ಮಾರ್ಚ್- ಮೇನಲ್ಲಿ ಕಂಡುಬಂದಿತ್ತು ವೈರಸ್‌ನ ಎ4 ಪ್ರಭೇದ, ಈ ವೈರಸ್‌ನಿಂದ ಭಾರತದಲ್ಲಿ ವೇಗವಾಗಿ ಹರಡಿದ್ದ ಸೋಂಕು, - ಆದರೆ, ಜೂನ್‌ನಲ್ಲಿ ತಾನೇ ತಾನಾಗಿ ವೈರಸ್ ನಶಿಸಿ ಹೋಗಿತ್ತು, ಜೀನೋಮಿಕ್ಸ್ ನಿರ್ದೇಶಕ ಅನುರಾಗ್ ಆಗ್ರಾವಾಲ್ ಮಾಹಿತಿ
ನವದೆಹಲಿ (ಡಿ.27): ಬ್ರಿಟನ್‌ನಲ್ಲಿ ಈಗ ಭಾರಿ ವೇಗವಾಗಿ ಹರಡುತ್ತಿರುವ ರೂಪಾಂತರಗೊಂಡ ಕೊರೋನಾ ವೈರಸ್ ರೀತಿಯಲ್ಲೇ ವೈರಾಣುವಿನ ಮಾದರಿಯೊಂದು ಭಾರತದಲ್ಲಿ ಮಾಚ್‌ರ್- ಮೇ ಅವಧಿಯಲ್ಲಿ ಕಾಣಿಸಿಕೊಂಡಿತ್ತು. ಇದರಿಂದಾಗಿ ಭಾರತದಲ್ಲಿ ಅತಿ ವೇಗದಲ್ಲಿ ಕೊರೋನಾ ಸೋಂಕು ಹರಡಲು ಕಾರಣವಾಗಿತ್ತು ಎಂಬ ಸಂಗತಿಯನ್ನು ಇನ್‌ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಆ್ಯಂಡ್ ಇಂಟಿಗ್ರೇಟಿವ್ ಬಯೋಲಜಿ (ಐಜಿಐಬಿ) ನಿರ್ದೇಶಕ ಅನುರಾಗ್ ಆಗ್ರಾವಾಲ್ ಹೇಳಿದ್ದಾರೆ.
ವೆಬ್‌ಸೈಟ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ಮಾಚ್‌ರ್ ಮತ್ತು ಮೇ ತಿಂಗಳ ಅವಧಿಯಲ್ಲಿ ಭಾರತ ಅತ್ಯಂತ ವಿಭಿನ್ನವಾದ ಕೊರೋನಾ ವೈರಸ್‌ನ ದಾಳಿಗೆ ತುತ್ತಾಗಿತ್ತು. ರೂಪಾಂತರಗೊಂಡಿದ್ದ ಈ ವೈರಸ್‌ಗೆ ಎ4 ಎಂಬ ಹೆಸರನ್ನು ಇಡಲಾಗಿತ್ತು. ಈ ಸೂಪರ್ ಸೆ್ೊ್ರಡರ್ ವೈರಸ್ ಆರಂಭದಲ್ಲಿ ಆಗ್ನೇಯ ಏಷ್ಯಾದಲ್ಲಿ ಕಂಡುಬಂದಿತ್ತು. ಬಳಿಕ ಭಾರತದ ವಿವಿಧ ನಗರಗಳಲ್ಲಿ ಕೊರೋನಾ ವೈರಸ್ ಅತಿ ವೇಗವಾಗಿ ಹರಡಲು ಕಾರಣವಾಗಿತ್ತು. ಎ4 ವೈರಸ್‌ನಿಂದ ಹರಡಿದ್ದ ಕೊರೋನಾ ಪ್ರಕರಣಗಳು ದೆಹಲಿ, ಹೈದರಾಬಾದ್ ಹಾಗೂ ಕರ್ನಾಟಕದಲ್ಲಿಯೂ ಪತ್ತೆ ಆಗಿದ್ದವು. ಆದರೆ, ಜೂನ್ ವೇಳೆಗೆ ತಾನೇ ತಾನಾಗಿ ಈ ವೈರಸ್ ಅವಸಾನವನ್ನು ಕಂಡಿತ್ತು.
