MEA reacts to OIC : "ನಿಮ್ಮ ಗೌರವವನ್ನು ನೀವೇ ಹಾಳುಮಾಡಿಕೊಳ್ತಿದ್ದೀರಿ", ಹಿಜಾಬ್ ವಿಚಾರದಲ್ಲಿ ಭಾರತದ ಎಚ್ಚರಿಕೆ
"ಮುಸ್ಲೀಂ ನರಮೇಧ" ಹೇಳಿಕೆಗೆ ಭಾರತದ ವಾರ್ನಿಂಗ್
ಇಸ್ಲಾಮಿಕ್ ರಾಷ್ಟ್ರಗಳ ಗುಂಪಿನ ಹೇಳಿಕೆಗೆ ಖಂಡನೆ
ನಿಮ್ಮ ಗೌರವವನ್ನು ನೀವೇ ಹಾಳು ಮಾಡಿಕೊಳ್ತಿದ್ದೀರಿ ಎಂದ ಭಾರತ
ನವದೆಹಲಿ (ಫೆ. 15): ದೇಶದ ಆಂತರಿಕ ವಿಚಾರಗಳ (Internal Affairs) ಬಗ್ಗೆ ಹೇಳಿಕೆ ನೀಡುವ ಬಾಹ್ಯ ದೇಶಗಳ ಸಂಸ್ಥೆಗಳ ವಿರುದ್ಧ ಎಚ್ಚರಿಕೆ ಮಿಶ್ರಿತ ಸಂದೇಶವನ್ನು ಭಾರತೀಯ ವಿದೇಶಾಂಗ ಇಲಾಖೆ ( Ministry of External Affairs ) ನೀಡಿದೆ. ಹಿಜಾಬ್ (Hijab) ವಿಚಾರದಲ್ಲಿ ಮೂಗು ತೂರಿಸಿದ ಇಸ್ಲಾಮಿಕ್ ರಾಷ್ಟ್ರಗಳ ಗುಂಪಿನ (Islamic Nations Group) ಹೇಳಿಕೆಗೆ ಉತ್ತರ ನೀಡಿರುವ ಭಾರತ, ಇಂಥ ಹೇಳಿಕೆಗಳನ್ನು ನೀಡುವ ಮೂಲಕ ನಿಮ್ಮ ಗೌರವವನ್ನು ನೀವೇ ಹಾಳು ಮಾಡಿಕೊಳ್ಳುತ್ತೀದ್ದೀರಿ ಎಂದು ಎಚ್ಚರಿಸಿದೆ. ಪಾಕಿಸ್ತಾನ (Pakistan) ಸೇರಿದಂತೆ ಬಹುಪಾಲು ಮುಸ್ಲಿಂ ಪ್ರಾಬಲ್ಯ ಹೊಂದಿರುವ ರಾಷ್ಟ್ರಗಳ ಅಂತರ್‌ಸರ್ಕಾರಿ ಸಂಘಟನೆ ಆಗಿರುವ ಇಸ್ಲಾಮಿಕ್ ಸಹಕಾರದ ಸಂಘಟನೆ (Organisation of Islamic Cooperation) ಅಥವಾ ಓಐಸಿ, ಇತ್ತೀಚೆಗೆ ಹಿಜಾಬ್ ವಿಚಾರದಲ್ಲಿ ತನ್ನ ಹೇಳಿಕೆಯನ್ನು ನೀಡಿತ್ತು.ಆದರೆ, ದೇಶದ ಆಂತರಿಕ ವಿಚಾರಗಳ ಕಾಮೆಂಟ್ ಗಳನ್ನು ಭಾರತವು ಬಲವಾಗಿ ಖಂಡನೆ ಮಾಡಿದೆ.
ಹಿಜಾಬ್ ವಿಚಾರವಲ್ಲದೆ, ಈಗಾಗಲೇ ಪೊಲೀಸ್ ತನಿಖೆಯಲ್ಲಿರುವ ಉತ್ತರಾಖಂಡದ ಹರಿದ್ವಾರದಲ್ಲಿನ ದ್ವೇಷ ಭಾಷಣಗಳನ್ನೂ ಓಐಸಿ ಉಲ್ಲೇಖ ಮಾಡಿದ್ದು, ಹಿಂದುತ್ವ ಪ್ರತಿಪಾದಕರು ಇತ್ತೀಚೆಗೆ ಮುಸ್ಲೀಮರ ನರಮೇಧಕ್ಕೆ ಸಾರ್ವಜನಿಕವಾಗಿ ಕರೆ ನೀಡಿದ್ದಾರೆ ಎಂದು ಹೇಳಿದ್ದು ಇದಕ್ಕೆ ಕಳವಳವನ್ನೂ ವ್ಯಕ್ತಪಡಿಸಿತ್ತು.
ಆದರೆ, ಓಐಸಿ ಹೇಳಿಕೆಗೆ ಕಟು ಶಬ್ದಗಳಲ್ಲಿ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯವು ಭಾರತದಲ್ಲಿನ ಸಮಸ್ಯೆಗಳನ್ನು ಸಾಂವಿಧಾನಿಕ ಚೌಕಟ್ಟು ಮತ್ತು ಕಾರ್ಯವಿಧಾನಗಳು ಮತ್ತು ಪ್ರಜಾಪ್ರಭುತ್ವದ ನೀತಿ ಮತ್ತು ರಾಜಕೀಯಕ್ಕೆ ಅನುಗುಣವಾಗಿ ಪರಿಗಣಿಸುತ್ತೇವೆ ಹಾಗೂ ಅದರ ಆಧಾರದಲ್ಲಿಯೇ ಪರಿಹರಿಸಲಾಗುತ್ತದೆ ಎಂದಿದೆ.
