Asianet Suvarna News Asianet Suvarna News

2021ರಲ್ಲಿ ಭಾರತದಲ್ಲಿ ಒಟ್ಟು 29,272 ಕೊಲೆ, ಉತ್ತರ ಪ್ರದೇಶ ನಂ.1

ನ್ಯಾಷನಲ್‌ ಕ್ರೈಮ್‌ ರೆಕಾರ್ಡ್ಸ್‌ ಬ್ಯೂರೋ, 2021ರಲ್ಲಿ ದೇಶದಲ್ಲಿ ಆಗಿರುವ ಕೊಲೆಗಳ ಬಗ್ಗೆ ವರದಿ ನೀಡಿದ್ದು, 2020ರಲ್ಲಿ ಆಗಿರುವ ಕೊಲೆಗಳಿಗೆ ಹೋಲಿಸಿದರೆ, ಕಳೆದ ವರ್ಷ ಸಣ್ಣ ಪ್ರಮಾಣದಲ್ಲಿ ಏರಿಕೆ ಕಂಡಿದೆ. 2021ರಲ್ಲಿ ಇಡೀ ದೇಶದಲ್ಲಿ 29,272 ಕೊಲೆಗಳು ವರದಿಯಾಗಿವೆ. ಇದರಲ್ಲಿ ಉತ್ತರ ಪ್ರದೇಶವೇ ಅಗ್ರಸ್ಥಾನದಲ್ಲಿದೆ.
 

National Crime Records Bureau  India Records 29 272 Murders in 2021 UP Tops the List in NCRB Data san
Author
First Published Aug 31, 2022, 11:50 AM IST

ನವದೆಹಲಿ (ಆ.31): 2021ರಲ್ಲಿ ಇಡೀ ದೇಶದಲ್ಲಿ ಒಟ್ಟು 29,272 ಕೊಲೆಗಳು ನಡೆದಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ ಮಾಹಿತಿ ನೀಡಿದೆ. ಗರಿಷ್ಠ ಕೊಲೆಗಳು ನಡೆದಿರುವ ಪಟ್ಟಿಯಲ್ಲಿ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದ್ದರೆ, ಬಿಹಾರ ಹಾಗೂ ಮಹಾರಾಷ್ಟ್ರ ರಾಜ್ಯಗಳು ನಂತರದ ಸ್ಥಾನಗಳಲ್ಲಿವೆ. ಉತ್ತರ ಪ್ರದೇಶದಲ್ಲಿ 3717 ಕೊಲೆಗಳು ದದಾಖಲಾಗಿದ್ದರೆ, ಬಿಹಾರದಲ್ಲಿ 2799 ಹಾಗೂ ಮಹಾರಾಷ್ಟ್ರದಲ್ಲಿ 2330 ಕೊಲೆಗಳು ವರದಿಯಾಗಿವೆ. ಇನ್ನು 2020ಕ್ಕೆ ಹೋಲಿಸಿದರೆ, 2021ರಲ್ಲಿ ಅಗಿರುವ ಕೊಲೆಗಳಲ್ಲಿ ಶೇ. 0.3ರಷ್ಟು ಸಣ್ಣ ಪ್ರಮಾಣದಲ್ಲಿ ಏರಿಕೆ ಕಂಡಿದೆ. 2020ರಲ್ಲಿ ದೇಶದಲ್ಲಿ ಒಟ್ಟು 29,193 ಕೊಲೆಗಳು ದಾಖಲಾಗಿದ್ದವು. 2019ರಲ್ಲಿ ಇದರ ಪ್ರಮಾಣ 28, 915 ಆಗಿತ್ತು. ಮಧ್ಯಪ್ರದೇಶ ರಾಜ್ಯದಲ್ಲಿ ವರ್ಷವೊಂದರಲ್ಲಿ 2034 ಹಾಗೂ ಪಶ್ಚಿಮ ಬಂಗಾಳದಲ್ಲಿ 1884  ಕೊಲೆಗಳು ದಾಖಲಾಗಿದ್ದರೆ, ಸಿಕ್ಕಿಂನಲ್ಲಿ ಅತ್ಯಂತ ಕನಿಷ್ಠ ಕೇವಲ 14 ಕೊಲೆಗಳು ವರ್ಷವೊಂದರಲ್ಲಿ ನಡೆದಿವೆ.ನಗರಗಳ ಪೈಕಿ, ದೆಹಲಿಯು 2021 ರಲ್ಲಿ 454 ರಲ್ಲಿ ಗರಿಷ್ಠ ಕೊಲೆ ಪ್ರಕರಣಗಳನ್ನು ದಾಖಲಿಸಿದೆ. ಕೇರಳದ ಕೋಝಿಕ್ಕೋಡ್ 2021 ರಲ್ಲಿ 5 ರಲ್ಲಿ ಅತಿ ಕಡಿಮೆ ಕೊಲೆ ಪ್ರಕರಣಗಳನ್ನು ದಾಖಲಿಸಿದೆ. ದೆಹಲಿಯ ನಂತರದ ಸ್ಥಾನದಲ್ಲಿ ಮುಂಬೈ ಇದ್ದು, ಒಟ್ಟು 162 ಕೊಲೆಗಳು ದಾಖಲಾಗಿವೆ. ಚೆನ್ನೈ ನಗರ ಮೂರನೇ ಸ್ಥಾನದಲ್ಲಿದ್ದು 161 ಕೇಸ್‌ ದಾಖಲಾಗಿದೆ. ಬೆಂಗಳೂರಿನಲ್ಲಿ ವರ್ಷವೊಂದರಲ್ಲಿ 155 ಕೇಸ್‌ ಆಗಿದ್ದರೆ, ಸೂರತ್‌ (121), ಜೈಪುರ (118), ಲಕ್ನೋ (101) ಹಾಗೂ ಪುಣೆ (100) ನಂತರದ ಸ್ಥಾನಗಳಲ್ಲಿವೆ.

