ಬ್ರೆಡ್ ಎಂದು ಚಿನ್ನ ಕೊಟ್ಟ ಮಹಿಳೆ : ಬ್ರೆಡ್‌ ಒಣಗಿದೆ ಎಂದು ಎಸೆದು ಹೋದ ಭಿಕ್ಷುಕಿ

ಇಲ್ಲೊಬ್ಬಳು ಮಹಿಳೆ ಬರೋಬರಿ 100 ಗ್ರಾಂ ಚಿನ್ನವನ್ನು ಬ್ರೆಡ್‌ ಎಂದು ತಪ್ಪಿ ತಿಳಿದು ಭಿಕ್ಷುಕಿಗೆ ನೀಡಿದ್ದಾಳೆ. ಆದರೆ ಆಕೆಯ ಹಣೆಬರಹ ನೋಡಿ ಆಕೆ ಅದನ್ನು ಬೇರೇನೋ ಎಂದು ತಿಳಿದು ಕಸದ ರಾಶಿಗೆ ಎಸೆದು ಹೋಗಿದ್ದಾಳೆ.

Mumbai police recover 100 gms of gold in garbage, owner gave it to beggar by mistakenly akb

ಮುಂಬೈ: ಬಂಗಾರಕ್ಕೆ ದಿನದಿಂದ ದಿನಕ್ಕೆ ಬೆಲೆ ಏರಿಕೆ ಆಗುತ್ತಿದ್ದು, ಒಂದು ಗ್ರಾಂ. ಬಂಗಾರ ಕಳೆದು ಹೋದರೂ ಜೀವವೇ ಹೋದಂತಹ ಅನುಭವವಾಗುವುದು. ಆದರೆ ಇಲ್ಲೊಬ್ಬಳು ಮಹಿಳೆ ಬರೋಬರಿ 100 ಗ್ರಾಂ ಚಿನ್ನವನ್ನು ಬ್ರೆಡ್‌ ಎಂದು ತಪ್ಪಿ ತಿಳಿದು ಭಿಕ್ಷುಕಿಗೆ ನೀಡಿದ್ದಾಳೆ. ಆದರೆ ಆಕೆಯ ಹಣೆಬರಹ ನೋಡಿ ಆಕೆ ಅದನ್ನು ಬೇರೇನೋ ಎಂದು ತಿಳಿದು ಕಸದ ರಾಶಿಗೆ ಎಸೆದು ಹೋಗಿದ್ದಾಳೆ. ಇದಾದ ಬಳಿಕ ಆಕೆಗೆ ತಾನು ಭಿಕ್ಷುಕಿಗೆ ನೀಡಿದ್ದು, ಬ್ರೆಡ್ ಅಲ್ಲ ಬಂಗಾರ ಎಂದು ತಿಳಿದು ಗಾಬರಿಯಾಗಿದ್ದು, ಹುಡುಕಲು ಆರಂಭಿಸಿದ್ದಾಳೆ. ಆಕೆಯ ಅದೃಷ್ಟ ಚೆನ್ನಾಗಿತ್ತೇನೋ ಕಳೆದು ಹೋದ ಬಂಗಾರ ವಾಪಸ್ ಆಕೆಯ ಪಾಲಾಗಿದೆ. ಒಟ್ಟಿನಲ್ಲಿ ಅಲ್ಲಿ ನಡೆದಿದ್ದೇನು ಎಂಬ ಡಿಟೇಲ್ಡ್ ಸ್ಟೋರಿ ಇಲ್ಲಿದೆ. 

ಗುರುವಾರ ಜೂನ್ 16 ರಂದು ಮುಂಬೈ ಪೊಲೀಸರು (Mumbai Police) ಮುಂಬೈನ ಗೋಕುಲಧಾಮ್ ಕಾಲೋನಿ (Gokuldham Colony) ಬಳಿಯ ಗಟಾರದ ಬಳಿ ಕಸದ ತೊಟ್ಟಿಯಲ್ಲಿ ಇಲಿಗಳ ಹಿಡಿತದಲ್ಲಿದ್ದ ಬರೋಬರಿ 5 ಲಕ್ಷ ರೂಪಾಯಿ ಮೌಲ್ಯದ  100 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದರು. ನಂತರ ಅದನ್ನು ಪೊಲೀಸರು ಮಾಲೀಕರಿಗೆ ಹಿಂದಿರುಗಿಸಿದ್ದಾರೆ. ಆಗಿದ್ದೇನು ಎಂಬ ಬಗ್ಗೆ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 

1708ರಲ್ಲಿ ಮುಳುಗಿದ ನೌಕೆಯಲ್ಲಿ ರಾಶಿ ರಾಶಿ ಚಿನ್ನ: 1.3 ಲಕ್ಷ ಕೋಟಿ ರು. ಮೌಲ್ಯದ ಬಂಗಾರ ಪತ್ತೆ!


