗಿದೆ. 1200 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಹೊಸ ಭವನ 4 ಅಂತಸ್ತು ಹೊಂದಿದ್ದು, ಇದರಲ್ಲಿರುವ ಲೋಕಸಭೆ ಹಳೆಯದ್ದಕ್ಕಿಂತ 17 ಸಾವಿರ ಚದರ ಮೀ. ದೊಡ್ಡದಾಗಿದೆ. ಅಂದರೆ 3 ಪಟ್ಟು ದೊಡ್ಡದಾಗಿದೆ. ಅಲ್ಲದೇ ಈ ಕಟ್ಟಡದಲ್ಲಿ ಹಲವು ಆಧುನಿಕ ಸೌಲಭ್ಯಗಳಿದ್ದು, ಎಐ ಸ್ಪರ್ಶವನ್ನು ನೀಡಲಾಗಿದೆ.

ಇದನ್ನೂ ಓದಿ: ಸೆಂಗೋಲ್‌ ಪತ್ತೆಗೆ 2 ವರ್ಷ ಶೋಧ ನಡೆಸಿದ್ದ ಪ್ರಧಾನಿ ಕಚೇರಿ: ಬೆಳಕಿಗೆ ಬಂದಿದ್ದು ಹೀಗೆ ನೋಡಿ..

Follow Us:
Download App:
  • android
  • ios