"ಓಐಸಿ ಸೆಕ್ರೆಟರಿಯೇಟ್‌ನ ಕೋಮುವಾದಿ ಮನಸ್ಥಿತಿಯು ಈ ವಾಸ್ತವಗಳ ಸರಿಯಾದ ಮೆಚ್ಚುಗೆಯನ್ನು ತಿಳಿಸುವುದಿಲ್ಲ. ಓಐಸಿ ಭಾರತದ ವಿರುದ್ಧ ತಮ್ಮ ಕೆಟ್ಟ ಪ್ರಚಾರವನ್ನು ಹೆಚ್ಚಿಸಲು ಪಟ್ಟಭದ್ರ ಹಿತಾಸಕ್ತಿಗಳಿಂದ ತನ್ನ ಹೇಳಿಕೆಗಳನ್ನು ಹೈಜಾಕ್ ಮಾಡುವುದನ್ನು ಮುಂದುವರೆಸಿದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಥವಾ ಎಂಇಎ (MEA) ಮಂಗಳವಾರ ಪ್ರಕಟಿಸಿದ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಓಐಸಿಯು 57 ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದು, ಜೆಡ್ಡಾದಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ.
Lakhimpur Kheri case : ಜೈಲಿನಿಂದ ಬಿಡುಗಡೆಯಾದ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶಿಶ್
ಓಐಸಿ ನೀಡುವ ಇಂಥ ಹೇಳಿಕೆಗಳಿಗೆ, ಅದು ತನ್ನ ಗೌರವ ಹಾಗೂ ಪ್ರತಿಷ್ಠೆಯನ್ನು ತಾನೇ ಹಾಳು ಮಾಡಿಕೊಳ್ಳುತ್ತದೆ ಎಂದು ಭಾರತ ಹೇಳಿದೆ. ಓಐಸಿ ತನ್ನ ವೆಬ್ ಸೈಟ್ ನಲ್ಲಿ ತಾನು ನೀಡುವ ಹೇಳಿಕೆಯನ್ನು "ಮುಸ್ಲಿಂ ಪ್ರಪಂಚದ ಸಾಮೂಹಿಕ ಧ್ವನಿ ಎಂದು ಹೇಳುತ್ತದೆ. ಭಾರತಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಓಐಸಿ "ಪ್ರಚೋದಿತ ಮತ್ತು ತಪ್ಪುದಾರಿಗೆಳೆಯುವ ಹೇಳಿಕೆಯನ್ನು ನೀಡಿರುವುದು ಇದೇ ಮೊದಲಲ್ಲ" ಎಂದು ಭಾರತ ಹೇಳಿದೆ. 76 ನೇ ಯುಎನ್ ಸಾಮಾನ್ಯ ಸಭೆಯ ಸಂದರ್ಭದಲ್ಲಿ, ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370 ನೇ ವಿಧಿಯನ್ನು ರದ್ದುಗೊಳಿಸುವ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಓಐಸಿ ಭಾರತಕ್ಕೆ ಹೇಳಿತ್ತು.
Surgical Strikes Proof Row : ತೆಲಂಗಾಣ ಮುಖ್ಯಮಂತ್ರಿಯ ವಿರುದ್ಧ ಕೇಸ್ ದಾಖಲಿಸಿದೆ ಅಸ್ಸಾಂ ಪೊಲೀಸ್!
ಭಾರತದಲ್ಲಿ ಮುಸ್ಲೀಮರ ಮೇಲೆ ಆಗುತ್ತಿರುವ ದಾಳಿಯ ಕುರಿತಾಗಿ ತೀವ್ರ ಆತಂಕ ವ್ಯಕ್ತಪಡಿಸಿ ತನ್ನ ಹೇಳಿಕೆಯನ್ನು ನೀಡಿದ್ದ ಓಐಸಿ, ಅಂತಾರಾಷ್ಟ್ರೀಯ ಸಮುದಾಯಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿತ್ತು. ಕರ್ನಾಟಕದಲ್ಲಿ ಮುಸ್ಲಿಂ ಮಹಿಳೆಯರಿಗೆ ಹಿಜಾಬ್ ಧರಿಸಿ ಶಾಲೆಗೆ ಹೋಗುವುದನ್ನು ತಡೆಯಲಾಗುತ್ತಿದೆ ಎನ್ನುವ ಅಂಶವನ್ನೂ ಸೇರಿಸಿ ತನ್ನ ಹೇಳಿಕೆಯನ್ನು ನೀಡಿತ್ತು. "ಮುಸ್ಲಿಮರು ಮತ್ತು ಅವರ ಪ್ರಾರ್ಥನಾ ಸ್ಥಳಗಳನ್ನು ಗುರಿಯಾಗಿಸಿಕೊಂಡು ನಿರಂತರ ದಾಳಿಗಳು, ವಿವಿಧ ರಾಜ್ಯಗಳಲ್ಲಿ ಮುಸ್ಲಿಂ ವಿರೋಧಿ ಕಾನೂನುಗಳ ಇತ್ತೀಚಿನ ಪ್ರವೃತ್ತಿ ಮತ್ತು 'ಹಿಂದುತ್ವ' ಗುಂಪುಗಳು ನಿರ್ಭಯದಿಂದ ಮುಸ್ಲಿಮರ ವಿರುದ್ಧ ಕ್ಷುಲ್ಲಕ ನೆಪದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಘಟನೆಗಳು ಇಸ್ಲಾಮೋಫೋಬಿಯಾದ ಬೆಳವಣಿಗೆಯ ಪ್ರವೃತ್ತಿಯನ್ನು ಸೂಚಿಸುತ್ತವೆ' ಎಂದು ಆರೋಪ ಮಾಡಿತ್ತು.