Asianet Suvarna News Asianet Suvarna News

ಕ್ರೈಮ್‌ ಶೋ ಪ್ರೇರಣೆ, ಐವರು ಅಪ್ರಾಪ್ತರಿಂದ ಶಾಲಾ ಬಾಲಕನ ಕೊಲೆ!

ಕ್ರೈಮ್‌ ಶೋನಿಂದ ಪ್ರೇರಣೆ ಪಡೆದುಕೊಂಡು, ಶಾಲೆಯ ಸಹಪಾಠಿಯನ್ನೇ ಅಪಹರಣಗೈದು ಕೊಲೆ ಮಾಡಿರು ಪ್ರಕರಣ ಉತ್ತರ ಪ್ರದೇಶದ ಬುಲಂದ್‌ಶಹರ್‌ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣದಲ್ಲಿ ಸಂಬಂಧಪಟ್ಟಂತೆ 15, 16 ವರ್ಷ ವಯಸ್ಸಿನ 5 ಮಂದಿ ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ.

Inspired by crime show Five juveniles were arrested in Uttar Pradesh Bulandshahr district killing of school boy san
Author
Bengaluru, First Published Jul 16, 2022, 10:52 PM IST

ನೋಯ್ಡಾ (ಜುಲೈ 16): ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ಶಾಲಾ ಬಾಲಕನನ್ನು ಅಪಹರಿಸಿ ನಂತರ ಕೊಂದ ಆರೋಪದ ಮೇಲೆ ಐವರು ಅಪ್ರಾಪ್ತರನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  ಕೊಲೆಯಾಗಿರುವ ಏಳು ವರ್ಷದ ಶಾಲಾ ಬಾಲಕ ಹಾಗೂ ಬಾಲಾಪರಾಧಿಗಳು ಒಂದೇ ಶಾಲೆಯಲ್ಲಿ ಓದುತ್ತಿದ್ದರು. ಹಣ ಸುಲಿಗೆ ಮಾಡುವ ಕಾರಣಕ್ಕೆ ಬಾಲಕನನ್ನು ಅಪಹರಣ ಮಾಡಿದ್ದರು. ಟಿವಿಯಲ್ಲಿನ ಜನಪ್ರಿಯ ಅಪರಾಧ ಕಾರ್ಯಕ್ರಮದಿಂದ ಅವರು ಸ್ಫೂರ್ತಿ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಾಲಾಪರಾಧಿಗಳು 15 ಮತ್ತು 16 ವರ್ಷ ವಯಸ್ಸಿನವರು ಮತ್ತು 10 ನೇ ತರಗತಿಯಲ್ಲಿ ಓದುತ್ತಿದ್ದಾರೆ ಎಂದು ಬುಲಂದ್‌ಶಹರ್ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಶ್ಲೋಕ್ ಕುಮಾರ್ ತಿಳಿಸಿದ್ದಾರೆ. 'ಜುಲೈ 9 ರಂದು ಬಾಲಕನನ್ನು  ಶಾಲೆಯಿಂದ ಬಾಲಾಪರಾಧಿಗಳು ಅಪಹರಣ ಮಾಡಿದ್ದಾರೆ. ಬಳಿಕ ಅಲಿಗಢಕ್ಕೆ ಕರೆದುಕೊಂಡು ಹೋಗಿದ್ದಾರೆ. ಅವರು ಅವರು ಕರವಸ್ತ್ರದಿಂದ ಉಸಿರುಗಟ್ಟಿಸಿ ಕೊಂದಿದ್ದಲ್ಲದೆ, ಬಾಲಕನ ದೇಹವನ್ನು ನದಿಗೆ ಎಸೆದಿದ್ದಾರೆ. ಪೊಲೀಸರು ಶವವನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ ಬಳಿಕ ಪ್ರಕರಣ ಪತ್ತೆಯಾಗಿದೆ' ಎಂದು ಕುಮಾರ್‌ ಹೇಳಿದ್ದಾರೆ.