ಸುಂದರಿ ಎಂಬ ಮಹಿಳೆ ತನ್ನ ಮಗಳ ಮದುವೆಗಾಗಿ ತನ್ನ ಚಿನ್ನವನ್ನು ಬ್ಯಾಂಕ್‌ನಲ್ಲಿ ಅಡಮಾನ ಇಡಲು ಹೋಗುತ್ತಿದ್ದರು. ಈ ವೇಳೆ ದಾರಿಯಲ್ಲಿ, ಸುಂದರಿ (Sundari) ತನ್ನ ಚಿನ್ನವನ್ನು ಬ್ರೆಡ್ ಎಂದು ತಪ್ಪಾಗಿ ಭಾವಿಸಿ ಮಕ್ಕಳೊಂದಿಗೆ ಭಿಕ್ಷುಕ ಮಹಿಳೆಗೆ ಕೊಟ್ಟಳು. ಆದರೆ ಭಿಕ್ಷುಕ ಬ್ರೆಡ್ ಒಣಗಿದೆ ಎಂದು ಆರೋಪಿಸಿ ಅದನ್ನು ಕಸದ ಬುಟ್ಟಿಗೆ ಎಸೆದು ಹೋಗಿದ್ದಾನೆ ಎಂದು ಸಬ್‌ ಇನ್ಸ್‌ಪೆಕ್ಟರ್‌ ಚಂದ್ರಕಾಂತ್ ಘಾರ್ಗೆ(Chandrakant Gharge) ಹೇಳಿದ್ದಾರೆ.

ಇತ್ತ ಬ್ಯಾಂಕ್‌ಗೆ ಚಿನ್ನ ಅಡಮಾನ ಇಡಲು ಬಂದ ಮಹಿಳೆ ಸುಂದರಿಗೆ ತಾನು ಭಿಕ್ಷುಕನಿಗೆ ನೀಡಿರುವುದು ಚಿನ್ನ ಬ್ರೆಡ್‌ ಅಲ್ಲ ಎಂಬುದರ ಅರಿವಾಗಿದೆ. ಕೂಡಲೇ ಆಕೆ ತನ್ನ ಮಗುವಿನೊಂದಿಗೆ ಭಿಕ್ಷುಕನಿದ್ದ ಸ್ಥಳಕ್ಕೆ ಧಾವಿಸಿ ಬಂದಿದ್ದಾಳೆ. ಆದರೆ ಆ ವೇಳೆಗೆ ಭಿಕ್ಷುಕ ಅಲ್ಲಿಂದ ಹೊರಟು ಹೋಗಿದ್ದ, ಭಿಕ್ಷುಕನನ್ನು ಹುಡುಕಲು ವಿಫಲವಾದ ಮಹಿಳೆ ಗಾಬರಿಯಿಂದ ಸೀದಾ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ. 

Ballari: ಬಂಗಾರದ ಅಂಗಡಿಯಲ್ಲಿ ಕಳ್ಳತನ: ಕ್ಷಣಾರ್ಧದಲ್ಲಿ ನಡೆದ ಘಟನೆಗೆ ಕಂಗಾಲಾದ ಮಾಲೀಕ!
ಕೂಡಲೇ ದಿಂಡೋಶಿ ಅಧಿಕಾರಿಗಳ ವಿಭಾಗದ ಪತ್ತೆ ತಂಡದ ಮುಖ್ಯಸ್ಥ ಸೂರಜ್ ರಾವುತ್ (Suraj Raut) ಅವರು ತಕ್ಷಣ ತನಿಖೆ ಆರಂಭಿಸಿದರು ಮತ್ತು ಅಲ್ಲಿ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಅಲ್ಲಿ ಅವರು ಭಿಕ್ಷುಕ ಮಹಿಳೆಯನ್ನು ಗುರುತಿಸಿದರು. ಆಕೆಯೂ ಕೂಡ ಚಿನ್ನವನ್ನು ಒಣಗಿದ ಬ್ರೆಡ್‌ ಎಂದು ಭಾವಿಸಿ ತಿಪ್ಪೆಗೆಸೆದು ಹೋಗಿದ್ದಾಗಿ ಪೊಲೀಸರಿಗೆ ತಿಳಿಸಿದರು. ನಂತರ ಪೊಲೀಸರು ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಡಂಪ್ ಬಳಿಯ ಸಿಸಿಟಿವಿಯನ್ನು ವಿಶ್ಲೇಷಿಸಿದ ನಂತರ ಗಟಾರದಿಂದ ಚಿನ್ನದ ಚೀಲವನ್ನು ಪತ್ತೆ ಮಾಡಿದರು. ಇಲಿಗಳು ಚಿನ್ನಾಭರಣವನ್ನು ಗಟಾರಕ್ಕೆ ತಂದು ಅದರೊಂದಿಗೆ ಒಣಗಿದ ರೊಟ್ಟಿಯನ್ನು ತಿನ್ನುತ್ತಿರುವುದು ಸಿಸಿಟಿವಿಯಲ್ಲಿ ಕಂಡು ಬಂದಿತ್ತು. ಕೂಡಲೇ ಇಲಿಗಳ ಕೈಯಿಂದ ಚಿನ್ನ ಕಸಿದುಕೊಂಡ ಪೊಲೀಸರು ಅದನ್ನು ವಾರಸುದಾರರಿಗೆ ಹಿಂದಿರುಗಿಸಿದ್ದಾರೆ. 
 

Latest Videos
Follow Us:
Download App:
  • android
  • ios