Viral Video: ಕುತ್ತಿಗೆವರರೆಗೆ ಬಂದ ಪ್ರವಾಹದ ನೀರಿನಲ್ಲಿ ನವಜಾತ ಶಿಶುವನ್ನು ಕ್ರೇಟ್‌ನಲ್ಲಿ ಸಾಗಿಸಿದ ವ್ಯಕ್ತಿ!
Andhra floods: ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ವ್ಯಾಪಕ ಹಾನಿ ಮತ್ತು ಸಾವುನೋವುಗಳು ಸಂಭವಿಸಿವೆ. ಒಂದು ಹೃದಯ ವಿದ್ರಾವಕ ದೃಶ್ಯದಲ್ಲಿ, ನವಜಾತ ಶಿಶುವೊಂದನ್ನು ಪ್ಲಾಸ್ಟಿಕ್ ಕ್ರೇಟ್‌ನಲ್ಲಿ ಪ್ರವಾಹದ ನೀರಿನ ಮೂಲಕ ಸಾಗಿಸಲಾಗುತ್ತಿದೆ.
ಹೈದರಾಬಾದ್ (ಸೆ.4): ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಭಾರೀ ಮಳೆಯ ಕಾರಣದಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಮಂಗಳವಾರ ವೈರಲ್ ಆಗಿರುವ ದೃಶ್ಯವೊಂದರಲ್ಲಿ ಕುತ್ತಿಗೆವರೆಗೆ ಬಂದ ಪ್ರವಾಹದ ನೀರಿನಲ್ಲಿ ನವಜಾತ ಶಿಶುವನ್ನು ಪ್ಲಾಸ್ಟಿಕ್ ಕ್ರೇಟ್‌ನಲ್ಲಿ ಸಾಗಿಸುತ್ತಿರುವ ದಾರುವ ದೃಶ್ಯ ಕಂಡಿದೆ. ಇಬ್ಬರು ವ್ಯಕ್ತಿಗಳು ತಮ್ಮ ಕುತ್ತಿಗೆಯವರೆಗೂ ಬಂದ ನೀರಿನಲ್ಲಿ ಪ್ಲಾಸ್ಟಿಕ್ ಕ್ರೇಟ್‌ನಲ್ಲಿ ನವಜಾತ ಶಿಶುವನ್ನು ಸಾಗಿಸುತ್ತಿದ್ದಾರೆ. ಈ ದೃಶ್ಯ ದಕ್ಷಿಣದ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಪ್ರವಾಹದಿಂದ ಉಂಟಾದ ಸಂಕಟದ ದೃಶ್ಯಗಳಲ್ಲಿ ಅತ್ಯಂತ ದಾರುಣವಾಗಿದೆ.ಹೈ ಆಂಗಲ್‌ನಲ್ಲಿ ತೆಗೆದುಕೊಳ್ಳಲಾಗಿರುವ ವಿಡಿಯೋದಲ್ಲಿ ನವಜಾತ ಶಿಶುವನ್ನು ಫೋಮ್ ಬೋರ್ಡ್‌ನ ಮೇಲೆ ಇರಿಸಲಾಗಿರುವ ಹಳದಿ ಬಣ್ಣದ ಪ್ಲಾಸ್ಟಿಕ್ ಕ್ರೇಟ್‌ನಲ್ಲಿ ದೂಡಿಕೊಂಡು ಹೋಗಲಾಗುತ್ತಿದೆ. ಆಂಧ್ರಪ್ರದೇಶದ ವಿಜಯವಾಡದ ದೃಶ್ಯ ಇದು ಎನ್ನಲಾಗಿದೆ. ಆಂಧ್ರಪ್ರದೇಶದ ವಿಜಯವಾಡದ ದೃಶ್ಯ ಇದಾಗಿದ್ದು, ಸಿಂಗ್ ನಗರ ಪ್ರದೇಶದಲ್ಲಿ ಪ್ರವಾಹದಿಂದಾಗಿ ರಸ್ತೆಗಳು ನದಿಗಳಂತೆ ಕಂಡಿದ್ದವು. ಇದರಿಂದಾಗಿ ಮನೆಗಳು ಸಂಪೂರ್ಣವಾಗಿ ಜಲಾವೃತವಾಗಿದ್ದರಿಂದ ಕುಟುಂಬ ಮಗುವನ್ನು ತಮ್ಮ ಮನೆಯಿಂದ ಸ್ಥಳಾಂತರ ಮಾಡಬೇಕಾದ ಪರಿಸ್ಥಿತಿ ಎದುರಾಗಿತ್ತು.
