Asianet Suvarna News Asianet Suvarna News

ಕೋಲ್ಕತಾದಲ್ಲಿ ಆದಂತೆ ನಿಮಗೂ ಮಾಡ್ತಿನಿ ಎಂದು ಹೆದರಿಸಿದ ಆಟೋ ಚಾಲಕನಿಗೆ ಸರಿಯಾಗಿ ಬಾರಿಸಿದ ಬಾಲಕಿ

ಕೋಲ್ಕತಾದಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿ ಶಾಲಾ ಬಾಲಕಿಯರನ್ನು ಆಟೋ ಚಾಲಕನೊಬ್ಬ ಬೆದರಿಸಿದ ಘಟನೆ ನಾಗ್ಪುರದಲ್ಲಿ ನಡೆದಿದೆ. ಬಾಲಕಿಯರ ಜೋರಾದ ಮಾತಿನಿಂದ ಕೋಪಗೊಂಡ ಚಾಲಕ, ಅವರಿಗೂ ಅದೇ ಗತಿ ಮಾಡುವುದಾಗಿ ಬೆದರಿಸಿದ್ದಾನೆ. ಧೈರ್ಯ ತೋರಿದ ಬಾಲಕಿಯರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

Nagpur Auto driver beaten up by school girl and crowd after he threatens school girls as will do same to you as kolkata incident  akb
Author
First Published Aug 25, 2024, 1:32 PM IST | Last Updated Aug 26, 2024, 8:49 AM IST

ನಾಗಪುರ: ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೋಲ್ಕತಾದಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪ್ರತಿಯೊಬ್ಬ ಹೆಣ್ಣು ಮಕ್ಕಳ ಪೋಷಕರು ಮಕ್ಕಳನ್ನು ಹೊರಗೆ ಕಳುಹಿಸುವ ಮೊದಲು ಕಳುಹಿಸಬೇಕೆ ಬೇಡವೇ ಎಂದು ನೂರು ಸಲ ಯೋಚನೆ ಮಾಡುವಂತೆ ಮಾಡಿದೆ ಈ ಘಟನೆ. ಹೀಗಾಗಿ ದೇಶದ ಜನ ವೈದ್ಯೆಯ ಕೊಲೆ ಪ್ರಕರಣದ ವಿರುದ್ಧ ಎಲ್ಲೆಡೆ ದೇಶದಲ್ಲಿ ಧ್ವನಿ ಎತ್ತಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ವಾತಾವಣವಿರುವಾಗ ಮಹಾರಾಷ್ಟ್ರದ ನಾಗ್ಪುರದ ಕಾಮುಕ ಆಟೋ ಚಾಲಕನೋರ್ವ ಶಾಲೆಗೆ ಹೋಗುತ್ತಿದ್ದ ಮಕ್ಕಳಿಗೆ ಹೇಗೆ ಬೆದರಿಸಿದ್ದಾನೆ  ನೋಡಿ. ಇದರಿಂದ ಸಿಟ್ಟಿಗೆದ್ದ ಜನ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಆಟೋ ಚಾಲಕ ಹೇಳಿದ್ದೇನು?

ಕೋಲ್ಕತಾದಲ್ಲಿ ವೈದ್ಯೆಗೆ ಆದಂತ ಗತಿಯನ್ನೇ ನಿಮಗೂ ಮಾಡುತ್ತೇನೆ ಎಂದು ಈ ಆಟೋ ಚಾಲಕ ಶಾಲೆಗೆ ಹೋಗುತ್ತಿದ್ದ ಹೆಣ್ಣು ಮಕ್ಕಳಿಗೆ ಬೆದರಿಸಿದ್ದಾನೆ. ಕೂಡಲೇ ಗಟ್ಟಿಗಿತ್ತಿ ಬಾಲಕಿ ಆಟೋ ಚಾಲಕನಿಗೆ ಆಟೋ ನಿಲ್ಲಿಸುವಂತೆ ಹೇಳಿದ್ದಾಳೆ. ಆತ ಆಟೋ ನಿಲ್ಲಿಸಿದ್ದಾನೆ. ಈ ವೇಳೆ ಆಟೋದಿಂದ ಆತನನ್ನು ಹೊರಗೆಳೆದ ಮಕ್ಕಳು ಆತನಿಗೆ ಹೊಡೆಯಲು ಶುರು ಮಾಡಿದ್ದಾರೆ. ಈ ವೇಳೆ ಅಲ್ಲಿ ಸೇರಿದ ಜನ ಬಾಲಕಿಯರಿಂದ ವಿಚಾರ ತಿಳಿದು ಅವರು ಕೂಡ ಸೇರಿಕೊಂಡು ಆತನಿಗೆ ಸರಿಯಾಗಿ ಬಾರಿಸಿದ್ದಾರೆ. 

ಪ್ರಿಯಾಂಕಾನೂ ಅಲ್ಲ ರಾಹುಲ್‌ ಕೂಡ ಅಲ್ಲ ಹಾಗಿದ್ರೆ ಸೋನಿಯಾ ಗಾಂಧಿ ಫೇವರೇಟ್ ಚೈಲ್ಡ್‌ ಯಾರು?

