ಇದು ಕಲಿಯುಗ ಇಲ್ಲಿ ಏನು ಬೇಕಾದರೂ ಆಗುತ್ತೆ. ಅಂಥದ್ದೊಂದು ಪ್ರಕರಣಕ್ಕೆ ಸಾಕ್ಷಿ ಎನ್ನುವಂಥ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ. ವಯೋವೃದ್ಧ ತಾಯಿಯನ್ನು ನೋಡಿಕೊಳ್ಳುವುದೇ ಭಾಗ್ಯ ಎಂದುಕೊಳ್ಳುವ ಜನರ ನಡುವೆ, ಕಿವುಡಿ ತಾಯೊಯೊಬ್ಬಳು ತನ್ನ ಕೊನೆಗಾಲದ ಕಷ್ಟಗಳಿಗೆ ಇರಲಿ ಎಂದು ಕೂಡಿಇಟ್ಟಿದ್ದ ಹಣವನ್ನು ಪುತ್ರನೊಬ್ಬ ಎಗರಿಸಿಕೊಂಡು ಹೋದ ಘಟನೆ ನಡೆದಿದೆ.
ಅಹಮದಾಬಾದ್ (ಆ. 27): ಶಾಲೆಗೆ ಮಗ ಅಳುತ್ತಾ ಹೋಗುವಾಗ ಗಂಡನ ಕಿಸೆಯಿಂದ ಹಣ ತೆಗೆದು, ಮಗನ ಕಿಸೆಗೆ ಹಾಕುತ್ತಿದ್ದ ತಾಯಿ 'ಹೋಗ್ಬೇಕಾದ್ರೆ ಚಾಕೋಲೆಟ್ ತಗೊಂಡ್ ಹೋಗು' ಎಂದು ಹೇಳ್ತಾಳೆ. ಇಂಥ ತಾಯಂದಿರರು ಈಗಲೂ ಇದ್ದಾರೆ. ಮಗ ಕಲಿತು ದೊಡ್ಡವನಾದ್ಮೇಲೆ ನನ್ನ ಸಾಕ್ತಾನೆ ಅನ್ನೋ ನಿರೀಕ್ಷೆ ಇಟ್ಟುಕೊಂಡು ಕಲಿಸುವ ಪೋಷಕರ ಮನಕಲುಕುವ ಸುದ್ದಿ ಇದು. ಅಹಮದಾಬಾದ್‌ನಲ್ಲಿ ವಯೋವೃದ್ಧ ತಾಯಿಯೊಬ್ಬಳಿಗೆ ವಂಚಿಸಿ, ಆಕೆಯ ಅಷ್ಟೂ ಉಳಿತಾಯದ ಹಣವನ್ನು ಸ್ವಂತ ಪುತ್ರನೇ ಎಗರಿಸಿಕೊಂಡು ಹೋದ ಘಟನೆ ನಡೆದಿದೆ. ನಿಮ್ಮ ಮಗ ಇಂಥ ಕೆಲಸ ಮಾಡಿದ್ದಾನೆ ಎಂದು ಪೊಲೀಸರು ಹೇಳಿದರೂ ಆಕೆಗೆ ಅರ್ಥವಾಗಿಲ್ಲ. ಯಾಕೆಂದರೆ, ಆಕೆಗೆ ಕಿವಿಯೇ ಕೇಳುವುದಿಲ್ಲ. ಕೊನೆಗೆ ತಾಯಿಯ ಸಹೋದರನ ದೂರಿನ ಆಧಾರದ ಮೇಲೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ಪುತ್ರನ ಶೋಧ ಕಾರ್ಯ ಆರಂಭ ಮಾಡಿದ್ದಾರೆ. ಪುತ್ರನ ವಿರುದ್ಧ ವೇಜಲ್‌ಪುರ ಪೊಲೀಸರು ವಂಚನೆ ಮತ್ತು ನಂಬಿಕೆ ದ್ರೋಹದ ಪ್ರಕರಣವನ್ನು ದಾಖಲಿಸಿದ್ದಾರೆ. ವೇಜಲ್‌ಪುರ ಪೊಲೀಸರು ಪರಸ್ ಮಂಜ್ರೇಕರ್ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. ಕಲಾವತಿ ಖಂಡೇಲ್ವಾಲ್ ಹೆಸರಿನ ವಯಸ್ಸಾದ ತಾಯಿಯು ಕೊನೆಗಾಲದಲ್ಲಿ ಬೇಕಾಗುತ್ತದೆ ಎಂದು ದುಡಿಯುವ ದಿನದಲ್ಲಿ ಹಣವನ್ನು ಕೂಡಿಟ್ಟಿದ್ದಳು. ಆದರೆ, ದಿನ ಕಳೆದ ಹಾಗೆ ಕಿವುಡುತನ ಆಕೆಗೆ ಬಾಧಿಸಿತ್ತು.