ಕೊಲೆಗಳ ಹಿಂದಿನ ಪ್ರಾಥಮಿಕ ಉದ್ದೇಶಗಳು: ಕೊಲೆಗಳ ಹಿಂದಿನ ಪ್ರಮುಖ ಕಾರಣಗಳೆಂದರೆ,  ವಿವಾದಗಳ ಕಾರಣಕ್ಕೆ 849 ಕೊಲೆಗಳಾಗಿದ್ದರೆ, ವೈಯಕ್ತಿಕ ದ್ವೇಷದಿಂದ 380 ಕೊಲೆ ಪ್ರಕರಣಗಳು ನಡೆದಿವೆ. ಪ್ರೇಮ ಪ್ರಕರಣಗಳು (122 ಪ್ರಕರಣಗಳು). ರಾಷ್ಟ್ರೀಯವಾಗಿ, ಮುಖ್ಯ ಉದ್ದೇಶಗಳು ವಿವಾದಗಳು (9,765 ಪ್ರಕರಣಗಳು), ವೆಂಡೆಟ್ಟಾ (3,782 ಪ್ರಕರಣಗಳು), ಮತ್ತು ಲಾಭ (1,692 ಪ್ರಕರಣಗಳು) ಇದರಿಂದಾಗಿಯೂ ಕೊಲೆಗಳು ನಡೆದಿವೆ.

2021 ರಲ್ಲಿ ಭಾರತದಲ್ಲಿ ಕೊಲೆಗೆ 10 ಸಾಮಾನ್ಯ ಉದ್ದೇಶಗಳು ಇವುಗಳಾಗಿವೆ, 3,782 ಪ್ರಕರಣಗಳೊಂದಿಗೆ ವೈಯಕ್ತಿಕ ದ್ವೇಷವು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.  ಸುಮಾರು 3,125 ಕೊಲೆ ಪ್ರಕರಣಗಳಿಗೆ ಪ್ರೇರಣೆ 'ಪ್ರೇಮ ವ್ಯವಹಾರಗಳು' ಅಥವಾ 'ಅಕ್ರಮ ಸಂಬಂಧ' ಕಾರಣವಾಗಿವೆ.

