ಮುಂಬೈ ಲೋಕಲ್ ರೈಲಿನಲ್ಲಿ, ಸಹ ಪ್ರಯಾಣಿಕ ಮಹಿಳೆಯರು ಗರ್ಭಿಣಿಯೊಬ್ಬರಿಗೆ ಅಚ್ಚರಿಯ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ರೈಲಿನ ಬೋಗಿಯನ್ನು ಅಲಂಕರಿಸಿ, ಸಾಂಪ್ರದಾಯಿಕವಾಗಿ ಸೀಮಂತ ಮಾಡಿ ಉಡುಗೊರೆಗಳನ್ನು ನೀಡಿದ ಈ ಭಾವುಕ ಕ್ಷಣದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರೈಲಿನಲ್ಲೇ ಗರ್ಭಿಣಿಗೆ ಸೀಮಂತ ಮಾಡಿದ ಮಹಿಳೆಯರು:

ಮಹಾನಗರಿ ಮುಂಬೈನಲ್ಲಿ ಅಲ್ಲಿನ ಲೋಕಲ್ ರೈಲು ಅಲ್ಲಿನ ಸಾಮಾನ್ಯ ಜನರ ಜೀವನಾಡಿ. ಪ್ರತಿದಿನವೂ ಲಕ್ಷಾಂತರ ಜನ ಪ್ರಯಾಣಿಕರು ಆ ರೈಲುಗಳಲ್ಲಿ ಸಂಚರಿಸುತ್ತಾರೆ. ಅನೇಕರಿಗೆ ಅದು ದಿನವೂ ತಮ್ಮ ಕಚೇರಿ ಹಾಗೂ ಮನೆ ತಲುಪುವುದಕ್ಕೆ ಅಗತ್ಯವಾದ ಸಾರಿಗೆ ವ್ಯವಸ್ಥೆಯಾಗಿದೆ. ಹೀಗಿರುವ ಮುಂಬೈನ ಲೋಕಲ್ ರೈಲಿನಲ್ಲಿ ನಡೆದ ಭಾವುಕ ಘಟನೆಯ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು ದಿನವೂ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರೆಲ್ಲರೂ ಸೇರಿ ತಮ್ಮೊಂದಿಗೆ ದಿನವೂ ರೈಲಿನಲ್ಲಿ ಬರುತ್ತಿದ್ದ ಸಹ ಪ್ರಯಾಣಿಕ ಗರ್ಭಿಣಿ ಮಹಿಳೆಯೊಬ್ಬರಿಗೆ ಸೀಮಂತ ಮಾಡಿದ್ದಾರೆ. ಹೌದು ರೈಲಿನಲ್ಲೇ ಈ ಸೀಮಂತ ಕಾರ್ಯಕ್ರಮವೂ ಸೊಗಸಾಗಿ ನಡೆದಿದ್ದು, ವೀಡಿಯೋ ವೈರಲ್ ಆಗಿದೆ.

Add Asianetnews Kannada as a Preferred SourcegooglePreferred

ಇದನ್ನೂ ಓದಿ: ಒಬ್ಬನೇ ಒಬ್ಬ ಮಗ ಅಪಘಾತದಲ್ಲಿ ಸಾವು: ನೋವು ತಾಳಲಾರದೇ ಸಾವಿಗೆ ಶರಣಾದ ದಂಪತಿ

ಈ ಸೀಮಂತ ಕಾರ್ಯಕ್ರಮಕ್ಕಾಗಿ ರೈಲಿನ ಮಹಿಳಾ ಬೋಗಿಯನ್ನು ಗುಲಾಬಿ ಬಣ್ಣದ ಬಲೂನ್‌ಗಳಿಂದ ಅಲಂಕರಿಸಲಾಗಿತ್ತು. ಹಾಗೂ ರೈಲಿನಲ್ಲಿದ್ದ ಮಹಿಳೆಯರೆಲ್ಲರೂ ಸೇರಿ ಸೀಮಂತವನ್ನು ತುಂಬಾ ಸೊಗಸಾಗಿ ಆಚರಿಸಿದರು. ಮಹಿಳೆಯ ಮಡಿಲು ತುಂಬಿ ಆಕೆಗೆ ಅರಿಶಿಣ ಕುಂಕುಮ ನೀಡಿ, ಮಾಮ್ ಟು ಬಿ ಎಂಬ ಶಾಲನ್ನು ಹಾಕಿ ಸನ್ಮಾನಿಸಿದ್ದರು. ಜೊತೆಗೆ ಅವರಿಗೆ ಹಲವು ಉಡುಗೊರೆಗಳನ್ನು ನೀಡಿ ಸಿಹಿ ತಿನಿಸಿ ಸಿಹಿ ಹಂಚಿ ಆ ಮಹಿಳೆ ಜೀವನಪೂರ್ತಿ ನೆನಪಿಟ್ಟುಕೊಳ್ಳುವಂತಹ ಅಚ್ಚರಿಯ ಉಡುಗೊರೆ ನೀಡಿದ್ದರು. ಆ ಗರ್ಭಿಣಿ ಮಹಿಳೆಗೆ ಇದು ಸರ್‌ಫ್ರೈಸ್ ಆಗಿತ್ತು. ಸದಾ ಜನಜಂಗುಳಿಯಿಂದ ತುಂಬಿ ತುಳುಕುವ ಈ ಮುಂಬೈ ರೈಲಿಗೆ ಮಹಿಳೆಯರೇ ಆಯೋಜಿಸಿದ್ದ ಈ ಕಾರ್ಯಕ್ರಮದಿಂದಾಗಿ ಬೇರೆಯದೇ ಕಳೆ ಬಂತು.

ಇದನ್ನೂ ಓದಿ: 

ಬಕೆಟ್‌ನಲ್ಲಿ ಹೀಟರ್ ಇಟ್ಟು ಸ್ನಾನಕ್ಕೆ ನೀರು ಬಿಸಿ ಮಾಡುವಾಗ ಕರೆಂಟ್ ಶಾಕ್: 7ನೇ ಕ್ಲಾಸ್ ಬಾಲಕ ಸಾವು

ಈ ಅಚ್ಚರಿಯ ವೀಡಿಯೋ ನೋಡಿದ ಅನೇಕರು ಭಾವುಕರಾಗಿದ್ದಾರೆ. 7 ಲಕ್ಷಕ್ಕೂ ಅಧಿಕ ಜನ ಈ ವೀಡಿಯೋ ನೋಡಿದ್ದು, ಇದು ಮುಂಬೈ ಲೋಕಲ್ ರೈಲಿನ ನಿಜವಾದ ಬ್ಯೂಟಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಮುಂಬೈನಲ್ಲಿ ಮಾತ್ರ ಆಗಲು ಸಾಧ್ಯ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲ ದಿನಗಳಲ್ಲಿ ಜನರು ರೈಲಿನಲ್ಲಿ ಮದುವೆಯನ್ನೇ ಆಗಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅನೇಕರು ಮುಂಬೈ ಸಿಟಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇಲ್ಲಿ ಅಪರಿಚಿತರು ಪರಿಚಿತರಾಗುತ್ತಾರೆ. ಸ್ನೇಹಿತರಾಗುತ್ತಾರೆ. ಕುಟುಂಬವಾಗುತ್ತಾರೆ, ವಿಶೇಷವಾಗಿ ಈ ಲೋಕಲ್ ರೈಲು ದಿನವೂ ಲಕ್ಷಾಂತರ ಜನರನ್ನು ಜೊತೆ ಸೇರಿಸುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

View post on Instagram