40 ಸಾವಿರ ನಷ್ಟ ಸರಿದೂಗಿಸಲು ಅಪಹರಣ: ಚಟಾರಿ ಪೊಲೀಸ್ ಠಾಣೆ ವ್ಯಾಪ್ತಿಯ (Chhatari police station) ಶೇಖಪುರ್ ಗ್ರಾಮದಲ್ಲಿ( Shekhupur village) ವಾಸಿಸುವ ಮಗುವಿನ ತಂದೆ ನೀಡಿದ ದೂರಿನ ಆಧಾರದ ಮೇಲೆ ಮೊದಲು ಐಪಿಸಿ ಸೆಕ್ಷನ್ 363 (ಕಾಣೆಯಾದ) ಅಡಿಯಲ್ಲಿ ಎಫ್‌ಐಆರ್ (FIR) ದಾಖಲಿಸಲಾಗಿದೆ. "ತನಿಖೆಯ ನಂತರ, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು 201 (ಸಾಕ್ಷ್ಯ ಕಣ್ಮರೆಯಾಗಲು ಕಾರಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ. ಅಪ್ರಾಪ್ತ ಅಪರಾಧಿಗಳ ಪೈಕಿ ಒಬ್ಬ ಹುಡುಗ ಹಣಕಾಸು ವಹಿವಾಟು ಮಾಡುವಾಗ 40 ಸಾವಿರ ರೂಪಾಯಿಗಳನ್ನು ಕಳೆದುಕೊಂಡಿದ್ದ. ಅದನ್ನು ಹೇಗೆ ಸಂಪಾದಿಸುವುದು ಎನ್ನುವ ನಿಟ್ಟಿನಲ್ಲಿ ಚಿಂತಿತನಾಗಿದ್ದ ಎಂದು ಎಸ್ಎಸ್‌ಪಿ ಕುಮಾರ್‌ ಹೇಳಿದ್ದಾರೆ. ಬಳಿಕ ಈ ವಿಚಾರವನ್ನು ಶಾಲೆಯಲ್ಲಿನ ತನ್ನ ಸ್ನೇಹಿತರಿಗೆ ತಿಳಿಸಿದ್ದಾನೆ. ಆತನ ನಷ್ಟವನ್ನು ಸರಿದೂಗಿಸಲು ಬಾಲಕನನ್ನು ಅಪಹರಣ (Kidnap) ಮಾಡಿ ಹಣಕ್ಕಾಗಿ ಬೇಡಿಕೆ ಇಡುವ ಪ್ಲ್ಯಾನ್‌ ಮಾಡಿದ್ದರು. ಕ್ರೈಮ್‌ ಶೋಗಳನ್ನು (Crime Show) ನೋಡುತ್ತಿದ್ದ ಹುಡುಗರು, ಶಾಲೆಯಿಂದ ಬಾಲಕನನ್ನು ಅಪಹಣ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಹುಡುಗರೆಲ್ಲಾ ಸೇರಿ ಮಾಡಿದ್ರು ಕಿಡ್ನಾಪ್‌: ಜುಲೈ 9 ರಂದು ಸಾವಿಗೀಡಾದ ಬಾಲಕ ಹಾಗೂ ಇನ್ನೂ ಕೆಲವು ವಿದ್ಯಾರ್ಥಿಗಳು ಮೊದಲಿಗೆ ಶಾಲೆಗ ಬಂದಿದ್ದರು. ಮೊದಲಿಗೆ ಈತನ ಅಪಹರಣ ಮಾಡುವ ಉದ್ದೇಶ ಇವರಿಗೆ ಇದ್ದಿರಲಿಲ್ಲ. ಆದರೆ, ಶಾಲೆಗೆ (School) ಆತ ಬೇಗನೇ ಬಂದಿದ್ದ ಕಾರಣಕ್ಕೆ, ಹೆಚ್ಚಿನ ವಿದ್ಯಾರ್ಥಿಗಳು ಶಾಲೆಗೆ ಬಂದಿರದನ್ನು ನೋಡಿ ಈತನನ್ನು ಅಪಹರಣ ಮಾಡಿದ್ದಾರೆ' ಎಂದು ಐಪಿಎಸ್‌ ಅಧಿಕಾತಿ ತಿಳಿಸಿದ್ದಾರೆ. "ಅದೇ ಶಾಲೆಯಲ್ಲಿ ಓದಿದ ಬಾಲಕ ತನ್ನ ತರಗತಿಯ ಹೊರಗೆ ಆಟವಾಡುತ್ತಿರುವುದನ್ನು ನೋಡಿದ್ದಾರೆ. ಆಗ ಅದೇ ಶಾಲೆಯಲ್ಲಿಓದುತ್ತಿದ್ದ ಹುಡುಗ, ಬಾಲಕನನ್ನು ಶಾಲೆಯ ಹೊರಗಡೆ ಕರೆದುಕೊಂಡು ಬಂದಿದ್ದಾನೆ. ಬಳಿಕ ಇತರ ಶಾಲೆಯ ಹುಡುಗರು ಈತನಿಗೆ ಇಲ್ಲಿ ಜೊತೆಯಾಗಿದ್ದು ಅಪಹರಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಿಂದ ಇಬ್ಬರು ಆರೋಪಿಗಳು ಬಾಲಕನನ್ನು ಮೋಟಾರ್ ಸೈಕಲ್‌ನಲ್ಲಿ ಅಲಿಗಢಕ್ಕೆ ಕರೆದೊಯ್ದರೆ, ಮತ್ತೊಬ್ಬರು ಬಸ್ ಮೂಲಕ ಅಲ್ಲಿಗೆ ತಲುಪಿದ್ದಾರೆ. ಆರೋಪಿಗಳಲ್ಲಿ ಒಬ್ಬನಿಗೆ ಅಲ್ಲಿ ಮನೆ ಇದ್ದ ಕಾರಣ ಹುಡುಗನನ್ನು ಅಲಿಘರ್‌ಗೆ ಕರೆದೊಯ್ದಿದ್ದರು ಮತ್ತು ಹುಡುಗನನ್ನು ಅಲ್ಲಿ ಒತ್ತೆಯಾಳಾಗಿ ಇರಿಸಲಾಗಿತ್ತು ಎಂದು ಅಧಿಕಾರಿ ಹೇಳಿದರು.

