ಪ್ರಿಯಾಂಕಾನೂ ಅಲ್ಲ ರಾಹುಲ್ ಕೂಡ ಅಲ್ಲ ಹಾಗಿದ್ರೆ ಸೋನಿಯಾ ಗಾಂಧಿ ಫೇವರೇಟ್ ಚೈಲ್ಡ್ ಯಾರು?
ಸೋನಿಯಾ ಗಾಂಧಿ ಅವರ ಮಕ್ಕಳಿಗಿಂತ ಹೆಚ್ಚು ಪ್ರೀತಿಸುವವರು ಯಾರು ಎಂದು ರಾಹುಲ್ ಗಾಂಧಿ ಬಹಿರಂಗಪಡಿಸಿದ್ದಾರೆ. ಸೋನಿಯಾ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿರುವ ರಾಹುಲ್, ಅವರ ಅಚ್ಚುಮೆಚ್ಚಿನ 'ವ್ಯಕ್ತಿ'ಯನ್ನು ಬಹಿರಂಗಪಡಿಸಿದ್ದಾರೆ.
ಕಾಂಗ್ರೆಸ್ ಸಾಮ್ರಾಜ್ಯವನ್ನು ಬಹುಕಾಲ ಆಳಿದ ಕಾಂಗ್ರೆಸ್ ಪಾಲಿನ ಪ್ರಶ್ನಾತೀತ ನಾಯಕಿ ಸೋನಿಯಾ ಗಾಂಧಿ. ಪ್ರಸ್ತುತ ಚುನಾವಣಾ ರಾಜಕಾರಣದಿಂದ ದೂರ ಸರಿದು, ರಾಜ್ಯಸಭಾ ಸದಸ್ಯರಾಗಿರುವ ಸೋನಿಯಾ ಗಾಂಧಿಗೆ ಇಬ್ಬರು ಮಕ್ಕಳು, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ, ಆದರೆ ಈ ಇಬ್ಬರು ಮಕ್ಕಳು ಕೂಡ ಸೋನಿಯಾ ಗಾಂಧಿಗೆ ಫೇವರೇಟ್ ಅಲ್ವಂತೆ ಹಾಗಿದ್ರೆ ಸೋನಿಯಾ ಗಾಂಧಿಗೆ ಫೇವರೇಟ್ ಯಾರಿರಬಹುದು ಎಂಬ ಪ್ರಶ್ನೆ ಅವರ ವೈಕ್ತಿಕ ಬದುಕಿನ ಬಗ್ಗೆ ಕುತೂಹಲ ಇರುವ ಅನೇಕರನ್ನು ಕಾಡುತ್ತದೆ. ಇದಕ್ಕೆ ಈಗ ಪುತ್ರ ರಾಹುಲ್ ಗಾಂಧಿ ಉತ್ತರ ನೀಡಿದ್ದಾರೆ.
ಇನ್ಸ್ಟಗ್ರಾಮ್‌ನಲ್ಲಿ ರಾಹುಲ್ ಗಾಂಧಿ ಫೋಟೋವೊಂದನ್ನು ಶೇರ್ ಮಾಡಿದ್ದು, ಅದರಲ್ಲಿ ಸೋನಿಯಾ ಗಾಂಧಿ ಜೊತೆ ಅವರ ಫೇವರೇಟ್ ಪರ್ಸನ್ ಕೂಡ ಇದ್ದಾರೆ. ಹಾಗಿದ್ರೆ ಯಾರಿರಬಹುದು ಸೋನಿಯಾ ಗಾಂಧಿ ಇಷ್ಟದ ಪಾಪು. ಸೋನಿಯಾ ಮನೆಯಲ್ಲಿ ಅವರ ಫೇವರೇಟ್ ಆಗಿರುವುದು ನೂರಿ ಅಂತೆ. ಅತ್ತ ಮಗ ರಾಹುಲ್ ಕೂಡ ಅಲ್ಲ ಮಗಳು ಪ್ರಿಯಾಂಕಾ ಕೂಡ ಅಲ್ಲ,
ಒಲಿಂಪಿಕ್ ಪದಕ ಗೆದ್ದು ಬಂದ ಮನು ಭಾಕರ್ ಮೊದಲು ಭೇಟಿಯಾಗಿದ್ದು ಸೋನಿಯಾ ಗಾಂಧಿಯನ್ನ..!
