ನರೇಂದ್ರ ಮೋದಿಯ ರ‍್ಯಾಲಿ ವೇಳೆ ನಡೆದ ಬಾಂಬ್ ಸ್ಫೋಟ ಪ್ರಕರಣ 2013ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಪಾಟ್ನಾದಲ್ಲಿ ನಡೆಸಿದ್ದ ರ‍್ಯಾಲಿ ರ‍್ಯಾಲಿ ವೇಳೆ ಸರಣಿ ಸ್ಫೋಟ, ಕಾಲ್ತುಳಿತಕ್ಕೆ 6 ಸಾವು 10 ಆರೋಪಿಗಳ ಪೈಕಿ 9 ಮಂದಿ ದೋಷಿಗಳೆಂದ ಘೋಷಿಸಿದ ಕೋರ್ಟ್  

ನವದೆಹಲಿ(ಅ.28): 2013ರ ಪಟ್ನಾ ಸರಣಿ ಸ್ಪೋಟ ಪ್ರಕರಣದ 10 ಆರೋಪಿಗಳ ಪೈಕಿ 9 ಜನರನ್ನು ದೋಷಿಗಳೆಂದು ಘೋಷಿಸಿರುವ ಸ್ಥಳೀಯ ಎನ್‌ಐಎ ವಿಶೇಷ ನ್ಯಾಯಾಲಯ, ಓರ್ವನನ್ನು ಸಾಕ್ಷ್ಯಾಧಾರಗಳ ಕೊರತೆ ಕಾರಣ ಖುಲಾಸೆಗೊಳಿಸಿದೆ. ದೋಷಿಗಳಿಗೆ ನ.1ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಾಗುವುದು.

ಕಾಬೂಲ್ ಮಸೀದಿ ಬಳಿ ಬಾಂಬ್ ಸ್ಫೋಟ, ಉಗ್ರರ ಆಡಳಿತದಲ್ಲಿ ಇನ್ನೇನು ನಿರೀಕ್ಷಿಸಲು ಸಾಧ್ಯ?

ಆಗಿನ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಮತ್ತು 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟಿದ್ದ ನರೇಂದ್ರ ಮೋದಿ, 2013ರ ಅ.27ರಂದು ಪಾಟ್ನಾದಲ್ಲಿ ಆಯೋಜಿಸಿದ್ದ ಹೂಂಕರ್‌ ರಾರ‍ಯಲಿಯಲ್ಲಿ ಭಾಗವಹಿಸಿದ್ದರು. ಅದೇ ದಿನ ರಾರ‍ಯಲಿ ಸ್ಥಳದಲ್ಲಿ ಸರಣಿ ಸ್ಫೋಟ ನಡೆದಿತ್ತು. ಈ ವೇಳೆ ನಡೆದ ಕಾಲ್ತುಳಿತದಲ್ಲಿ 6 ಜನರು ಸಾವನ್ನಪ್ಪಿದ್ದರು.

ಆರ್ಟಿಕಲ್ 370 ರದ್ದಾಗಿ ಎರಡು ವರ್ಷ, ಕಾಶ್ಮೀರ ಮಸೀದಿ ಬಳಿ ಸ್ಫೋಟ!

