ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿರುವಾಗ ರೈಲಿಗೆ ಸಿಲುಕುವುದರಿಂದ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಘಟನೆ ಮಧುರಾನಗರದ ರೈಲ್ವೆ ಸೇತುವೆ ಮೇಲೆ ನಡೆದಿದ್ದು, ಭದ್ರತಾ ಸಿಬ್ಬಂದಿ ಸಿಎಂ ನಾಯ್ಡು ಅವರನ್ನು ಟ್ರ್ಯಾಕ್‌ನ ಬದಿಗೆ ಎಳೆದು ಕಿರಿದಾದ ಪಾದಚಾರಿ ಮಾರ್ಗಕ್ಕೆ ತಂದಿದ್ದಾರೆ.
ವಿಜಯವಾಡ (ಸೆ.7): ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಗುರುವಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿರುವಾಗ ರೈಲಿಗೆ ಸಿಲುಕುವುದರಿಂದ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಮಧುರಾನಗರದ ರೈಲ್ವೆ ಸೇತುವೆ ಮೇಲೆ ಈ ಘಟನೆ ನಡೆದಿದೆ. ಪ್ರವಾಹ ಪರಿಸ್ಥಿತಿ ಬಗ್ಗೆ ಸಿಎಂ ರೈಲ್ವೆ ಸೇತುವೆ ಮೇಲೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದರು. ಕೇವಲ ರೈಲ್ವೇ ಸಂಚಾರಕ್ಕೆಂದೇ ವಿನ್ಯಾಸಗೊಳಿಸಲಾದ ಸೇತುವೆಯಲ್ಲಿ ಪಾದಚಾರಿಗಳಿಗೆ ಕಿರಿದಾದ ಸ್ಥಳ ಬಿಟ್ಟು ದೊಡ್ಡ ಸ್ಥಳಾವಕಾಶವಿಲ್ಲ. ಆಗ ನಾಯ್ಡು ಹಳಿ ಮಧ್ಯದಲ್ಲೇ ನಡೆದು ಹೋಗುತ್ತಿದ್ದಾಗ, ಅದೇ ಹಳಿಯಲ್ಲಿ ಇದ್ದಕ್ಕಿದ್ದಂತೆ ರೈಲು ಬಂದಿದೆ. ತ್ವರಿತವಾಗಿ ಯೋಚಿಸಿದ ಭದ್ರತಾ ಸಿಬ್ಬಂದಿ ತಕ್ಷಣವೇ ನಾಯ್ಡು ಅವರನ್ನು ಟ್ರ್ಯಾಕ್‌ನ ಬದಿಗೆ ಎಳೆದು ಕಿರಿದಾದ ಪಾದಚಾರಿ ಮಾರ್ಗಕ್ಕೆ ತಂದಿದ್ದಾರೆ. ಕೆಲವೇ ಇಂಚಿನಲ್ಲಿ ನಾಯ್ಡು ಪಾರಾಗಿದ್ದಾರೆ.
Viral Video: ಕುತ್ತಿಗೆವರರೆಗೆ ಬಂದ ಪ್ರವಾಹದ ನೀರಿನಲ್ಲಿ ನವಜಾತ ಶಿಶುವನ್ನು ಕ್ರೇಟ್‌ನಲ್ಲಿ ಸಾಗಿಸಿದ ವ್ಯಕ್ತಿ!
ನಾಯ್ಡು ಕಳೆದ 5 ದಿನಗಳಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ, ಆಗಾಗ್ಗೆ ಭದ್ರತಾ ಪ್ರೋಟೋಕಾಲ್‌ಗಳನ್ನು ನಿರ್ಲಕ್ಷಿಸಿದ್ದಾರೆ. ಅವರು ಮೊಣಕಾಲು ಆಳದ ನೀರಿನಲ್ಲಿ ನಡೆದುಕೊಂಡು ಎನ್‌ಡಿಅರ್‌ಎಫ್ ಬೋಟ್‌ಗಳಿಗೆ ಜಿಗಿದ ಪ್ರಸಂಗಗಳೂ ನಡೆದಿವೆ.
ಮೋದಿ 3.0 ಸಂಚಕಾರದ ಸಂಚು!; ಪಾಕಿಸ್ತಾನದಲ್ಲಿ ಆಡಿದ ಆಟ ಭಾರತದಲ್ಲೂ ಆಡುತ್ತಾ ಅಮೆರಿಕಾ?
