ಜಮ್ಮು ಏರ್‌ಬೇಸ್ ಮೇಲಿನ ಡ್ರೋನ್ ದಾಳಿ ತನಿಖೆ ಭಾರತದ ಆತಂಕ ಹೆಚ್ಚಿಸಿದ ದಾಳಿ ಹಿಂದಿನ ಸತ್ಯ ಚೀನಾ ನಿರ್ಮಿತ ಡ್ರೋನ್, ಸ್ಫೋಟಕ್ಕೆ RDX, ನೈಟ್ರೇಟ್ ಬಳಕೆ

ನವದೆಹಲಿ(ಜು.05):  ಭಾರತದ ಮೇಲೆ ಮೊಟ್ಟ ಮೊದಲ ಡ್ರೋನ್ ದಾಳಿ ಬಳಿಕ ಹೊರಬರುತ್ತಿರುವ ಮಾಹಿತಿ ಆತಂಕ ಹೆಚ್ಚಿಸುತ್ತಿದೆ. ಜಮ್ಮುವಿನಲ್ಲಿರುವ ಮಿಲಿಟರಿ ಏರ್‌ಬೇಸ್ ಮೇಲೆ ನಡೆದ ಡ್ರೋನ್ ದಾಳಿ ಕುರಿತು ತನಿಖೆ ತೀವ್ರಗೊಂಡಿದೆ. ಈ ದಾಳಿಗೆ ಬಳಸಲಾಗಿರುವ ಡ್ರೋನ್ ಚೀನಾ ನಿರ್ಮಿತ ಡ್ರೋನ್. ಇನ್ನು ಸ್ಫೋಟಕ್ಕೆ ಬಳಸಿರುವ IEDಯಲ್ಲಿ RDX ಹಾಗೂ ನೈಟ್ರೇಟ್ ಮಿಶ್ರನ ಮಾಡಲಾಗಿದೆ ಅನ್ನೋದು ಬಹಿರಂಗವಾಗಿದೆ.

ದಕ್ಷಿಣ ಭಾರತದ 2 ರಾಜ್ಯದ ಮೇಲೆ ಡ್ರೋನ್ ದಾಳಿ ಸಾಧ್ಯತೆ; ಎಚ್ಚರಿಕೆ ನೀಡಿದ ಗುಪ್ತಚರ ಇಲಾಖೆ!.

ಫೋರೆನ್ಸಿಕ್ ತನಿಖೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಈ ಮಾಹಿತಿ ತನಿಖೆಗೆ ಮತ್ತಷ್ಟು ವೇಗ ನೀಡಿದೆ. ಈ ಹಿಂದೆ ಪಾಕಿಸ್ತಾನದಿಂದ ಭಾರತದ ಗಡಿ ಪ್ರವೇಶಿಸಿದ ಡ್ರೋನ್ ಕೂಡ ಚೀನಾ ನಿರ್ಮಿತ ಡ್ರೋನ್ ಆಗಿತ್ತು ಅನ್ನೋದು ಇಲ್ಲಿ ಗಮನಿಸಲೇಬೇಕು.

ಭಾರತೀಯ ವಾಯುಪಡೆಯ ಏರ್‌ಬೇಸ್ ಮೇಲೆ ಎರಡು ಸ್ಫೋಟಕಗಳು ತುಂಬಿದ ಡ್ರೋನ್‌ ದಾಳಿ ನಡೆಸಿ ಬಾಂಬ್ ಸ್ಫೋಟಿಸಿತ್ತು. ಹೆಚ್ಚಿನ ಅನಾಹುತ ಸಂಭವಿಸಿದ್ದರೂ ಇದು ಭಾರತದ ರಕ್ಷಣಾ ವ್ಯವಸ್ಥೆಗೆ ಸವಾಲು ಒಡ್ಡಿತ್ತು. ಈ ದಾಳಿ ಹಿಂದೆ ಪಾಕಿಸ್ತಾನ ಕೈವಾಡವಿದೆ ಅನ್ನೋ ಮಾತುಗಳು ಬಲವಾಗುತ್ತಿದೆ.

ಜಮ್ಮುವಿನಲ್ಲಿ ಮತ್ತೆ ಡ್ರೋನ್: ದಾಳಿಯ ತನಿಖೆ NIA ವಹಿಸಿದ ಗೃಹ ಸಚಿವಾಲಯ!.

ಇತ್ತೀಚೆಗೆ ಶ್ರೀನಗರದಲ್ಲಿ ಭದ್ರತಾ ದೃಷ್ಟಿಯಿಂದ ಡ್ರೋನ್ ಬಳಕೆ ಬ್ಯಾನ್ ಮಾಡಲಾಗಿದೆ. ಕಾಶ್ಮೀರ ಹಾಗೂ ಚೀನಾ ಗಡಿಯುದ್ದಕ್ಕೂ ಕಣ್ಗಾವಲು ಹೆಚ್ಚಾಗಿದೆ. ಇನ್ನು ಡ್ರೋನ್ ನಿಯಂತ್ರಿಸಬಲ್ಲ ರೇಡಾರ್ ಅಭಿವೃದ್ಧಿ ಹಾಗೂ ಖರೀದಿಗೆ ಭಾರಚೀಯ ಸೇನೆ ಮುಂದಾಗಿದೆ.