ಹೈದರ್ ಅಲಿ ಅಲಿಯಾಸ್ 'ಬ್ಲ್ಯಾಕ್ ಬ್ಯೂಟಿ', ನಮನ್ ಅನ್ಸಾರಿ, ಮುಜಿಬುಲ್ಲಾ ಅನ್ಸಾರಿ, ಇಮ್ತಿಯಾಜ್ ಆಲಂ, ಅಹ್ಮದ್ ಹುಸೇನ್, ಫಿರೋಜ್ ಅಸ್ಲಾಂ, ಇಮ್ತಿಯಾಜ್ ಅನ್ಸಾರಿ, ಇಫ್ತಿಕರ್ ಆಲಂ ಮತ್ತು ಅಜರುದ್ದೀನ್ ಖುರೇಸಿ ಮೋದಿ ರ‍್ಯಾಲಿ ವೇಳೆ ಸರಣಿ ಬಾಂಬ್ ಸ್ಫೋಟಿಸಿದ ಹಿಂದಿನ ರೂವಾರಿಗಳು. ಇವರನ್ನು ವಿಶೇಷ ನ್ಯಾಯಾಲಯ ದೋಷಿಗಳೆಂದು ಘೋಷಿಸಿದೆ. ಮತ್ತೊರ್ವ ಫಕ್ರುದ್ದೀನ್ ಮೇಲಿನ ಆರೋಪ ಸಾಬೀತು ಪಡಿಸಲು ಸಾಕ್ಷ್ಯಾಧಾರ ಕೊರತೆ ಎದುರಾಗಿತ್ತು. ಹೀಗಾಗಿ ಕೋರ್ಟ್ ಫಕ್ರುದ್ದೀನ್‌ನ್ನು ಆರೋಪದಿಂದ ಖುಲಾಸೆಗೊಳಿಸಿದೆ.

ಚೀನಾ ನಿರ್ಮಿತ ಡ್ರೋನ್, ಸ್ಫೋಟಕ್ಕೆ RDX ಬಳಕೆ; ದಾಳಿ ಹಿಂದಿನ ಸ್ಫೋಟಕ ಸತ್ಯ ಬಹಿರಂಗ!

ಸರಣಿ ಬಾಂಬ್ ಸ್ಫೋಟದಿಂದ ಭಯಭೀತಗೊಂಡ ಜನ ಘಟನಾ ಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ತೆರಲು ಧಾವಂತ ತೋರಿಸಿದ್ದರು. ಪರಿಣಾಮ ಕಾಲ್ತುಳಿತಕ್ಕೆ 6 ಮಂದಿ ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ 90 ಮಂದಿ ಗಾಯಗೊಂಡಿದ್ದರು. ಮೊದಲ ಬಾಂಬ್ ಸ್ಫೋಟ ಪಾಟ್ನಾ ರೈಲು ನಿಲ್ದಾಣದ 10ನೇ ಫ್ಲಾಟ್‌ಫಾರ್ಮ್‌ನಲ್ಲಿ ಸಂಭವಿಸಿತ್ತು. ಇನ್ನುಳಿದ ಸ್ಫೋಟ ಗಾಂಧಿ ಮೈದಾನದಲ್ಲಿ ನಡೆದಿತ್ತು. ಮೋದಿ ಭಾಷಣ ಮಾಡಲಿದ್ದ ಕೆಲವೇ ಕ್ಷಣಗಳ ಮೊದಲು ಬಾಂಬ್ ಸ್ಫೋಟಿಸಲಾಗಿತ್ತು. ಆದರೆ ಮೋದಿ ರ‍್ಯಾಲಿ ಮುಂದುವರಿಸಿದ್ದರು.

ಜಮ್ಮು ಸ್ಫೋಟದ ಬೆನ್ನಲ್ಲೇ ತಪ್ಪಿತು ಮಹಾ ದುರಂತ; ಲಷ್ಕರ್ ಉಗ್ರ, 6 ಕೆಜಿ IED ವಶ!

ಘಟನೆಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತಿರಲಿಲ್ಲ. ಆದರೆ ಪ್ರಕರಣ ಸಂಬಂಧ ಬಂಧಿತ 10 ಜನರು ನಿಷೇಧಿತ ಸಿಮಿ ಮತ್ತು ಇಂಡಿಯನ್‌ ಮುಜಾಹಿದಿನ್‌ ಕಾರ್ಯಕರ್ತರಾಗಿದ್ದರು ಎಂದು ತನಿಖೆ ವೇಳೆ ಕಂಡುಬಂದಿತ್ತು.