ಯಾರು ಈ ನೂರಿ?
ಈಗ ನೂರಿ ಅಂದ್ರೆ ಯಾರು ಎಂಬ ಕುತೂಹಲ ಅನೇಕರದ್ದು, ಸೋನಿಯಾ ಗಾಂಧಿ ಮನೆಯ ಪ್ರೀತಿಯ ಶ್ವಾನ ಈ ನೂರಿ. ಕೆಲ ವರ್ಷಗಳ ಹಿಂದೆ ಈ ನೂರಿಯನ್ನು ರಾಹುಲ್ ಗಾಂಧಿ ಗೋವಾದ ಪರಿಚಿತರೊಬ್ಬರಿಂದ ಪಡೆದು ತಮ್ಮ ದೆಹಲಿಯ ನಿವಾಸಕ್ಕೆ ಕರೆದುಕೊಂಡು ಹೋಗಿದ್ದರು. ಈ ನೂರಿ ಈಗ ಕಾಂಗ್ರೆಸ್ ಅಧಿನಾಯಕಿಯ ಅಚ್ಚುಮೆಚ್ಚಿನ ಶ್ವಾನವಾಗಿದ್ದು, ತಮ್ಮ ಮಕ್ಕಳಿಗಿಂತ ಹೆಚ್ಚು ಇದನ್ನು ಪ್ರೀತಿ ಮಾಡ್ತಾರಂತೆ ಸೋನಿಯಾ ಗಾಂಧಿ
ರಾಹುಲ್ ಶೇರ್ ಮಾಡಿರುವ ಫೋಟೋದಲ್ಲಿ ಏನಿದೆ?
ರಾಹುಲ್ ಗಾಂಧಿ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದು, ಅದರಲ್ಲಿ ನೂರಿಯನ್ನು ಮಕ್ಕಳನ್ನು ಎತ್ತಿಕೊಳ್ಳುವಂತಹ ಚೀಲದಲ್ಲಿ ತಮ್ಮ ಬೆನ್ನಿಗೆ ನೇತುಹಾಕಿಕೊಂಡು ಫೋಟೋಗೆ ಫೋಸ್ ಕೊಟ್ಟಿದ್ದಾರೆ ಸೋನಿಯಾ ಗಾಂಧಿ. ಮಕ್ಕಳ ಉಪ್ಪುಮೂಟೆ ಮಾಡುವಂತೆ ಕಾಣುತ್ತಿದೆ ಈ ಫೋಟೋ, ಇದೇ ಎರಡು ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ರಾಹುಲ್ ಗಾಂಧಿ, ಅಮ್ಮನ ಫೇವರೇಟ್ ಸ್ಪಷ್ಟವಾಗಿ ನೂರಿ ಎಂದು ಬರೆದು ಲವ್ ಸಿಂಬಲ್ ಹಾಕಿದ್ದಾರೆ. ಈ ಪೋಸ್ಟ್‌ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಮ್ಮ ಮಗ ಟ್ರಿಪ್ ಹೋಗ್ತಿದ್ದೀರಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಎಂದಿನಂತೆ ಫೋಟೋಗೆ ರಾಜಕಾರಣ ಬೆರೆಸಿದ್ದು, ಸೋನಿಯಾ ಬೆನ್ನಲ್ಲಿರುವುದು ಧ್ರುವ್ ರಾಟೆ ಎಂದಿದ್ದಾರೆ. ಹಾಗೆಯೇ ಮತ್ತೆ ಕೆಲವರು ಮೋದಿ ಎಂದು ಕುಹಕವಾಡಿದ್ದಾರೆ.
ಅಂಬಾನಿ ಮದುವೆಯನ್ನು ವಿರೋಧಿಸಿದ್ದೇಕೆ ರಾಹುಲ್ ? ಸೋನಿಯಾ, ರಾಹುಲ್ ಮದುವೆಗೆ ಹೋಗದಿರಲು ಕಾರಣವೇನು ?