ಜೋರಾಗಿ ಮಾತಾಡಿದ್ದಕ್ಕೆ ಬೆದರಿಸಿದ ಆಟೋ ಚಾಲಕ

ಈ ಘಟನೆ ಕಳೆದ ಮಂಗಳವಾರ ನಡೆದಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ  ಶಾಲಾ ಬಾಲಕಿಯರು ಜೋರಾಗಿ ಮಾತನಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಆಟೋ ಚಾಲಕ ನಿಧಾನವಾಗಿ ಮಾತನಾಡುವಂತೆ ಬಾಲಕಿಯರಿಗೆ ಹೇಳಿದ್ದಾನೆ. ಈ ವೇಳೆ ವಾದವಾಗ್ವಾದ ಶುರುವಾಗಿದೆ. ಈ ಗಲಾಟೆಯ ವೇಳೆ ಬಾಲಕಿಯರ ವಿರುದ್ಧ ಆಕ್ರೋಶಗೊಂಡ ಆಟೋ ಚಾಲಕ ಕೋಲ್ಕತಾದ ಆರ್‌ಜಿ ಕಾರ್ ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆಯ ರೇಪ್ & ಮರ್ಡರ್‌ ಪ್ರಕರಣವನ್ನು ಉಲ್ಲೇಖಿಸಿ ನಿಮಗೂ ಇದೇ ಗತಿ ಮಾಡುವೆ ಎಂದಿದ್ದಾನೆ. 

ಆಟೋ ನಿಲ್ಲಿಸಿ ಚಾಲಕನಿಗೆ ಬಾರಿಸಿದ ಬಾಲಕಿಯರು

ಈ ವೇಳೆ ಬಾಲಕಿಯರು ಕೂಡಲೇ ಆಟೋ ನಿಲ್ಲಿಸುವಂತೆ ಹೇಳಿದ್ದಾರೆ. ಅಲ್ಲದೇ ಆತನನ್ನು ಚಾಲಕನ ಸೀಟಿನಿಂದ ಹೊರಗೆಳೆದು ಆತನಿಗೆ ಸರಿಯಾಗಿ ಬಾರಿಸಲು ಶುರು ಮಾಡಿದ್ದಾರೆ. ಇದನ್ನು ನೋಡಿ ಅಲ್ಲಿ ಜನ ಸೇರಿ ಏನೆಂದು ಪ್ರಶ್ನಿಸಿದ್ದಾರೆ. ಆಗ ಬಾಲಕಿಯರು ಚಾಲಕನ ಬೆದರಿಕೆಯ ವಿಚಾರವನ್ನು ಹೇಳಿದ್ದಾರೆ. ಕೂಡಲೇ ಅಲ್ಲಿದ್ದ ಸಾರ್ವಜನಿಕರು ಕೂಡ ಸೇರಿಕೊಂಡು ಆಟೋ ಚಾಲಕನಿಗೆ ಸರಿಯಾಗಿ ಇಕ್ಕಿದ್ದಾರೆ.  ಅಲ್ಲದೇ ಬಾಲಕಿಗೆ ಆತನಿಗೆ ಬಾರಿಸುವಂತೆ ಪ್ರೇರಣೆ ನೀಡಿದ್ದಾರೆ. ಅಲ್ಲದೇ ಬಾಲಕಿಯರಿಗೆ ನೀವು ಹೆದರಬೇಡಿ ಸುರಕ್ಷಿತವಾಗಿರುತ್ತೀರಿ ಎಂದು ಸಮಾಧಾನ ಹೇಳಿದ್ದಾರೆ. 

ಅಪ್ರಾಪ್ತ ಬಾಲಕರಿಂದ ಮದ್ರಾಸದಲ್ಲೇ ಐದು ವರ್ಷದ ಬಾಲಕನ ಹತ್ಯೆ

ಪಾನಮತ್ತನಾಗಿದ್ದ ಆಟೋ ಚಾಲಕ

ಈ ಆಟೋ ಚಾಲಕ ಪಾನಮತ್ತನಾಗಿದ್ದ ಎಂದು ತಿಳಿದು ಬಂದಿದೆ, ನಾಗಪುರದ ಪರ್ಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು,  ವೀಡಿಯೋ ವೈರಲ್ ಆದ ಬಳಿಕವೇ ಘಟನೆ ಬೆಳಕಿಗೆ ಬಂದಿದೆ.  ಒಟ್ಟಿನಲ್ಲಿ ಬಾಲಕಿಯರು ಧೈರ್ಯದಿಂದ ಇಂತಹ ಸ್ಥಿತಿಯನ್ನು ಎದುರಿಸಿದ್ದು, ಪ್ರತಿಯೊಬ್ಬ ಹೆಣ್ಣು ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ಇಂತಹ ಸಾಮಾಜಿಕ ಕ್ರಿಮಿಗಳನ್ನು ಎದುರಿಸುವ ದಿಟ್ಟ ಪಾಠವನ್ನು ಹೇಳಿಕೊಡಬೇಕಿದೆ. ಏನೇ ಆಗಲಿ ಈ ವಿಚಾರವನ್ನು ಮನೆಯವರೆಗೆ ಕೊಂಡೊಯ್ಯದೇ ಪರಿಸ್ಥಿತಿಯನ್ನು ತಾವೇ ನಿಭಾಯಿಸಿದ ಈ ಬಾಲಕಿಯರಿಗೆ ಭೇಷ್ ಎನ್ನಲೇ ಬೇಕು. 

ಅಮೃತಸರದಲ್ಲಿ ಭಯಾನಕ ಘಟನೆ: ಎನ್‌ಆರ್‌ಐಗೆ ಮನೆಯವರ ಮುಂದೆಯೇ ಗುಂಡಿಕ್ಕಿದ ದುಷ್ಕರ್ಮಿಗಳು

 

Latest Videos
Follow Us:
Download App:
  • android
  • ios