ಇದನ್ನೂ ಓದಿ: ತಮಾಷೆಗಾಗಿ ಗುದನಾಳಕ್ಕೆ ಏರ್ ಕಂಪ್ರೆಸರ್ ಪೈಪ್ ತುರುಕಿದ ಸ್ನೇಹಿತ: ಯುವಕ ಸಾವು

ಬಾಲಕನನ್ನು ಕೊಂದು ನದಿಗೆ ಎಸೆದರು: ತಮ್ಮ ಯೋಜನೆ ಯಶಸ್ವಿಯಾಗದಿದ್ದರೆ ಏನು ಮಾಡಬೇಕೆಂದು ಯೋಚಿಸಿದ ಬಾಲಾಪರಾಧಿಗಳು ಭಯಭೀತರಾಗಿದ್ದಲ್ಲದೆ, ತೊಂದರೆಗೆ ಸಿಲುಕಬಹುದು ಎಂದು ಭಾವಿಸಿದ್ದರು. "ಕೊನೆಗೆ ಭಯದಿಂದ ಅವನನ್ನು ಕೊಲ್ಲಲು ನಿರ್ಧರಿಸಿದರು ಮತ್ತು ಅವನ ದೇಹವನ್ನು ನದಿಯಲ್ಲಿ ಎಸೆದರು. ಅವರು ಅವನ ಕರವಸ್ತ್ರವನ್ನು ಪ್ರತ್ಯೇಕ ಪ್ರದೇಶದಲ್ಲಿ ಪೊದೆಗಳಲ್ಲಿ ಎಸೆದು ಬುಲಂದ್‌ಶಹರ್‌ಗೆ ಮರಳಿದರು" ಎಂದು ಕುಮಾರ್ ಹೇಳಿದರು. ಮರುದಿನ ಮಗುವಿನ ಮೃತದೇಹ ಅಲಿಗಢದ ಸಮೀಪದ ನದಿಯಲ್ಲಿ ಪತ್ತೆಯಾಗಿದ್ದು, ಬುಲಂದ್‌ಶಹರ್‌ನಿಂದ ನಾಪತ್ತೆಯಾಗಿರುವ ಬಾಲಕ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು. "ಇದಾದ ನಂತರ ಹೆಚ್ಚಿನ ಪೊಲೀಸರನ್ನು ಪ್ರಕರಣದ ಮೇಲೆ ನಿಯೋಜಿಸಿ,  ಆರು ತಂಡಗಳನ್ನು ರಚಿಸಲಾಯಿತು, 100 ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ವಿಶ್ಲೇಷಿಸಿ, 200ಕ್ಕೂ ಅಧಿಕ ಜನರನ್ನು ವಿಚಾರಣೆ ಮಾಡಲಾಗಿತ್ತು' ಎಂದು ತಿಳಿಸಿದ್ದಾರೆ ಪೊಲೀಸರು ಅಂತಿಮವಾಗಿ ಪ್ರಕರಣವನ್ನು ಭೇದಿಸಿ ಐವರು ಬಾಲಾಪರಾಧಿಗಳನ್ನು ಬಂಧಿಸಿದ್ದಾರೆ, ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ:  Bengaluru Crime News: ಪ್ರೇಮಕ್ಕೆ ವಿರೋಧ: ಯುವತಿ ಬಾಯ್‌ಫ್ರೆಂಡ್ ಕೊಂದ ಮಾವ

ಕ್ರೈಮ್ ಶೋ ಪ್ರೇರಣೆ: "ಆರಂಭದಲ್ಲಿ ಅವರು ಪೊಲೀಸರನ್ನು ದಾರಿತಪ್ಪಿಸಲು ಪ್ರಯತ್ನಿಸಿದರು ಮತ್ತು ಹುಡುಗನ ನಾಪತ್ತೆಯ ಬಗ್ಗೆ ವಿವಿಧ ಕಥೆಗಳನ್ನು ಹೇಳಿದರು. ಆದರೆ, ಅಂತಿಮವಾಗಿ ಅವರು ಅಪರಾಧವನ್ನು ಒಪ್ಪಿಕೊಂಡರು ಮತ್ತು ಅಪಹರಣದ ಯೋಜನೆಗಾಗಿ ಟಿವಿಯಲ್ಲಿನ ಜನಪ್ರಿಯ ಅಪರಾಧ ಕಾರ್ಯಕ್ರಮದಿಂದ ಅವರು ಹೇಗೆ ಸ್ಫೂರ್ತಿ ಪಡೆದರು ಎಂಬುದನ್ನು ಬಹಿರಂಗಪಡಿಸಿದರು," ಕುಮಾರ್ ಹೇಳಿದರು. ಪ್ರಕರಣದ ಮುಂದಿನ ಕಾನೂನು ಕ್ರಮಕ್ಕಾಗಿ ಆರೋಪಿಗಳನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ ಎಂದು ಅವರು ಹೇಳಿದರು.

Follow Us:
Download App:
  • android
  • ios