ಇದೆಂಥಾ ದ್ರೋಹ..!ಕಿವುಡಿ ತಾಯಿಯ ಸಾಕೋದಿರಲಿ, ಆಕೆಯ ಉಳಿತಾಯ ಹಣವನ್ನೇ ಎಗರಿಸಿದ ಪುತ್ರ!

ಪ್ರೇಮ ಕಾರಣಕ್ಕೆ ಯುಪಿಯಲ್ಲಿ (Uttar Pradesh) 334 ಕೊಲೆ: 334 ಪ್ರಕರಣಗಳೊಂದಿಗೆ, ಉತ್ತರ ಪ್ರದೇಶವು ಅತಿ ಹೆಚ್ಚು ಕೊಲೆ ಪ್ರಕರಣಗಳನ್ನು ಹೊಂದಿದ್ದು, ಅದರಲ್ಲಿ ಉದ್ದೇಶವು 'ಪ್ರೇಮ ವ್ಯವಹಾರಗಳು' ಎಂದು ಪಟ್ಟಿಮಾಡಲಾಗಿದೆ.ಮತ್ತು 232 ಪ್ರಕರಣಗಳೊಂದಿಗೆ, ಮಹಾರಾಷ್ಟ್ರವು ಅತಿ ಹೆಚ್ಚು ಸಂಖ್ಯೆಯಲ್ಲಿ 'ಅಕ್ರಮ ಸಂಬಂಧ' ಎನ್ನುವ ಉದ್ದೇಶದಲ್ಲಿ ಕೊಲೆ ಪ್ರಕರಣವನ್ನು ಹೊಂದಿದೆ.

ಕ್ರೈಮ್‌ ಶೋ ಪ್ರೇರಣೆ, ಐವರು ಅಪ್ರಾಪ್ತರಿಂದ ಶಾಲಾ ಬಾಲಕನ ಕೊಲೆ!

ಕೋಲ್ಕತ್ತ ಸುರಕ್ಷಿತ ನಗರ: ಹೊಸದಾಗಿ ಬಿಡುಗಡೆಯಾದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಯ ಪ್ರಕಾರ, ಕೋಲ್ಕತ್ತಾ  (Kolkatta) 2021 ರಲ್ಲಿ ಸುರಕ್ಷಿತ ನಗರವಾಗಿ ಹೊರಹೊಮ್ಮಿದೆ, ಇದು ಸತತ ಎರಡನೇ ವರ್ಷವಾಗಿದೆ. ಅದರ ಜನಸಂಖ್ಯೆಯ ಪ್ರತಿ ಲಕ್ಷಕ್ಕೆ ಕಡಿಮೆ ಸಂಖ್ಯೆಯ ಕಾಗ್ನೈಸಬಲ್ ಅಪರಾಧಗಳು ವರದಿಯಾಗಿರುವುದು ಇದಕ್ಕೆ ಕಾರಣ. ಈ ವರ್ಷದ ಅಂಕಿಅಂಶಗಳ ಬಿಡುಗಡೆಯ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಿ 2018, 2020 ಮತ್ತು 2021 ರಲ್ಲಿ ಕೋಲ್ಕತ್ತಾ ಮೂರು ಬಾರಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಎನ್‌ಸಿಆರ್‌ಬಿ ಪ್ರಕಾರ 2019 ರಲ್ಲಿ ಕೋಲ್ಕತ್ತದ ಅಂಕಿ ಅಂಶ ಸ್ವೀಕರಿಸದ ಕಾರಣ ಆ ವರ್ಷ ಕೋಲ್ಕತ್ತ ಈ ಪಟ್ಟಿಯಲ್ಲಿರಲಿಲ್ಲ. 256.8 ಅಂಕಗಳೊಂದಿಗೆ, ಪುಣೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ, ಹೈದರಾಬಾದ್ (259.9), ಕಾನ್ಪುರ (336.5), ಬೆಂಗಳೂರು (427.2), ಮತ್ತು ಮುಂಬೈ (428.4) ನಂತರದ ಸ್ಥಾನದಲ್ಲಿವೆ.
 

Follow Us:
Download App:
  • android
  • ios