ರೇಡಿಯೋ ಕಾಲರ್ ಅಳವಡಿಸಿದ ಮೊದಲ ಹುಲಿ ಎಂಬ ಖ್ಯಾತಿ ಗಳಿಸಿ ಕಾಲರ್‌ವಾಲಿ ಎಂದು ಖ್ಯಾತಿ ಗಳಿಸಿರುವ ಹೆಣ್ಣು ಹುಲಿಯ ಮರಿಗಳಲ್ಲಿ ಒಂದಾದ ಮತ್ತೊಂದು ಹುಲಿ ತನ್ನ ನಾಲ್ಕು ಮುದ್ದಾದ ಮರಿಗಳೊಂದಿಗೆ ಅಡ್ಡಾಡುತ್ತಿರುವ ಅಪರೂಪದ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆ ಆಗಿದೆ.
ಮಹಾರಾಷ್ಟ್ರ: ಮಹಾರಾಷ್ಟ್ರದ ಪೆಂಚ್ ರಾಷ್ಟ್ರೀಯ ಉದ್ಯಾನವನದಲ್ಲಿ ರೇಡಿಯೋ ಕಾಲರ್ ಅಳವಡಿಸಿದ ಮೊದಲ ಹುಲಿ ಎಂಬ ಖ್ಯಾತಿ ಗಳಿಸಿ ಕಾಲರ್‌ವಾಲಿ ಎಂದು ಖ್ಯಾತಿ ಗಳಿಸಿರುವ ಹೆಣ್ಣು ಹುಲಿಯ ಮರಿಗಳಲ್ಲಿ ಒಂದಾದ ಮತ್ತೊಂದು ಹುಲಿ ತನ್ನ ನಾಲ್ಕು ಮುದ್ದಾದ ಮರಿಗಳೊಂದಿಗೆ ಅಡ್ಡಾಡುತ್ತಿರುವ ಅಪರೂಪದ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆ ಆಗಿದೆ. ಮಹಾರಾಷ್ಟ್ರದ ಪೆಂಚ್ ರಾಷ್ಟ್ರೀಯ ಉದ್ಯಾನವನದ ಅಧಿಕೃತ ಟ್ವಿಟ್ಟರ್ ಪೇಜ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ತಾಯಿಯಂತೆ ಮಕ್ಕಳು, ಟೈಗ್ರೆಸ್ ಟಿ4 ಅಥವಾ ಪತ್ದೇವ್ ಫಿಮೇಲ್ ಎಂದು ಜನಪ್ರಿಯವಾಗಿದ್ದ ಕಾಲರ್‌ವಾಲಿ ಹುಲಿಯ ಮಗಳು, ಪೆಂಚ್‌ನ ಮುಂದಿನ ಸೂಪರ್ ಮಾಮ್ ಆಗುವ ಹಾದಿಯಲ್ಲಿದೆ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ತಾಯಿ ಹಾಗೂ ನಾಲ್ವರು ಮಕ್ಕಳು ಕಾಡಿನ ಹಾದಿಯಲ್ಲಿ ಒಟ್ಟಿಗೆ ಸಾಗುತ್ತಿದ್ದಾರೆ. ಈ ಹುಲಿಯೂ 2014ರಿಂದ ಇದುವರೆಗೆ ಒಟ್ಟು 20 ಮರಿಗಳಿಗೆ ಜನ್ಮ ನೀಡಿದ್ದು, ತಾಯಿಯ ಹಾದಿಯಲ್ಲಿ ಸಾಗುತ್ತಿದೆ ಎಂದು ಪರಿಸರ ತಜ್ಞರು ಹೇಳುತ್ತಿದ್ದಾರೆ.
ಹುಲಿ ಗಣತಿ: ಈ ಬಾರಿ ಕರ್ನಾಟಕಕ್ಕೆ ಮತ್ತೆ ನಂ. 1 ಸ್ಥಾನ..?
ಈ ಹುಲಿಯ ತಾಯಿ ಕಾಲರ್ವಾಲಿ (Collarwali)ಎಂದು ಜನಪ್ರಿಯವಾಗಿದ್ದ ಹುಲಿ ಈ ಮೀಸಲು ಅರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗಲು ಒಳ್ಳೆಯ ಕೊಡುಗೆ ನೀಡಿತ್ತು. ಅದೇ ರೀತಿ ಈಗ ಇದರ ಮಗಳು ಕೂಡ ಒಟ್ಟು 20 ಮರಿಗಳಿಗೆ ಜನ್ಮ ನೀಡಿದೆ. 2022ರ ಜನವರಿಯಲ್ಲಿ ಇದು ವೃದ್ದಾಪ್ಯದಿಂದ ಸಾಯುವ ಮೊದಲು ಇದು ಒಟ್ಟು 29 ಮರಿಗಳಿಗೆ ಜನ್ಮ ನೀಡಿತ್ತು.
Chamarajanagar: ಬೆಳೆ ರಕ್ಷಣೆಗಾಗಿ ರೈತನಿಂದ ನಾಯಿಗೆ ಹುಲಿ ಬಣ್ಣ!
T4 ಎಂದು ಖ್ಯಾತಿ ಗಳಿಸಿರು ಈ ತಾಯಿ ಹುಲಿ ತನ್ನ ಮುದ್ದಾಗಿರುವ ಮರಿಗಳೊಂದಿಗೆ ಪೆಂಚ್ ಟೈಗರ್ ರಿಸರ್ವ್ ಸುತ್ತಲೂ ತಿರುಗಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ಪೆಂಚ್‌ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಮಾಹಿತಿಯ ಪ್ರಕಾರ, T4 2014 ರಿಂದ 20 ಮರಿಗಳಿಗೆ ಜನ್ಮ ನೀಡಿದೆ. T4 ನ ತಾಯಿ, ಕಾಲರ್‌ವಾಲಿ, 2022 ರ ಜನವರಿಯಲ್ಲಿ ವೃದ್ಧಾಪ್ಯದ ಕಾರಣ ಸಾಯುವ ಮೊದಲು ಒಟ್ಟು 29 ಮರಿಗಳಿಗೆ ಜನ್ಮ ನೀಡಿದ್ದಳು. ಈ ವಿಡಿಯೋವನ್ನು 30 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.