ಕಾಬೂಲ್ ಮಸೀದಿ ಬಳಿ ಬಾಂಬ್ ಸ್ಫೋಟ, ಉಗ್ರರ ಆಡಳಿತದಲ್ಲಿ ಇನ್ನೇನು ನಿರೀಕ್ಷಿಸಲು ಸಾಧ್ಯ?
- ಆಫ್ಘಾನಿಸ್ತಾನ ರಾಜಧಾನಿಯಲ್ಲಿ ಬಾಂಬ್ ಸ್ಫೋಟ
- ಮಸೀದಿ ಮುಂಭಾಗದಲ್ಲಿ ಸ್ಫೋಟ, ಹಲವರ ಸಾವು
- ಸ್ಫೋಟ ಖಚಿತ ಪಡಿಸಿದ ತಾಲಿಬಾನ್, ಮುಂದುವರಿದ ರಕ್ಷಣಾ ಕಾರ್ಯ
ಕಾಬೂಲ್(ಅ.03): ತಾಲಿಬಾನ್ ಉಗ್ರರು(Taliban Terror) ಆಫ್ಘಾನಿಸ್ತಾನ(Afghanistan) ಕೈವಶ ಮಾಡಿದ ಬಳಿಕ ಜನ ಆತಂಕದಿಂದ ದಿನ ದೂಡುತ್ತಿದ್ದಾರೆ. ಗುಂಡಿನ ಶಬ್ದ, ಮಿಸೈಲ್ ಮೊರೆತ ಹಾಗೂ ಬಾಂಬ್ ಶಬ್ದಗಳೇ ಪ್ರತಿ ದಿನ ಅಲರಾಂ ಆಗಿದೆ. ಇದೀಗ ಕಾಬೂಲ್‌ನಲ್ಲಿರುವ ಈದ್ಗಾ ಮಸೀದಿ ಮುಂಭಾಗದ ಬಾಗಿಲ ಬಳಿ ಬಾಂಬ್(Bomb Blast) ಸ್ಫೋಟಿಸಲಾಗಿದೆ. ಪರಿಣಾಮ ಹಲವರು ಸಾವನ್ನಪ್ಪಿದ್ದಾರೆ. ಇದೀಗ ರಕ್ಷಣಾ ಕಾರ್ಯ ನಡೆಯುತ್ತಿದೆ.
ಆಫ್ಘಾನ್ ಗಡಿಯಲ್ಲಿ ಆತ್ಮಾಹುತಿ ಬಾಂಬರ್ ಪಡೆ ನಿಯೋಜನೆ, ತಾಲಿಬಾನ್ ನಡೆಯಿಂದ ಹೆಚ್ಚಾದ ಆತಂಕ!ಮುಜಾಹಿದ್ ತಾಯಿ ಪವಿತ್ರ ಪ್ರಾರ್ಥನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಈದ್ಗಾ ಮಸೀದಿಯಲ್ಲಿ(mosque) ಸೇರಿದ್ದರು. ಮಸೀದಿ ಮೌಲ್ವಿ ಪ್ರಾರ್ಥನೆಗೆ(Prayer) ಎಲ್ಲರನ್ನು ಆಹ್ವಾನಿಸಿದ್ದರು. ಹೀಗಾಗಿ ಹೆಚ್ಚಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಬಾಂಬ್ ಸ್ಫೋಟಗೊಂಡಿದೆ. ಮಕ್ಕಳು, ಮಹಿಳೆಯರು ಸೇರಿ ಹಲವರು ಸಾವನ್ನಪ್ಪಿದ್ದಾರೆ. ಸದ್ಯ ಯಾವುದೇ ಅಂಕೆ ಸಂಖ್ಯೆ ಲಭ್ಯವಾಗಿಲ್ಲ.
ತಾಲಿಬಾನ್ ಉಗ್ರರ ಹೊಸ ಪ್ಲಾನ್, ಪಾಕಿಸ್ತಾನ 150 ಅಣ್ವಸ್ತ್ರ ವಶಪಡಿಸಿ ಸ್ಫೋಟಿಸಲು ಸ್ಕೆಚ್
ಬಾಂಬ್ ಸ್ಫೋಟಗೊಂಡಿರುವ ಕುರಿತು ತಾಲಿಬಾನ್ ಮಾಧ್ಯಮ ವಕ್ತಾರ ಝಬೀಉಲ್ಲಾ ಮುಜಾಹಿದ್ ಸ್ಪಷ್ಟಪಡಿಸಿದ್ದಾರೆ. ಸ್ಫೋಟದ ಬೆನ್ನಲ್ಲೇ ಮಸೀದಿ ರಸ್ತೆಯನ್ನು ಬ್ಲಾಕ್ ಮಾಡಲಾಗಿದೆ. ಇತ್ತ ಗಾಯಗೊಂಡವರನ್ನು ಸ್ಥಳೀಯರು ಆಸ್ಪತ್ರೆ(Hospital) ದಾಖಲಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಸಂಘಟನೆ ಈ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ.
ಅಪ್ಘಾನಿಸ್ತಾನ... ಇಡೀ ದೇಶವೇ ಜೈಲು, ಬದುಕಿದರೂ ಸತ್ತವರ ಜೀವನ: ಜೀವ ಉಳಿಸಿಕೊಂಡವನ ಕತೆ!
ತಾಲಿಬಾನ್ ಉಗ್ರರಿಗೆ ಆಡಳಿತ ಸವಾಲಾಗುತ್ತಿದೆ. ಕಾರಣ ತಾಲಿಬಾನ್ ಉಗ್ರರು ಆಫ್ಘಾನಿಸ್ತಾನ ಕೈವಶ ಮಾಡಿದ ಬಳಿಕ ಕಾಬೂಲ್ ವಿಮಾನ(Kabul Airport Blast) ನಿಲ್ದಾಣದಲ್ಲಿ ಬಾಂಬ್ ಸ್ಫೋಟಗೊಂಡು 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಈ ಸ್ಫೋಟದಲ್ಲಿ 13 ಅಮೆರಿಕ ಯೋಧರು(America Soldier) ಹುತಾತ್ಮರಾಗಿದ್ದರು.
ಉಗ್ರರ ಆಡಳಿತದಲ್ಲಿ ತಾಲಿಬಾನ್ ಕಣ್ತಪ್ಪಿಸಿ ಇನ್ನಿತರ ಉಗ್ರ ಸಂಘಟನೆ ಬಾಂಬ್ ಸ್ಫೋಟಿಸಲು ಸಾಧ್ಯವೇ? ಇದು ತಾಲಿಬಾನ್ ಉಗ್ರರ ಕೃತ್ಯ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಕೈವಾಡವಿದೆ ಎಂದು ಮತ್ತೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.