ವಂಚನೆ ಬಗ್ಗೆ ತಿಳಿದಿರಲಿಲ್ಲ: ಇಷ್ಟು ದಿನಗಳ ಕಾಲ ಮಗನೊಂದಿಗೆ ವಾಸ ಮಾಡುತ್ತಿದ್ದ ತಾಯಿಗೆ ತನಗೆ ವಂಚನೆ ಆಗಿದೆ ಎನ್ನುವುದೇ ತಿಳಿದಿರಲಿಲ್ಲ. ಈ ಬಗ್ಗೆ ತಾಯಿಯ ಸಹೋದರನಿಗೆ ಅನುಮಾನ ಬಂದ ಕಾರಣ ಕೇಸ್ ದಾಖಲು ಮಾಡಿದ್ದ. ಡಿಸಿಪಿ ವಲಯ 7 ಬಿಯು ಜಡೇಜಾ ಮತ್ತು ವೆಜಲ್‌ಪುರ ಪೊಲೀಸರಿಂದ ವೃದ್ಧೆ ಸಹಾಯ ಪಡೆದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಕಲಬುರಗಿ: ತೋಳ ದಾಳಿಗೆ 9 ತಿಂಗಳ ಹಸುಗೂಸು ಬಲಿ
ಏಕಾಂಗಿಯಾಗಿ ಮಗನನ್ನು ಬೆಳೆಸಿದ್ದ ಕಲಾವತಿ: ಕಲಾವತಿಯ ಸಹೋದರ ಅಶೋಕ್ ಖಂಡೇಲ್ವಾಲ್ (52) ವೆಜಾಲ್‌ಪುರ ಪೊಲೀಸರಿಗೆ ಎಫ್‌ಐಆರ್ ದಾಖಲಿಸಿದ ನಂತರ ಪುತ್ರ ಪರಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸರ್ಕಾರಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಲಾವರಿ ಅವರು ಮನೋಜ್ ಮಂಜ್ರೇಕರ್ ಅವರೊಂದಿಗೆ ಪ್ರೇಮ ವಿವಾಹವಾಗಿದ್ದರು ಮತ್ತು ದಂಪತಿಗೆ ಪರಾಸ್ ಹೆಸರಿನ ಮಗ ಹುಟ್ಟಿದ್ದ. ಆದರೆ, ದಾಂಪತ್ಯದಲ್ಲಿ ವೈಮನಸ್ಯ ತಲೆದೋರಿದ ಕಾರಣಕ್ಕೆ ಮನೋಜ್ ಮಂಜ್ರೇಕರ್, ಪತ್ನಿಯನ್ನು ತೊರೆದಿದ್ದ. ಇದರಿಂದಾಗಿ ಏಕಾಂಗಿಯಾಗಿ ಪರಸ್‌ನನ್ನು ಕಲಾವತಿ ಬೆಳೆಸಿದ್ದರು. ಆತನಿಗೆ ಯಾವುದೇ ಕುಂದುಕೊರತೆಯಾಗದಂತೆ ನೋಡಿಕೊಂಡಿದ್ದರು. ಈ ನಡುವೆ ಸರ್ಕಾರಿ ಕೆಲಸದಿಂದ ನಿವೃತ್ತರಾಗಿದ್ದ ಕಲಾವತಿಗೆ ಇದರ ಸೌಲಭ್ಯವಾಗಿ 25 ಲಕ್ಷ ರೂಪಾಯಿ ಬಂದಿತ್ತು. ಮೋಸ ಮಾಡಿ ಚೆಕ್‌ನಲ್ಲಿ ಆಕೆಯ ಸಹಿಯನ್ನು ಪಡೆದುಕೊಂಡ ಪುತ್ರ, ಬ್ಯಾಂಕ್‌ನಲ್ಲಿದ್ದ ಅಷ್ಟೂ ಹಣವನ್ನು ಡ್ರಾ ಮಾಡಿಕೊಂಡು ಪರಾರಿಯಾಗಿದ್ದಲ್ಲದೆ, ತಾಯಿಯನ್ನು ನಿರ್ಗತಿಕಳಾಗಿ ಬಿಟ್ಟಿದ್ದಾನೆ.
ಮಠದ ಮಾಜಿ ಆಡಳಿತಾಧಿಕಾರಿ ವಿರುದ್ಧ ಅತ್ಯಾಚಾರ ಯತ್ನ ದೂರು ನೀಡಿದ Muruga Matha ವಾರ್ಡನ್
ಆಹಾರ ಖರೀದಿಸಲು ಹಣವಿಲ್ಲ: ಈ ಕುರಿತಾಗಿ ಅಶೋಕ್, ಪರಸ್‌ನಿಗೆ ಕರೆ ಕೂಡ ಮಾಡಿದ್ದ. ಈ ವೇಳೆ ಮನೆಗೆ ಬಂದು ಹಣ ಹಿಂದಿರುಗಿಸುವುದಾಗಿ ಹೇಳಿದ್ದ. ಆದರೆ, ಈವರೆಗೂ ಆತನ ಮನೆಗೂ ಬಂದಿಲ್ಲ. ಹಣವನ್ನು ವಾಪಸ್ ನೀಡಿಲ್ಲ. ವೇಜಲಪುರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಈ ಕುರಿತಾಗಿಯೂ ಮಾಹಿತಿ ನೀಡಲಾಗಿದೆ. ಕಲಾವತಿ ತನ್ನ ಮನೆಯಲ್ಲಿ ತನ್ನ ಎರಡು ನಾಯಿಗಳೊಂದಿಗೆ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಪೊಲೀಸರು ಮೊದಲು ಆಕೆಯನ್ನು ಭೇಟಿ ಮಾಡಿದಾಗ ಆಕೆಯ ಖಾತೆಯಲ್ಲಿ ಕೇವಲ 1200 ರೂಪಾಯಿ ಇತ್ತು. ಹಾಗೂ ಆಹಾರ ಖರೀದಿ ಮಾಡಲು ಅಕೆಯ ಬಳಿ ಹಣವಿರಲಿಲ್ಲ.