ಇದು ಅಂತರ್ ರಾಜ್ಯ ಸಂಚು. ಆರೋಪಿಗಳು ಜಾರ್ಖಂಡ್‌ನಿಂದ ಸ್ಫೋಟಕ ಸಾಮಾಗ್ರಿಗಳನ್ನು ಸಂಗ್ರಹಿಸಿದ್ದರು. ಬಳಿಕ ರಾಯಪುರದಲ್ಲಿ ಸ್ಫೋಟಕ ತಯಾರಿಸಲಾಗಿತ್ತು. ಇನ್ನು ನರೇಂದ್ರ ಮೋದಿ ರ್ಯಾಲಿಯಲ್ಲಿ ಸ್ಫೋಟಿಸಲು ಬಿಹಾರದ ಪಾಟ್ನಾಗೆ ತಂದು ಬಾಂಬ್ ಸ್ಫೋಟಿಸಲಾಗಿದೆ. ಹೀಗಾಗಿ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತೆ NIA ತನಿಖಾ ಸಂಸ್ಥೆ ಪರ ವಕೀಲ ಲಲ್ಲನ್ ಪ್ರಸಾದ್ ಸಿನ್ಹ ವಾದಿಸಿದ್ದಾರೆ. ನವೆಂಬರ್ 1 ರಂದು ಕೋರ್ಟ್ ಶಿಕ್ಷೆ ಪ್ರಕಟಿಸಲಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ(NIA ) 2013ರ ನವೆಂಬರ್ ತಿಂಗಳಲ್ಲಿ ಬಾಂಬ್ ಸ್ಫೋಟ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ಆರಂಭಿಸಿತು. 2014ರಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಹಾಗೂ ಬಾಂಬ್ ಸ್ಪೋಟದ ಮಾಸ್ಟರ್ ಮೈಂಡ್ ಹೈದರ್ ಆಲಿಯನ್ನು ಬಂಧಿಸಲಾಗಿತ್ತು. ಬಾಂಬ್ ಸ್ಫೋಟ ಪ್ರಕರಣ ಸಂಬಂಧಿಸಿ ನಿಷೇಧಿತ ಇಂಡಿಯನ್ ಮುಜಾಹಿದ್ದಿನ್ ಸಂಘಟನೆಹಾಗೂ ಸೆಮಿ ಸಂಘಟನೆಯ 9 ಶಂಕಿತರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಇನ್ನು 250 ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.

9 ದೋಷಿಗಳ ಪೈಕಿ ಹೈದರ್ ಅಲಿ, ಇಮ್ತಿಯಾಜ್ ಅನ್ಸಾರಿ, ಉಮರ್ ಸಿದ್ದಿಕಿ, ಅಮರುದ್ದೀನ್ ಖುರೇಶಿ, ಹಾಗೂ ಮುಜುಬುಲ್ಲಾ ಅನ್ಸಾರಿ ಸೇರಿದಂತೆ ಐವರು ಈಗಾಗಲೇ ಮಹಾಬೋದಿ ಸ್ಫೋಟ ಪ್ರಕರಣದಲಲಿ ಜೀವಾವದಿ ಶಿಕ್ಷೆಗೆ ಗುರಿಯಾಗಿದ್ದಾರೆ. ಮೋದಿ ರ್ಯಾಲಿಗೂ 3 ತಿಂಗಳ ಮೊದಲು ಬೋದ್ ಗಯಾ ಮಹಾಬೋದಿ ಬ್ಲಾಸ್ಟ್ ಪ್ರಕರಣದಲ್ಲಿ ಈ ಐವರು ದೋಷಿಗಳಾಗಿದ್ದಾರೆ. ಉಗ್ರರು ಆತ್ಮಾಹುತಿ ದಾಳಿ ಮೂಲಕ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದರು. ಆದರೆ ಮೋದಿ ಭದ್ರತೆಯಿಂದ ಪ್ಲಾನ್ ಬದಲಾಯಿಸಿದ ಉಗ್ರರು, ಬಾಂಬ್ ಸ್ಫೋಟಿಸಿದ್ದರು.