ಇನ್ನೊಂದು ವಿಡಿಯೋದಲ್ಲಿ 200ಕ್ಕೂ ಅಧಿಕ ಕಾರುಗಳು, ಅದರಲ್ಲಿ ಹೆಚ್ಚಿನವು ಐಷಾರಾಮಿ ಎಸ್‌ಯುವಿ ಕಾರುಗಳಾಗಿದ್ದು, ನಗರದಲ್ಲಿನ ಪ್ರವಾಹಕ್ಕೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಮಂಗಳವಾರದ ಹೊತ್ತಿಗೆ, ವಿಜಯವಾಡದಲ್ಲಿ 323 ರೈಲುಗಳನ್ನು ರದ್ದುಗೊಳಿಸಲಾಗಿದೆ, 170 ಮಾರ್ಗಗಳನ್ನು ಬದಲಾಯಿಸಲಾಗಿದೆ ಮತ್ತು 12 ಭಾಗಶಃ ರದ್ದುಗೊಳಿಸಲಾಗಿದೆ.
ಧಾರಾಕಾರ ಪ್ರವಾಹದಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 31 ಜನರು ಸಾವನ್ನಪ್ಪಿದ್ದಾರೆ ಮತ್ತು ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದು, ಲಕ್ಷಗಟ್ಟಲೆ ಜನರನ್ನು ರಕ್ಷಿಸಿ ಪರಿಹಾರ ಶಿಬಿರಗಳಿಗೆ ಕೊಂಡೊಯ್ಯಲಾಗಿದೆ. ಅತಿವೃಷ್ಟಿಯಿಂದಾಗಿ ಹಲವು ಕೈಗಾರಿಕೆಗಳು ಕೂಡ ಭಾರೀ ನಷ್ಟ ಅನುಭವಿಸಿವೆ.
ಭಾರತೀಯ ವಾಯುಪಡೆಯು ನೂರಾರು ರಕ್ಷಣಾ ಅಧಿಕಾರಿಗಳು ಮತ್ತು ಟನ್‌ಗಳಷ್ಟು ತುರ್ತು ಸಹಾಯವನ್ನು ಎರಡೂ ರಾಜ್ಯಗಳಿಗೆ ರವಾನಿಸಿದೆ. ಮಳೆಯು ಪ್ರತಿ ವರ್ಷ ವ್ಯಾಪಕ ವಿನಾಶವನ್ನು ಉಂಟುಮಾಡುತ್ತದೆ, ಆದರೆ ಹವಾಮಾನ ಬದಲಾವಣೆಯು ಹವಾಮಾನದ ಮಾದರಿಗಳನ್ನು ಬದಲಾಯಿಸುತ್ತಿದೆ ಮತ್ತು ವಿಪರೀತ ಹವಾಮಾನ ಘಟನೆಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
ಟಿಬಿ ಡ್ಯಾಂ ರೀತಿ ಪ್ರಕಾಶಂ ಬ್ಯಾರೇಜ್ ಹಾನಿ: 3 ದೋಣಿಗಳು ಡಿಕ್ಕಿ ಹೊಡೆದು ಬ್ಯಾರೇಜ್ ಗೇಟ್ ಪಿಲ್ಲರ್‌ಗೆ ಹಾನಿ
ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ದಿಢೀರ್ ಭೇಟಿ ನೀಡುತ್ತಿದ್ದಾರೆ ಮತ್ತು ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್ (ಐವಿಆರ್ಎಸ್) ಮೋಡ್ ಮೂಲಕ ನೇರವಾಗಿ ಜನರಿಂದ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು. "ಜನರು ಕಷ್ಟಪಡುತ್ತಿದ್ದಾರೆ. ಹಾವು ಮತ್ತು ಚೇಳುಗಳು ಮನೆಗಳಿಗೆ ನುಗ್ಗುತ್ತಿವೆ. ನಾನು ಐವಿಆರ್ಎಸ್ ನಡೆಸುತ್ತಿದ್ದೇನೆ ಮತ್ತು ಕೆಲವು ಸ್ಥಳಗಳಿಗೆ ಆಹಾರ ತಲುಪುತ್ತಿಲ್ಲ ಎಂಬ ಮಾಹಿತಿ ಪಡೆಯುತ್ತಿದ್ದೇನೆ. ಈ ಸಂದರ್ಭದಲ್ಲಿ ಎಲ್ಲರೂ ಮಾನವೀಯತೆಯಿಂದ ಕೆಲಸ ಮಾಡಿ' ಎಂದು ನಾಯ್ಡು ಮನವಿ ಮಾಡಿದ್ದಾರೆ.
ಆಂಧ್ರ, ತೆಲಂಗಾಣದಲ್ಲಿ ಭಾರೀ ಮಳೆ, 1 ಕೋಟಿ ದಾನ ಮಾಡಿದ ಜೂ.ಎನ್‌ಟಿಆರ್!