ಇದೊಂದು ಶಕ್ತಿಶಾಲಿ ವೈರಸ್ ಆಗಿರಲಿಲ್ಲ. ಹೀಗಾಗಿ ದೊಡ್ಡ ಮಟ್ಟದಲ್ಲಿ ರೂಪಾಂತರಗೊಂಡು ನಶಿಸಿ ಹೋಯಿತು. ಈ ವೈರಸ್ ತಾನೇ ತಾನಾಗಿ ಚದುರಿ ಹೋಗುವ ನಿರೀಕ್ಷೆ ಇದ್ದ ಕಾರಣ ಆತಂಕ ಪಡುವ ಮತ್ತು ಅಪಾಯಕಾರಿ ಎಂದು ಗುರುತಿಸುವ ಅಗತ್ಯ ಇರಲಿಲ್ಲ ಎಂದು ಹೇಳಿದ್ದಾರೆ.
ಕೊರೋನಾ ವೈರಸ್ ರೂಪಾಂತರ ಸಾಮಾನ್ಯ, ಭಯಬೇಡ
ಇದೇ ವೇಳೆ ಭಾರತದಲ್ಲಿ ಕಳೆದ ಒಂದು ವರ್ಷದಲ್ಲಿ ಕೊರೋನಾ ವೈರಸ್‌ನ ಹಲವು ಮಾದರಿಗಳು ಪತ್ತೆ ಆಗಿವೆ. ಹೀಗಾಗಿ ಭಾರತದಲ್ಲಿಯೂ ಕೊರೋನಾ ವೈರಸ್ ಹಲವಾರು ಭಾರಿ ರೂಪಾಂತರಗೊಂಡಿದ್ದರೆ ಅದರಲ್ಲಿ ಯಾವುದೇ ಅಚ್ಚರಿ ಇಲ್ಲ ಎಂದು ಆಗ್ರಾವಾಲ್ ಹೇಳಿದ್ದಾರೆ.
ಹೊಸ ಕೊರೋನಾ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ: ಸುಧಾಕರ್
ಬೆಂಗಳೂರು: ಹೊಸ ಪ್ರಭೇದದ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆಯೊಂದಿಗೆ ಸಭೆ ನಡೆಸಿ ಹೊಸ ಮಾರ್ಗಸೂಚಿ ರೂಪಿಸಲಾಗುವುದು ಎಂದು ಇದೇ ವೇಳೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಆರು ತಿಂಗಳಲ್ಲೇ ನಿನ್ನೆ ಕಡಿಮೆ ಸಾವು
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ವಿದೇಶದಿಂದ ಬಂದವರಿಗೆ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ನೆಗೆಟಿವ್ ವರದಿ ಇಲ್ಲದವರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಸೋಂಕು ದೃಢಪಟ್ಟವರನ್ನು ಆಸ್ಪತ್ರೆಗೆ ದಾಖಲಿಸಿ ನಿಗಾ ವಹಿಸಲಾಗುತ್ತಿದೆ. ಇದೇ ವೇಳೆ ಪ್ರಯಾಣಿಕರಿಂದ ಸಂಗ್ರಹಿಸಿದ ಗಂಟಲು ಮಾದರಿಯನ್ನು ರೂಪಾಂತರಿ ವೈರಸ್ ಪತ್ತೆಗೆ ವಂಶವಾಹಿ ಪರೀಕ್ಷೆಗೂ ಕಳುಹಿಸಲಾಗುತ್ತಿದೆ. ಈಗಾಗಲೇ ಕಳುಹಿಸಿರುವ ವರದಿಗಳು ಒಂದೆರಡು ದಿನಗಳಲ್ಲಿ ಬರಲಿವೆ. ಒಟ್ಟಾರೆ ಹೊಸ ಪ್ರಭೇದದ ವೈರಾಣು ನಿಯಂತ್ರಣಕ್ಕೆ ಹೊಸ ವರ್ಷಕ್ಕೆ ಹೊಸ ಮಾರ್ಗಸೂಚಿ ರೂಪಿಸಬೇಕಿದೆ. ಇದಕ್ಕಾಗಿ ಸೋಮವಾರದೊಳಗೆ ಗೃಹ ಇಲಾಖೆಯ ಜೊತೆ ಸಭೆ ನಡೆಸಿ ಮಾರ್ಗಸೂಚಿ ರೂಪಿಸಲಾಗುವುದು ಎಂದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 27, 2020, 8:14 AM IST