Asianet Suvarna News Asianet Suvarna News

ಜಮ್ಮು ಸ್ಫೋಟದ ಬೆನ್ನಲ್ಲೇ ತಪ್ಪಿತು ಮಹಾ ದುರಂತ; ಲಷ್ಕರ್ ಉಗ್ರ, 6 ಕೆಜಿ IED ವಶ!

  • ಜಮ್ಮುವಿನಲ್ಲಿ ಹೆಚ್ಚಾಯ್ತು ಉಗ್ರರ ಉಪಟಳ, ಆತಂಕದಲ್ಲಿ ಜನ
  • ಭಾರತೀಯ ಸೇನೆ ವಾಯುನೆಲೆ ಸ್ಫೋಟದ ಬೆನ್ನಲ್ಲೇ ತಪ್ಪಿದ ದುರಂತ
  • ಲಷ್ಕರ್ ಉಗ್ರ ಹಾಗೂ ಬರೋಬ್ಬರಿ 6 ಕೆಜಿ IED ಸ್ಫೋಟಕ ವಶಕ್ಕೆ
Jammu Kashmir Police recovered 6 kg IED explosive Arrest LeT terror operative ckm
Author
Bengaluru, First Published Jun 27, 2021, 5:33 PM IST

ಜಮ್ಮು(ಜೂ.27):  ಕಣಿವೆ ರಾಜ್ಯದ ಜಮ್ಮುವಿನ ಭಾರತೀಯ ಸೇನೆ ವಾಯುನೆಲೆಯಲ್ಲಿ ಸಂಭವಿಸಿದ ಡ್ರೋನ್ ಸ್ಫೋಟ ಮತ್ತೊಮ್ಮೆ ದೇಶದ ಭದ್ರತೆಗೆ ಸವಾಲೆಸೆದಿದೆ. ಏರ್‌ಬೇಸ್ ತಾಂತ್ರಿಕ ಪ್ರದೇಶದಲ್ಲಿ 5 ನಿಮಿಷಗಳ ಅಂತರದಲ್ಲಿ 2 ಸ್ಫೋಟ ಸಂಭವಿಸಿದೆ. ಈ ಘಟನೆ ಬೆನ್ನಲ್ಲೇ ಇದೀಗ ಜಮ್ಮುವಿನಲ್ಲಿ ಮತ್ತೊಂದು ಮಹಾದುರಂತ ತಪ್ಪಿದೆ. ಜಮ್ಮುವಿನಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ನಡೆಸಿದ ಲಷ್ಕರ್ ಇ ತೈಬಾ ಉಗ್ರ ಹಾಗೂ ಆತನಿಂದ ಬರೋಬ್ಬರಿ 6 ಕೆಜಿ IED ಸ್ಫೋಟಕಗಳನ್ನು ಜಮ್ಮು ಪೊಲೀಸರು ವಶಪಡಿಸಿದ್ದಾರೆ.

5 ನಿಮಿಷದ ಅಂತರದಲ್ಲಿ 2 ಸ್ಫೋಟ, ಜಮ್ಮು ಏರ್‌ಫೋರ್ಟ್‌ನಲ್ಲಿ ಆತಂಕ!

ಪಾಕಿಸ್ತಾನದ ಉಗ್ರ ಸಂಘಟನೆ ಲಷ್ಕರ್ ಇ ತೈಬಾದ ಉಗ್ರನೋರ್ವ ಜಮ್ಮುವಿನಲ್ಲಿ ವಿದ್ವಂಸಕ ಕೃತ್ಯ ಎಸೆಗಲು ಮಾಸ್ಟರ್ ಪ್ಲಾನ್ ಮಾಡಿದ್ದ. ಉಗ್ರನನ್ನು ಜಮ್ಮು ಪೊಲೀಸರು ಬಂಧಿಸಿದ್ದಾರೆ. ಜಮ್ಮು ಕಾಶ್ಮೀರ ಡಿಜಿಪಿ ದಿಲ್‌ಭಾಗ್ ಸಿಂಗ್ ಘಟನೆ ಕುರಿತು ಸುದ್ಧಿಗೋಷ್ಠಿ ನಡೆಸಿದ್ದಾರೆ.

ಲಷ್ಕರ್‌ನ ಟಾಪ್ ಉಗ್ರವಾದಿ ಮುದಾಸಿರ್ ಪಂಡಿತ್ ಸೇರಿ ಮೂವರ ಎನ್ಕೌಂಟರ್

ಲಷ್ಕರ್ ಇ ತೈಬಾ ಉಗ್ರ ಸಂಘಟನೆ ವ್ಯವಸ್ಥಿತವಾಗಿ ರೂಪಿಸಿದ ಪ್ಲಾನ್ ಇದು. ಆದರೆ ಈ ಕುರಿತು ಮಾಹಿತಿ ಪಡೆದು ಉಗ್ರರನ್ನು ಬಂಧಿಸಿ ದುರಂತ ತಪ್ಪಿಸುವಲ್ಲಿ ಜಮ್ಮು ಪೊಲೀಸರು ಯಶಸ್ವಿಯಾಗಿದ್ದಾರೆ. ಮತ್ತಷ್ಟು ಉಗ್ರರು ಈ ಕೃತ್ಯಕ್ಕಾಗಿ ಸಜ್ಜಾಗಿರುವ ಮಾಹಿತಿ ಇದೆ. ಹೀಗಾಗಿ ಕಾರ್ಯಚರಣೆ ಮುಂದುವರಿದಿದೆ ಎಂದು ದಿಲ್‌ಬಾಗ್ ಸಿಂಗ್ ಹೇಳಿದ್ದಾರೆ.

Follow Us:
Download App:
  • android
  • ios